1. {ಇಸ್ರಾಯೇಲ್ ಸೆರೆಯಿಂದ ಹಾಯಾಗಿ ಹಿಂದಿರುಗುವುದು} PS ಯೆಹೋವನು, “ಆ ಕಾಲದಲ್ಲಿ ನಾನು ಇಸ್ರಾಯೇಲಿನ ಸಕಲ ಗೋತ್ರಗಳವರಿಗೆ ದೇವರಾಗಿರುವೆನು, ಅವರು ನನಗೆ ಪ್ರಜೆಯಾಗಿರುವರು” ಎಂದು ಹೇಳುತ್ತಾನೆ.
|
2. ಕರ್ತನಾದ ಯೆಹೋವನು, “ಖಡ್ಗಕ್ಕೆ ಹತರಾಗದೆ ಉಳಿದ ಜನಕ್ಕೆ ಅರಣ್ಯದಲ್ಲಿ ದಯೆ ದೊರೆಯುವುದು;
ಇಸ್ರಾಯೇಲ್ ವಿಶ್ರಾಂತಿಯನ್ನು ಹುಡುಕುವುದಕ್ಕೆ ಹೋಗುವಾಗ ಯೆಹೋವನು ದೂರದಿಂದ ಬಂದು ಅದಕ್ಕೆ ದರ್ಶನಕೊಟ್ಟು, |
4. ಇಸ್ರಾಯೇಲೆಂಬ ಯುವತಿಯೇ, ನಾನು ನಿನ್ನ ಹಾಳುಪ್ರದೇಶಗಳನ್ನು ಪುನಃ ಕಟ್ಟುವೆನು; ಅವು ಕಟ್ಟಡಗಳಾಗುವವು.
ನೀನು ಮತ್ತೆ ದಮ್ಮಡಿಗಳಿಂದ ವೈಭವಗೊಂಡು ವಿನೋದಪಡುವವರ ನಾಟ್ಯಗಳಲ್ಲಿ ಸೇರಿಕೊಳ್ಳುವಿ. |
5. ನೀನು ತಿರುಗಿ ಸಮಾರ್ಯದ ಗುಡ್ಡಗಳಲ್ಲಿ ದ್ರಾಕ್ಷಿತೋಟಗಳನ್ನು ಮಾಡಿಕೊಳ್ಳುವಿ; ನೆಡುವವರು ನೆಟ್ಟು ಫಲವನ್ನು ಅನುಭವಿಸುವರು.
|
6. ಒಂದು ದಿನವು ಬರುವುದು, ಆಗ ಎಫ್ರಾಯೀಮಿನ ಗುಡ್ಡಗಳ ಮೇಲಿರುವ ಕಾವಲುಗಾರರು, ಏಳಿರಿ, ಚೀಯೋನಿಗೆ, ನಮ್ಮ ದೇವರಾದ ಯೆಹೋವನ ಸನ್ನಿಧಾನಕ್ಕೆ ಹೋಗೋಣ ಬನ್ನಿ’ ಎಂದು ಕೂಗುವರು” ಎಂದು ಹೇಳುವನು.
|
7. ಯೆಹೋವನು ಇಂತೆನ್ನುತ್ತಾನೆ, “ಯಾಕೋಬಿನ ನಿಮಿತ್ತ ಹರ್ಷಧ್ವನಿಗೈಯಿರಿ, ಜನಾಂಗಗಳ ಶಿರೋಮಣಿಯ ವಿಷಯದಲ್ಲಿ ಕೇಕೆಹಾಕಿರಿ.
ಯೆಹೋವನೇ, ಇಸ್ರಾಯೇಲಿನಲ್ಲಿ ಉಳಿದ ನಿನ್ನ ಜನವನ್ನು ರಕ್ಷಿಸು ಎಂದು ಘೋಷಿಸಿ ಸ್ತುತಿಸಿರಿ. |
8. ಇಗೋ, ನಾನು ಅವರನ್ನು ಉತ್ತರ ದೇಶದಿಂದ ಬರಮಾಡುವೆನು, ದಿಗಂತಗಳಿಂದ ಅವರನ್ನು ಕೂಡಿಸುವೆನು.
