ಪವಿತ್ರ ಬೈಬಲ್

ದೇವರ ಕೃಪೆಯ ಉಡುಗೊರೆ
ಯೋಬನು

ಯೋಬನು ಅಧ್ಯಾಯ 40

1 2 ಯೆಹೋವ ದೇವರು ಯೋಬನಿಗೆ ಮತ್ತೆ ಇಂತೆಂದರು: “ಸರ್ವಶಕ್ತರಾದ ದೇವರೊಂದಿಗೇ ತಪ್ಪು ಕಂಡುಹಿಡಿಯುವ ನೀನು, ದೇವರಿಗೇ ಪಾಠ ಕಲಿಸಿಕೊಡುವೆಯಾ? ದೇವರ ಮೇಲೆಯೇ ಆರೋಪಿಸುವ ನೀನು ಈಗ ಉತ್ತರಕೊಡು!” 3 4 ಆಗ ಯೋಬನು ಯೆಹೋವ ದೇವರಿಗೆ ಉತ್ತರವಾಗಿ, “ಅಯ್ಯೋ, ನಾನು ಅಯೋಗ್ಯ, ತಮಗೆ ಏನು ಉತ್ತರಕೊಡಲಿ? ಬಾಯಿಯ ಮೇಲೆ ಕೈಯಿಟ್ಟುಕೊಳ್ಳುತ್ತೇನೆ. 5 ಒಂದು ಸಾರಿ ಮಾತಾಡಿದೆ, ಈಗ ನನಗೆ ಕೊಡುವುದಕ್ಕೆ ಉತ್ತರ ಇಲ್ಲ; ಮತ್ತೆ ಮಾತಾಡುತ್ತಿದ್ದೇನೆ, ಆದರೆ ಮಾತಾಡಲು ನನಗೆ ಇನ್ನೇನೂ ಇಲ್ಲ,” ಎಂದನು. 6 7 ಆಗ ಯೆಹೋವ ದೇವರು ಬಿರುಗಾಳಿಯೊಳಗಿಂದ ಯೋಬನಿಗೆ ಉತ್ತರಕೊಟ್ಟು ಹೇಳಿದ್ದೇನೆಂದರೆ: “ಈಗ ಶೂರನಂತೆ ನಿನ್ನ ನಡು ಕಟ್ಟಿಕೋ; ನಾನು ನಿನಗೆ ಪ್ರಶ್ನೆಮಾಡುತ್ತೇನೆ; ನೀನು ನನಗೆ ಉತ್ತರಕೊಡು. 8 “ನನ್ನ ನ್ಯಾಯವನ್ನು ನೀನು ಅಪಕೀರ್ತಿ ಮಾಡುತ್ತೀಯೋ? ನೀನು ನಿನ್ನ ನ್ಯಾಯವನ್ನು ಸ್ಥಾಪಿಸಲು ನನ್ನನ್ನು ಅಪರಾಧಿ ಎಂದು ನಿರ್ಣಯಿಸುತ್ತೀಯೋ? 9 ದೇವರಾದ ನನಗಿರುವ ಭುಜಬಲ ನಿನಗಿದೆಯೋ? ನನ್ನ ಧ್ವನಿಯ ಹಾಗೆ ನೀನು ಗುಡುಗಬಲ್ಲೆಯೋ? 10 ಹಾಗಾದರೆ, ಮಹಿಮೆ ಘನತೆಗಳಿಂದ ನಿನ್ನನ್ನು ಅಲಂಕರಿಸಿಕೋ; ನೀನು ಗೌರವ ಪ್ರಭಾವಗಳನ್ನೂ ಧರಿಸಿಕೋ. 11 ನಿನ್ನ ಕಡುಕೋಪವನ್ನು ಎಲ್ಲಾ ಗರ್ವಿಷ್ಠರ ಮೇಲೆ ಸುರಿಸಿ, ಅವರನ್ನು ತಗ್ಗಿಸು. 12 ಹೌದು, ಗರ್ವಿಷ್ಠರನ್ನೆಲ್ಲಾ ನೋಡಿ ತಗ್ಗಿಸಿಬಿಡು; ದುಷ್ಟರನ್ನು ಅವರು ನಿಂತಿರುವ ಸ್ಥಳದಲ್ಲಿಯೇ ಕೆಡವಿಬಿಡು. 