ಯೆಶಾಯ 16 : 1 (KNV)
ದೇಶವನ್ನು ಆಳುವವನಿಗೆ ಕುರಿಮರಿಯನ್ನು ಸೆಲದಿಂದ ಅರಣ್ಯದ ಕಡೆಗೆ ಚೀಯೋನಿನ ಕುಮಾರ್ತೆಯರ ಬೆಟ್ಟಕ್ಕೆ ಕಳುಹಿಸಿರಿ.
ಯೆಶಾಯ 16 : 2 (KNV)
ಗೂಡಿನಿಂದ ಹೊರಗೆ ಬಂದ ಹಕ್ಕಿಗಳು ಅಲೆದಾಡುವ ಹಾಗೆ ಮೋವಾಬಿನ ಕುಮಾರ್ತೆಯರು ಅರ್ನೋನ್ ನದಿಯ ಹಾಯ್ಗಡಗಳಲ್ಲಿ ಇರುವರು.
ಯೆಶಾಯ 16 : 3 (KNV)
ಆಲೋಚಿಸಿ ತೀರ್ಮಾನಿಸು; ಮಟ್ಟ ಮಧ್ಯಾಹ್ನದಲ್ಲಿ ನಿನ್ನ ನೆರಳನ್ನು ರಾತ್ರಿಯಂತೆ ಮಾಡು; ತಳ್ಳಿಬಿಟ್ಟವ ರನ್ನು ಅಡಗಿಸು; ಅಲೆಯುವವನನ್ನು ಬೈಲಿಗೆ ತರಬೇಡ.
ಯೆಶಾಯ 16 : 4 (KNV)
ಮೋವಾಬೇ, ನನ್ನಿಂದ ತಳ್ಳಿಬಿಟ್ಟವರು ನಿನ್ನೊಂದಿಗೆ ವಾಸಿಸಲಿ; ಹಾಳುಮಾಡುವವರ ಮುಖಗಳಿಂದ ಅವ ರಿಗೆ ಮರೆಯಾಗಿರು: ಹಿಂಸಿಸುವದು ಮುಗಿಯುತ್ತಾ ಬಂತು, ಸೂರೆಮಾಡುವದು ನಿಲ್ಲುವದು. ಪೀಡಿಸು ವವರು ದೇಶದಿಂದ ದಹಿಸಲ್ಪಡುವರು.
ಯೆಶಾಯ 16 : 5 (KNV)
ಕರುಣೆಯಲ್ಲಿ ಸಿಂಹಾಸನವು ಸ್ಥಾಪಿಸಲ್ಪಡುವದು; ನ್ಯಾಯತೀರಿಸು ವವನೂ ನ್ಯಾಯವನ್ನು ಹುಡುಕುವವನೂ ನೀತಿಗೋ ಸ್ಕರ ತ್ವರೆಪಡುವವನೂ ದಾವೀದನ ಗುಡಾರದಲ್ಲಿ ಅದರ ಮೇಲೆ ಸತ್ಯದಲ್ಲಿ ಕೂತುಕೊಳ್ಳುವನು.
ಯೆಶಾಯ 16 : 6 (KNV)
ಮೋವಾಬಿನ ಗರ್ವವನ್ನು ನಾವು ಕೇಳಿದ್ದೇವೆ; ಅವನಿಗೆ ಬಹಳ ಗರ್ವವುಂಟು, ಅಹಂಕಾರವು, ಗರ್ವ ವು ಕೋಪವು ಸಹ ಉಂಟು; ಆದರೆ ಅವನು ಕೊಚ್ಚಿ ಕೊಳ್ಳುವದು ವ್ಯರ್ಥ.
ಯೆಶಾಯ 16 : 7 (KNV)
ಆದದರಿಂದ ಮೋವಾಬಿನ ನಿಮಿತ್ತ ಮೋವಾಬೇ ಗೋಳಾಡುವದು, ಪ್ರತಿಯೊ ಬ್ಬನೂ ಗೋಳಾಡುವನು; ಕೀರ್ ಹರೆಷೆಥಿನ ಅಸ್ತಿವಾರ ಗಳಿಗೋಸ್ಕರ ನೀವು ದುಃಖಿಸುವಿರಿ; ನಿಜವಾಗಿಯೂ ಅವರು ನೊಂದುಹೋಗಿದ್ದಾರೆ.
