ವಿಮೋಚನಕಾಂಡ 39 : 1 (KNV)
ಕರ್ತನು ಮೋಶೆಗೆ ಆಜ್ಞಾಪಿಸಿದ ಮೇರೆಗೆನೀಲಿ ಧೂಮ್ರ ರಕ್ತವರ್ಣದ ನೂಲಿನಿಂದ ಪವಿತ್ರ ಆಲಯದ ಸೇವೆಮಾಡುವದಕ್ಕೆ ಸೇವಾ ವಸ್ತ್ರಗಳನ್ನೂ ಆರೋನನಿಗೆ ಪರಿಶುದ್ಧ ವಸ್ತ್ರಗಳನ್ನು ಮಾಡಿದರು.
ವಿಮೋಚನಕಾಂಡ 39 : 2 (KNV)
ಅವನು ಎಫೋದನ್ನು ಚಿನ್ನದಿಂದಲೂ ನೀಲಿ ಧೂಮ್ರ ಮತ್ತು ರಕ್ತವರ್ಣ ನಯವಾಗಿ ಹೊಸೆದ ನೂಲು ಇವುಗಳಿಂದ ಮಾಡಿದನು.
ವಿಮೋಚನಕಾಂಡ 39 : 3 (KNV)
ಅವರು ಚಿನ್ನವನ್ನು ಹೊಡೆದು ತೆಳುವಾದ ತಗಡುಗಳನ್ನಾಗಿಮಾಡಿ ಅದನ್ನು ಕತ್ತರಿಸಿ ತೆಳುವಾದ ಎಳೆಗಳನ್ನಾಗಿಮಾಡಿ ಆ ಎಳೆಗಳನ್ನೂ ನೀಲಿ ಧೂಮ್ರ ರಕ್ತವರ್ಣ ನಯವಾಗಿ ಹೊಸೆದ ನೂಲುಗಳೊಂದಿಗೆ ಸೇರಿಸಿ ಕಸೂತಿ ಕೆಲಸ ಮಾಡು ವದಕ್ಕೆ ಉಪಯೋಗಿಸುತ್ತಿದ್ದರು.
ವಿಮೋಚನಕಾಂಡ 39 : 4 (KNV)
(ಎಫೋದಕ್ಕೆ) ಜೋಡಿಸಲು ಹೆಗಲ ಪಟ್ಟಿಯನ್ನು ತಯಾರಿಸಿದರು; ಅದರ ಎರಡೂ ಅಂಚುಗಳು ಜೋಡಿಸಲ್ಪಟ್ಟಿದ್ದವು.
ವಿಮೋಚನಕಾಂಡ 39 : 5 (KNV)
ಅದರ ಮೇಲಿರುವ ವಿಚಿತ್ರವಾದ ಎಫೋದಿನ ನಡು ಕಟ್ಟು ಅದೇ ಕೆಲಸಕ್ಕನುಸಾರವಾಗಿ ಚಿನ್ನ ನೀಲಿ ಧೂಮ್ರ ರಕ್ತವರ್ಣ ಹೊಸೆದ ನಯವಾದ ನಾರುಗಳುಳ್ಳದ್ದಾಗಿದ್ದು ಕರ್ತನು ಮೋಶೆಗೆ ಆಜ್ಞಾಪಿಸಿದಂತೆಯೇ ಇತ್ತು.
ವಿಮೋಚನಕಾಂಡ 39 : 6 (KNV)
ಗೋಮೇಧಕ ಕಲ್ಲುಗಳನ್ನು ಮುದ್ರೆಯನ್ನು ಕೆತ್ತು ವಂತೆ ಬಂಗಾರದಲ್ಲಿ ಕೆತ್ತಲ್ಪಟ್ಟವುಗಳಾಗಿ ಇಸ್ರಾಯೇಲಿನ ಮಕ್ಕಳ ಹೆಸರುಗಳ ಪ್ರಕಾರ ಮಾಡಿದರು.
