ಪವಿತ್ರ ಬೈಬಲ್

ದೇವರ ಕೃಪೆಯ ಉಡುಗೊರೆ
ಯೆಹೆಜ್ಕೇಲನು 24:1

Notes

No Verse Added

ಯೆಹೆಜ್ಕೇಲನು 24:1

1
ಒಂಭತ್ತನೇ ವರುಷದ ಹತ್ತನೇ ತಿಂಗಳಿನ ಹತ್ತನೇ ದಿನದಲ್ಲಿ ಕರ್ತನ ವಾಕ್ಯವು ನನಗೆ ಬಂದು ಹೇಳಿದ್ದೇನಂದರೆ
2
ಮನುಷ್ಯಪುತ್ರನೇ, ದಿನದ, ಇದೇ ದಿನದ ಹೆಸರನ್ನು ಬರೆದುಕೋ; ಅದೇ ದಿನದಲ್ಲಿ ಬಾಬೆಲಿನ ಅರಸನು ಯೆರೂಸಲೇಮಿಗೆ ಮುತ್ತಿಗೆ ಹಾಕುತ್ತಾನೆ.
3
ತಿರುಗಿ ಬೀಳುವ ಮನೆತನ ದವರಿಗೆ ಸಾಮ್ಯವನ್ನು ತಿಳಿಸಿ ಅವರಿಗೆ ಹೇಳಬೇಕಾದದ್ದೇ ನಂದರೆ, ದೇವರಾದ ಕರ್ತನು ಹೀಗೆ ಹೇಳುತ್ತಾನೆ-- ಹಂಡೆಯನ್ನು ಒಲೆಯ ಮೇಲಿಡು, ಅದರಲ್ಲಿ ನೀರನ್ನು ಸುರಿ.
4
ತೊಡೆಯನ್ನೂ ಹೆಗಲನ್ನೂ ಎಲ್ಲಾ ಒಳ್ಳೇ ತುಂಡುಗಳನ್ನೂ ಒಟ್ಟಿಗೆ ಸೇರಿಸಿ ಒಳ್ಳೆ ಎಲುಬುಗಳ ಜೊತೆ ಅದನ್ನು ತುಂಬಿಸಿ;
5
ಹಿಂಡಿನಲ್ಲಿ ಶ್ರೇಷ್ಠವಾದ ದ್ದನ್ನು ತೆಗೆದುಕೊಂಡು ಎಲುಬಿನ ರಾಶಿಯನ್ನೂ ಅದರ ಕೆಳಗೆ ಇಟ್ಟು ಅದನ್ನು ಚೆನ್ನಾಗಿ ಕುದಿಸು; ಎಲುಬುಗಳೂ ಅದರಲ್ಲಿ ಚೆನ್ನಾಗಿ ಬೇಯಲಿ.
6
ಆದಕಾರಣ ದೇವರಾದ ಕರ್ತನು ಹೀಗೆ ಹೇಳು ತ್ತಾನೆ; ರಕ್ತಮಯವಾದ ಪಟ್ಟಣಕ್ಕೆ ಅಯ್ಯೋ! ಯಾವದರ ಕಲ್ಮಶವು ಹೊರಗೆ ಬಾರದೆ ಅದರಲ್ಲಿ ಉಳಿದಿರುವದೋ ಹಂಡೆಗೆ ಅಯ್ಯೋ, ಅದರಿಂದ ತುಂಡು ತುಂಡಾಗಿ ಹೊರಗೆ ತೆಗೆ; ಆಯ್ಕೆಯ ಚೀಟಿಯು ಅದರ ಮೇಲೆ ಬೀಳದಿರಲಿ.
7
ಅದರ ರಕ್ತವು ಅದರ ಮಧ್ಯದಲ್ಲಿದೆ; ಅದು ಅದನ್ನು ಬಂಡೆಯ ತುದಿಯಲ್ಲಿ ಇಟ್ಟಿದೆ; ದೂಳು ಮುಚ್ಚುವ ಹಾಗೆ ನೆಲದ ಮೇಲೆ ಚೆಲ್ಲಲಿಲ್ಲ;
8
ಮುಯ್ಯಿಗೆಮುಯ್ಯಿ ತೀರಿಸುವದಕ್ಕೆ ರೋಷ ವನ್ನೆಬ್ಬಿಸುವ ಹಾಗೆ ನಾನು ಅದರ ರಕ್ತಾಪರಾಧವನ್ನು ಮುಚ್ಚಿಬಿಡದಂತೆ ಬಂಡೆಯ ತುದಿಯ ಮೇಲೆ ಇಟ್ಟಿ ದ್ದೇನೆ;
9
ಆದದರಿಂದ ದೇವರಾದ ಕರ್ತನು ಹೀಗೆ ಹೇಳುತ್ತಾನೆ--ಆ ರಕ್ತಾಪರಾಧವುಳ್ಳ ಪಟ್ಟಣವು ಹಾಳಾ ಗಲಿ, ನಾನೇ ಬೆಂಕಿಯನ್ನು ರಾಶಿಯಾಗಿ ಹೆಚ್ಚಿಸುವೆನು.
10
