1. {#1ಮರಣದಿಂದ ಜೀವಕ್ಕೆ } [PS] [* ಕೊಲೊ 1:21; 2:13: ]ನೀವು ನಿಮ್ಮ ಅಪರಾಧಗಳ ಹಾಗೂ ಪಾಪಗಳ ದೆಸೆಯಿಂದ ಸತ್ತವರಾಗಿದ್ದೀರಿ.
2. ಪೂರ್ವದಲ್ಲಿ [† ಎಫೆ 4:17,22; 5:8; ಕೊಲೊ 3:7; 1 ಕೊರಿ 6:7,8: ]ನೀವು ಇಹಲೋಕದ ಪದ್ಧತಿಗೆ ಅನುಸಾರವಾಗಿಯೂ, [‡ ಎಫೆ 6:12; ಯೋಹಾ 12:13: ]ವಾಯುಮಂಡಲದಲ್ಲಿ ಅಧಿಕಾರ ನಡಿಸುವ ಅಧಿಪತಿಗೆ ಅಂದರೆ ಅವಿಧೇಯತೆಯ ಮಕ್ಕಳಲ್ಲಿ ಈಗ ಕೆಲಸ ನಡೆಸುವ ಆತ್ಮನಿಗನುಸಾರವಾಗಿ ಜೀವನ ನಡಿಸಿದ್ದೀರಿ.
3. ನಾವೆಲ್ಲರೂ ಪೂರ್ವದಲ್ಲಿ ಅವರ ಹಾಗೆಯೇ ಇದ್ದೆವು, [§ ಗಲಾ 5:16: ]ಶರೀರಭಾವದ ಆಸೆಗಳಿಗೆ ಅಧೀನರಾಗಿ, ಶಾರೀರಿಕ ಹಾಗೂ ಮಾನಸಿಕ ಇಚ್ಛೆಗಳನ್ನು ಈಡೇರಿಸುತ್ತಾ ಬಂದೆವು. [* ಕೀರ್ತ 51:5; ರೋಮಾ. 5:12. 2 ಪೇತ್ರ 2:14: ]ಸ್ವಭಾವತಃ ನಾವು ಸಹ ಇತರರಂತೆಯೇ ದೇವರ ಕೋಪಕ್ಕೆ ಗುರಿಯಾಗಿದ್ದೆವು.
4. ಆದರೆ [† ಎಫೆ 2:7; ತೀತ. 3:5: ]ಕರುಣಾನಿಧಿಯಾಗಿರುವ ದೇವರು [‡ ಯೋಹಾ 3 16: ]ನಮ್ಮನ್ನು ಪ್ರೀತಿಸಿದ ಮಹಾ ಪ್ರೀತಿಯ ನಿಮಿತ್ತ,
5. ಅಪರಾಧಗಳ ದೆಸೆಯಿಂದ [§ ಕೊಲೊ 2:12,13; ಯೋಹಾ 14:19: ]ಸತ್ತವರಾಗಿದ್ದ ನಮ್ಮನ್ನು ಕ್ರಿಸ್ತನೊಂದಿಗೆ ಬದುಕಿಸಿದನು. [* ಎಫೆ 1 8; ಅ. ಕೃ. 15:11: ]ಕೃಪೆಯಿಂದಲೇ ನೀವು ರಕ್ಷಣೆ ಹೊಂದಿದವರಾಗಿದ್ದೀರಿ.
6. ಆತನು ಕ್ರಿಸ್ತ ಯೇಸುವಿನಲ್ಲಿ ನಮ್ಮೊಂದಿಗಿರುವ [† ತೀತ. 3:4: ]ದಯೆಯ ಮೂಲಕ ತನ್ನ ಅಪಾರವಾದ ಕೃಪಾತಿಶಯವನ್ನು
7. ಮುಂದಿನ ಯುಗಗಳಲ್ಲಿ ನಮಗೆ ತೋರಿಸಬೇಕೆಂದು ಕ್ರಿಸ್ತಯೇಸುವಿನಲ್ಲಿರುವ ನಮ್ಮನ್ನು ಆತನೊಂದಿಗೆ ಎಬ್ಬಿಸಿ, [‡ ಎಫೆ 1:21: ]ಪರಲೋಕದಲ್ಲಿ ಯೇಸುಕ್ರಿಸ್ತನೊಂದಿಗೆ ನಮ್ಮನ್ನು ಕೂರಿಸಿದ್ದಾನೆ.
