ಪವಿತ್ರ ಬೈಬಲ್

ದೇವರ ಕೃಪೆಯ ಉಡುಗೊರೆ
ಕೀರ್ತನೆಗಳು 6:1

Notes

No Verse Added

ಕೀರ್ತನೆಗಳು 6:1

1
ಕರ್ತನೇ, ನಿನ್ನ ಕೋಪದಿಂದ ನನ್ನನ್ನು ಗದರಿಸಬೇಡ; ನಿನ್ನ ಉಗ್ರತೆಯಿಂದ ನನ್ನನ್ನು ದಂಡಿಸಬೇಡ.
2
ಕರ್ತನೇ, ನನ್ನ ಮೇಲೆ ದಯವಿಡು; ಯಾಕಂದರೆ ನಾನು ಬಲಹೀನನಾಗಿದ್ದೇನೆ. ಕರ್ತನೇ, ನನ್ನನ್ನು ಸ್ವಸ್ಥಮಾಡು, ನನ್ನ ಎಲುಬುಗಳು ತಲ್ಲಣಿಸುತ್ತವೆ.
3
ನನ್ನ ಪ್ರಾಣವು ಸಹ ಬಹಳವಾಗಿ ತಲ್ಲಣಿಸುತ್ತದೆ; ಆದರೆ ಕರ್ತನೇ, ಇದು ಎಲ್ಲಿಯ ವರೆಗೆ?
4
ಕರ್ತನೇ, ಹಿಂತಿರುಗಿ ನನ್ನ ಪ್ರಾಣವನ್ನು ತಪ್ಪಿಸಿಬಿಡು. ಹಾ! ನಿನ್ನ ಕರುಣೆಯ ನಿಮಿತ್ತ ನನ್ನನ್ನು ರಕ್ಷಿಸು.
5
ಮರಣದಲ್ಲಿ ನಿನ್ನ ಜ್ಞಾಪಕವಿಲ್ಲ; ಸಮಾಧಿ ಯಲ್ಲಿ ನಿನಗೆ ಉಪಕಾರಸ್ತುತಿ ಮಾಡುವವರು ಯಾರು?
6
ನಾನು ನರನರಳಿ ದಣಿದಿದ್ದೇನೆ; ಪ್ರತಿ ರಾತ್ರಿಯೂ ನನ್ನ ಕಣ್ಣೀರಿನಿಂದ ಮಂಚವು ತೇಲಾ ಡುತ್ತದೆ. ಹಾಸಿಗೆಯು ಕಣ್ಣೀರಿನಿಂದ ನೆನೆದು ಹೋಗುತ್ತದೆ.
7
ದುಃಖದಿಂದ ನನ್ನ ಕಣ್ಣು ಬತ್ತಿ ಹೋಗಿದೆ. ನನ್ನ ಸಕಲ ವೈರಿಗಳಿಂದ ಅದು ಡೊಗರುಬಿದ್ದಿದೆ.
8
ಅಕ್ರಮ ಮಾಡುವವರೇ, ನನ್ನ ಬಳಿಯಿಂದ ತೊಲ ಗಿರಿ; ಅಳುವ ನನ್ನ ಸ್ವರವನ್ನು ಕರ್ತನು ಕೇಳಿದ್ದಾನೆ;
9
ಕರ್ತನು ನನ್ನ ವಿಜ್ಞಾಪನೆಯನ್ನು ಕೇಳಿದ್ದಾನೆ; ಕರ್ತನು ನನ್ನ ಪ್ರಾರ್ಥನೆಯನ್ನು ಅಂಗೀಕರಿಸುವನು.
10
ನನ್ನ ಶತ್ರುಗಳೆಲ್ಲರು ನಾಚಿಕೆಪಟ್ಟು ಬಹಳವಾಗಿ ಕಳವಳ ಗೊಳ್ಳಲಿ; ಅವರು ತಿರುಗಿಕೊಂಡು ಕ್ಷಣಮಾತ್ರದಲ್ಲಿ ನಾಚಿಕೆಪಡಲಿ.
×

Alert

×

kannada Letters Keypad References