ಅವರೊಂದಿಗೆ ಕುರುಡರನ್ನೂ, ಕುಂಟರನ್ನೂ, ಗರ್ಭಿಣಿಯರನ್ನೂ, ದಿನತುಂಬಿದ ಬಸುರಿಯರನ್ನೂ ಒಟ್ಟಿಗೆ ಕರೆತರುವೆನು. ಅವರು ದೊಡ್ಡ ಗುಂಪಾಗಿ ಇಲ್ಲಿಗೆ ಹಿಂದಿರುಗುವರು. |
9. ಅವರು ತಮ್ಮ ವಿಜ್ಞಾಪನೆಗಳಿಂದ ಅಳುತ್ತಾ ನಡೆದು ಬರುವರು, ನಾನು ಅವರನ್ನು ಸಂತೈಸಿ ಮುನ್ನಡೆಸುವೆನು.
ಎಡವದ ಸಮಮಾರ್ಗದಲ್ಲಿ ನಡೆಸುತ್ತಾ ತುಂಬಿದ ತೊರೆಗಳ ಬಳಿಗೆ ಬರಮಾಡುವೆನು. ನಾನು ಇಸ್ರಾಯೇಲಿಗೆ ತಂದೆ, ಎಫ್ರಾಯೀಮು ನನ್ನ ಹಿರಿಯ ಮಗನಲ್ಲವೆ. |
10. ಜನಾಂಗಗಳೇ, ಯೆಹೋವನ ವಾಕ್ಯವನ್ನು ಕೇಳಿರಿ,
ದೂರ ದ್ವೀಪಗಳಲ್ಲಿ ಸಾರಿರಿ! ಇಸ್ರಾಯೇಲರನ್ನು ಚದರಿಸಿದಾತನು, ‘ಮಂದೆಯನ್ನು ಕಾಯುವ ಕುರುಬನಂತೆ ಅವರನ್ನು ಕೂಡಿಸಿ ಕಾಪಾಡುವನು’ ಎಂದು ಪ್ರಕಟಿಸಿರಿ. ಯೆಹೋವನು ಯಾಕೋಬ್ಯರನ್ನು ವಿಮೋಚಿಸಿದ್ದಾನಲ್ಲಾ, |
12. ಅವರು ಬಂದು ಚೀಯೋನ್ ಶಿಖರದಲ್ಲಿ ಹಾಡುವರು.
ಧಾನ್ಯ, ದ್ರಾಕ್ಷಾರಸ, ಎಣ್ಣೆ, ಕರು, ಕುರಿಮರಿ ಅಂತು ಯೆಹೋವನು ಅನುಗ್ರಹಿಸುವ ಎಲ್ಲಾ ಮೇಲುಗಳನ್ನು ಅನುಭವಿಸಲು ಪ್ರವಾಹದೋಪಾದಿಯಲ್ಲಿ ಬರುವರು. ಅವರ ಆತ್ಮವು ಹದವಾಗಿ ನೀರು ಹಾಯಿಸಿದ ತೋಟದಂತಿರುವುದು; ಅವರು ಇನ್ನು ಕಳೆಗುಂದರು. |
13. ಆಗ ಯುವತಿಯು ನಾಟ್ಯವಾಡುತ್ತಾ ಉಲ್ಲಾಸಿಸುವಳು;
ಯುವಕರು ಮತ್ತು ವೃದ್ಧರು ಜೊತೆಯಾಗಿ ಹರ್ಷಿಸುವರು. ನಾನು ಅವರ ದುಃಖವನ್ನು ನೀಗಿಸಿ ಸಂತೋಷವನ್ನು ಉಂಟುಮಾಡಿ, ಅವರು ತಮ್ಮ ವ್ಯಸನವನ್ನು ಬಿಟ್ಟು ಆನಂದಿಸುವಂತೆ ಅವರನ್ನು ಸಂತೈಸುವೆನು. |
14. ಯಾಜಕರನ್ನು ಮೃಷ್ಟಾನ್ನಭೋಜನದಿಂದ ತೃಪ್ತಿಗೊಳಿಸುವೆನು;
ನಾನು ಅನುಗ್ರಹಿಸುವ ಮೇಲುಗಳನ್ನು ನನ್ನ ಜನರು ಸಮೃದ್ಧಿಯಾಗಿ ಅನುಭವಿಸುವರು. ಇದು ಯೆಹೋವನ ನುಡಿ.” ರಾಹೇಲಳ ಪ್ರಲಾಪ; ಯೆಹೋವನ ಸಮಾಧಾನ |
15. ಯೆಹೋವನು ಇಂತೆನ್ನುತ್ತಾನೆ, “ರಾಮಾದಲ್ಲಿ ಬೊಬ್ಬೆಯು ಕೇಳಿಸುತ್ತದೆ,
ಗೋಳಾಟವೂ ಮತ್ತು ಘೋರ ರೋದನವೂ ಉಂಟಾಗಿವೆ; ರಾಹೇಲಳು ತನ್ನ ಮಕ್ಕಳಿಗೋಸ್ಕರ ಅತ್ತತ್ತು ಅವರು ಇಲ್ಲದೆ ಹೋದದ್ದಕ್ಕಾಗಿ ಸಮಾಧಾನ ಹೊಂದದೆ ಇದ್ದಾಳೆ.” |
16. ಯೆಹೋವನು, “ನಿನ್ನ ಧ್ವನಿಯು ಗೋಳಾಟದ ಸ್ವರವಾಗದಿರಲಿ, ನಿನ್ನ ಕಣ್ಣು ನೀರು ಸುರಿಸದಿರಲಿ.
