ಪವಿತ್ರ ಬೈಬಲ್

ಈಸೀ ಟು ರೀಡ್ ವರ್ಷನ್ (ESV)
ಕೀರ್ತನೆಗಳು

ಕೀರ್ತನೆಗಳು ಅಧ್ಯಾಯ 89

1 ಯೆಹೋವನೇ, ನಿನ್ನ ಪ್ರೀತಿಯನ್ನೂ ನಂಬಿಗಸ್ತಿಕೆಯನ್ನೂ ಸದಾಕಾಲ ಹಾಡಿ ಕೊಂಡಾಡುವೆನು!
2 ನಿನ್ನ ಶಾಶ್ವತ ಪ್ರೀತಿಯಲ್ಲಿ ನನಗೆ ದೃಢವಾದ ನಂಬಿಕೆಯಿದೆ. ನಿನ್ನ ನಂಬಿಗಸ್ತಿಕೆಯು ಆಕಾಶಗಳಂತೆ ಶಾಶ್ವತವಾಗಿದೆ. 3 ಆತನು ಹೇಳಿದ್ದೇನೆಂದರೆ: “ನಾನು ಆರಿಸಿಕೊಂಡ ರಾಜನೊಂದಿಗೆ ಒಂದು ಒಡಂಬಡಿಕೆಯನ್ನು ಮಾಡಿಕೊಂಡೆನು. ನನ್ನ ಸೇವಕನಾದ ದಾವೀದನಿಗೆ ಒಂದು ವಾಗ್ದಾನವನ್ನು ಮಾಡಿದೆನು; ಅದೇನೆಂದರೆ,
4 ‘ದಾವೀದನೇ, ನಿನ್ನ ಕುಟುಂಬವನ್ನು ಶಾಶ್ವಾತಗೊಳಿಸುವೆನು, ನಿನ್ನ ರಾಜ್ಯವನ್ನೂ ಶಾಶ್ವತಗೊಳಿಸುವೆನು.’ ” 5 ಯೆಹೋವನೇ, ನಿನ್ನ ಮಹತ್ಕಾರ್ಯಗಳ ಕುರಿತು ಆಕಾಶಮಂಡಲವು ಸ್ತುತಿಸುತ್ತಿದೆ. ಪರಿಶುದ್ಧರ ಸಭೆಯು ಅವುಗಳ ಕುರಿತು ಹಾಡಿಕೊಂಡಾಡುವುದು.
6 ಪರಲೋಕದಲ್ಲಿ ಯಾವನೂ ಯೆಹೋವನಿಗೆ ಸಮಾನನಲ್ಲ. ಯಾವ ದೇವರುಗಳನ್ನೂ ಯೆಹೋವನಿಗೆ ಹೋಲಿಸಲಾಗದು.
7 ದೇವರು ಪರಿಶುದ್ಧರ ಸಭೆ ಸೇರಿಸುವನು. ಆ ದೇವದೂತರೆಲ್ಲಾ ಆತನ ಸುತ್ತಲೂ ಸೇರಿಬರುವರು. ಅವರು ದೇವರಲ್ಲಿ ಭಯಭಕ್ತಿಯಿಂದಿರುವರು. ಆತನಿಗೆ ಭಯಪಡುತ್ತಾ ಆತನ ಸನ್ನಿಧಿಯಲ್ಲಿ ನಿಂತುಕೊಳ್ಳುವರು.
8 ಸೇನಾಧೀಶ್ವರನಾದ ಯೆಹೋವ ದೇವರೇ, ನಿನ್ನಂತೆ ಬೇರೆ ಯಾರೂ ಇಲ್ಲ. ನೀನು ನಮ್ಮ ಸಂಪೂರ್ಣಭರವಸೆಗೆ ಯೋಗ್ಯನಾಗಿರುವೆ.
9 ಸಮುದ್ರವು ನಿನ್ನ ಅಧೀನದಲ್ಲಿದೆ. ಅದರ ರೋಷದ ಅಲೆಗಳನ್ನು ನೀನು ಶಾಂತಗೊಳಿಸುವೆ.
