ಯೆರೆಮಿಯ 31 : 1 (KNV)
ಆ ಕಾಲದಲ್ಲಿ ನಾನು ಇಸ್ರಾಯೇಲಿನ ಸಮಸ್ತ ಕುಟುಂಬಗಳಿಗೆ ದೇವರಾಗಿರು ವೆನು; ಅವರು ನನಗೆ ಜನರಾಗಿರುವರು ಎಂದು ಕರ್ತನು ಅನ್ನುತ್ತಾನೆ.
ಯೆರೆಮಿಯ 31 : 2 (KNV)
ಕರ್ತನು ಹೀಗೆ ಹೇಳುತ್ತಾನೆ--ನಾನು ಅವರಿಗೆ ವಿಶ್ರಾಂತಿ ಕೊಡುವದಕ್ಕೆ ಹೋಗಲಾಗಿ ಕತ್ತಿಗೆ ತಪ್ಪಿಸಿಕೊಂಡ ಇಸ್ರಾಯೇಲಿನ ಜನರಿಗೆ ಅರಣ್ಯ ದಲ್ಲಿ ದಯೆ ದೊರಕಿತು.
ಯೆರೆಮಿಯ 31 : 3 (KNV)
ಹಿಂದಿನಂತೆ ಕರ್ತನು ಬಂದು ನನಗೆ ಕಾಣಿಸಿಕೊಂಡು--ಹೌದು, ಶಾಶ್ವತವಾದ ಪ್ರೀತಿ ಯಿಂದ ನಿನ್ನನ್ನು ಪ್ರೀತಿ ಮಾಡಿದ್ದೇನೆ; ಆದದರಿಂದ ಪ್ರೀತಿ ದಯೆಗಳಿಂದ ನಿನ್ನನ್ನು ಎಳೆದಿದ್ದೇನೆ.
ಯೆರೆಮಿಯ 31 : 4 (KNV)
ಇಸ್ರಾ ಯೇಲಿನ ಕನ್ಯಾಸ್ತ್ರೀಯೇ, ನೀನು ಕಟ್ಟಲ್ಪಟ್ಟಿರುವ ಹಾಗೆ ತಿರುಗಿ ನಿನ್ನನ್ನು ಕಟ್ಟುವೆನು; ನಿನ್ನ ದಮ್ಮಡಿಗಳಿಂದ ತಿರುಗಿ ನಿನ್ನನ್ನು ಅಲಂಕರಿಸಿಕೊಂಡು ಸಂತೋಷಪಡು ವವರ ನಾಟ್ಯದಲ್ಲಿ ಹೊರಡುವಿ.
ಯೆರೆಮಿಯ 31 : 5 (KNV)
ಸಮಾರ್ಯದ ಪರ್ವ ತಗಳಲ್ಲಿ ತಿರುಗಿ ದ್ರಾಕ್ಷೇಗಿಡಗಳನ್ನು ನೆಡುವಿ; ನೆಡು ವವರು ನೆಟ್ಟು ಸಾಧಾರಣವಾದವುಗಳಂತೆ ಫಲ ಅನುಭ ವಿಸುವರು.
ಯೆರೆಮಿಯ 31 : 6 (KNV)
ಒಂದು ದಿನವದೆ; ಆಗ ಎಫ್ರಾಯಾಮಿನ ಪರ್ವತದಲ್ಲಿ ಕಾಯುವವರು--ಏಳಿರಿ, ಚೀಯೋನಿಗೆ, ನಮ್ಮ ದೇವರಾದ ಕರ್ತನ ಬಳಿಗೆ ಹೋಗೋಣ ಎಂದು ಕೂಗುವರು.
ಯೆರೆಮಿಯ 31 : 7 (KNV)
ಕರ್ತನು ಹೀಗೆ ಹೇಳುತ್ತಾನೆ --ಯಾಕೋಬನ ವಿಷಯ ಸಂತೋಷದಿಂದ ಹಾಡಿ ಮುಖ್ಯವಾದ ಜನಾಂಗಗಳೊಳಗೆ ಆರ್ಭಟಿಸಿರಿ, ಸಾರಿರಿ, ಸ್ತುತಿಸಿರಿ; ಕರ್ತನೇ, ನಿನ್ನ ಜನರನ್ನೂ ಇಸ್ರಾಯೇಲಿನ ಉಳಿದವರನ್ನೂ ರಕ್ಷಿಸು ಎಂದು ಹೇಳಿರಿ.