8. [§ 1 ಪೇತ್ರ. 1:5; ರೋಮಾ. 4:16: ]ನಂಬಿಕೆಯ ಮೂಲಕ ಕೃಪೆಯಿಂದಲೇ ನೀವು ರಕ್ಷಣೆ ಹೊಂದಿದವರಾಗಿದ್ದೀರಿ. [* 2 ಕೊರಿ 3:5: ]ಈ ರಕ್ಷಣೆಯು ನಿಮ್ಮಿಂದುಂಟಾದದ್ದಲ್ಲ, [† ಯೋಹಾ 4:10: ]ಅದು ದೇವರ ದಾನವೇ.
9. [‡ 2 ತಿಮೊ. 1:9; ತೀತ. 3:5; ರೋಮಾ. 3:20,28: ]ಈ ರಕ್ಷಣೆಯೂ ಪುಣ್ಯಕ್ರಿಯೆಗಳಿಂದ ಉಂಟಾದದ್ದಲ್ಲ, [§ 1 ಕೊರಿ 1:29: ]ಆದ್ದರಿಂದ ಹೊಗಳಿಕೊಳ್ಳುವುದಕ್ಕೆ ಯಾರಿಗೂ ಆಸ್ಪದವಿಲ್ಲ.
10. [* ಕೀರ್ತ 100. 3; ಯೆಶಾ 64:8: ]ನಾವಾದರೋ ದೇವರ ಕಲಾಕೃತಿಯಾಗಿದ್ದೇವೆ, [† ಎಫೆ 1:4: ]ದೇವರು ಮೊದಲೇ ನಮಗಾಗಿ ಸಂಕಲ್ಪಿಸಿದ್ದ [‡ ಎಫೆ 4:24; ತೀತ. 2:14: ]ಸತ್ಕಾರ್ಯಗಳನ್ನು ಮಾಡುವವರಾಗಿ ಬದುಕಬೇಕೆಂದು ಯೇಸು ಕ್ರಿಸ್ತನಲ್ಲಿ ಸೃಷ್ಟಿಸಲ್ಪಟ್ಟಿದ್ದೇವೆ. [PE]
11. {#1ಕ್ರಿಸ್ತನಲ್ಲಿ ಒಂದೇ ಜನಾಂಗ [BR]ಕೊಲೊ 1:21-29 } [PS]ಆದಕಾರಣ ಹಿಂದೊಮ್ಮೆ ನೀವು ಜನ್ಮದಿಂದ ಅನ್ಯಜನರಾಗಿದ್ದೀರಿ ಎಂಬುದು ನಿಮಗೆ ನೆನಪಿರಲಿ. ಶರೀರದಲ್ಲಿ ಮನುಷ್ಯನಿಂದ [§ ರೋಮಾ. 2:28,29; ಕೊಲೊ 2:11,13: ]ಸುನ್ನತಿಯನ್ನು ಮಾಡಿಸಿಕೊಂಡು ಸುನ್ನತಿಯವರೆನ್ನಿಸಿಕೊಳ್ಳುವವರಿಂದ ‘ಸುನ್ನತಿಯಿಲ್ಲದವರು’ ಎಂದು ಕರೆಯಲ್ಪಟ್ಟಿದ್ದೀರಿ.