ವಿಮೋಚನಕಾಂಡ 39 : 7 (KNV)
ಕರ್ತನು ಮೋಶೆಗೆ ಆಜ್ಞಾಪಿಸಿದ ಹಾಗೆಯೇ ಅವನು ಅವುಗಳನ್ನು ಎಫೋದಿನ ಹೆಗಲಿನ ಭಾಗಗಳ ಮೇಲೆ ಇಸ್ರಾ ಯೇಲ್ಯರ ಮಕ್ಕಳ ಜ್ಞಾಪಕಾರ್ಥವಾದ ಕಲ್ಲುಗಳಿರ ತಕ್ಕದ್ದೆಂದು ಅವುಗಳನ್ನು ಇಟ್ಟನು.
ವಿಮೋಚನಕಾಂಡ 39 : 8 (KNV)
ಎದೆಪದಕವನ್ನು ಕೌಶಲ್ಯ ಕೆಲಸದಿಂದ ಎಫೋದಿನ ಕೆಲಸದ ಹಾಗೆಯೇ ಬಂಗಾರ ನೀಲಿ ಧೂಮ್ರ ರಕ್ತವರ್ಣ ಹೊಸೆದ ನಯವಾದ ನಾರುಗಳಿಂದ ಮಾಡಿದರು.
ವಿಮೋಚನಕಾಂಡ 39 : 9 (KNV)
ಅದು ಚಚ್ಚೌಕವಾಗಿತ್ತು; ಎದೆಪದಕವನ್ನು ಇಮ್ಮಡಿ ಸಿದ್ದಾಗಿ ಮಾಡಿದರು. ಅದು ಗೇಣುದ್ದವಾಗಿಯೂ ಗೇಣಗಲವಾಗಿಯೂ ಇಮ್ಮಡಿಸಿದ್ದಾಗಿತ್ತು.
ವಿಮೋಚನಕಾಂಡ 39 : 10 (KNV)
ಅದರಲ್ಲಿ ಕಲ್ಲುಗಳನ್ನು ನಾಲ್ಕು ಸಾಲುಗಳಾಗಿ ಕೂಡ್ರಿಸಿದರು; ಮಾಣಿಕ್ಯ ಪುಷ್ಯರಾಗ ಸ್ಪಟಿಕ ಇವು ಮೊದಲನೆಯ ಸಾಲಿನಲ್ಲಿ ಇದ್ದವು.
ವಿಮೋಚನಕಾಂಡ 39 : 11 (KNV)
ಕೆಂಪರಳು ನೀಲ ವಜ್ರ ಇವು ಎರಡನೆಯ ಸಾಲಿನಲ್ಲಿ ಇದ್ದವು.
ವಿಮೋಚನಕಾಂಡ 39 : 12 (KNV)
ಪದ್ಮರಾಗ, ವೈದೂರ್ಯ, ಸುಗಂಧ ಇವು ಮೂರನೆಯ ಸಾಲಿ ನಲ್ಲಿದ್ದವು.
ವಿಮೋಚನಕಾಂಡ 39 : 13 (KNV)
ಬೆರುಲ್ಲ ಗೋಮೇಧಕ ವೈದೂರ್ಯ ಇವು ನಾಲ್ಕನೆಯ ಸಾಲಿನಲ್ಲಿ ಇದ್ದವು. ಇವು ಕೆತ್ತಲ್ಪಟ್ಟ ಚಿನ್ನದಲ್ಲಿ ಕೂಡ್ರಿಸಿದವುಗಳಾಗಿದ್ದವು.
