1. ಯಾಜಕರು ಯೆಹೋವನ ಪವಿತ್ರಸ್ಥಳದಲ್ಲಿ ಸೇವೆ ಮಾಡುವಾಗ ಧರಿಸಿಕೊಳ್ಳತಕ್ಕ ವಿಶೇಷ ಬಟ್ಟೆಗಳನ್ನು ಮಾಡುವುದಕ್ಕೆ ಕೆಲಸಗಾರರು ನೀಲಿ, ನೇರಳೆ, ಕೆಂಪುದಾರಗಳನ್ನು ಉಪಯೋಗಿಸಿದರು. ಯೆಹೋವನು ಮೋಶೆಗೆ ಆಜ್ಞಾಪಿಸಿದಂತೆ ಅವರು ಆರೋನನಿಗೆ ವಿಶೇಷ ಬಟ್ಟೆಗಳನ್ನು ಮಾಡಿದರು.
|
3. (ಅವರು ಚಿನ್ನವನ್ನು ಸುತ್ತಿಗೆಯಿಂದ ಹೊಡೆದು ತೆಳುವಾದ ತಗಡುಗಳನ್ನು ಮಾಡಿದರು. ಬಳಿಕ ಅವರು ಅದನ್ನು ಕತ್ತರಿಸಿ ಉದ್ದವಾದ ದಾರಗಳನ್ನಾಗಿ ಮಾಡಿದರು. ಅವರು ಚಿನ್ನವನ್ನು ನೀಲಿ, ನೇರಳೆ, ಕೆಂಪುದಾರಗಳಿಗೂ ಮತ್ತು ಶ್ರೇಷ್ಠ ನಾರುಬಟ್ಟೆಗೂ ಹೆಣೆದರು. ಇದು ಬಹಳ ನಿಪುಣನಾದ ಕೆಲಸಗಾರನು ಮಾಡಿದ ಕೆಲಸವಾಗಿತ್ತು.)
|
5. ಅವರು ನಡುಕಟ್ಟನ್ನು ಹೆಣೆದು ಏಫೋದಿಗೆ ಬಿಗಿಯಾಗಿ ಕಟ್ಟಿದರು. ಏಫೋದನ್ನು ಮಾಡಿದಂತೆಯೇ ಇದನ್ನು ಮಾಡಲಾಯಿತು. ಯೆಹೋವನು ಮೋಶೆಗೆ ಆಜ್ಞಾಪಿಸಿದಂತೆಯೇ ಅವರು ಇದನ್ನು ಮಾಡುವುದಕ್ಕೆ ಚಿನ್ನದ ದಾರ, ಶ್ರೇಷ್ಠ ನಾರುಬಟ್ಟೆಯನ್ನು ಮತ್ತು ನೀಲಿ, ನೇರಳೆ, ಕೆಂಪುದಾರಗಳನ್ನು ಉಪಯೋಗಿಸಿದರು.
|
6. ಕೆಲಸಗಾರರು ಗೋಮೇಧಕ ರತ್ನಗಳನ್ನು ಏಫೋದಿನೊಳಗೆ ಚಿನ್ನದ ಕುಂದಣದಲ್ಲಿ ಇಟ್ಟರು. ಈ ರತ್ನಗಳಲ್ಲಿ ಇಸ್ರೇಲರ ಹನ್ನೆರಡು ಕುಲಗಳ ಹೆಸರುಗಳನ್ನು ಬರೆದರು.
|
7. ಬಳಿಕ ಅವರು ಈ ರತ್ನಗಳನ್ನು ಏಫೋದಿನ ಭುಜದ ಪಟ್ಟಿಯಲ್ಲಿ ಇಟ್ಟರು. ಇಸ್ರೇಲರನ್ನು ದೇವರ ಜ್ಞಾಪಕಕ್ಕೆ ತರುವಂತೆ ಈ ರತ್ನಗಳು ಇಡಲ್ಪಟ್ಟವು. ಯೆಹೋವನು ಮೋಶೆಗೆ ಆಜ್ಞಾಪಿಸಿದಂತೆಯೇ ಇದನ್ನು ಮಾಡಲಾಯಿತು.
