1. ದೇಶವನ್ನು ಆಳುವವನಿಗೆ ಕಪ್ಪವಾಗಿ ಕೊಡತಕ್ಕ ಕುರಿಮರಿಗಳನ್ನು
ಅರಣ್ಯದ ಕಡೆಯಿರುವ ಸೆಲದಿಂದ ಚೀಯೋನ್ ನಗರದ ಪರ್ವತಕ್ಕೆ ಕಳುಹಿಸಿರಿ. |
3. ಆಲೋಚನೆ ಹೇಳಿರಿ, ತೀರ್ಮಾನಿಸಿರಿ; ನಡು ಮಧ್ಯಾಹ್ನದಲ್ಲಿ ನಿಮ್ಮ ನೆರಳು ರಾತ್ರಿಯ ಕತ್ತಲಿನಂತೆ ದಟ್ಟವಾದ ನೆರಳನ್ನು ಕೊಡಲಿ.
ನಿಮ್ಮಲ್ಲಿರುವ ದೀನದಲಿತರನ್ನು ಸಂರಕ್ಷಿಸು, ತಪ್ಪಿಸಿಕೊಂಡು ಹೋಗುವ ಜನರ ವಿಷಯವನ್ನು ಬಯಲುಮಾಡಬೇಡಿ. |
4. ನಿಮ್ಮ ದೇಶದಿಂದ ವಲಸೆಹೋದವರು ನಿಮ್ಮಲ್ಲಿ ವಾಸಿಸಲಿ; ಮೋವಾಬ್ಯರು ಬಲತ್ಕಾರಿಗಳಿಗೆ ವಶವಾಗದ ಹಾಗೆ ಆಶ್ರಯವಾಗಿರಿ.
ಹಿಂಸಿಸುವವರು ನಿಮ್ಮ ದೇಶದಿಂದ ನಿರ್ಮುಲವಾಗುವರು, ನಾಶನವು ನಿಂತುಹೋಗುವುದು. ಪೀಡಿಸುವವರು ನಿಮ್ಮ ದೇಶದಿಂದ ನಿರ್ಮೂಲರಾಗುವರು. |
5. ಇದಲ್ಲದೆ ಸಿಂಹಾಸನವು ಒಡಂಬಡಿಕೆಯ ನಂಬಿಗಸ್ತಿಕೆಯಲ್ಲಿ ಸ್ಥಾಪಿತವಾಗುವುದು.
ನ್ಯಾಯತೀರಿಸುವವನೂ, ನ್ಯಾಯವನ್ನು ಹುಡುಕುವವನೂ, ನೀತಿಗೋಸ್ಕರ ತ್ವರೆಪಡುವವನೂ ದಾವೀದನ ಗುಡಾರದಲ್ಲಿನ ಆ ಸಿಂಹಾಸನದ ಮೇಲೆ ಸತ್ಯಪರನಾಗಿ ನೀತಿನ್ಯಾಯದಿಂದ ಕುಳಿತುಕೊಳ್ಳುವನು. |
6. ಮೋವಾಬ್ಯರ ಅಹಂಕಾರವನ್ನು, ಗರ್ವವನ್ನು, ಕೊಚ್ಚಿಕೊಳ್ಳುವಿಕೆಯನ್ನು, ಕೋಪವನ್ನು ನಾವು ಕೇಳಿದ್ದೇವೆ.
ಅವರು ಕೊಚ್ಚಿಕೊಳ್ಳುವುದೆಲ್ಲಾ ಬರೀ ವ್ಯರ್ಥವೇ. |
7. ಆದಕಾರಣ ಮೋವಾಬಿನ ನಿಮಿತ್ತ ಮೋವಾಬೇ ಗೋಳಾಡುವುದು. ಪ್ರತಿಯೊಬ್ಬನೂ ಪ್ರಲಾಪಿಸುವನು.
ನೀವು ಕೀರ್ ಹರೆಷೆಥಿನ ಜನರ * ಕೀರ್ ಹರೆಷೆಥಿನ ಜನರ ಅಥವಾ ಕೀರ್ ಹರೆಷೆಥಿನ ಜನರ ಒಣದ್ರಾಕ್ಷಿ. ದೀಪದ್ರಾಕ್ಷೆಯ ಕಡುಬು ಹಾಳಾಯಿತಲ್ಲಾ ಎಂದು ನರಳುವಿರಿ. |
8. ಹೆಷ್ಬೋನಿನ ಭೂಮಿಯು, ಸಿಬ್ಮದ ದ್ರಾಕ್ಷಾಲತೆಯು ಒಣಗಿ ಹೋಗಿದೆ.