ವಿಮೋಚನಕಾಂಡ 39 : 14 (KNV)
ಆ ಕಲ್ಲುಗಳು ಇಸ್ರಾಯೇಲ್ಯರ ಮಕ್ಕಳ ಹೆಸರುಗಳ ಪ್ರಕಾರ ಹನ್ನೆರಡಾಗಿ ಅವರ ಹೆಸರುಗಳಿಗನುಸಾರವಾಗಿ ಇದ್ದವು. ಒಂದೊಂದಕ್ಕೆ ಒಂದೊಂದು ಹೆಸರಾಗಿ ಹನ್ನೆರಡು ಕಲ್ಲುಗಳಿಗೋಸ್ಕರ ಮುದ್ರೆಗಳ ಹಾಗೆ ಕೆತ್ತಿದವುಗಳಾ ಗಿದ್ದವು.
ವಿಮೋಚನಕಾಂಡ 39 : 15 (KNV)
ಎದೆಪದಕದ ಮೇಲಿರುವ ಕೊನೆಗಳಲ್ಲಿ ಶುದ್ಧ ಬಂಗಾರದಿಂದ ನೂಲಿನ ಹಾಗೆ ಹೆಣೆದಿರುವ ಸರಪಣಿಯನ್ನು ಮಾಡಿದರು.
ವಿಮೋಚನಕಾಂಡ 39 : 16 (KNV)
ಬಂಗಾರದ ಆ ಎರಡು ಜಡೆಗಳನ್ನು ಮಾಡಿ ಆ ಎರಡು ಉಂಗುರಗಳನ್ನು ಎದೆಪದಕದ ಎರಡು ಕೊನೆಗಳಲ್ಲಿ ಸೇರಿಸಿದನು.
ವಿಮೋಚನಕಾಂಡ 39 : 17 (KNV)
ಆ ಎರಡು ಹೆಣೆದ ಬಂಗಾರದ ಸರಪಣಿಗಳನ್ನು ಪದಕದ ಕೊನೆಗಳಲ್ಲಿರುವ ಎರಡು ಉಂಗುರಗಳಲ್ಲಿ ಸೇರಿಸಿದನು.
ವಿಮೋಚನಕಾಂಡ 39 : 18 (KNV)
ಆ ಎರಡು ಹೆಣೆದ ಸರಪಣಿಗಳ ಎರಡು ಕೊನೆಗಳನ್ನು ಆ ಎರಡು ಜವೆಗಳಲ್ಲಿ ಸಿಕ್ಕಿಸಿ ಎಫೋದಿನ ಹೆಗಲು ಭಾಗಗಳ ಮುಂದುಗಡೆ ಇರಿಸಿ ದರು.
ವಿಮೋಚನಕಾಂಡ 39 : 19 (KNV)
ಬಂಗಾರದ ಎರಡು ಉಂಗುರಗಳನ್ನು ಮಾಡಿ ಎದೆಪದಕದ ಎರಡು ಕೊನೆಗಳಲ್ಲಿ ಎಫೋದಿನ ಕಡೆಗೆ ಒಳಗಡೆಯಲ್ಲಿ ಹಾಕಿದರು.
ವಿಮೋಚನಕಾಂಡ 39 : 20 (KNV)
ಚಿನ್ನದ ಬೇರೆ ಎರಡು ಉಂಗುರಗಳನ್ನು ಮಾಡಿ ಎಫೋದಿನ ಮುಂಬದಿಯ ಕೆಳಗಿನ ಎರಡು ಭಾಗಗಳಲ್ಲಿ ಎಫೋದಿನ ವಿಚಿತ್ರವಾದ ನಡುಕಟ್ಟಿನ ಮೇಲೆ ಅದನ್ನು ಜೋಡಿಸುವ ಸ್ಥಳಕ್ಕೆ ಎದುರಾಗಿ ಇರಿಸಿದರು.
ವಿಮೋಚನಕಾಂಡ 39 : 21 (KNV)
ಕರ್ತನು ಮೋಶೆಗೆ ಆಜ್ಞಾಪಿ ಸಿದ ಹಾಗೆಯೇ ಆ ಎದೆಪದಕವನ್ನು ಎಫೋದಿನ ವಿಚಿತ್ರವಾದ ನಡುಕಟ್ಟಿನ ಮೇಲೆ ಇರುವ ಹಾಗೆಯೂ ಎದೆಪದಕವು ಎಫೋದನ್ನು ಬಿಟ್ಟು ಅಲ್ಲಾಡದ ಹಾಗೆ ಯೂ ಅದರ ಉಂಗುರಗಳ ಮೂಲಕವಾಗಿ ನೀಲಿ ನೂಲಿನಿಂದ ಎಫೋದಿನ ಉಂಗುರಗಳಿಗೆ ಕಟ್ಟಿದರು.