|
8. ಬಳಿಕ ಅವರು ದೈವನಿರ್ಣಯ ಪದಕವನ್ನು ಮಾಡಿದರು. ಏಫೋದಿನಂತೆಯೇ ಇದು ಸಹ ಬುಟೇದಾರೀ ಕೆಲಸವಾಗಿತ್ತು. ಅದನ್ನು ಚಿನ್ನದ ದಾರಗಳಿಂದಲೂ ಶ್ರೇಷ್ಠವಾದ ನಾರುಬಟ್ಟೆಯಿಂದಲೂ ನೀಲಿ, ನೇರಳೆ, ಕೆಂಪುದಾರಗಳಿಂದಲೂ ಮಾಡಲಾಯಿತು.
|
9. ದೈವನಿರ್ಣಯದ ಪದಕವನ್ನು ಅರ್ಧ ಮಡಚಿ ಚಚ್ಚೌಕವಾದ ಚೀಲವನ್ನಾಗಿ ಮಾಡಲಾಗಿತ್ತು. ಅದು ಒಂಭತ್ತು ಇಂಚು ಉದ್ದ ಮತ್ತು ಒಂಭತ್ತು ಇಂಚು ಅಗಲ ಇತ್ತು.
|
10. ಬಳಿಕ ಕೆಲಸಗಾರರು ಅಂದವಾದ ರತ್ನಗಳನ್ನು ನಾಲ್ಕು ಸಾಲುಗಳಾಗಿ ದೈವನಿರ್ಣಯದ ಪದಕದಲ್ಲಿ ಇಟ್ಟರು. ಮೊದಲನೆಯ ಸಾಲಿನಲ್ಲಿ ಮಾಣಿಕ್ಯ, ಪುಷ್ಯರಾಗ, ಸ್ಫಟಿಕಗಳು ಇದ್ದವು.
|
13. ನಾಲ್ಕನೆಯ ಸಾಲಿನಲ್ಲಿ ಪೀತರತ್ನ, ಬೆರುಲ್ಲ, ವೈಡೂರ್ಯಗಳು ಇದ್ದವು. ಈ ಎಲ್ಲಾ ರತ್ನಗಳನ್ನು ಚಿನ್ನದ ಜವೆಯ ಕಲ್ಲುಗಳಲ್ಲಿ ಇಟ್ಟರು.
|
14. ಇಸ್ರೇಲನ ಗಂಡುಮಕ್ಕಳಲ್ಲಿ ಒಬ್ಬೊಬ್ಬರಿಗೆ ಒಂದೊಂದು ರತ್ನದಂತೆ ದೈವನಿರ್ಣಯ ಪದಕದಲ್ಲಿ ಹನ್ನೆರಡು ರತ್ನಗಳಿದ್ದವು. ಪ್ರತಿ ರತ್ನದಲ್ಲಿಯೂ ಇಸ್ರೇಲನ ಗಂಡುಮಕ್ಕಳಲ್ಲಿ ಒಬ್ಬೊಬ್ಬನ ಹೆಸರು ಬರೆಯಲ್ಪಟ್ಟಿತ್ತು. ಮುದ್ರಾರತ್ನವನ್ನು ಕೆತ್ತುವಂತೆ ಕಲ್ಲಿನಲ್ಲಿ ಹೆಸರುಗಳನ್ನು ಕೆತ್ತಿದರು.
|
16. ಕೆಲಸಗಾರರು ಎರಡು ಚಿನ್ನದ ಕುಂದಣಗಳನ್ನೂ ಎರಡು ಚಿನ್ನದ ಉಂಗುರಗಳನ್ನೂ ಮಾಡಿದರು. ಅವರು ಎರಡು ಚಿನ್ನದ ಉಂಗುರಗಳನ್ನು ದೈವನಿರ್ಣಯಪದಕದ ಎರಡು ಕೊನೆಗಳಲ್ಲಿ ಇರಿಸಿದರು.