ನಿನ್ನ ಪ್ರಯಾಸವು ಸಾರ್ಥಕವಾಗುವುದು; ಇದು ಯೆಹೋವನ ನುಡಿ; ನಿನ್ನ ಮಕ್ಕಳು ಶತ್ರುವಿನ ದೇಶದಿಂದ ಹಿಂದಿರುಗುವರು” ಎನ್ನುತ್ತಾನೆ. |
17. ಯೆಹೋವನು ಇಂತೆನ್ನುತ್ತಾನೆ, “ನಿನಗೆ ಮುಂದೆ ಒಳ್ಳೆಯ ಗತಿಯಾಗುವುದೆಂದು ನಿರೀಕ್ಷೆಯಿದೆ. ನಿನ್ನ ಮಕ್ಕಳು ಹಿಂದಿರುಗಿ ಸ್ವಂತ ಸೀಮೆಯನ್ನು ಸೇರುವರು.
|
18. ಎಫ್ರಾಯೀಮು ಹೀಗೆ ಪ್ರಲಾಪಿಸಿಕೊಳ್ಳುವುದನ್ನು ಕೇಳಿದ್ದೇನೆ, ‘ನೀನು ನನ್ನನ್ನು ಶಿಕ್ಷಿಸಿದ್ದಿ, ಪಳಗದ ಹೋರಿಯಂತೆ ಶಿಕ್ಷೆಯನ್ನು ಅನುಭವಿಸಿದೆನು.
ನನ್ನನ್ನು ತಿರುಗಿಸು, ನೀನು ತಿರುಗಿಸಿದ ಹಾಗೆ ತಿರುಗುವೆನು; ನೀನು ನನ್ನ ದೇವರಾದ ಯೆಹೋವನಲ್ಲವೆ. |
19. ತಿರುಗಿಸಲ್ಪಟ್ಟ ಮೇಲೆಯೇ ಪಶ್ಚಾತ್ತಾಪ ಪಟ್ಟೆನು; ತಿಳಿವಳಿಕೆಯನ್ನು ಹೊಂದಿದ ಮೇಲೆಯೇ ತೊಡೆಯನ್ನು ಬಡಿದುಕೊಂಡೆನು * ತೊಡೆಯನ್ನು ಬಡಿದುಕೊಂಡೆನು ಎದೆಯನ್ನು ಬಡಿದುಕೊಂಡೆನು .
ನನ್ನ ಯೌವನದ ಅವಮಾನವನ್ನು ನನ್ನ ಮೇಲೆ ಹೊತ್ತುಕೊಂಡ ಕಾರಣ ಲಜ್ಜೆಗೊಂಡೆನು, ಹೌದು, ತುಂಬಾ ನಾಚಿಕೆಪಟ್ಟೆನು.’ ” |
20. ಯೆಹೋವನು ಇಂತೆನ್ನುತ್ತಾನೆ, “ಎಫ್ರಾಯೀಮು ನನಗೆ ಪ್ರಿಯಪುತ್ರ, ಮುದ್ದುಮಗುವಲ್ಲವೇ?