ವಿಮೋಚನಕಾಂಡ 39 : 22 (KNV)
ಎಫೋದಿನ ನಿಲುವಂಗಿಗಳನ್ನೆಲ್ಲಾ ನೇತ ಕೆಲಸ ಕ್ಕನುಸಾರ ನೀಲಿಯಿಂದ ಮಾಡಿದರು.
ವಿಮೋಚನಕಾಂಡ 39 : 23 (KNV)
ನಿಲುವಂಗಿಯ ರಂಧ್ರ ಕವಚ ರಂಧ್ರದ ಹಾಗೆ ಅದರ ಮಧ್ಯದಲ್ಲಿ ಇತ್ತು. ಅದು ಹರಿಯದ ಹಾಗೆ ಆ ರಂಧ್ರದ ಸುತ್ತಲೂ ಗೋಟು ಇತ್ತು.
ವಿಮೋಚನಕಾಂಡ 39 : 24 (KNV)
ನಿಲುವಂಗಿಯ ಅಂಚಿನ ಮೇಲೆ ಹೊಸೆದ ನೀಲಿ ಧೂಮ್ರ ರಕ್ತವರ್ಣದ ದಾಳಿಂಬರ ಗಳನ್ನು ಮಾಡಿದನು.
ವಿಮೋಚನಕಾಂಡ 39 : 25 (KNV)
ಶುದ್ಧ ಬಂಗಾರದ ಗಂಟೆಗಳನ್ನು ಮಾಡಿ ಆ ಗಂಟೆಗಳನ್ನು ದಾಳಿಂಬರಗಳ ನಡುವೆ ಇಟ್ಟು ನಿಲುವಂಗಿಗಳ ಅಂಚಿನ ಮೇಲೆ ಸುತ್ತಲೂ ದಾಳಿಂಬರಗಳ ನಡುವೆಯೇ ಇರಿಸಿದನು.
ವಿಮೋಚನಕಾಂಡ 39 : 26 (KNV)
ಸೇವೆ ಗೋಸ್ಕರ ಮಾಡಿದ ನಿಲುವಂಗಿಯ ಅಂಚಿನ ಮೇಲೆ ಸುತ್ತಲೂ ಒಂದು ಗಂಟೆ ಒಂದು ದಾಳಿಂಬರದ ಮೇರೆಗೆ ಇಟ್ಟರು, ಕರ್ತನು ಮೋಶೆಗೆ ಆಜ್ಞಾಪಿಸಿದ ಹಾಗೆಯೇ ಅದು ಇತ್ತು.
ವಿಮೋಚನಕಾಂಡ 39 : 27 (KNV)
ಆರೋನನಿಗೂ ಅವನ ಮಕ್ಕಳಿಗೂ ನಾರು ನೂಲಿನಿಂದ ಮಾಡಿದ ನೇಯ್ಗೆ ಕೆಲಸದ ಅಂಗಿಗಳನ್ನೂ
ವಿಮೋಚನಕಾಂಡ 39 : 28 (KNV)
ನಾರಿನ ಮುಂಡಾಸವನ್ನೂ ಸೌಂದರ್ಯವುಳ್ಳ ನಾರಿನ ಕುಲಾವಿಗಳನ್ನೂ ನಾರು ಗಳಿಂದ ಮಾಡಿದ ಇಜಾರುಗಳನ್ನೂ
ವಿಮೋಚನಕಾಂಡ 39 : 29 (KNV)
ಹೊಸೆದ ನಯ ವಾದ ನಾರು ನೀಲಿ ಧೂಮ್ರ ರಕ್ತವರ್ಣದ ಹೆಣಿಗೆಯ ಕೆಲಸದ ಪ್ರಕಾರ ನಡುಕಟ್ಟನ್ನೂ ಮಾಡಿದರು. ಇವು ಗಳನ್ನು ಕರ್ತನು ಮೋಶೆಗೆ ಆಜ್ಞಾಪಿಸಿದಂತೆಯೇ ಮಾಡಿದರು.