10 ರಹಾಬನನ್ನು ಸೋಲಿಸಿದಾತನು ನೀನೇ. ನಿನ್ನ ಭುಜಬಲದಿಂದ ನೀನು ಶತ್ರುಗಳನ್ನು ಚದರಿಸಿಬಿಟ್ಟಿ.
11 ದೇವರೇ, ಭೂಮ್ಯಾಕಾಶಗಳಲ್ಲಿರುವುದೆಲ್ಲಾ ನಿನ್ನವೇ. ಪ್ರಪಂಚವನ್ನೂ ಅದರಲ್ಲಿರುವ ಸಮಸ್ತವನ್ನೂ ಸೃಷ್ಟಿಸಿದಾತನು ನೀನೇ.
12 ಉತ್ತರ, ದಕ್ಷಿಣ ದಿಕ್ಕುಗಳನ್ನೂ ಪ್ರತಿಯೊಂದನ್ನೂ ಸೃಷ್ಟಿಸಿದಾತನು ನೀನೇ. ತಾಬೋರ್ ಮತ್ತು ಹೆರ್ಮೋನ್ ಬೆಟ್ಟಗಳು ನಿನ್ನ ಹೆಸರನ್ನು ಸಂಕೀರ್ತಿಸುತ್ತವೆ.
13 ದೇವರೇ, ಬಲವು ನಿನ್ನಲ್ಲೇ ಇದೆ. ನಿನ್ನ ಬಲವು ಮಹಾ ಬಲವೇ ಸರಿ! ಜಯವಂತೂ ನಿನ್ನದೇ!
14 ನಿನ್ನ ರಾಜ್ಯವು ಸತ್ಯದ ಮೇಲೆಯೂ ನ್ಯಾಯದ ಮೇಲೆಯೂ ಕಟ್ಟಲ್ಪಟ್ಟಿದೆ. ನಿನ್ನ ಸಿಂಹಾಸನದ ಮುಂದೆ ಪ್ರೀತಿಯೂ ನಂಬಿಗಸ್ತಿಕೆಯೂ ಸೇವಕರುಗಳಾಗಿವೆ.
15 ಯೆಹೋವನೇ, ನಿನ್ನ ಸದ್ಭಕ್ತರು ನಿಜವಾಗಿಯೂ ಸಂತೋಷವಾಗಿದ್ದಾರೆ. ಅವರು ನಿನ್ನ ಕರುಣೆಯ ಬೆಳಕಿನಲ್ಲಿ ವಾಸಿಸುತ್ತಿದ್ದಾರೆ.
16 ನಿನ್ನ ಹೆಸರು ಅವರನ್ನು ಯಾವಾಗಲೂ ಸಂತೋಷಗೊಳಿಸುತ್ತದೆ. ಅವರು ನಿನ್ನ ನೀತಿಯನ್ನು ಸ್ತುತಿಸುವರು.
17 ನೀನೇ ಅವರ ಅದ್ಭುತ ಶಕ್ತಿಯಾಗಿರುವೆ. ಅವರ ಶಕ್ತಿಯು ನಿನ್ನಿಂದಲೇ ಬರುತ್ತದೆ.
18 ಯೆಹೋವನೇ, ನೀನೇ ನಮ್ಮ ಸಂರಕ್ಷಕನು. ಇಸ್ರೇಲಿನ ಪರಿಶುದ್ಧನೇ ನಮ್ಮ ರಾಜನು.
19 ನೀನು ನಿನ್ನ ಸದ್ಭಕ್ತರೊಂದಿಗೆ ದರ್ಶನದಲ್ಲಿ ಮಾತಾಡಿದ್ದೇನೆಂದರೆ: “ಯುದ್ಧವೀರನೊಬ್ಬನಿಗೆ ಬಲವನ್ನು ಅನುಗ್ರಹಿಸಿದೆ.