ಯೆರೆಮಿಯ 31 : 8 (KNV)
ಇಗೋ, ನಾನು ಅವರನ್ನು ಉತ್ತರ ದೇಶ ದಿಂದ ಬರಮಾಡಿ ಭೂಮಿಯ ಮೇರೆಗಳಿಂದ ಅವರನ್ನು ಕೂಡಿಸುತ್ತೇನೆ; ಅವರಲ್ಲಿ ಕುರುಡರೂ ಕುಂಟರೂ ಗರ್ಭಿಣಿಯಾದವರೂ ದಿನತುಂಬಿದ ಗರ್ಭಿಣಿಯರ ಸಹಿತವಾಗಿ ಇರುವರು; ದೊಡ್ಡ ಗುಂಪಾಗಿ ಇಲ್ಲಿಗೆ ಹಿಂತಿರುಗಿ ಬರುವರು.
ಯೆರೆಮಿಯ 31 : 9 (KNV)
ಅಳುತ್ತಾ ಬರುವರು; ಬಿನ್ನಹಗಳ ಸಂಗಡ ಅವರನ್ನು ನಡಿಸುವೆನು; ಅವರು ಎಡವದ ಸಮದಾರಿಯಲ್ಲಿ ನೀರಿನ ನದಿಗಳ ಬಳಿಯಲ್ಲಿ ನಡೆಯುವಂತೆ ಮಾಡುವೆನು; ನಾನು ಇಸ್ರಾಯೇಲಿಗೆ ತಂದೆಯಾಗಿದ್ದೇನೆ; ಎಫ್ರಾಯಾಮನು ನನ್ನ ಚೊಚ್ಚಲನೇ.
ಯೆರೆಮಿಯ 31 : 10 (KNV)
ಜನಾಂಗಗಳೇ, ಕರ್ತನ ವಾಕ್ಯವನ್ನು ಕೇಳಿರಿ; ದೂರದಲ್ಲಿರುವ ದ್ವೀಪಗಳಲ್ಲಿ ಅದನ್ನು ತಿಳಿಸಿ ಹೀಗೆ ಹೇಳಿರಿ--ಇಸ್ರಾಯೇಲನನ್ನು ಚದರಿಸಿದಾತನು ಅವ ನನ್ನು ಕೂಡಿಸುವನು; ಕುರುಬನು ತನ್ನ ಮಂದೆಯನ್ನು ಕಾಯುವ ಹಾಗೆ ಅವನನ್ನು ಕಾಯುವನು.
ಯೆರೆಮಿಯ 31 : 11 (KNV)
ಕರ್ತನು ಯಾಕೋಬನನ್ನು ವಿಮೋಚಿಸಿದ್ದಾನೆ; ಅವನಿಗಿಂತ ಬಲಿಷ್ಠನಾದವನ ಕೈಯೊಳಗಿಂದ ಅವನನ್ನು ಬಿಡಿಸಿ ದ್ದಾನೆ.
ಯೆರೆಮಿಯ 31 : 12 (KNV)
ಆದದರಿಂದ ಅವರು ಬಂದು ಚೀಯೋನಿನ ಉನ್ನತದಲ್ಲಿ ಹಾಡಿ ಕರ್ತನ ಒಳ್ಳೇತನದ ಬಳಿಗೆ ಗೋಧಿಯ ನಿಮಿತ್ತವೂ ದ್ರಾಕ್ಷಾರಸದ ನಿಮಿತ್ತವೂ ಎಣ್ಣೆಯ ನಿಮಿತ್ತವೂ ಮಂದೆ ದನ ಮರಿಗಳ ನಿಮಿತ್ತವೂ ಪ್ರವಾಹದಂತೆ ಬರುವರು; ಅವರ ಪ್ರಾಣವು ಚೆನ್ನಾಗಿ ನೀರು ಹಾಕಿದ ತೋಟದ ಹಾಗೆ ಇರುವದು; ಅವರು ಇನ್ನು ಮೇಲೆ ಯಾವಾಗಲೂ ದುಃಖಪಡುವದಿಲ್ಲ.