ಬಹಳ ಸೌದೆ ಹಾಕಿ, ಬೆಂಕಿಯನ್ನು ಹೆಚ್ಚಿಸಿ, ಮಾಂಸ ವನ್ನು ಬೇಯಿಸು; ಮಸಾಲೆ ಚೆನ್ನಾಗಿ ಇರಲಿ, ಮತ್ತು ಎಲುಬುಗಳು ಸುಡಲಿ.
11
ಆಮೇಲೆ ಅದರ ಹಿತ್ತಾಳೆ ಬಿಸಿಯಾಗಿ ಮೈಲಿಗೆ ಕರಗಿ ಕಲ್ಮಶವು ಹೋಗುವ ಹಾಗೆ ಅದನ್ನು ಬರಿದು ಮಾಡಿ ಕೆಂಡಗಳ ಮೇಲೆ ಇಡು.
12
ಅದರ ಕಲ್ಮಶವು ಆಯಾಸವನ್ನುಂಟು ಮಾಡಿತೇ ಹೊರತು ಅದಕ್ಕೆ ಹತ್ತಿದ್ದ ಬಹಳವಾದ ಕಿಲುಬು ಹೋಗಲಿಲ್ಲ, ಅದು ಬೆಂಕಿಯಲ್ಲಿರಲಿ;
13
ನಿನ್ನ ಅಶುದ್ಧ ತ್ವವು ದುಷ್ಕರ್ಮವುಳ್ಳದ್ದು; ನಾನು ನಿನ್ನನ್ನು ಪರಿಶುದ್ಧ ಮಾಡಿದರೂ ನೀನು ಶುದ್ಧವಾಗದ ಕಾರಣ ನಾನು ನನ್ನ ರೋಷವನ್ನು ನಿನ್ನ ಮೇಲೆ ಕಳುಹಿಸುವಷ್ಟು ಕಾಲದ ವರೆಗೂ ಇನ್ನು ಮೇಲೆ ನೀನು ನಿನ್ನ ಅಪವಿತ್ರತ್ವದಿಂದ ಇನ್ನು ಶುದ್ಧವಾಗುವದಿಲ್ಲ.
14
ಕರ್ತನಾದ ನಾನೇ ಅದನ್ನು ಹೇಳಿದ್ದೇನೆ, ಅದು ನಡೆಯುವದು; ನಾನು ಅದನ್ನು ಮಾಡದೆ ಬಿಡುವದಿಲ್ಲ; ಕಟಾಕ್ಷ ತೋರಿಸು ವದಿಲ್ಲ; ಪಶ್ಚಾತ್ತಾಪಪಡುವದಿಲ್ಲ. ನಿನ್ನ ಮಾರ್ಗಗಳ ಪ್ರಕಾರವೂ ನಿನ್ನ ಕ್ರಿಯೆಗಳ ಪ್ರಕಾರವೂ ನಿನಗೆ ನ್ಯಾಯ ತೀರಿಸುವೆನೆಂದು ದೇವರಾದ ಕರ್ತನು ಹೇಳುತ್ತಾನೆ.
15
ಇದಲ್ಲದೆ, ಕರ್ತನ ವಾಕ್ಯವು ನನಗೆ ಬಂದು ಹೇಳಿದ್ದೇನಂದರೆ--
16
ಮನುಷ್ಯಪುತ್ರನೇ, ಇಗೋ, ಒಂದೇ ಏಟಿನಿಂದ ನೇತ್ರಾನಂದವಾಗಿರುವದನ್ನು ನಿನ್ನಿಂದ ತೆಗೆಯುತ್ತೇನೆ; ಆದರೆ ನೀನು ದುಃಖಪಡಬೇಡ, ಅಳಬೇಡ, ನಿನ್ನ ಕಣ್ಣೀರು ಹರಿದು ಹೋಗದಿರಲಿ.
17
ವ್ಯಸನದಿಂದ ಸತ್ತವರಿಗಾಗಿ ಅರಚಬೇಡ, ಗೋಳಾಡ ಬೇಡ ನೀನು ರುಮಾಲನ್ನು ಕಟ್ಟಿಕೊಂಡು ಕಾಲುಗಳಿಗೆ ಜೋಡುಗಳನ್ನು ಮೆಟ್ಟಿಕೋ; ತುಟಿಗಳನ್ನು ಮುಚ್ಚಿಕೊಳ್ಳ ಬೇಡ; ಮನುಷ್ಯರ ರೊಟ್ಟಿಯನ್ನು ತಿನ್ನಬೇಡ.
18
ಹಾಗೆಯೇ ನಾನು ಬೆಳಗಿನ ಜಾವದಲ್ಲಿ ಜನ ರೊಂದಿಗೆ ಮಾತನಾಡಿದೆನು; ಸಂಜೆ ನನ್ನ ಹೆಂಡತಿ ಸತ್ತಳು; ಆಗ ಮುಂಜಾನೆ ಅಪ್ಪಣೆಯಾದ ಪ್ರಕಾರವೇ ನಾನು ಮಾಡಿದೆನು.
19