13 ಅವರೆಲ್ಲರನ್ನು ಒಟ್ಟಾಗಿ ಧೂಳಿನಲ್ಲಿ ಅಡಗಿಸಿಬಿಡು; ಅಂಧಕಾರ ಲೋಕದಲ್ಲಿ ಅವರ ಮುಖಕ್ಕೆ ಮುಸುಕುಹಾಕು. 14 ನೀನು ಹಾಗೆ ಮಾಡಿದರೆ, ನಿನ್ನ ಬಲ ನಿನ್ನನ್ನು ರಕ್ಷಿಸಬಲ್ಲದೆಂದು ನಾನೇ ಒಪ್ಪಿಕೊಳ್ಳುವೆನು. 15 “ನಾನು ನಿನ್ನ ಹಾಗೆ ಸೃಷ್ಟಿಮಾಡಿದ ನೀರಾನೆಯನ್ನು ನೋಡು; ಅದು ಎತ್ತಿನ ಹಾಗೆ ಹುಲ್ಲನ್ನು ತಿನ್ನುತ್ತದೆ. 16 ಅದರ ಸೊಂಟದಲ್ಲಿ ಎಂಥಾ ಬಲ ಅಡಕವಾಗಿದೆ. ಅದರ ಹೊಟ್ಟೆಯ ನರಗಳಲ್ಲಿ ಸಹ ಎಂಥಾ ಶಕ್ತಿಯಿದೆ! 17 ನೀರಾನೆಯು ತನ್ನ ಬಾಲವನ್ನು ದೇವದಾರು ಮರದಂತೆ ಬಗ್ಗಿಸುತ್ತದೆ; ಅದರ ತೊಡೆಯ ನರಗಳೋ ಹೆಣೆದುಕೊಂಡಿವೆ. 18 ಅದರ ಮೂಳೆಗಳು ಕಂಚಿನ ಸಲಿಕೆಗಳಂತೆ ಬಲವಾಗಿವೆ; ಅದರ ಕೈಕಾಲುಗಳು ಕಬ್ಬಿಣದ ಕಂಬಿಗಳ ಹಾಗೆ ಇರುತ್ತವೆ. 19 ದೇವರ ಸೃಷ್ಟಿಗಳಲ್ಲಿ ಅದು ಮುಖ್ಯವಾದದ್ದು; ಸೃಷ್ಟಿಕರ್ತ ದೇವರು ಅದಕ್ಕೆ ಕೋರೆಹಲ್ಲಿನ ಖಡ್ಗವನ್ನು ಒದಗಿಸಿದ್ದಾರೆ. 20 ಪರ್ವತಗಳಲ್ಲಿ ಅದಕ್ಕೆ ಮೇವು ಸಿಗುತ್ತದೆ; ಎಲ್ಲಾ ಕಾಡುಮೃಗಗಳು ಅಲ್ಲಿ ಆಡುತ್ತವೆ. 21 ನೀರಾನೆಯು ತಾವರೆ ಗಿಡಗಳಡಿಯಲ್ಲಿಯೂ ಆಪಿನ ಮರೆಯಲ್ಲಿಯೂ, ಜವುಗು ಭೂಮಿಯಲ್ಲಿಯೂ ವಿಶ್ರಮಿಸಿಕೊಳ್ಳುತ್ತದೆ. 22 ತಾವರೆ ಎಲೆಗಳು ನೆರಳನ್ನು ಅದಕ್ಕೆ ಹರಡುತ್ತವೆ; ನದಿಯ ನೀರವಂಜಿ ಮರಗಳು ಅದನ್ನು ಸುತ್ತಿಕೊಳ್ಳುತ್ತವೆ. 23 ಹೊಳೆ ಉಕ್ಕಿ ಬಂದರೂ ನೀರಾನೆಯು ಹೆದರುವುದಿಲ್ಲ. ಯೊರ್ದನ್ ನದಿ ಅದರ ಬಾಯೊಳಗೆ ನುಗ್ಗಿದರೂ ಧೈರ್ಯದಿಂದಿರುವುದು. 24 ಅದು ನೋಡುತ್ತಿರುವಾಗ ಯಾರಾದರೂ ಅದನ್ನು ಹಿಡಿಯಬಲ್ಲರೋ? ಅದರ ಮೂಗನ್ನು ಗಾಳದಿಂದ ಚುಚ್ಚಬಲ್ಲರೋ?