ಯೆರೆಮಿಯ 31 : 13 (KNV)
ಆಗ ಕನ್ಯಾಸ್ತ್ರೀಯೂ ಪ್ರಾಯದವರೂ ಮುದುಕರ ಸಹಿತವಾಗಿ ನಾಟ್ಯದಲ್ಲಿ ಸಂತೋಷಪಡುವರು, ಯಾಕಂ ದರೆ ಅವರ ದುಃಖವನ್ನು ಆನಂದಕ್ಕೆ ಬದಲಾಯಿಸು ವೆನು; ಅವರನ್ನು ಆದರಿಸಿ ದುಃಖದಿಂದ ಬಿಡಿಸಿ ಅವ ರಿಗೆ ಸಂತೋಷವನ್ನುಂಟು ಮಾಡುವೆನು.
ಯೆರೆಮಿಯ 31 : 14 (KNV)
ಇದಲ್ಲದೆ ಯಾಜಕರ ಪ್ರಾಣವನ್ನು ಕೊಬ್ಬಿನಿಂದ ತುಂಬಿಸುವೆನು; ನನ್ನ ಜನರು ನನ್ನ ಒಳ್ಳೇತನದಿಂದ ತೃಪ್ತಿಪಡುವರೆಂದು ಕರ್ತನು ಅನ್ನುತ್ತಾನೆ.
ಯೆರೆಮಿಯ 31 : 15 (KNV)
ಕರ್ತನು ಹೀಗೆ ಹೇಳುತ್ತಾನೆ; ರಾಮದಲ್ಲಿ ಸ್ವರವೂ ಗೋಳಾಟವೂ ಅಘೋರವಾದ ಅಳುವಿಕೆಯೂ ಕೇಳಲ್ಪ ಟ್ಟಿತು; ರಾಹೇಲಳು ತನ್ನ ಮಕ್ಕಳಿಲ್ಲದ್ದರಿಂದ ಆದರಣೆ ಹೊಂದಲೊಲ್ಲದೆ ಅಳುತ್ತಾಳೆ;
ಯೆರೆಮಿಯ 31 : 16 (KNV)
ಕರ್ತನು ಹೀಗೆ ಹೇಳು ತ್ತಾನೆ--ನಿನ್ನ ಸ್ವರವನ್ನು ಅಳದ ಹಾಗೆಯೂ ಕಣ್ಣುಗಳು ಕಣ್ಣೀರು ಇಡದ ಹಾಗೆಯೂ ಬಿಗಿ ಹಿಡಿ; ನಿನ್ನ ಕೆಲಸಕ್ಕೆ ಪ್ರತಿಫಲ ಉಂಟೆಂದು ಕರ್ತನು ಅನ್ನುತ್ತಾನೆ; ಅವರು ಶತ್ರುವಿನ ದೇಶದಿಂದ ತಿರುಗಿ ಬರುವರು.
ಯೆರೆಮಿಯ 31 : 17 (KNV)
ನಿನ್ನ ಅಂತ್ಯದಲ್ಲಿ ನಿರೀಕ್ಷೆ ಉಂಟೆಂದು ಕರ್ತನು ಅನ್ನುತ್ತಾನೆ; ನಿನ್ನ ಮಕ್ಕಳು ತಮ್ಮ ಮೇರೆಗೆ ತಿರುಗಿ ಬರುವರು.
