Kannada ಬೈಬಲ್
ಯೋಬನು ಒಟ್ಟು 42 ಅಧ್ಯಾಯಗಳು
ಯೋಬನು ಅಧ್ಯಾಯ 40
1
2 ಯೆಹೋವ ದೇವರು ಯೋಬನಿಗೆ ಮತ್ತೆ ಇಂತೆಂದರು: “ಸರ್ವಶಕ್ತರಾದ ದೇವರೊಂದಿಗೇ ತಪ್ಪು ಕಂಡುಹಿಡಿಯುವ ನೀನು, ದೇವರಿಗೇ ಪಾಠ ಕಲಿಸಿಕೊಡುವೆಯಾ? ದೇವರ ಮೇಲೆಯೇ ಆರೋಪಿಸುವ ನೀನು ಈಗ ಉತ್ತರಕೊಡು!”
3
4 ಆಗ ಯೋಬನು ಯೆಹೋವ ದೇವರಿಗೆ ಉತ್ತರವಾಗಿ, “ಅಯ್ಯೋ, ನಾನು ಅಯೋಗ್ಯ, ತಮಗೆ ಏನು ಉತ್ತರಕೊಡಲಿ? ಬಾಯಿಯ ಮೇಲೆ ಕೈಯಿಟ್ಟುಕೊಳ್ಳುತ್ತೇನೆ.
ಯೋಬನು ಅಧ್ಯಾಯ 40
5 ಒಂದು ಸಾರಿ ಮಾತಾಡಿದೆ, ಈಗ ನನಗೆ ಕೊಡುವುದಕ್ಕೆ ಉತ್ತರ ಇಲ್ಲ; ಮತ್ತೆ ಮಾತಾಡುತ್ತಿದ್ದೇನೆ, ಆದರೆ ಮಾತಾಡಲು ನನಗೆ ಇನ್ನೇನೂ ಇಲ್ಲ,” ಎಂದನು.
6
7 ಆಗ ಯೆಹೋವ ದೇವರು ಬಿರುಗಾಳಿಯೊಳಗಿಂದ ಯೋಬನಿಗೆ ಉತ್ತರಕೊಟ್ಟು ಹೇಳಿದ್ದೇನೆಂದರೆ: “ಈಗ ಶೂರನಂತೆ ನಿನ್ನ ನಡು ಕಟ್ಟಿಕೋ; ನಾನು ನಿನಗೆ ಪ್ರಶ್ನೆಮಾಡುತ್ತೇನೆ; ನೀನು ನನಗೆ ಉತ್ತರಕೊಡು.
ಯೋಬನು ಅಧ್ಯಾಯ 40
8 “ನನ್ನ ನ್ಯಾಯವನ್ನು ನೀನು ಅಪಕೀರ್ತಿ ಮಾಡುತ್ತೀಯೋ? ನೀನು ನಿನ್ನ ನ್ಯಾಯವನ್ನು ಸ್ಥಾಪಿಸಲು ನನ್ನನ್ನು ಅಪರಾಧಿ ಎಂದು ನಿರ್ಣಯಿಸುತ್ತೀಯೋ?
9 ದೇವರಾದ ನನಗಿರುವ ಭುಜಬಲ ನಿನಗಿದೆಯೋ? ನನ್ನ ಧ್ವನಿಯ ಹಾಗೆ ನೀನು ಗುಡುಗಬಲ್ಲೆಯೋ?
10 ಹಾಗಾದರೆ, ಮಹಿಮೆ ಘನತೆಗಳಿಂದ ನಿನ್ನನ್ನು ಅಲಂಕರಿಸಿಕೋ; ನೀನು ಗೌರವ ಪ್ರಭಾವಗಳನ್ನೂ ಧರಿಸಿಕೋ.
ಯೋಬನು ಅಧ್ಯಾಯ 40
11 ನಿನ್ನ ಕಡುಕೋಪವನ್ನು ಎಲ್ಲಾ ಗರ್ವಿಷ್ಠರ ಮೇಲೆ ಸುರಿಸಿ, ಅವರನ್ನು ತಗ್ಗಿಸು.
12 ಹೌದು, ಗರ್ವಿಷ್ಠರನ್ನೆಲ್ಲಾ ನೋಡಿ ತಗ್ಗಿಸಿಬಿಡು; ದುಷ್ಟರನ್ನು ಅವರು ನಿಂತಿರುವ ಸ್ಥಳದಲ್ಲಿಯೇ ಕೆಡವಿಬಿಡು.
