ಪವಿತ್ರ ಬೈಬಲ್

ದೇವರ ಕೃಪೆಯ ಉಡುಗೊರೆ
ಙ್ಞಾನೋಕ್ತಿಗಳು 14:1

Notes

No Verse Added

ಙ್ಞಾನೋಕ್ತಿಗಳು 14:1

1
ಜ್ಞಾನಿಯಾದ ಪ್ರತಿ ಸ್ತ್ರೀಯು ತನ್ನ ಮನೆಯನ್ನು ಕಟ್ಟುತ್ತಾಳೆ; ಬುದ್ಧಿಹೀನಳೋ ತನ್ನ ಕೈಗಳಿಂದಲೇ ಅದನ್ನು ಕಿತ್ತುಹಾಕುತ್ತಾಳೆ.
2
ತನ್ನ ಯಥಾರ್ಥತೆಯಲ್ಲಿ ನಡೆಯುವವನು ಕರ್ತನಿಗೆ ಭಯಪಡುತ್ತಾನೆ; ತನ್ನ ಮಾರ್ಗಗಳಲ್ಲಿ ವಕ್ರತೆಯುಳ್ಳವನು ಆತನನ್ನು ಅಸಡ್ಡೆಮಾಡುತ್ತಾನೆ.
3
ಬುದ್ಧಿಹೀನನ ಬಾಯಿ ಯಲ್ಲಿ ಗರ್ವದ ಅಂಕುರವಿದೆ; ಜ್ಞಾನವಂತರ ತುಟಿಗಳು ಅವುಗಳನ್ನು ಕಾಯುವವು.
4
ಎತ್ತುಗಳು ಇಲ್ಲದೆ ಇರು ವಲ್ಲಿ ಗೋದಲಿಯು ಶುದ್ಧಿಯಾಗಿದೆ; ಎತ್ತಿನ ಬಲದಿಂದ ಬಹಳ ವೃದ್ಧಿಯು ಉಂಟಾಗುತ್ತದೆ.
5
ನಂಬತಕ್ಕ ಸಾಕ್ಷಿಯು ಸುಳ್ಳಾಡನು; ಅಬದ್ದಸಾಕ್ಷಿಯು ಸುಳ್ಳುಗಳನ್ನೇ ಉಚ್ಚರಿ ಸುತ್ತಾನೆ.
6
ಹಾಸ್ಯ ಮಾಡುವವನು ಜ್ಞಾನವನ್ನು ಹುಡು ಕಿದರೂ ಅದನ್ನು ಕಂಡುಕೊಳ್ಳುವದಿಲ್ಲ; ವಿವೇಚಿಸುವವನಿಗೆ ತಿಳುವಳಿಕೆಯು ಸುಲಭವಾಗಿದೆ.
7
ನೀನು ಬುದ್ಧಿಹೀನನಲ್ಲಿ ತಿಳುವಳಿಕೆಯ ತುಟಿಗಳನ್ನು ಕಾಣದೆ ಹೋದರೆ ಅವನ ಬಳಿಯಿಂದ ನೀನು ಹೋಗು.
8
ಜಾಣನ ಜ್ಞಾನವು ತನ್ನ ಮಾರ್ಗವನ್ನು ಗ್ರಹಿಸುವಂತ ದ್ದಾಗಿದೆ; ಮೂಢರ ಬುದ್ಧಿಹೀನತೆಯು ಮೋಸಕರ.
9
ಬುದ್ಧಿಹೀನರು ಪಾಪಕ್ಕೆ ಹಾಸ್ಯಮಾಡುತ್ತಾರೆ; ನೀತಿ ವಂತರಲ್ಲಿ ದಯೆ ಇದೆ.
10
ಹೃದಯಕ್ಕೆ ತನ್ನ ವ್ಯಾಕುಲ ತೆಯು ತಿಳಿಯುತ್ತದೆ; ಪರನು ತನ್ನ ಸಂತೋಷದಲ್ಲಿ ಸೇರುವದಿಲ್ಲ.
11
ದುಷ್ಟರ ಮನೆಯು ಕೆಡವಲ್ಪಡುವದು; ಯಥಾರ್ಥವಂತರ ಗುಡಾರವು ಏಳಿಗೆಯಾಗುವದು.