ಅವನ ಹೆಸರೆತ್ತಿದಾಗೆಲ್ಲಾ ಅವನನ್ನು ಜ್ಞಾಪಿಸಿಕೊಳ್ಳುತ್ತಲೇ ಬರುತ್ತೇನೆ; ಇದರಿಂದ ನನ್ನ ಕರುಳು ಅವನಿಗಾಗಿ ಮರುಗುತ್ತದಲ್ಲಾ, ಅವನನ್ನು ಕರುಣಿಸುವೆನು. |
21. ದಾರಿ ತೋರುವ ಕಂಬಗಳನ್ನೂ ಮತ್ತು ಕೈಮರಗಳನ್ನೂ ನಿಲ್ಲಿಸಿಕೋ;
ನೀನು ಯಾವ ಮಾರ್ಗದಲ್ಲಿ ಹೋಗಿಬಿಟ್ಟಿಯೋ ಅದಕ್ಕೆ ನಿನ್ನ ಮನಸ್ಸನ್ನು ತಿರುಗಿಸಿಕೋ. ಇಸ್ರಾಯೇಲೆಂಬ ಯುವತಿಯೇ, ತಿರುಗಿಕೋ, ಈ ನಿನ್ನ ಪಟ್ಟಣಗಳಿಗೆ ಹಿಂದಿರುಗು. |
22. ದ್ರೋಹಿಯಾದ ಮಗಳೇ, ಎಂದಿನವರೆಗೆ ಅತ್ತಿತ್ತ ಅಲೆದಾಡುವಿ?
ಯೆಹೋವನು ಲೋಕದಲ್ಲಿ ಅಪೂರ್ವವಾದದ್ದನ್ನು ಉಂಟುಮಾಡಿದ್ದಾನೆ ನೋಡು, ಸ್ತ್ರೀಯಾದವಳು ತನ್ನ ಪುರುಷನನ್ನು ಕಾಪಾಡುವಳು.” PS |
23. {ಯೆಹೂದದ ಮತ್ತು ಇಸ್ರಾಯೇಲಿನ ಮುಂದಿನ ಸಂತತಿ} PS ಇಸ್ರಾಯೇಲಿನ ದೇವರೂ ಸೇನಾಧೀಶ್ವರನೂ ಆದ ಯೆಹೋವನು ಇಂತೆನ್ನುತ್ತಾನೆ, “ನಾನು ನನ್ನ ಜನರ ದುರವಸ್ಥೆಯನ್ನು ತಪ್ಪಿಸುವಾಗ ಯೆಹೂದ ದೇಶದಲ್ಲಿಯೂ ಅದರ ಪಟ್ಟಣಗಳಲ್ಲಿಯೂ, ‘ನ್ಯಾಯದ ನಿವಾಸವೇ, ಪರಿಶುದ್ಧ ಪರ್ವತವೇ, ಯೆಹೋವನು ನಿನ್ನನ್ನು ಆಶೀರ್ವದಿಸಲಿ’ ಎಂದು ಮತ್ತೆ ಮಾತನಾಡುವರು.
|
24. ಆ ಸಕಲ ಪಟ್ಟಣಗಳವರು, ವ್ಯವಸಾಯಗಾರರು, ಮಂದೆ ಮೇಯಿಸುತ್ತಾ ದೇಶದಲ್ಲಿ ಸಂಚರಿಸುವರು, ಅಂತು ಯೆಹೂದ್ಯರೆಲ್ಲರೂ ಅಲ್ಲಿ ಒಟ್ಟಿಗೆ ವಾಸಿಸುವರು.
|
27. ಕರ್ತನಾದ ಯೆಹೋವನು, “ಇಗೋ, ನಾನು ಇಸ್ರಾಯೇಲ್ ಮತ್ತು ಯೆಹೂದ ಕ್ಷೇತ್ರಗಳಲ್ಲಿ ಮನುಷ್ಯರನ್ನೂ, ಪಶುಗಳನ್ನೂ ಬಿತ್ತುವ ದಿನಗಳು ಬರುವವು.
|
28. ನಾನು ಮೊದಲು ಇವರನ್ನು ಕಿತ್ತುಹಾಕಲು, ಕೆಡವಲು, ಹಾಳುಮಾಡಲು, ನಾಶಪಡಿಸಲು, ಬಾಧಿಸಲು ಹೇಗೆ ಎಚ್ಚರಗೊಂಡಿದ್ದೆನೋ ಹಾಗೆಯೇ ಇನ್ನು ಮೇಲೆ ಇವರನ್ನು ಕಟ್ಟಲು, ನೆಡಲು ಎಚ್ಚರಗೊಳ್ಳುವೆನು. ಇದು ಯೆಹೋವನ ನುಡಿ.