1 .::. 2 ಯೆಹೋವ ದೇವರು ಯೋಬನಿಗೆ ಮತ್ತೆ ಇಂತೆಂದರು: “ಸರ್ವಶಕ್ತರಾದ ದೇವರೊಂದಿಗೇ ತಪ್ಪು ಕಂಡುಹಿಡಿಯುವ ನೀನು, ದೇವರಿಗೇ ಪಾಠ ಕಲಿಸಿಕೊಡುವೆಯಾ? ದೇವರ ಮೇಲೆಯೇ ಆರೋಪಿಸುವ ನೀನು ಈಗ ಉತ್ತರಕೊಡು!” .::. 3 .::. 4 ಆಗ ಯೋಬನು ಯೆಹೋವ ದೇವರಿಗೆ ಉತ್ತರವಾಗಿ, “ಅಯ್ಯೋ, ನಾನು ಅಯೋಗ್ಯ, ತಮಗೆ ಏನು ಉತ್ತರಕೊಡಲಿ? ಬಾಯಿಯ ಮೇಲೆ ಕೈಯಿಟ್ಟುಕೊಳ್ಳುತ್ತೇನೆ. .::. 5 ಒಂದು ಸಾರಿ ಮಾತಾಡಿದೆ, ಈಗ ನನಗೆ ಕೊಡುವುದಕ್ಕೆ ಉತ್ತರ ಇಲ್ಲ; ಮತ್ತೆ ಮಾತಾಡುತ್ತಿದ್ದೇನೆ, ಆದರೆ ಮಾತಾಡಲು ನನಗೆ ಇನ್ನೇನೂ ಇಲ್ಲ,” ಎಂದನು. .::. 6 .::. 7 ಆಗ ಯೆಹೋವ ದೇವರು ಬಿರುಗಾಳಿಯೊಳಗಿಂದ ಯೋಬನಿಗೆ ಉತ್ತರಕೊಟ್ಟು ಹೇಳಿದ್ದೇನೆಂದರೆ: “ಈಗ ಶೂರನಂತೆ ನಿನ್ನ ನಡು ಕಟ್ಟಿಕೋ; ನಾನು ನಿನಗೆ ಪ್ರಶ್ನೆಮಾಡುತ್ತೇನೆ; ನೀನು ನನಗೆ ಉತ್ತರಕೊಡು. .::. 8 “ನನ್ನ ನ್ಯಾಯವನ್ನು ನೀನು ಅಪಕೀರ್ತಿ ಮಾಡುತ್ತೀಯೋ? ನೀನು ನಿನ್ನ ನ್ಯಾಯವನ್ನು ಸ್ಥಾಪಿಸಲು ನನ್ನನ್ನು ಅಪರಾಧಿ ಎಂದು ನಿರ್ಣಯಿಸುತ್ತೀಯೋ? .::. 9 ದೇವರಾದ ನನಗಿರುವ ಭುಜಬಲ ನಿನಗಿದೆಯೋ? ನನ್ನ ಧ್ವನಿಯ ಹಾಗೆ ನೀನು ಗುಡುಗಬಲ್ಲೆಯೋ? .::. 10 ಹಾಗಾದರೆ, ಮಹಿಮೆ ಘನತೆಗಳಿಂದ ನಿನ್ನನ್ನು ಅಲಂಕರಿಸಿಕೋ; ನೀನು ಗೌರವ ಪ್ರಭಾವಗಳನ್ನೂ ಧರಿಸಿಕೋ. .::. 11 ನಿನ್ನ ಕಡುಕೋಪವನ್ನು ಎಲ್ಲಾ ಗರ್ವಿಷ್ಠರ ಮೇಲೆ ಸುರಿಸಿ, ಅವರನ್ನು ತಗ್ಗಿಸು. .::. 12 ಹೌದು, ಗರ್ವಿಷ್ಠರನ್ನೆಲ್ಲಾ ನೋಡಿ ತಗ್ಗಿಸಿಬಿಡು; ದುಷ್ಟರನ್ನು ಅವರು ನಿಂತಿರುವ ಸ್ಥಳದಲ್ಲಿಯೇ ಕೆಡವಿಬಿಡು. .::. 