ಯೆರೆಮಿಯ 31 : 18 (KNV)
ಎಫ್ರಾಯಾಮನು ಅಂಗಲಾಚುವದನ್ನು ನಿಶ್ಚಯ ವಾಗಿ ಕೇಳಿದೆನು; ಹೇಗಂದರೆ--ನೀನು ನನ್ನನ್ನು ಶಿಕ್ಷಿ ಸಿದಿ; ತಿದ್ದುಪಾಟಾಗದ ಎತ್ತಿಗೆ ಆದ ಹಾಗೆ ನನಗೆ ಶಿಕ್ಷೆ ಆಯಿತು; ನನ್ನನ್ನು ತಿರುಗಿಸು, ಆಗ ತಿರುಗಿ ಕೊಳ್ಳುವೆನು; ಓ ಕರ್ತನೇ, ನೀನೇ ನನ್ನ ದೇವ ರಾಗಿದ್ದೀ.
ಯೆರೆಮಿಯ 31 : 19 (KNV)
ನಿಶ್ಚಯವಾಗಿ ನಾನು ತಿರುಗಿಕೊಂಡ ಮೇಲೆ ಪಶ್ಚಾತ್ತಾಪಪಟ್ಟೆನು; ಉಪದೇಶಹೊಂದಿದ ಮೇಲೆ ತೊಡೆಯ ಮೇಲೆ ಬಡಕೊಂಡೆನು; ನಾಚಿಕೆಪಟ್ಟೆನು, ಹೌದು, ಅವಮಾನ ಹೊಂದಿದೆನು; ನನ್ನ ಯೌವನದ ನಿಂದೆಯನ್ನು ತಾಳಿಕೊಂಡೆನು.
ಯೆರೆಮಿಯ 31 : 20 (KNV)
ಎಫ್ರಾಯಾಮನು ನನಗೆ ಪ್ರಿಯಕುಮಾರನೋ? ಅವನು ಆನಂದವುಳ್ಳ ಮಗುವೋ? ನಾನು ಅವನಿಗೆ ವಿರೋಧವಾಗಿ ಮಾತ ನಾಡಿದಂದಿನಿಂದ ಅವನನ್ನು ಇನ್ನು ಬಹಳವಾಗಿ ಜ್ಞಾಪಕಮಾಡುತ್ತೇನೆ; ಆದದರಿಂದ ನನ್ನ ಕರುಳುಗಳು ಅವನಿಗೋಸ್ಕರ ಕಳವಳಪಡುತ್ತವೆ. ನಾನು ನಿಶ್ಚಯವಾಗಿ ಅವನನ್ನು ಕನಿಕರಿಸುವೆನೆಂದು ಕರ್ತನು ಅನ್ನುತ್ತಾನೆ.
ಯೆರೆಮಿಯ 31 : 21 (KNV)
ನಿನಗೋಸ್ಕರ ದಾರಿಗುರುತುಗಳನ್ನು ನಿಲ್ಲಿಸು; ಎತ್ತರವಾದ ಗುಡ್ಡಗಳನ್ನು ಇರಿಸು; ಹೆದ್ದಾರಿಯ ಕಡೆಗೆ ನೀನು ಹೋದದಾರಿಗೆ ನಿನ್ನ ಹೃದಯವನ್ನು ಇಟ್ಟುಕೋ; ಇಸ್ರಾಯೇಲಿನ ಕನ್ಯಾಸ್ತ್ರೀಯೇ, ತಿರುಗಿಕೋ, ಈ ಪಟ್ಟಣಗಳಿಗೆ ತಿರುಗು.
ಯೆರೆಮಿಯ 31 : 22 (KNV)
ಹಿಂಜರಿದ ಮಗಳೇ, ಎಷ್ಟರ ವರೆಗೆ ಅಲೆದಾಡುವಿ? ಕರ್ತನು ಭೂಮಿಯಲ್ಲಿ ಹೊಸ ದನ್ನು ಸೃಷ್ಟಿಸುತ್ತಾನೆ; ಹೆಂಗಸು ಗಂಡಸನ್ನು ಆವರಿಸಿ ಕೊಳ್ಳುವಳು.