13 ಅವರೆಲ್ಲರನ್ನು ಒಟ್ಟಾಗಿ ಧೂಳಿನಲ್ಲಿ ಅಡಗಿಸಿಬಿಡು; ಅಂಧಕಾರ ಲೋಕದಲ್ಲಿ ಅವರ ಮುಖಕ್ಕೆ ಮುಸುಕುಹಾಕು.
ಯೋಬನು ಅಧ್ಯಾಯ 40
14 ನೀನು ಹಾಗೆ ಮಾಡಿದರೆ, ನಿನ್ನ ಬಲ ನಿನ್ನನ್ನು ರಕ್ಷಿಸಬಲ್ಲದೆಂದು ನಾನೇ ಒಪ್ಪಿಕೊಳ್ಳುವೆನು.
15 “ನಾನು ನಿನ್ನ ಹಾಗೆ ಸೃಷ್ಟಿಮಾಡಿದ ನೀರಾನೆಯನ್ನು ನೋಡು; ಅದು ಎತ್ತಿನ ಹಾಗೆ ಹುಲ್ಲನ್ನು ತಿನ್ನುತ್ತದೆ.
16 ಅದರ ಸೊಂಟದಲ್ಲಿ ಎಂಥಾ ಬಲ ಅಡಕವಾಗಿದೆ. ಅದರ ಹೊಟ್ಟೆಯ ನರಗಳಲ್ಲಿ ಸಹ ಎಂಥಾ ಶಕ್ತಿಯಿದೆ!
ಯೋಬನು ಅಧ್ಯಾಯ 40
17 ನೀರಾನೆಯು ತನ್ನ ಬಾಲವನ್ನು ದೇವದಾರು ಮರದಂತೆ ಬಗ್ಗಿಸುತ್ತದೆ; ಅದರ ತೊಡೆಯ ನರಗಳೋ ಹೆಣೆದುಕೊಂಡಿವೆ.
18 ಅದರ ಮೂಳೆಗಳು ಕಂಚಿನ ಸಲಿಕೆಗಳಂತೆ ಬಲವಾಗಿವೆ; ಅದರ ಕೈಕಾಲುಗಳು ಕಬ್ಬಿಣದ ಕಂಬಿಗಳ ಹಾಗೆ ಇರುತ್ತವೆ.
19 ದೇವರ ಸೃಷ್ಟಿಗಳಲ್ಲಿ ಅದು ಮುಖ್ಯವಾದದ್ದು; ಸೃಷ್ಟಿಕರ್ತ ದೇವರು ಅದಕ್ಕೆ ಕೋರೆಹಲ್ಲಿನ ಖಡ್ಗವನ್ನು ಒದಗಿಸಿದ್ದಾರೆ.
ಯೋಬನು ಅಧ್ಯಾಯ 40
20 ಪರ್ವತಗಳಲ್ಲಿ ಅದಕ್ಕೆ ಮೇವು ಸಿಗುತ್ತದೆ; ಎಲ್ಲಾ ಕಾಡುಮೃಗಗಳು ಅಲ್ಲಿ ಆಡುತ್ತವೆ.
21 ನೀರಾನೆಯು ತಾವರೆ ಗಿಡಗಳಡಿಯಲ್ಲಿಯೂ ಆಪಿನ ಮರೆಯಲ್ಲಿಯೂ, ಜವುಗು ಭೂಮಿಯಲ್ಲಿಯೂ ವಿಶ್ರಮಿಸಿಕೊಳ್ಳುತ್ತದೆ.
22 ತಾವರೆ ಎಲೆಗಳು ನೆರಳನ್ನು ಅದಕ್ಕೆ ಹರಡುತ್ತವೆ; ನದಿಯ ನೀರವಂಜಿ ಮರಗಳು ಅದನ್ನು ಸುತ್ತಿಕೊಳ್ಳುತ್ತವೆ.
ಯೋಬನು ಅಧ್ಯಾಯ 40
23 ಹೊಳೆ ಉಕ್ಕಿ ಬಂದರೂ ನೀರಾನೆಯು ಹೆದರುವುದಿಲ್ಲ. ಯೊರ್ದನ್ ನದಿ ಅದರ ಬಾಯೊಳಗೆ ನುಗ್ಗಿದರೂ ಧೈರ್ಯದಿಂದಿರುವುದು.
24 ಅದು ನೋಡುತ್ತಿರುವಾಗ ಯಾರಾದರೂ ಅದನ್ನು ಹಿಡಿಯಬಲ್ಲರೋ? ಅದರ ಮೂಗನ್ನು ಗಾಳದಿಂದ ಚುಚ್ಚಬಲ್ಲರೋ?