13 ಅವರೆಲ್ಲರನ್ನು ಒಟ್ಟಾಗಿ ಧೂಳಿನಲ್ಲಿ ಅಡಗಿಸಿಬಿಡು; ಅಂಧಕಾರ ಲೋಕದಲ್ಲಿ ಅವರ ಮುಖಕ್ಕೆ ಮುಸುಕುಹಾಕು. .::. 14 ನೀನು ಹಾಗೆ ಮಾಡಿದರೆ, ನಿನ್ನ ಬಲ ನಿನ್ನನ್ನು ರಕ್ಷಿಸಬಲ್ಲದೆಂದು ನಾನೇ ಒಪ್ಪಿಕೊಳ್ಳುವೆನು. .::. 15 “ನಾನು ನಿನ್ನ ಹಾಗೆ ಸೃಷ್ಟಿಮಾಡಿದ ನೀರಾನೆಯನ್ನು ನೋಡು; ಅದು ಎತ್ತಿನ ಹಾಗೆ ಹುಲ್ಲನ್ನು ತಿನ್ನುತ್ತದೆ. .::. 16 ಅದರ ಸೊಂಟದಲ್ಲಿ ಎಂಥಾ ಬಲ ಅಡಕವಾಗಿದೆ. ಅದರ ಹೊಟ್ಟೆಯ ನರಗಳಲ್ಲಿ ಸಹ ಎಂಥಾ ಶಕ್ತಿಯಿದೆ! .::. 17 ನೀರಾನೆಯು ತನ್ನ ಬಾಲವನ್ನು ದೇವದಾರು ಮರದಂತೆ ಬಗ್ಗಿಸುತ್ತದೆ; ಅದರ ತೊಡೆಯ ನರಗಳೋ ಹೆಣೆದುಕೊಂಡಿವೆ. .::. 18 ಅದರ ಮೂಳೆಗಳು ಕಂಚಿನ ಸಲಿಕೆಗಳಂತೆ ಬಲವಾಗಿವೆ; ಅದರ ಕೈಕಾಲುಗಳು ಕಬ್ಬಿಣದ ಕಂಬಿಗಳ ಹಾಗೆ ಇರುತ್ತವೆ. .::. 19 ದೇವರ ಸೃಷ್ಟಿಗಳಲ್ಲಿ ಅದು ಮುಖ್ಯವಾದದ್ದು; ಸೃಷ್ಟಿಕರ್ತ ದೇವರು ಅದಕ್ಕೆ ಕೋರೆಹಲ್ಲಿನ ಖಡ್ಗವನ್ನು ಒದಗಿಸಿದ್ದಾರೆ. .::. 20 ಪರ್ವತಗಳಲ್ಲಿ ಅದಕ್ಕೆ ಮೇವು ಸಿಗುತ್ತದೆ; ಎಲ್ಲಾ ಕಾಡುಮೃಗಗಳು ಅಲ್ಲಿ ಆಡುತ್ತವೆ. .::. 21 ನೀರಾನೆಯು ತಾವರೆ ಗಿಡಗಳಡಿಯಲ್ಲಿಯೂ ಆಪಿನ ಮರೆಯಲ್ಲಿಯೂ, ಜವುಗು ಭೂಮಿಯಲ್ಲಿಯೂ ವಿಶ್ರಮಿಸಿಕೊಳ್ಳುತ್ತದೆ. .::. 22 ತಾವರೆ ಎಲೆಗಳು ನೆರಳನ್ನು ಅದಕ್ಕೆ ಹರಡುತ್ತವೆ; ನದಿಯ ನೀರವಂಜಿ ಮರಗಳು ಅದನ್ನು ಸುತ್ತಿಕೊಳ್ಳುತ್ತವೆ. .::. 23 ಹೊಳೆ ಉಕ್ಕಿ ಬಂದರೂ ನೀರಾನೆಯು ಹೆದರುವುದಿಲ್ಲ. ಯೊರ್ದನ್ ನದಿ ಅದರ ಬಾಯೊಳಗೆ ನುಗ್ಗಿದರೂ ಧೈರ್ಯದಿಂದಿರುವುದು. .::. 24 ಅದು ನೋಡುತ್ತಿರುವಾಗ ಯಾರಾದರೂ ಅದನ್ನು ಹಿಡಿಯಬಲ್ಲರೋ? ಅದರ ಮೂಗನ್ನು ಗಾಳದಿಂದ ಚುಚ್ಚಬಲ್ಲರೋ?