|
18. ಅವರು ಚಿನ್ನದ ಸರಪಣಿಗಳ ಇನ್ನೆರಡು ಕೊನೆಗಳನ್ನು ಎರಡು ಕುಂದಣಗಳಿಗೆ ಕಟ್ಟಿದರು. ಇದು ಅವುಗಳನ್ನು ಏಫೋದಿನ ಎರಡು ಭುಜದ ಪಟ್ಟಿಗಳಿಗೆ ಮುಂಭಾಗದಲ್ಲಿ ಬಿಗಿಯಾಗಿ ಹಿಡಿದುಕೊಂಡಿತು.
|
19. ಬಳಿಕ ಅವರು ಇನ್ನೆರಡು ಚಿನ್ನದ ಉಂಗುರಗಳನ್ನು ಮಾಡಿ, ದೈವನಿರ್ಣಯ ಪದಕದ ಇನ್ನೆರಡು ಕೊನೆಗಳಿಗೆ ಸಿಕ್ಕಿಸಿದರು. ಅವರು ಉಂಗುರಗಳನ್ನು ಏಫೋದಿನ ಹತ್ತಿರವಿರುವ ದೈವನಿರ್ಣಯ ಪದಕದ ಒಳಗಿನ ಅಂಚಿನಲ್ಲಿ ಇರಿಸಿದರು.
|
20. ಅವರು ಎರಡು ಚಿನ್ನದ ಉಂಗುರಗಳನ್ನು ಏಫೋದಿನ ಮುಂಭಾಗದಲ್ಲಿ ಭುಜದ ಪಟ್ಟಿಗಳ ಕೆಳಭಾಗದಲ್ಲಿ ಇರಿಸಿದರು. ಈ ಉಂಗುರಗಳು ನಡುಕಟ್ಟಿನ ಮೇಲ್ಗಡೆಯಲ್ಲಿರುವ ಕಟ್ಟಿನ ಹತ್ತಿರ ಇದ್ದವು.
|
21. ಬಳಿಕ ಅವರು ನೀಲಿದಾರದಿಂದ ದೈವನಿರ್ಣಯ ಪದಕದ ಉಂಗುರಗಳನ್ನು ಏಫೋದಿನ ಉಂಗುರಗಳಿಗೆ ಕಟ್ಟಿದರು. ಈ ರೀತಿಯಾಗಿ ದೈವನಿರ್ಣಯ ಪದಕವು ನಡುಕಟ್ಟಿಗೆ ಹತ್ತಿರವಾಗಿದ್ದು ಏಫೋದಿಗೆ ಬಿಗಿಯಾಗಿ ಅಂಟಿಕೊಂಡಿತ್ತು. ಯೆಹೋವನು ಆಜ್ಞಾಪಿಸಿದಂತೆಯೇ ಅವರು ಎಲ್ಲವನ್ನೂ ಮಾಡಿದರು.
|
22. ಬಳಿಕ ಅವರು ಏಫೋದಿನೊಂದಿಗೆ ತೊಟ್ಟುಕೊಳ್ಳಬೇಕಾದ ನಿಲುವಂಗಿಯನ್ನು ಮಾಡಿದರು. ಅದು ನಿಪುಣನಾದ ಕೆಲಸಗಾರನಿಂದ ಹೆಣೆಯಲ್ಪಟ್ಟಿತ್ತು. ಅವರು ಅದನ್ನು ನೀಲಿ ಬಟ್ಟೆಯಿಂದ ಮಾಡಿದರು.
|
23. ಅವರು ನಿಲುವಂಗಿಯ ಮಧ್ಯದಲ್ಲಿ ಒಂದು ಸಂದನ್ನು ಮಾಡಿ ಆ ಸಂದಿನ ಅಂಚಿನ ಸುತ್ತಲೂ ಬಟ್ಟೆಯನ್ನಿಟ್ಟು ಹೊಲಿದರು. ಈ ಬಟ್ಟೆಯು ಸಂದು ಹರಿದು ಹೋಗದಂತೆ ಮಾಡಿತು.