ವಿಮೋಚನಕಾಂಡ 39 : 30 (KNV)
ಪರಿಶುದ್ಧ ಕಿರೀಟವಾಗಿರುವ ತಗಡನ್ನು ಶುದ್ಧ ಬಂಗಾರದಿಂದ ಮಾಡಿ ಕರ್ತನಿಗೆ ಪರಿಶುದ್ಧ ಎಂದು ಮುದ್ರೆ ಕೆತ್ತುವವರ ಬರಹದಿಂದ ಅದರ ಮೇಲೆ ಬರೆದು
ವಿಮೋಚನಕಾಂಡ 39 : 31 (KNV)
ಅದನ್ನು ಮುಂಡಾಸದ ಮೇಲೆ ಬಿಗಿಸುವದ ಕ್ಕೋಸ್ಕರ ನೀಲಿ ನೂಲಿನಿಂದ ಕಟ್ಟಿದರು. ಇದನ್ನು ಕರ್ತನು ಮೋಶೆಗೆ ಆಜ್ಞಾಪಿಸಿದ ಹಾಗೆಯೇ ಮಾಡಿದರು.
ವಿಮೋಚನಕಾಂಡ 39 : 32 (KNV)
ಈ ಪ್ರಕಾರ ಸಭೆ ಡೇರೆಯ ಗುಡಾರದ ಕೆಲಸವೆಲ್ಲಾ ಮುಗಿಯಿತು. ಕರ್ತನು ಮೋಶೆಗೆ ಆಜ್ಞಾಪಿಸಿದ್ದನ್ನೆಲ್ಲಾ ಇಸ್ರಾಯೇಲ್ ಮಕ್ಕಳು ಅದರಂತೆಯೇ ಮಾಡಿದರು.
ವಿಮೋಚನಕಾಂಡ 39 : 33 (KNV)
ಆಗ ಅವರು ಗುಡಾರವನ್ನು ಮೋಶೆಯ ಬಳಿಗೆ ತಂದರು. ಅದರ ಎಲ್ಲಾ ಸಾಮಾನುಗಳನ್ನು ಹಲಗೆಗಳನ್ನು ಅಗುಳಿಗಳನ್ನು ಸ್ತಂಭಗಳನ್ನು ಕುಣಿಕೆಗಳನ್ನು;
ವಿಮೋಚನಕಾಂಡ 39 : 34 (KNV)
ಕೆಂಪು ಬಣ್ಣದಲ್ಲಿ ಅದ್ದಿದ ಟಗರುಗಳ ಹೊದಿಕೆಯನ್ನು, ಕಡಲು ಹಂದಿಗಳ ಚರ್ಮಗಳ ಹೊದಿಕೆಗಳನ್ನು ಮರೆಯ ತೆರೆಯನ್ನು;
ವಿಮೋಚನಕಾಂಡ 39 : 35 (KNV)
ಮಂಜೂಷದ ಸಾಕ್ಷಿಯ ಪೆಟ್ಟಿಗೆ ಯನ್ನು, ಅದರ ಕೋಲುಗಳನ್ನು, ಕರುಣಾಸನವನ್ನು;
ವಿಮೋಚನಕಾಂಡ 39 : 36 (KNV)
ಮೇಜನ್ನು ಅದರ ಎಲ್ಲಾ ಸಾಮಾನುಗಳನ್ನು, ಸಮ್ಮು ಖದ ರೊಟ್ಟಿಯನ್ನು;
ವಿಮೋಚನಕಾಂಡ 39 : 37 (KNV)
ಶುದ್ಧವಾದ ದೀಪ ಸ್ತಂಭವನ್ನು, ಅದರ ದೀಪಗಳನ್ನು ಕ್ರಮವಾಗಿಡುವ ದೀಪಗಳನ್ನು ಅದರ ಎಲ್ಲಾ ಸಾಮಾನುಗಳನ್ನು, ದೀಪಸ್ತಂಭಕ್ಕಾಗಿ ಎಣ್ಣೆಯನ್ನು;