ಯೆಶಾಯ 16 : 8 (KNV)
ಹೆಷ್ಬೋನಿನ ಹೊಲ ಗಳೂ, ಸಿಬ್ಮದ ದ್ರಾಕ್ಷೆಯೂ ನಿಸ್ಸಾರವಾಗಿವೆ; ಅನ್ಯ ಜನಗಳ ಪ್ರಭುಗಳು ಅದರ ಮುಖ್ಯವಾದ ಗಿಡಗಳನ್ನು ಮುರಿದುಹಾಕಿದ್ದಾರೆ; ಅವರು ಯಜ್ಜೇರಿನ ವರೆಗೂ ಬಂದರು; ಅಡವಿಯಲ್ಲಿ ಅವರು ಸಂಚರಿಸಿದರು. ಅವಳ ಕೊಂಬೆಗಳು ಚಾಚಲ್ಪಟ್ಟವು ಅವರು ಸಮುದ್ರದ ಮೇಲೆ ಹೋದರು.
ಯೆಶಾಯ 16 : 9 (KNV)
ಆದಕಾರಣ ಸಿಬ್ಮದ ದ್ರಾಕ್ಷಾ ಲತೆಯ ನಿಮಿತ್ತ ಯಜ್ಜೇರಿನೊಂದಿಗೆ ಅಳುವೆನು; ಓ ಹೆಷ್ಬೋನೇ, ಎಲೆಯಾಲೇ, ನಿನ್ನನ್ನು ನನ್ನ ಕಣ್ಣೀರಿ ನಿಂದ ತೋಯಿಸುವೆನು; ಬಿದ್ದುಹೋದ ನಿನ್ನ ಬೇಸಿ ಗೆಯ ಫಲಗಳಿಗೂ ಬೆಳೆಗಳಿಗೂ ಆರ್ಭಟಿಸುವರು.
ಯೆಶಾಯ 16 : 10 (KNV)
ಸಮೃದ್ಧಿಯಾದ ಹೊಲಗಳಿಂದ ಸಂತೋಷವು ಮತ್ತು ಆನಂದವು ತೆಗೆಯಲ್ಪಡುವವು; ದ್ರಾಕ್ಷೇತೋಟಗ ಳಲ್ಲಿ ಕೀರ್ತನೆಗಳಾಗಲಿ ಆರ್ಭಟವಾಗಲಿ ಇರುವದಿಲ್ಲ; ದ್ರಾಕ್ಷೇತೋಟಗಳಲ್ಲಿ ಇನ್ನು ದ್ರಾಕ್ಷಾರಸವನ್ನು ತುಳಿದು ತೆಗೆಯುವದಿಲ್ಲ; ಅವರ ಕೂಗಾಟವನ್ನು ನಿಲ್ಲಿಸಿಬಿಟ್ಟಿ ದ್ದೇನೆ.
ಯೆಶಾಯ 16 : 11 (KNV)
ಆದದರಿಂದ ಮೋವಾಬಿನ ನಿಮಿತ್ತ ನನ್ನ ಕರುಳುಗಳು ಮತ್ತು ಕೀರ್ ಹರೇಷೆಥಿನ ನಿಮಿತ್ತ ನನ್ನ ಅಂತರಿಂದ್ರಿಯಗಳು ಕಿನ್ನರಿಯಂತೆ ಸ್ವರಗೈಯುವವು.
ಯೆಶಾಯ 16 : 12 (KNV)
ಹೀಗಿರುವಲ್ಲಿ ಮೋವಾಬು ಉನ್ನತ ಸ್ಥಳದಲ್ಲಿ ಆಯಾಸಗೊಂಡಂತೆ ಕಾಣಿಸಿಕೊಂಡು ಪರಿಶುದ್ಧಸ್ಥಳಕ್ಕೆ ಪ್ರಾರ್ಥನೆಗಾಗಿ ಬಂದರೂ ಅವನಿಗೆ ಸಫಲವಾಗದು.
ಯೆಶಾಯ 16 : 13 (KNV)
ಕರ್ತನು ಮೋವಾಬಿನ ವಿಷಯವಾಗಿ ಹಿಂದೆ ನುಡಿದ ಮಾತು ಇದೇ.
ಯೆಶಾಯ 16 : 14 (KNV)
ಆದರೆ ಕರ್ತನು ಮಾತನಾಡಿ--ಮೂರು ವರುಷ ಗಳಲ್ಲಿ ಕೂಲಿಯಾಳಿನ ವರುಷಗಳಂತೆ ಮೋವಾಬಿನ ಮಹಿಮೆಯು ಆ ಎಲ್ಲಾ ದೊಡ್ಡ ಸಮೂಹದೊಂದಿಗೆ ತಿರಸ್ಕರಿಸಲ್ಪಡುವ ಹಾಗೆ ಉಳಿದವರು ಚಿಕ್ಕ ಗುಂಪಾಗಿ ಬಲಹೀನರಾಗುವರು ಎಂದು ಹೇಳಿದ್ದಾನೆ.

1 2 3 4 5 6 7 8 9 10 11 12 13 14