ಯಜ್ಜೇರಿನವರೆಗೆ ವ್ಯಾಪಿಸಿ ಅರಣ್ಯದಲ್ಲಿ ಹಬ್ಬಿ, ಸಮುದ್ರದಾಚೆಗೆ ಸೇರುವಷ್ಟು ವಿಶಾಲವಾಗಿ ತನ್ನ ಶಾಖೆಗಳನ್ನು ಹರಡಿಕೊಂಡಿದ್ದ ಮೋವಾಬಿನ ರಾಜ ದ್ರಾಕ್ಷಿಗಳನ್ನು, ಜನಾಂಗಗಳ ಒಡೆಯರನ್ನು ತುಳಿದುಬಿಟ್ಟಿದ್ದಾನೆ. |
9. ಹೀಗಿರಲು ಸಿಬ್ಮದ ದ್ರಾಕ್ಷಾಲತೆಯ ನಿಮಿತ್ತ ಯಜ್ಜೇರಿನವರೊಂದಿಗೆ ನಾನು ಅಳುವೆನು.
ಹೆಷ್ಬೋನೇ, ಎಲ್ಲಾಲೇ ನನ್ನ ಕಣ್ಣೀರಿನಿಂದ ನಿಮ್ಮನ್ನು ತೋಯಿಸುವೆನು. ನಿಮ್ಮ ಹಣ್ಣಿನ ಮೇಲೆಯೂ, ನಿಮ್ಮ ಬೆಳೆಯ ಮೇಲೆಯೂ ಬಿದ್ದು ಆರ್ಭಟಿಸುವುದನ್ನು ನಿಲ್ಲಿಸಿಬಿಟ್ಟಿದ್ದೇನೆ. |
10. ಹರ್ಷಾನಂದಗಳು ತೋಟಗಳಿಂದ ತೊಲಗಿವೆ. ದ್ರಾಕ್ಷಿಯ ತೋಟಗಳಲ್ಲಿ ಉತ್ಸಾಹದ ಧ್ವನಿಯೂ, ಉಲ್ಲಾಸದ ಆರ್ಭಟವೂ ಇರುವುದಿಲ್ಲ.
ತುಳಿಯುವವರು ದ್ರಾಕ್ಷಿಯ ತೊಟ್ಟಿಗಳಲ್ಲಿ ದ್ರಾಕ್ಷಾರಸವನ್ನು ತುಳಿದು ತೆಗೆಯುವುದಿಲ್ಲ. ಅವರ ಕೂಗಾಟವನ್ನು ನಿಲ್ಲಿಸಿಬಿಟ್ಟಿದ್ದೇನೆ. |
11. ಆದುದರಿಂದ ಮೋವಾಬಿನ ನಿಮಿತ್ತ ನನ್ನ ಹೃದಯವು, ಕೀರ್ ಹೆರೆಸಿನ ನಿಮಿತ್ತ ನನ್ನ ಅಂತರಂಗವು ಕಿನ್ನರಿಯಂತೆ ಅಲುಗಿ ನುಡಿಯುತ್ತದೆ.
|
12. ಮೋವಾಬ್ಯರು ಸನ್ನಿಧಿಗೆ ಸೇರಿ, ದಿಣ್ಣೆಯಲ್ಲಿನ ಪೂಜೆಯಿಂದ ಬಹಳ ಆಯಾಸಗೊಂಡು
ಪ್ರಾರ್ಥನೆಗಾಗಿ ತಮ್ಮ ದೇವಾಲಯಕ್ಕೆ ಬಂದರೂ ಅವರ ಪ್ರಾರ್ಥನೆಯು ಸಫಲವಾಗುವುದಿಲ್ಲ. PEPS |
14. ಆಗ ಯೆಹೋವನು ತಿರುಗಿ ಹೇಳಿದ್ದೇನೆಂದರೆ, “ಮೂರು ವರ್ಷದೊಳಗೆ ಮೋವಾಬಿನ ವೈಭವವು ಕಣ್ಮರೆಯಾಗುವುದು. ಅವರ ದೊಡ್ಡ ಗುಂಪು ನಾಶವಾಗುವುದು ಅವರ ಜನರಲ್ಲಿ, ಉಳಿದವರು ಕೇವಲ ಚಿಕ್ಕ ಗುಂಪಾಗಿ ಬಲಹೀನರಾಗುವರು” ಎಂಬುದೇ. PE
|