|
24. ತರುವಾಯ ಅವರು ಬಟ್ಟೆಗೆ ದಾಳಿಂಬೆ ಹಣ್ಣಿನ ಚೆಂಡುಗಳನ್ನು ಮಾಡಲು ಶ್ರೇಷ್ಠ ನಾರುಬಟ್ಟೆಯನ್ನು, ನೀಲಿ, ನೇರಳೆ, ಕೆಂಪುದಾರಗಳನ್ನು ಉಪಯೋಗಿಸಿದರು. ಅವರು ಈ ದಾಳಿಂಬೆ ಹಣ್ಣಿನಂತಿರುವ ಚೆಂಡುಗಳನ್ನು ನಿಲುವಂಗಿಯ ಕೆಳಅಂಚಿನಲ್ಲಿ ತೂಗುಹಾಕಿದರು.
|
25. ಬಳಿಕ ಅವರು ಅಪ್ಪಟ ಬಂಗಾರದ ಗೆಜ್ಜೆಗಳನ್ನು ಮಾಡಿದರು. ಅವರು ಈ ಗೆಜ್ಜೆಗಳನ್ನು ನಿಲುವಂಗಿಯ ಕೆಳಅಂಚಿನ ಸುತ್ತಲೂ ದಾಳಿಂಬೆ ಹಣ್ಣುಗಳ ನಡುವೆ ತೂಗು ಹಾಕಿದರು.
|
26. ಹೀಗೆ ನಿಲುವಂಗಿಯ ಕೆಳಅಂಚಿನ ಸುತ್ತಲೆಲ್ಲ ದಾಳಿಂಬೆ ಹಣ್ಣುಗಳೂ ಗೆಜ್ಜೆಗಳೂ ಇದ್ದವು. ಪ್ರತಿ ದಾಳಿಂಬೆ ಹಣ್ಣಿನ ನಡುವೆ ಒಂದೊಂದು ಗೆಜ್ಜೆ ಇತ್ತು. ಯಾಜಕರು ಯೆಹೋವನ ಸೇವೆ ಮಾಡುವಾಗ ಧರಿಸಿಕೊಳ್ಳತಕ್ಕ ನಿಲುವಂಗಿ ಇದಾಗಿತ್ತು. ಯೆಹೋವನು ಮೋಶೆಗೆ ಆಜ್ಞಾಪಿಸಿದಂತೆಯೇ ಇದನ್ನು ಮಾಡಲಾಗಿತ್ತು.
|
27. ನಿಪುಣರಾದ ಕೆಲಸಗಾರರು ಆರೋನನಿಗೂ ಅವನ ಮಕ್ಕಳಿಗೂ ಅಂಗಿಗಳನ್ನು ಹೊಲಿದರು. ಈ ಅಂಗಿಗಳು ಶ್ರೇಷ್ಠವಾದ ನಾರುಬಟ್ಟೆಯಿಂದ ಮಾಡಲ್ಪಟ್ಟವು.
|
28. ಶ್ರೇಷ್ಠವಾದ ನಾರುಬಟ್ಟೆಯಿಂದ ಕೆಲಸಗಾರರು ಒಂದು ಮುಂಡಾಸನ್ನು ಮಾಡಿದರು. ಅವರು ತಲೆಪಟ್ಟಿಗಳನ್ನು ಮತ್ತು ಒಳಅಂಗಿಗಳನ್ನು ಮಾಡುವುದಕ್ಕೆ ಶ್ರೇಷ್ಠವಾದ ನಾರುಬಟ್ಟೆಯನ್ನು ಉಪಯೋಗಿಸಿದರು.
|
29. ಬಳಿಕ ಅವರು ಶ್ರೇಷ್ಠವಾದ ನಾರುಬಟ್ಟೆಯಿಂದಲೂ ಮತ್ತು ನೀಲಿ, ನೇರಳೆ, ಕೆಂಪುದಾರಗಳಿಂದಲೂ ನಡುಕಟ್ಟನ್ನು ಮಾಡಿದರು. ಈ ಬಟ್ಟೆಗೆ ಕಸೂತಿ ಹಾಕಲಾಯಿತು. ಯೆಹೋವನು ಮೋಶೆಗೆ ಆಜ್ಞಾಪಿಸಿದಂತೆಯೇ ಈ ವಸ್ತುಗಳನ್ನು ಮಾಡಲಾಯಿತು.