ಆಗ ಜನರು--ನೀನು ಮಾಡುವ ಸಂಗತಿಗಳಿಂದ ನಮಗೆ ಪ್ರಯೋಜನವೇ ನೆಂದು ತಿಳಿಸುವದಿಲ್ಲವೇ ಎಂದರು.
20
ಆಮೇಲೆ ನಾನು ಅವರಿಗೆ ಉತ್ತರಿಸಿದೆನು; ಕರ್ತನ ವಾಕ್ಯವು ನನಗೆ ಬಂದು ಹೇಳಿದ್ದೇನಂದರೆ--
21
ಇಸ್ರಾಯೇಲ್ಯರ ಮನೆ ತನದವರೊಂದಿಗೆ ಮಾತನಾಡಿ ದೇವರಾದ ಕರ್ತನು ಹೀಗೆ ಹೇಳುತ್ತಾನೆಂದು ಹೇಳು--ಇಗೋ, ನಾನು ನನ್ನ ಪರಿಶುದ್ಧ ಸ್ಥಳವನ್ನೂ ನಿಮ್ಮ ಬಲದ ಶ್ರೇಷ್ಠತ್ವವನ್ನೂ ನಿಮ್ಮ ನೇತ್ರಾನಂದಕರವಾದದ್ದನ್ನೂ ನಿಮ್ಮ ಮನಸ್ಸು ಅಭಿಲಾಷಿಸುವದನ್ನೂ ನಾನು ಅಪವಿತ್ರಪಡಿಸುವೆನು; ನೀವು ಬಿಟ್ಟಿರುವ ನಿಮ್ಮ ಕುಮಾರರೂ ಕುಮಾರ್ತೆಯರೂ ಕತ್ತಿಯಿಂದ ಬೀಳುವರು.
22
ನಾನು ಮಾಡಿದ ಹಾಗೆ ನೀವು ಮಾಡುವಿರಿ; ನಿಮ್ಮ ತುಟಿಗಳನ್ನು ಮುಚ್ಚಿಕೊಳ್ಳ ಬಾರದು ಅವರ ರೊಟ್ಟಿಯನ್ನೂ ತಿನ್ನಬಾರದು.
23
ನಿಮ್ಮ ರುಮಾಲುಗಳು ತಲೆಯ ಮೇಲೆಯೂ ನಿಮ್ಮ ಜೋಡು ಗಳು ನಿಮ್ಮ ಪಾದಗಳ ಅಡಿಯಲ್ಲಿಯೂ ಇರುವವು; ನೀವು ಗೋಳಾಡದೆ ಅಳದೆ ನಿಮ್ಮ ಅಕ್ರಮಗಳಿಂದ ಕುಂದಿಹೋಗಿ ಒಬ್ಬರ ಸಂಗಡಲೊಬ್ಬರು ನರುಳುವಿರಿ.
24
ಹೀಗೆ ಯೆಹೆಜ್ಕೇಲನು ನಿಮಗೆ ಮುಂಗುರುತಾ ರುವನು; ಅವನು ಮಾಡಿದ ಎಲ್ಲವುಗಳ ಹಾಗೆ ನೀವೂ ಮಾಡುವಿರಿ; ರೀತಿ ಆದಾಗ ನಾನೇ ಕರ್ತನೆಂದು ತಿಳಿಯುವಿರಿ.
25
ಇದಲ್ಲದೆ ಮನುಷ್ಯಪುತ್ರನೇ, ಅವರ ಮಹತ್ತಾದ ಸಂತೋಷವನ್ನೂ ನೇತ್ರಾನಂದಕರವಾದದ್ದನ್ನೂ ಅವರು ಆಶಿಸುವದನ್ನೂ ಕುಮಾರ ಕುಮಾರ್ತೆಯರನ್ನೂ ಅವರ ಬಲದಿಂದ ನಾನು ತೆಗೆದುಹಾಕುವ
26
ದಿನದಲ್ಲಿ ತಪ್ಪಿಸಿಕೊಂಡವನು ನಿನ್ನ ಕಿವಿಗಳಿಗೆ ಸುದ್ದಿಯನ್ನು ತರುವ ಹಾಗೆ ನಿನ್ನ ಬಳಿಗೆ ಬರುವನಲ್ಲವೆ?
27
ದಿನದಲ್ಲಿ ತಪ್ಪಿಸಿಕೊಂಡವನ ಕಡೆಗೆ ನಿನ್ನ ಬಾಯಿತೆರೆದಿರುವದು ನೀನು ಇನ್ನು ಮೂಕನಾಗಿರದೆ ಮಾತನಾಡುವಿ ಮತ್ತು ಅವರಿಗೆ ಮುಂಗುರುತಾಗಿರುವಿ, ಆಗ ನಾನೇ ಕರ್ತನೆಂದು ತಿಳಿಯುವರು.
×

Alert

×

kannada Letters Keypad References