|
29. ‘ಹೆತ್ತವರು ಹುಳಿದ್ರಾಕ್ಷಿಯನ್ನು ತಿಂದರು, ಅದರಿಂದ ಮಕ್ಕಳ ಹಲ್ಲುಗಳು ಚಳಿತುಹೋಗಿವೆ’ ಎಂದು ಆ ಕಾಲದಲ್ಲಿ ಜನರು ಮತ್ತೆ ಹೇಳುವುದಿಲ್ಲ.
|
30. ಸಾಯತಕ್ಕವನು ತನ್ನ ತನ್ನ ದೋಷದಿಂದ ಸಾಯುವನು. ಹುಳಿದ್ರಾಕ್ಷಿಯನ್ನು ತಿನ್ನುವವನ ಹಲ್ಲುಗಳೇ ಚಳಿತುಹೋಗುವವು” ಎಂದು ಹೇಳುತ್ತಾನೆ. PS
|
31. {ಯೆಹೋವನು ತನ್ನ ಜನರೊಂದಿಗೆ ಮಾಡಿಕೊಳ್ಳುವ ಹೊಸ ಒಡಂಬಡಿಕೆ} PS ಯೆಹೋವನು ಇಂತೆನ್ನುತ್ತಾನೆ, “ಇಗೋ, ನಾನು ಇಸ್ರಾಯೇಲ್ ವಂಶದವರೊಂದಿಗೂ ಮತ್ತು ಯೆಹೂದ ವಂಶದವರೊಂದಿಗೂ ಹೊಸದಾಗಿರುವ ಒಂದು ಒಡಂಬಡಿಕೆಯನ್ನು ಮಾಡಿಕೊಳ್ಳುವ ದಿನಗಳು ಬರುವವು.
|
32. ಈ ಒಡಂಬಡಿಕೆಯು ನಾನು ಇವರ ಪೂರ್ವಿಕರನ್ನು ಕೈ ಹಿಡಿದು ಐಗುಪ್ತ ದೇಶದೊಳಗಿಂದ ಕರೆದುಕೊಂಡು ಬಂದಾಗ ಅವರ ಸಂಗಡ ಮಾಡಿಕೊಂಡ ಒಡಂಬಡಿಕೆಯಂಥದಲ್ಲ; ನಾನು ಅವರಿಗೆ ಪತಿಯಾಗಿದ್ದರೂ ಆ ನನ್ನ ಒಡಂಬಡಿಕೆಯನ್ನು ಅವರು ಮೀರಿದರಷ್ಟೆ.
|
33. ಆ ದಿನಗಳು ಬಂದಮೇಲೆ ನಾನು ಇಸ್ರಾಯೇಲ್ ವಂಶದವರೊಂದಿಗೆ ಮಾಡಿಕೊಳ್ಳುವ ಒಡಂಬಡಿಕೆಯು ಹೀಗಿರುವುದು. ನನ್ನ ಧರ್ಮೋಪದೇಶವನ್ನು ಅವರ ಅಂತರಂಗದಲ್ಲಿ ಇಡುವೆನು, ಅವರ ಹೃದಯದೊಳಗೆ ಅದನ್ನು ಬರೆಯುವೆನು, ನಾನು ಅವರಿಗೆ ದೇವರಾಗಿರುವೆನು, ಅವರು ನನಗೆ ಪ್ರಜೆಯಾಗಿರುವರು ಎಂದು ಯೆಹೋವನು ಹೇಳುತ್ತಾನೆ.
|
34. ನೆರೆಹೊರೆಯವರೂ, ಅಣ್ಣತಮ್ಮಂದಿರೂ ಒಬ್ಬರಿಗೊಬ್ಬರು, ‘ಯೆಹೋವನ ಜ್ಞಾನವನ್ನು ಪಡೆಯಿರಿ’ ಎಂದು ಇನ್ನು ಮೇಲೆ ಬೋಧಿಸಬೇಕಾಗಿರುವುದಿಲ್ಲ; ಚಿಕ್ಕವರು ಮೊದಲುಗೊಂಡು ದೊಡ್ಡವರ ತನಕ ಎಲ್ಲರೂ ನನ್ನ ಜ್ಞಾನವನ್ನು ಪಡೆದಿರುವರು. ನಾನು ಅವರ ಅಪರಾಧವನ್ನು ಕ್ಷಮಿಸಿ ಅವರ ಪಾಪವನ್ನು ನನ್ನ ನೆನಪಿಗೆ ಎಂದಿಗೂ ತರುವುದಿಲ್ಲ. ಇದು ಯೆಹೋವನ ನುಡಿ” ಎಂಬುದೇ.