12. ಅಂದು [* ಎಫೆ 5:8: ]ನೀವು ಕ್ರಿಸ್ತನಿಂದ ದೂರವಿದವರೂ, [† ಕೊಲೊ 1:21; ಗಲಾ. 2:15: ]ಇಸ್ರಾಯೇಲ್ಯರ ಹಕ್ಕಿನಲ್ಲಿ ಪಾಲಿಲ್ಲದವರೂ, [‡ ರೋಮಾ. 9:4: ]ವಾಗ್ದಾನಕ್ಕೆ ಸಂಬಂಧವಾದ ಒಡಂಬಡಿಕೆಗಳಲ್ಲಿ ಪರಕೀಯರೂ, ಯಾವ ನಿರೀಕ್ಷೆಯಿಲ್ಲದವರೂ ಮತ್ತು [§ 1 ಥೆಸ. 4:13: ]ಲೋಕದಲ್ಲಿ ದೇವರಿಲ್ಲದವರೂ ಆಗಿದ್ದಿರೆಂಬುದನ್ನು ಜ್ಞಾಪಕಮಾಡಿಕೊಳ್ಳಿರಿ.
13. ಈಗಲಾದರೋ, [* ಎಫೆ 2:17; ಅ. ಕೃ. 2:39: ]ಮೊದಲು ದೂರವಾಗಿದ್ದ ನೀವು ಕ್ರಿಸ್ತ ಯೇಸುವಿನಲ್ಲಿ [† ಕೊಲೊ 1:20: ]ಆತನ ರಕ್ತದ ಮೂಲಕ ಸಮೀಪಸ್ಥರಾಗಿದ್ದೀರಿ.
14. [‡ ಗಲಾ. 3:28: ]ನಿಮ್ಮನ್ನು ಮತ್ತು ನಮ್ಮನ್ನು ಒಂದುಮಾಡಿದವನಾದ [§ ಮೀಕ. 5:5; ಕೊಲೊ 3:15: ]ಆತನೇ ನಮಗೆ ಶಾಂತಿದಾತನಾಗಿದ್ದಾನೆ. ಆತನು [* ಕೊಲೊ 1:21,22: ]ವಿಧಿನಿಯಮಗಳಿಂದ ಕೂಡಿದ್ದ ಆಜ್ಞೆಗಳುಳ್ಳ ಧರ್ಮಶಾಸ್ತ್ರವನ್ನು ನಿರರ್ಥಕಗೊಳಿಸಿ, ನಮ್ಮನ್ನು ಅಗಲಿಸಿದ್ದ ಹಗೆತನವೆಂಬ ಅಡ್ಡಗೋಡೆಯನ್ನು ತನ್ನ ಶರೀರದಿಂದಲೇ ಕೆಡವಿಹಾಕಿದ್ದಾನೆ.
15. ಆತನು ಸಮಾಧಾನವನ್ನುಂಟು ಮಾಡುವವನಾಗಿ, ಉಭಯರನ್ನೂ ತನ್ನಲ್ಲಿ [† ರೋಮಾ. 6:4: ]ಒಂದುಗೂಡಿಸಿ ನೂತನ ಮಾನವನನ್ನಾಗಿ ನಿರ್ಮಿಸಿದ್ದಾನೆ.
16. ನಮ್ಮ ಮೇಲೆ ಇದ್ದ ಹಗೆತನವನ್ನು ತನ್ನ ಶಿಲುಬೆಯ ಮೇಲೆ [‡ ಅಥವಾ, ಪರಿಹರಿಸಿ. ]ಇಲ್ಲವಾಗಿಸಿ, [§ ಕೊಲೊ 1:20-22: ]ಆ ಶಿಲುಬೆಯ ಮೂಲಕ ಉಭಯರನ್ನೂ ಒಂದೇ ಶರೀರವನ್ನಾಗಿ ಮಾಡಿ ದೇವರೊಂದಿಗೆ ಸಂಧಾನಪಡಿಸಿದ್ದಾನೆ.
17. ಇದಲ್ಲದೆ ಆತನು ಬಂದು ದೂರವಾಗಿದ್ದ ನಿಮಗೂ ಮತ್ತು ಸಮೀಪವಾಗಿದ್ದವರಿಗೂ ಸಮಾಧಾನವನ್ನು ಸಾರಿದನು.