12
ಒಬ್ಬ ಮನುಷ್ಯನಿಗೆ ಸರಿಯೆಂದು ತೋರುವ ಮಾರ್ಗ ವಿದೆ. ಅದರ ಅಂತ್ಯವು ಮರಣದ ಮಾರ್ಗಗಳೇ.
13
ನಗೆಯಲ್ಲಿಯೂ ಹೃದಯವು ದುಃಖದಿಂದ ಇರು ವದು; ಅದರ ಉಲ್ಲಾಸದ ಅಂತ್ಯವು ವ್ಯಾಕುಲವೇ.
14
ಹೃದಯದಲ್ಲಿ ಹಿಂಜರಿಯುವವನು ತನ್ನ ಸ್ವಂತ ಮಾರ್ಗಗಳಿಂದ ತುಂಬಿಕೊಳ್ಳುವನು; ಒಳ್ಳೆಯವನು ತನ್ನಲ್ಲಿ ತಾನೇ ತೃಪ್ತಿಹೊಂದುವನು.
15
ಮೂಢರು ಪ್ರತಿಯೊಂದು ಮಾತನ್ನು ನಂಬುತ್ತಾರೆ; ಜಾಣನು ತನ್ನ ನಡತೆಯನ್ನು ಚೆನ್ನಾಗಿ ಗಮನಿಸುವನು.
16
ಜ್ಞಾನಿ ಯು ಭಯಪಟ್ಟು ಕೆಟ್ಟತನದಿಂದ ಹೊರಟುಹೋಗು ವನು; ಬುದ್ಧಿಹೀನನು ಕೋಪಿಸಿಕೊಂಡು ಧೈರ್ಯದಿಂದ ಇರುತ್ತಾನೆ.
17
ಮುಂಗೋಪಿಯು ಬುದ್ಧಿಹೀನನಾಗಿ ವರ್ತಿಸುತ್ತಾನೆ; ಕುಯುಕ್ತಿಯುಳ್ಳವನು ಹಗೆಮಾಡು ತ್ತಾನೆ.
18
ಮೂಢರು ಮೂರ್ಖತನಕ್ಕೆ ಬಾಧ್ಯರಾಗು ತ್ತಾರೆ; ಜಾಣರು ತಿಳುವಳಿಕೆಯ ಕಿರೀಟವನ್ನು ಪಡೆದು ಕೊಳ್ಳುತ್ತಾರೆ.
19
ಒಳ್ಳೆಯವರಿಗೆ ದುಷ್ಟರು ಬಾಗುತ್ತಾರೆ; ದುಷ್ಟರು ನೀತಿವಂತರ ದ್ವಾರಗಳಲ್ಲಿ ಬಗ್ಗಿಕೊಳ್ಳುತ್ತಾರೆ.
20
ಬಡವನು ತನ್ನ ನೆರೆಯವನಿಂದ ಹಗೆಮಾಡಲ್ಪಡುವನು; ಐಶ್ವರ್ಯವಂತನಿಗೆ ಬಹು ಜನ ಮಿತ್ರರು.
21
ತನ್ನ ನೆರೆಯವನನ್ನು ಅವಮಾನ ಮಾಡುವವನು ಪಾಪ ಮಾಡುತ್ತಾನೆ; ಬಡವರ ಮೇಲೆ ಕನಿಕರ ತೋರಿ ಸುವವನು ಧನ್ಯನು.
22
ಕೆಟ್ಟದ್ದನ್ನು ಕಲ್ಪಿಸುವವರು ತಪ್ಪು ಮಾಡುತ್ತಾರಲ್ಲವೇ? ಒಳ್ಳೆಯದನ್ನು ಕಲ್ಪಿಸುವವರಿಗೆ ಕರುಣೆಯೂ ಸತ್ಯವೂ ಇರುವವು.
23
ಎಲ್ಲಾ ಪ್ರಯಾಸ ದಲ್ಲಿ ಲಾಭವಿದೆ; ತುಟಿಗಳ ಮಾತು ಬಡತನಕ್ಕೆ ಮಾತ್ರ ದಾರಿ.