|
30. ತರುವಾಯ ಅವರು ಪವಿತ್ರಕಿರೀಟವನ್ನೂ ಅಪ್ಪಟ ಬಂಗಾರದಿಂದ ಮಾಡಿದರು. ಅವರು ಬಂಗಾರದಲ್ಲಿ ಅಕ್ಷರಗಳನ್ನು ಕೆತ್ತಿದರು. ಅವರು, “ಯೆಹೋವನಿಗೆ ಪವಿತ್ರವಾದದ್ದು” ಎಂಬ ಮಾತುಗಳನ್ನು ಬರೆದರು.
|
31. ಅವರು ಚಿನ್ನದ ಪಟ್ಟಿಯನ್ನು ದಾರಕ್ಕೆ ಬಿಗಿದರು. ಯೆಹೋವನು ಮೋಶೆಗೆ ಆಜ್ಞಾಪಿಸಿದಂತೆಯೇ ಅವರು ಈ ನೀಲಿ ದಾರವನ್ನು ಮುಂಡಾಸಕ್ಕೆ ಕಟ್ಟಿದರು. ಮೋಶೆಯು ಪವಿತ್ರಗುಡಾರವನ್ನು ಪರೀಕ್ಷಿಸಿದ್ದು
|
32. ಹೀಗೆ ಪವಿತ್ರಗುಡಾರವಾದ ದೇವದರ್ಶನ ಗುಡಾರದ ಕೆಲಸವೆಲ್ಲವೂ ಮುಗಿಯಿತು. ಯೆಹೋವನು ಮೋಶೆಗೆ ಆಜ್ಞಾಪಿಸಿದಂತೆಯೇ ಇಸ್ರೇಲರು ಪ್ರತಿಯೊಂದನ್ನೂ ಮಾಡಿದರು.
|
33. ಬಳಿಕ ಅವರು ಪವಿತ್ರಗುಡಾರವನ್ನು ಮೋಶೆಗೆ ತೋರಿಸಿದರು. ಅವರು ಗುಡಾರವನ್ನೂ ಅದರಲ್ಲಿರುವ ವಸ್ತುಗಳನ್ನೆಲ್ಲಾ ಅವನಿಗೆ ತೋರಿಸಿದರು. ಬಳೆಗಳು, ಚೌಕಟ್ಟುಗಳು, ಅಗುಳಿಗಳು, ಕಂಬಗಳು, ಗದ್ದಿಗೇಕಲ್ಲುಗಳನ್ನೆಲ್ಲಾ ಅವನಿಗೆ ತೋರಿಸಿದರು.
|
34. ಅವರು ಕೆಂಪುಬಣ್ಣದ ಕುರಿತೊಗಲಿನಿಂದ ಮಾಡಿದ ಗುಡಾರದ ಮೇಲ್ಹೊದಿಕೆಯನ್ನು ಅವನಿಗೆ ತೋರಿಸಿದರು; ಶ್ರೇಷ್ಠವಾದ ತೊಗಲಿನಿಂದ ಮಾಡಿದ ಹೊದಿಕೆಯನ್ನೂ ಅವನಿಗೆ ತೋರಿಸಿದರು. ಮಹಾಪವಿತ್ರಸ್ಥಳವನ್ನು ಮುಚ್ಚುವ ಪರದೆಯನ್ನೂ ಅವನಿಗೆ ತೋರಿಸಿದರು.
|
35. ಅವರು ಮೋಶೆಗೆ ಒಡಂಬಡಿಕೆಯ ಪೆಟ್ಟಿಗೆಯನ್ನೂ ಆ ಪೆಟ್ಟಿಗೆಯನ್ನು ಹೊರುವುದಕ್ಕಾಗಿ ಉಪಯೋಗಿಸುವ ಕೋಲುಗಳನ್ನೂ ಪೆಟ್ಟಿಗೆಯ ಕೃಪಾಸನವನ್ನೂ ಮೋಶೆಗೆ ತೋರಿಸಿದರು.