18. ಇದರಿಂದ [* ಯೋಹಾ 14:6 ]ಆತನ ಮೂಲಕ ಉಭಯತ್ರರು [† ಎಫೆ 4:4; 1 ಕೊರಿ 12:13 ಯೋಹಾ 4:23: ]ಒಂದೇ ಆತ್ಮನಲ್ಲಿ [‡ ಎಫೆ 3:12; ರೋಮಾ. 5:2; ಯೋಹಾ 10:7,9 ]ತಂದೆಯ ಬಳಿಗೆ [§ ತಂದೆಯೊಟ್ಟಿಗೆ ಮಾತನಾಡಲು ಅಥವಾ ತಂದೆಯ ಪ್ರಸ್ನತೆಯಲ್ಲಿ ಸೇರಲು ಅಧಿಕಾರ ದೊರೆಯಿತು. ]ಪ್ರವೇಶಿಸಲು ಮಾರ್ಗವಾಯಿತು.
19. ಹೀಗಿರಲಾಗಿ ನೀವು ಇನ್ನು ಮೇಲೆ [* ಎಫೆ 2:12; ಇಬ್ರಿ. 11:13, 13:14: ]ಪರದೇಶದವರೂ ಅನ್ಯರೂ ಆಗಿರದೇ [† ಫಿಲಿ. 3:20; ಇಬ್ರಿ. 12:22,23: ]ದೇವಜನರೊಂದಿಗೆ ಒಂದೇ ಸಂಸ್ಥಾನದವರೂ [‡ ಗಲಾ. 6:10 ]ದೇವರ ಮನೆಯವರೂ ಆಗಿದ್ದೀರಿ.
20. [§ ಮತ್ತಾ 16:18; ಪ್ರಕ 21:14: ]ಅಪೊಸ್ತಲರೂ [* ಎಫೆ 3:5; 4:11: ]ಪ್ರವಾದಿಗಳೂ ಎಂಬ [† ಅಥವಾ ಹಾಕಿದ. ]ಅಡಿಪಾಯದ ಮೇಲೆ [‡ 1 ಕೊರಿ 3:9: ]ನೀವೂ ಮಂದಿರದೋಪಾದಿಯಲ್ಲಿ ಕಟ್ಟಲ್ಪಟ್ಟಿದ್ದೀರಿ. [§ 1 ಕೊರಿ 3:11: ]ಯೇಸು ಕ್ರಿಸ್ತನೇ [* ಕೀರ್ತ 118:22; ಯೆಶಾ 28:16: ]ಮುಖ್ಯವಾದ ಮೂಲೆಗಲ್ಲು.
21. [† ಎಫೆ 4:15,16: ]ಆತನಲ್ಲಿ ಕಟ್ಟಡದ ಎಲ್ಲಾ ಭಾಗಗಳು ಒಂದಕ್ಕೊಂದು ಹೊಂದಿಕೆಯಾಗಿ, ಕಟ್ಟಡವು ವೃದ್ಧಿಯಾಗುತ್ತಾ ಕರ್ತನಲ್ಲಿ [‡ 1 ಕೊರಿ 3:16,17: ]ಪರಿಶುದ್ಧ ದೇವಾಲಯವಾಗುತ್ತದೆ.
22. [§ 1 ಪೇತ್ರ. 2:5: ]ಆತನಲ್ಲಿ ನೀವೂ ಸಹ ಪವಿತ್ರಾತ್ಮನ ಮೂಲಕವಾಗಿ [* 2 ಕೊರಿ 6:16: ]ದೇವರಿಗೆ ವಾಸಸ್ಥಾನವಾಗುವುದಕ್ಕೆ ನಮ್ಮ ಜೊತೆಯಲ್ಲಿ ಕಟ್ಟಲ್ಪಡುತ್ತಾ ಇದ್ದೀರಿ. [PE]