ಪವಿತ್ರ ಬೈಬಲ್

ದೇವರ ಕೃಪೆಯ ಉಡುಗೊರೆ
ಯೆಹೆಜ್ಕೇಲನು 9:1

Notes

No Verse Added

ಯೆಹೆಜ್ಕೇಲನು 9:1

1
ಇದಲ್ಲದೆ ಆತನು ಮಹಾಶಬ್ದದಿಂದ ನನ್ನ ಕಿವಿಗಳಲ್ಲಿ ಕೂಗಿ ಹೇಳಿದ್ದೇನಂದರೆ-- ಪಟ್ಟಣದಲ್ಲಿ ವಿಚಾರಣೆ ಹೊಂದಿದ ಪ್ರತಿಯೊಬ್ಬರೂ ಕೈಯಲ್ಲಿ ನಾಶಮಾಡುವ ಆಯುಧಗಳನ್ನು ಹಿಡಿದು ಕೊಂಡು ಸವಿಾಪಕ್ಕೆ ಬನ್ನಿರಿ ಅಂದಾಗ
2
ಇಗೋ, ಆರು ಮಂದಿ ಮನುಷ್ಯರು ಉತ್ತರ ದಿಕ್ಕಿನ ಮೇಲ್ಭಾಗದ ಮಾರ್ಗದಿಂದ ಬಂದರು ಮತ್ತು ಪ್ರತಿ ಮನುಷ್ಯನ ಕೈಯಲ್ಲಿ ಕೊಲ್ಲುವ ಆಯುಧವು ಇತ್ತು; ಅವರಲ್ಲಿ ಒಬ್ಬನು ನಾರುಮಡಿಯನ್ನು ಧರಿಸಿಕೊಂಡು ತನ್ನ ಪಕ್ಕೆಯಲ್ಲಿ ಲೇಖಕನ ದೌತಿಯನ್ನು ಇಟ್ಟುಕೊಂಡಿ ದ್ದನು. ಇವರೆಲ್ಲರೂ ಕಂಚಿನ ಯಜ್ಞವೇದಿಯ ಬಳಿ ಯಲ್ಲಿ ನಿಂತರು.
3
ಇಸ್ರಾಯೇಲಿನ ದೇವರ ಮಹಿ ಮೆಯು ಯಾವದರ ಮೇಲಿತ್ತೋ ಕೆರೂಬಿಯನ್ನು ಬಿಟ್ಟು ಮನೆಯ ಹೊಸ್ತಿಲಿಗೆ ಹೋಯಿತು; ತನ್ನ ಪಕ್ಕದಲ್ಲಿ ಲೇಖಕನ ದೌತಿ ಇಟ್ಟುಕೊಂಡು ನಾರುಮಡಿಯನ್ನು ಧರಿಸಿದ್ದ ಮನುಷ್ಯನ ಕಡೆಗೆ ಕೂಗಿ
4
ಕರ್ತನು ಅವನಿಗೆ ಹೇಳಿದ್ದೇನಂದರೆ--ಯೆರೂ ಸಲೇಮಿನ ಪಟ್ಟಣದ ಮಧ್ಯೆ ಹಾದುಹೋಗಿ ಅವರ ಮಧ್ಯೆ ನಡೆಯುವ ಎಲ್ಲಾ ಅಸಹ್ಯವಾದವುಗಳ ನಿಮಿತ್ತ ನಿಟ್ಟುಸಿರು ಬಿಡುತ್ತಾ ಅಳುತ್ತಿರುವವರೆಲ್ಲರ ಹಣೆಯ ಮೇಲೆ ಗುರುತು ಹಾಕು ಅಂದನು.
5
ಅದನ್ನು ನಾನು ಕೇಳುತ್ತಿರುವಾಗ ಇತರರಿಗೆ ಅವನು ಹೇಳಿದ್ದೇನಂದರೆ --ನೀವೂ ಅವನ ಹಿಂದೆ ಪಟ್ಟಣದಲ್ಲಿ ಹಾದು ಹೋಗಿ ಹೊಡೆಯಿರಿ; ನಿಮ್ಮ ಕಣ್ಣುಗಳು ಕನಿಕರಿಸದೆ ಇರಲಿ, ಕಟಾಕ್ಷಿಸದೆಯೂ ಇರಲಿ.
6