  • ಕೀರ್ತನೆಗಳು ಅಧ್ಯಾಯ 1  
  • ಕೀರ್ತನೆಗಳು ಅಧ್ಯಾಯ 2  
  • ಕೀರ್ತನೆಗಳು ಅಧ್ಯಾಯ 3  
  • ಕೀರ್ತನೆಗಳು ಅಧ್ಯಾಯ 4  
  • ಕೀರ್ತನೆಗಳು ಅಧ್ಯಾಯ 5  
  • ಕೀರ್ತನೆಗಳು ಅಧ್ಯಾಯ 6  
  • ಕೀರ್ತನೆಗಳು ಅಧ್ಯಾಯ 7  
  • ಕೀರ್ತನೆಗಳು ಅಧ್ಯಾಯ 8  
  • ಕೀರ್ತನೆಗಳು ಅಧ್ಯಾಯ 9  
  • ಕೀರ್ತನೆಗಳು ಅಧ್ಯಾಯ 10  
  • ಕೀರ್ತನೆಗಳು ಅಧ್ಯಾಯ 11  
  • ಕೀರ್ತನೆಗಳು ಅಧ್ಯಾಯ 12  
  • ಕೀರ್ತನೆಗಳು ಅಧ್ಯಾಯ 13  
  • ಕೀರ್ತನೆಗಳು ಅಧ್ಯಾಯ 14  
  • ಕೀರ್ತನೆಗಳು ಅಧ್ಯಾಯ 15  
  • ಕೀರ್ತನೆಗಳು ಅಧ್ಯಾಯ 16  
  • ಕೀರ್ತನೆಗಳು ಅಧ್ಯಾಯ 17  
  • ಕೀರ್ತನೆಗಳು ಅಧ್ಯಾಯ 18  
  • ಕೀರ್ತನೆಗಳು ಅಧ್ಯಾಯ 19  
  • ಕೀರ್ತನೆಗಳು ಅಧ್ಯಾಯ 20  
  • ಕೀರ್ತನೆಗಳು ಅಧ್ಯಾಯ 21  
  • ಕೀರ್ತನೆಗಳು ಅಧ್ಯಾಯ 22  
  • ಕೀರ್ತನೆಗಳು ಅಧ್ಯಾಯ 23  
  • ಕೀರ್ತನೆಗಳು ಅಧ್ಯಾಯ 24  
  • ಕೀರ್ತನೆಗಳು ಅಧ್ಯಾಯ 25  
  • ಕೀರ್ತನೆಗಳು ಅಧ್ಯಾಯ 26  
  • ಕೀರ್ತನೆಗಳು ಅಧ್ಯಾಯ 27  
  • ಕೀರ್ತನೆಗಳು ಅಧ್ಯಾಯ 28  
  • ಕೀರ್ತನೆಗಳು ಅಧ್ಯಾಯ 29  
  • ಕೀರ್ತನೆಗಳು ಅಧ್ಯಾಯ 30  
  • ಕೀರ್ತನೆಗಳು ಅಧ್ಯಾಯ 31  
  • ಕೀರ್ತನೆಗಳು ಅಧ್ಯಾಯ 32  
  • ಕೀರ್ತನೆಗಳು ಅಧ್ಯಾಯ 33  
  • ಕೀರ್ತನೆಗಳು ಅಧ್ಯಾಯ 34  
  • ಕೀರ್ತನೆಗಳು ಅಧ್ಯಾಯ 35  
  • ಕೀರ್ತನೆಗಳು ಅಧ್ಯಾಯ 36  
  • ಕೀರ್ತನೆಗಳು ಅಧ್ಯಾಯ 37  
  • ಕೀರ್ತನೆಗಳು ಅಧ್ಯಾಯ 38  
  • ಕೀರ್ತನೆಗಳು ಅಧ್ಯಾಯ 39  
  • ಕೀರ್ತನೆಗಳು ಅಧ್ಯಾಯ 40  
  • ಕೀರ್ತನೆಗಳು ಅಧ್ಯಾಯ 41  
  • ಕೀರ್ತನೆಗಳು ಅಧ್ಯಾಯ 42  
×

Alert

×

Kannada Letters Keypad References