ವಿಮೋಚನಕಾಂಡ 39 : 38 (KNV)
ಚಿನ್ನದ ಬಲಿಪೀಠವನ್ನು, ಅಭಿಷೇಕಿಸುವ ತೈಲವನ್ನು, ಪರಿಮಳ ಧೂಪವನ್ನು, ಗುಡಾರದ ಬಾಗಿಲಿನ ತೆರೆಯನ್ನು;
ವಿಮೋಚನಕಾಂಡ 39 : 39 (KNV)
ಹಿತ್ತಾಳೆಯ ಬಲಿಪೀಠವನ್ನು, ಅದಕ್ಕಿರುವ ಹಿತ್ತಾಳೆಯ ಜಲ್ಲಡಿಯನ್ನು, ಕೋಲುಗಳನ್ನು, ಎಲ್ಲಾ ಸಾಮಾನುಗಳನ್ನು, ಕುಣಿಕೆಗಳನ್ನು,
ವಿಮೋಚನಕಾಂಡ 39 : 40 (KNV)
ಅಂಗಳದ ತೆರೆಗಳನ್ನು, ಸ್ತಂಭಗಳನ್ನು, ಕುಣಿಕೆಗಳನ್ನು, ಅಂಗಳದ ಬಾಗಿಲಿನ ತೆರೆಯನ್ನು, ಹಗ್ಗಗಳನ್ನು, ಗೂಟಗಳನ್ನು, ಸಭೆಯ ಗುಡಾರಕ್ಕೆ ಬೇಕಾದ ಎಲ್ಲಾ ಸಾಮಾನುಗಳನ್ನು;
ವಿಮೋಚನಕಾಂಡ 39 : 41 (KNV)
ಪರಿಶುದ್ಧ ಸ್ಥಳದ ಸೇವೆಗೋಸ್ಕರ ಸೇವಾ ವಸ್ತ್ರಗಳನ್ನು, ಯಾಜಕನಾದ ಆರೋನನ ಪರಿಶುದ್ಧ ವಸ್ತ್ರಗಳನ್ನು, ಅವನ ಕುಮಾರರಿಗೆ ಯಾಜಕ ಸೇವೆಗೋಸ್ಕರ ಬೇಕಾದ ವಸ್ತ್ರಗಳನ್ನು ತಂದರು.
ವಿಮೋಚನಕಾಂಡ 39 : 42 (KNV)
ಕರ್ತನು ಮೋಶೆಗೆ ಆಜ್ಞಾಪಿಸಿದ ಹಾಗೆಯೇ ಇಸ್ರಾಯೇಲ್ ಮಕ್ಕಳು ಈ ಕೆಲಸಗಳನ್ನೆಲ್ಲಾ ಮಾಡಿ ದರು.
ವಿಮೋಚನಕಾಂಡ 39 : 43 (KNV)
ಮೋಶೆಯು ಆ ಕೆಲಸವನ್ನೆಲ್ಲಾ ನೋಡಿದಾಗ ಇಗೋ, ಕರ್ತನು ಆಜ್ಞಾಪಿಸಿದ ಪ್ರಕಾರವೇ ಅವರು ಅದನ್ನು ಮಾಡಿದ್ದರು. ಆಗ ಮೋಶೆಯು ಅವರನ್ನು ಆಶೀರ್ವದಿಸಿದನು.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31 32 33 34 35 36 37 38 39 40 41 42 43