ಯೆರೆಮಿಯ 31 : 23 (KNV)
ಇಸ್ರಾಯೇಲಿನ ದೇವರಾದ ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ; ಯೆಹೂದ ದೇಶದಲ್ಲಿಯೂ ಅದರ ಪಟ್ಟಣಗಳಲ್ಲಿಯೂ ನಾನು ಅವರನ್ನು ಸೆರೆಯಿಂದ ತಿರುಗಿ ತರುವಾಗ ನೀತಿಯ ನಿವಾಸವೇ, ಪರಿಶುದ್ಧ ಪರ್ವತವೇ, ಕರ್ತನು ನಿನ್ನನ್ನು ಆಶೀರ್ವದಿಸಲಿ ಎಂದು ಇನ್ನೂ ಹೇಳುವರು.
ಯೆರೆಮಿಯ 31 : 24 (KNV)
ಯೆಹೂದದಲ್ಲಿಯೂ ಅದರ ಎಲ್ಲಾ ಪಟ್ಟಣಗಳಲ್ಲಿಯೂ ಬೇಸಾಯ ಮಾಡುವವರೂ ಮಂದೆಯ ಸಂಗಡ ಹೊರಡುವವರೂ ವಾಸವಾಗು ವರು.
ಯೆರೆಮಿಯ 31 : 25 (KNV)
ದಣಿದ ಪ್ರಾಣವನ್ನು ತೃಪ್ತಿಪಡಿಸಿದ್ದೇನೆ; ಕುಂದಿದ ಪ್ರಾಣಗಳನ್ನೆಲ್ಲಾ ತುಂಬಿಸಿದ್ದೇನೆ.
ಯೆರೆಮಿಯ 31 : 26 (KNV)
ಅಷ್ಟರಲ್ಲಿ ಎಚ್ಚತ್ತು ನೋಡಿದೆನು; ನನ್ನ ನಿದ್ದೆ ನನಗೆ ಮಧುರ ವಾಗಿತ್ತು.
ಯೆರೆಮಿಯ 31 : 27 (KNV)
ಇಗೋ, ದಿನಗಳು ಬರುವವೆಂದು ಕರ್ತನು ಅನ್ನುತ್ತಾನೆ; ಆಗ ನಾನು ಇಸ್ರಾಯೇಲಿನ ಮನೆಯನ್ನೂ ಯೆಹೂದನ ಮನೆಯನ್ನೂ ಮನುಷ್ಯನ ಸಂತತಿಯಿಂದಲೂ ಮೃಗದ ಸಂತತಿಯಿಂದಲೂ ಬಿತ್ತು ವೆನು.
ಯೆರೆಮಿಯ 31 : 28 (KNV)
ನಾನು ಕೀಳುವದಕ್ಕೂ ಮುರಿಯುವದಕ್ಕೂ ಕೆಡವುದಕ್ಕೂ ನಾಶಮಾಡು ವದಕ್ಕೂ ಕುಗ್ಗಿಸುವದಕ್ಕೂ ಅವರ ವಿಷಯ ಹೇಗೆ ಎಚ್ಚರವಾಗಿದ್ದೆನೋ ಹಾಗೆಯೇ ಕಟ್ಟುವದಕ್ಕೂ ನೆಡು ವದಕ್ಕೂ ಅವರನ್ನು ಕಾಯುವೆ ನೆಂದು ಕರ್ತನು ಅನ್ನುತ್ತಾನೆ.
ಯೆರೆಮಿಯ 31 : 29 (KNV)
ಆ ದಿನಗಳಲ್ಲಿ--ತಂದೆಗಳು ಹುಳಿ ದ್ರಾಕ್ಷೆಯನ್ನು ತಿಂದಿದ್ದರಿಂದ ಮಕ್ಕಳ ಹಲ್ಲುಗಳು ಚಳಿತು ಹೋದವೆಂದು ಇನ್ನು ಹೇಳಲ್ಪಡು ವದಿಲ್ಲ.
ಯೆರೆಮಿಯ 31 : 30 (KNV)
ಆದರೆ ಒಬ್ಬೊಬ್ಬನು ಸ್ವಂತ ಅಕ್ರಮಕ್ಕಾಗಿ ಸಾಯುವನು. ಹುಳಿ ದ್ರಾಕ್ಷೇಯನ್ನು ತಿಂದ ಮನುಷ್ಯನು ಯಾವನೋ ಅವನ ಹಲ್ಲುಗಳೇ ಚಳಿತು ಹೋಗುವವು.