24
ಜ್ಞಾನವಂತರ ಕಿರೀಟವು ಅದರ ಐಶ್ವ ರ್ಯವೇ; ಬುದ್ಧಿಹೀನರ ಬುದ್ಧಿಹೀನತೆಯು ಅವರ ಮೂರ್ಖತನವೇ.
25
ಸತ್ಯ ಸಾಕ್ಷಿಯು ಪ್ರಾಣಗಳನ್ನು ತಪ್ಪಿಸುತ್ತಾನೆ; ಮೋಸದ ಸಾಕ್ಷಿಯು ಸುಳ್ಳುಗಳನ್ನು ಆಡು ತ್ತಾನೆ.
26
ಕರ್ತನ ಭಯವೇ ಬಲವಾದ ಭರವಸವು; ಆತನ ಮಕ್ಕಳಿಗೆ ಆಶ್ರಯ ಸ್ಥಳವು ಇರುವದು.
27
ಮರಣದ ಪಾಶಗಳಿಂದ ತೊಲಗುವದಕ್ಕೆ ಕರ್ತನ ಭಯವು ಜೀವದ ಬುಗ್ಗೆ.
28
ಜನ ಸಮೂಹದಲ್ಲಿ ಅರಸನ ಘನತೆ ಇದೆ; ಜನರ ಕೊರತೆಯಲ್ಲಿ ರಾಜಪುತ್ರನ ನಾಶ.
29
ಕೋಪಕ್ಕೆ ನಿಧಾನಿಸು. ದೀರ್ಘಶಾಂತನು ದೊಡ್ಡವಿವೇಕಿ; ಆತ್ಮದಲ್ಲಿ ಆತುರಪಡುವವನು ಮೂಢ ತೆಯನ್ನು ವೃದ್ಧಿಮಾಡುವನು.
30
ಸ್ವಸ್ಥವಾದ ಹೃದಯವು ದೇಹಕ್ಕೆ ಜೀವ; ಮತ್ಸರವು ಎಲುಬುಗಳಿಗೆ ಕ್ಷಯವು.
31
ಬಡವರನ್ನು ಹಿಂಸಿಸುವವನು ತನ್ನ ಸೃಷ್ಟಿಕರ್ತನನ್ನು ಹೀನೈಸುವನು; ಆತನನ್ನು ಸನ್ಮಾನಿಸುವವನು ಬಡವರನ್ನು ಕನಿಕರಿಸುತ್ತಾನೆ.
32
ದುಷ್ಟನು ತನ್ನ ದುಷ್ಟತನದಲ್ಲಿ ನೂಕ ಲ್ಪಡುತ್ತಾನೆ; ಮರಣದಲ್ಲಿ ನೀತಿವಂತನಿಗೆ ನಿರೀಕ್ಷೆ ಇದೆ.
33
ತಿಳುವಳಿಕೆಯುಳ್ಳವನ ಹೃದಯದಲ್ಲಿ ಜ್ಞಾನವು ನೆಲೆ ಯಾಗಿದೆ; ಬುದ್ಧಿಹೀನರಲ್ಲಿರುವದು ಪ್ರಕಟವಾಗುತ್ತದೆ.
34
ನೀತಿಯು ಜನಾಂಗವನ್ನು ವೃದ್ಧಿಮಾಡುತ್ತದೆ; ಯಾವ ಪ್ರಜೆಗಾದರೂ ಪಾಪವು ಅವಮಾನವಾಗಿದೆ.
35
ಜ್ಞಾನ ವುಳ್ಳ ಸೇವಕನ ಕಡೆಗೆ ಅರಸನ ದಯೆ ಇದೆ; ನಾಚಿಕೆ ಪಡಿಸುವವನ ಕಡೆಗೆ ಅವನ ರೌದ್ರವಿದೆ.
×

Alert

×

kannada Letters Keypad References