ವೃದ್ಧ ಯುವಕ ಯುವತಿ ಯರನ್ನು ಎಳೆಕೂಸುಗಳನ್ನು ಮತ್ತು ಹೆಂಗಸರನ್ನು ಸಂಪೂರ್ಣವಾಗಿ ಕೊಂದುಹಾಕಿರಿ. ಆದರೆ ಗುರುತು ಯಾವನ ಮೇಲೆ ಇದೆಯೋ ಅವನ ಹತ್ತಿರ ಹೋಗ ಬೇಡಿರಿ; ನನ್ನ ಪರಿಶುದ್ಧ ಸ್ಥಳದಿಂದಲೇ ಪ್ರಾರಂಭಿಸಿರಿ ಅಂದಾಗ, ಅವರು ಆಲಯದ ಮುಂದಿದ್ದ ಹಿರಿಯರಿಂದ ಪ್ರಾರಂಭಿಸಿದರು.
7
ಆತನು ಅವರಿಗೆ--ಆಲಯವನ್ನು ಅಶುದ್ಧ ಮಾಡಿರಿ, ಹತರಾದವರಿಂದ ಅಂಗಳಗಳನ್ನು ತುಂಬಿಸಿ, ಹೊರಡಿರಿ ಎಂದು ಹೇಳಿದನು. ಅವರು ಹೊರಟು ನಗರದಲ್ಲಿದ್ದವರನ್ನು ಹತಮಾಡಿದರು.
8
ಅವರು ಹತಮಾಡುತ್ತಿರುವಾಗ ನಾನು ಬಿಡಿಸಲ್ಪಟ್ಟೆನು. ಆಗ ನಾನು ಮೋರೆ ಕೆಳಗಾಗಿ ಬಿದ್ದು ಕೂಗಿ--ಹಾ, ದೇವರಾದ ಕರ್ತನೇ, ನೀನು ಯೆರೂಸಲೇಮಿನ ಮೇಲೆ ನಿನ್ನ ಕೋಪಾಗ್ನಿಯನ್ನು ಸುರಿಯುವದರಲ್ಲಿಯೇ ಇಸ್ರಾ ಯೇಲ್ಯರಲ್ಲಿ ಉಳಿದವರನ್ನೆಲ್ಲಾ ನಾಶಮಾಡುವಿಯಾ ಎಂದೆನು.
9
ಆಗ ಆತನು ನನಗೆ ಹೇಳಿದ್ದೇನಂದರೆಇಸ್ರಾಯೇಲಿನ ಮತ್ತು ಯೆಹೂದ ಮನೆತನದವರ ಅಕ್ರಮವು ಅತಿ ದೊಡ್ಡದಾಗಿದೆ; ದೇಶವು ರಕ್ತದಿಂದ ತುಂಬಿದೆ; ಪಟ್ಟಣವು ವಕ್ರತ್ವದಿಂದ ತುಂಬಿದೆ; ಯಾಕಂದರೆ ಕರ್ತನು ಭೂಮಿಯನ್ನು ತೊರೆದುಬಿಟ್ಟಿದ್ದಾನೆ; ಕರ್ತನು ನೋಡುವದಿಲ್ಲ ಎಂದು ಅವರು ಹೇಳುತ್ತಾರೆ.
10
ಆದದರಿಂದ ನಾನಂತೂ ಕನಿಕರಿಸುವದೂ ಇಲ್ಲ ಕಟಾಕ್ಷಿಸುವದೂ ಇಲ್ಲ ಆದರೆ ಅವರ ಮಾರ್ಗದಲ್ಲಿಯೇ ಅವರ ತಲೆಯ ಮೇಲೆ ಮುಯ್ಯಿತೀರಿಸುವೆನು ಅಂದನು.
11
ಇಗೋ, ನಾರುಮಡಿಯನ್ನು ತನ್ನ ಪಕ್ಕೆ ಯಲ್ಲಿ ಧರಿಸಿಕೊಂಡಂಥ ಮನುಷ್ಯನು ವರ್ತಮಾನ ವನ್ನು ತಂದು ನೀನು ಆಜ್ಞಾಪಿಸಿದ ಹಾಗೆ ಮಾಡಿದ್ದೇನೆ ಅಂದನು.
×

Alert

×

kannada Letters Keypad References