ಯೆರೆಮಿಯ 31 : 31 (KNV)
ಇಗೋ, ನಾನು ಇಸ್ರಾಯೇಲಿನ ಮನೆತನದವರ ಸಂಗಡಲೂ ಯೆಹೂದದ ಮನೆತನದವರ ಸಂಗ ಡಲೂ ಹೊಸ ಒಡಂಬಡಿಕೆಯನ್ನು ಮಾಡಿಕೊಳ್ಳುವ ದಿನಗಳು ಬರುವವೆಂದು ಕರ್ತನು ಅನ್ನುತ್ತಾನೆ.
ಯೆರೆಮಿಯ 31 : 32 (KNV)
ನಾನು ಅವರ ತಂದೆಗಳ ಸಂಗಡ ಅವರನ್ನು ಐಗುಪ್ತದೇಶದಿಂದ ಹೊರತರುವದಕ್ಕೆ ಅವರ ಕೈ ಹಿಡಿದ ದಿನದಲ್ಲಿ ಮಾಡಿದ ಒಡಂಬಡಿಕೆಯ ಹಾಗಲ್ಲ; ನಾನು ಅವರ ಯಜಮಾನನಾಗಿದ್ದಾಗ್ಯೂ ಆ ನನ್ನ ಒಡಂಬಡಿಕೆಯನ್ನು ಅವರು ವಿಾರಿದರೆಂದು, ಕರ್ತನು ಅನ್ನುತ್ತಾನೆ.
ಯೆರೆಮಿಯ 31 : 33 (KNV)
ಆದರೆ ನಾನು ಇಸ್ರಾಯೇಲಿನ ಮನೆತನದವರ ಸಂಗಡ ಮಾಡುವ ಒಡಂಬಡಿಕೆ ಇದೇ. ಆ ದಿನಗಳಾದ ಮೇಲೆ ನಾನು ನನ್ನ ನ್ಯಾಯಪ್ರಮಾಣವನ್ನು ಅವರೊಳಗೆ ಇಟ್ಟು ಅವರ ಹೃದಯದಲ್ಲಿ ಅದನ್ನು ಬರೆಯುವೆನು; ನಾನು ಅವರಿಗೆ ದೇವರಾಗಿರುವೆನು ಅವರು ನನಗೆ ಪ್ರಜೆ ಯಾಗಿರುವರು ಎಂದು ಕರ್ತನು ಅನ್ನುತ್ತಾನೆ.
ಯೆರೆಮಿಯ 31 : 34 (KNV)
ನೆರೆ ಯವನಿಗೆ ನೆರೆಯವನೂ ಸಹೋದರನಿಗೆ ಸಹೋ ದರನೂ-- ಕರ್ತನನ್ನು ತಿಳಿಯಿರಿ ಎಂದು ಇನ್ನು ಮೇಲೆ ಬೋಧಿಸುವದಿಲ್ಲ; ಅವರೆಲ್ಲರೂ ಚಿಕ್ಕವನು ಮೊದಲು ಗೊಂಡು ದೊಡ್ಡವನ ವರೆಗೂ ನನ್ನನ್ನು ತಿಳಿಯುವ ರೆಂದು ಕರ್ತನು ಅನ್ನುತ್ತಾನೆ; ಅವರ ಅಕ್ರಮವನ್ನು ಮನ್ನಿಸುವೆನು; ಪಾಪಗಳನ್ನು ಇನ್ನು ಮೇಲೆ ಜ್ಞಾಪಕ ಮಾಡುವದಿಲ್ಲ.