|
35. {ಯೆಹೋವನು ಇಸ್ರಾಯೇಲನ್ನು ಎಂದಿಗೂ ತ್ಯಜಿಸನು} PS ಹಗಲಿನಲ್ಲಿ ಸೂರ್ಯನನ್ನು, ರಾತ್ರಿಯಲ್ಲಿ ಚಂದ್ರ ಮತ್ತು ನಕ್ಷತ್ರಗಳ ಕಟ್ಟಳೆಗಳನ್ನು ಪ್ರಕಾಶಕ್ಕಾಗಿ ನೇಮಿಸುವಾತನೂ,
ಅಲೆಗಳು ಭೋರ್ಗರೆಯುವಷ್ಟು ಸಮುದ್ರವನ್ನು ರೇಗಿಸುವಾತನೂ, ಸೇನಾಧೀಶ್ವರನಾದ ಯೆಹೋವನೆಂಬ ನಾಮಧೇಯದಿಂದ ಪ್ರಸಿದ್ಧನೂ ಆಗಿರುವ ಯೆಹೋವನು ಇಂತೆನ್ನುತ್ತಾನೆ, |
36. “ಈ ಕಟ್ಟಳೆಗಳು ನನ್ನ ಪರಾಂಬರಿಕೆಗೆ ಬಾರದೆ ತೊಲಗಿ ಹೋದರೆ,
ಆಗ ಇಸ್ರಾಯೇಲ್ ಸಂತಾನವು ನನ್ನ ಪರಾಂಬರಿಕೆಗೆ ಒಳಗಾಗದೆ ಎಂದಿಗೂ ಜನಾಂಗವಾಗದೆ ಹೋಗುವುದು.” |
37. ಯೆಹೋವನು, “ಮೇಲೆ ಆಕಾಶಮಂಡಲವನ್ನು ಅಳೆಯಬಹುದಾದರೆ,
ಕೆಳಗೆ ಭೂಮಂಡಲದ ಅಸ್ತಿವಾರವನ್ನು ಪರೀಕ್ಷಿಸಬಹುದಾದರೆ ಆಗ ಇಸ್ರಾಯೇಲ್ ವಂಶವು ಮಾಡಿರುವ ಸಕಲ ದುಷ್ಕೃತ್ಯಗಳ ನಿಮಿತ್ತ, ನಾನು ಆ ವಂಶವನ್ನು ನಿರಾಕರಿಸಿಬಿಡುವೆನು” ಎಂದು ಹೇಳುತ್ತಾನೆ. PS |
38. {ಯೆರೂಸಲೇಮಿಗೆ ಆಗುವ ಅಭಿವೃದ್ಧಿ} PS ಯೆಹೋವನು, “ಇಗೋ, ಮುಂದಿನ ಕಾಲದಲ್ಲಿ ಈ ಪಟ್ಟಣವು ಹನನೇಲನ ಬುರುಜಿನಿಂದ ಮೂಲೆಯ ಬಾಗಿಲಿನವರೆಗೆ ಯೆಹೋವನ ಘನತೆಗಾಗಿ ವಿಸ್ತರಿಸುವುದು.
|
40. ಆಗ ಬೂದಿ, ಹೆಣ ಇವುಗಳಿಂದ ಹೊಲಸಾದ ತಗ್ಗೂ ಅಲ್ಲಿಂದ ಕಿದ್ರೋನ್ ಹಳ್ಳ, ಪೂರ್ವದಿಕ್ಕಿನ ಕುದುರೆ ಬಾಗಿಲ ಮೂಲೆ ಇವುಗಳ ವರೆಗಿರುವ ಪ್ರದೇಶವೆಲ್ಲವೂ ಯೆಹೋವನಿಗೆ ಪರಿಶುದ್ಧ ಸ್ಥಾನವಾಗುವವು; ಪಟ್ಟಣವು ಇನ್ನು ಮೇಲೆ ಎಂದಿಗೂ ಕೀಳಲ್ಪಡುವುದಿಲ್ಲ, ಕೆಡವಲ್ಪಡುವುದಿಲ್ಲ” ಎನ್ನುತ್ತಾನೆ. PE
|