|
37. ಅವರು ಅಪ್ಪಟ ಬಂಗಾರದ ದೀಪಸ್ತಂಭವನ್ನೂ ಅದರಲ್ಲಿರುವ ಹಣತೆಗಳನ್ನೂ ಎಣ್ಣೆಯನ್ನೂ ಹಣತೆಗಳೊಂದಿಗೆ ಉಪಯೋಗಿಸುವ ಇತರ ವಸ್ತುಗಳನ್ನೂ ತೋರಿಸಿದರು.
|
38. ಅವರು ಚಿನ್ನದ ವೇದಿಕೆಯನ್ನೂ ಅಭಿಷೇಕತೈಲವನ್ನೂ ಪರಿಮಳಧೂಪವನ್ನೂ ಗುಡಾರದ ಪ್ರವೇಶದಲ್ಲಿರುವ ಪರದೆಯನ್ನೂ ಮೋಶೆಗೆ ತೋರಿಸಿದರು.
|
39. ಅವರು ಅವನಿಗೆ ತಾಮ್ರದ ವೇದಿಕೆಯನ್ನೂ ತಾಮ್ರದ ಜಾಳಿಗೆಯನ್ನೂ ವೇದಿಕೆಯನ್ನು ಹೊರುವುದಕ್ಕೆ ಉಪಯೋಗಿಸುವ ಕೋಲುಗಳನ್ನೂ ವೇದಿಕೆಯ ಎಲ್ಲಾ ಉಪರಕಣಗಳನ್ನೂ ಗಂಗಾಳವನ್ನೂ ಮತ್ತು ಅದರ ಕೆಳಗಿರುವ ಗದ್ದಿಗೇಕಲ್ಲನ್ನೂ ಮೋಶೆಗೆ ತೋರಿಸಿದರು.
|
40. ಅವರು ಅಂಗಳದ ಸುತ್ತಲಿರುವ ಪರದೆಗಳ ಗೋಡೆಯನ್ನೂ ಅದರ ಕಂಬಗಳನ್ನೂ ಗದ್ದಿಗೇಕಲ್ಲುಗಳನ್ನೂ ಅಂಗಳದ ಪ್ರವೇಶವನ್ನು ಮುಚ್ಚುವ ಪರದೆಯನ್ನೂ ಹಗ್ಗಗಳನ್ನೂ ಗುಡಾರದ ಗೂಟಗಳನ್ನೂ ದೇವದರ್ಶನದ ಪವಿತ್ರಗುಡಾರದ ಎಲ್ಲಾ ವಸ್ತುಗಳನ್ನೂ ಮೋಶೆಗೆ ತೋರಿಸಿದರು.
|
41. ತರುವಾಯ ಮೋಶೆಗೆ ಪವಿತ್ರಸ್ಥಳದಲ್ಲಿ ಸೇವೆ ಮಾಡುವುದಕ್ಕೆ ಯಾಜಕರಿಗಾಗಿ ಮಾಡಿದ ಬಟ್ಟೆಗಳನ್ನು ಅಂದರೆ ಯಾಜಕನಾದ ಆರೋನನಿಗೆ ಮತ್ತು ಅವನ ಮಕ್ಕಳಿಗಾಗಿ ಮಾಡಿದ ವಿಶೇಷ ಬಟ್ಟೆಗಳನ್ನು ಅವರು ತೋರಿಸಿದರು. ಅವರು ಯಾಜಕರಾಗಿ ಸೇವೆ ಮಾಡುವಾಗ ಧರಿಸಿಕೊಳ್ಳತಕ್ಕ ಬಟ್ಟೆಗಳು ಇವುಗಳೇ.
|
43. ಮೋಶೆಯು ಎಲ್ಲಾ ಕೆಲಸವನ್ನು ಸೂಕ್ಷ್ಮವಾಗಿ ಪರೀಕ್ಷಿಸಿದನು. ಯೆಹೋವನು ಆಜ್ಞಾಪಿಸಿದಂತೆಯೇ ಎಲ್ಲವೂ ಮಾಡಲ್ಪಟ್ಟಿದ್ದರಿಂದ ಮೋಶೆ ಅವರನ್ನು ಆಶೀರ್ವದಿಸಿದನು.
|