ಯೆರೆಮಿಯ 31 : 35 (KNV)
ಕರ್ತನು ಹೀಗೆ ಹೇಳುತ್ತಾನೆ--ಸೂರ್ಯನನ್ನು ಹಗಲಿಗೆ ಬೆಳಕಾಗಿಯೂ ಚಂದ್ರ ನಕ್ಷತ್ರಗಳ ನಿಯಮ ಗಳನ್ನು ರಾತ್ರಿಗೆ ಬೆಳಕಾಗಿಯೂ ಕೊಡುವವನೂ ಅದರ ತೆರೆಗಳು ಘೋಷಿಸುವಾಗ ಸಮುದ್ರವನ್ನು ವಿಭಾಗಿಸು ವವನೂ ಸೈನ್ಯಗಳ ಕರ್ತನೆಂದು ಹೆಸರುಳ್ಳವನೂ ಹೇಳು ವದೇನಂದರೆ--
ಯೆರೆಮಿಯ 31 : 36 (KNV)
ಈ ನಿಯಮಗಳು ನನ್ನ ಸನ್ನಿಧಿ ಯಿಂದ ಯಾವಾಗ ಇಲ್ಲದೆ ಹೋಗುವವೋ ಆಗ ಇಸ್ರಾಯೇಲಿನ ಸಂತಾನವು ಸಹ ಸದಾಕಾಲ ನನ್ನ ಮುಂದೆ ಜನಾಂಗವಾಗಿರದ ಹಾಗೆ ನಿಂತು ಹೋಗುವ ದೆಂದು ಕರ್ತನು ಅನ್ನುತ್ತಾನೆ.
ಯೆರೆಮಿಯ 31 : 37 (KNV)
ಕರ್ತನು ಹೀಗೆ ಹೇಳುತ್ತಾನೆ--ಮೇಲಿರುವ ಆಕಾಶವನ್ನು ಅಳೆಯುವ ದಕ್ಕಾದರೆ, ಕೆಳಗಿರುವ ಭೂಮಿಯ ಅಸ್ತಿವಾರಗಳನ್ನು ಶೋಧಿಸುವದಕ್ಕಾದರೆ, ನಾನು ಸಹ ಇಸ್ರಾಯೇಲಿನ ಸಂತಾನವನ್ನೆಲ್ಲಾ ಅವರು ಮಾಡಿದ್ದೆಲ್ಲಾದರ ನಿಮಿತ್ತ ತೆಗೆದು ಬಿಡುವೆನೆಂದು ಕರ್ತನು ಅನ್ನುತ್ತಾನೆ.
ಯೆರೆಮಿಯ 31 : 38 (KNV)
ಇಗೋ, ಹನನೇಲನ ಬುರುಜು ಮೊದಲು ಗೊಂಡು ಮೂಲೆಯ ಬಾಗಿಲಿನ ವರೆಗೂ ಕರ್ತನಿಗೆ ಪಟ್ಟಣವು ಕಟ್ಟಲ್ಪಡುವ ದಿನಗಳು ಬರುವವೆಂದು ಕರ್ತನು ಅನ್ನುತ್ತಾನೆ.
ಯೆರೆಮಿಯ 31 : 39 (KNV)
ಸೂತ್ರವು ಇನ್ನು ಅದಕ್ಕೆ ಎದುರಾಗಿ ಗಾರೇಬ್ ಗುಡ್ಡದ ಮೇಲೆ ನೇರವಾಗಿ ಹೊರಟು ಗೋಯದ ವರೆಗೂ ಆವರಿಸಿಕೊಳ್ಳುವದು.
ಯೆರೆಮಿಯ 31 : 40 (KNV)
ಹೆಣಗಳ ತಗ್ಗೆಲ್ಲವೂ ಬೂದಿಯೂ ಹೊಲಗಳೆಲ್ಲವೂ ಕಿದ್ರೋನ್ ಹಳ್ಳದ ವರೆಗೂ ಪೂರ್ವದಿಕ್ಕಿನಲ್ಲಿರುವ ಕುದುರೆ ಬಾಗಲಿನ ಮೂಲೆಯವರೆಗೂ ಕರ್ತನಿಗೆ ಪರಿಶುದ್ಧವಾಗುವವು; ಅದು ಕೀಳಲ್ಪಡುವದಿಲ್ಲ, ಇಲ್ಲವೆ ಇನ್ನು ಎಂದೆಂದಿಗೂ ಕೆಡವಲ್ಪಡುವದಿಲ್ಲ.
❮
❯