ಜನಸಮೂಹದಿಂದ ಒಬ್ಬ ಯೌವನಸ್ಥನನ್ನು ಆರಿಸಿಕೊಂಡು ಗಣ್ಯವ್ಯಕ್ತಿಯನ್ನಾಗಿ ಮಾಡಿದೆ.
20 ನನ್ನ ಸೇವಕನಾದ ದಾವೀದನನ್ನು ಕಂಡುಕೊಂಡೆ. ನನ್ನ ವಿಶೇಷವಾದ ಎಣ್ಣೆಯಿಂದ ಅವನನ್ನು ಅಭಿಷೇಕಿಸಿದೆ.
21 ನನ್ನ ಬಲಗೈಯಿಂದ ದಾವೀದನಿಗೆ ಬೆಂಬಲ ನೀಡಿದೆ, ನನ್ನ ಶಕ್ತಿಯಿಂದ ಅವನನ್ನು ಬಲಗೊಳಿಸಿದೆ.
22 ನಾನು ಆರಿಸಿಕೊಂಡ ರಾಜನನ್ನು ಸೋಲಿಸಲು ಶತ್ರುವಿಗೆ ಆಗಲಿಲ್ಲ. ಅವನನ್ನು ಸೋಲಿಸಲು ದುಷ್ಟಜನರಿಗೆ ಆಗಲಿಲ್ಲ.
23 ನಾನು ಅವನ ಶತ್ರುಗಳನ್ನು ಮುಗಿಸಿದೆನು. ನಾನು ಆರಿಸಿಕೊಂಡ ರಾಜನ ಮೇಲೆ ದ್ವೇಷಕಾರಿದ ಜನರನ್ನು ಸೋಲಿಸಿದೆನು.
24 ನಾನು ಆರಿಸಿಕೊಂಡ ರಾಜನನ್ನು ಯಾವಾಗಲೂ ಪ್ರೀತಿಸುವೆನು; ಅವನಿಗೆ ಬೆಂಬಲ ನೀಡುವೆನು. ನಾನು ಅವನನ್ನು ಯಾವಾಗಲೂ ಬಲಗೊಳಿಸುವೆನು.
25 ನಾನು ಆರಿಸಿಕೊಂಡ ರಾಜನನ್ನು ಸಮುದ್ರದ ಮೇಲೆ ಅಧಿಕಾರಿಯನ್ನಾಗಿ ನೇಮಿಸುವೆನು. ಅವನು ನದಿಗಳನ್ನು ಹತೋಟಿಯಲ್ಲಿಡುವನು.
26 ಅವನು ನನಗೆ, ‘ನೀನೇ ನನ್ನ ತಂದೆ; ನೀನೇ ನನ್ನ ದೇವರು. ನೀನೇ ನನ್ನ ಬಂಡೆ; ನೀನೇ ನನ್ನ ರಕ್ಷಕ’ ಎಂದು ಹೇಳುವನು.
27 ನಾನು ಅವನನ್ನು ನನ್ನ ಚೊಚ್ಚಲು ಮಗನನ್ನಾಗಿ ಮಾಡುವೆನು. ಅವನು ಭೂಲೋಕದಲ್ಲಿ ಮಹಾರಾಜನಾಗಿರುವನು.
28 ನಾನು ಆರಿಸಿಕೊಂಡ ರಾಜನನ್ನು ನನ್ನ ಪ್ರೀತಿಯು ಸದಾಕಾಲ ಸಂರಕ್ಷಿಸುವುದು. ನಾನು ಅವನೊಂದಿಗೆ ಮಾಡಿಕೊಂಡಿರುವ ಒಡಂಬಡಿಕೆಯು ಎಂದಿಗೂ ಕೊನೆಯಾಗದು.
29 ಅವನ ಕುಟುಂಬವು ಶಾಶ್ವತವಾಗಿರುವುದು. ಅವನ ರಾಜ್ಯವು ಆಕಾಶಗಳಿರುವವರೆಗೂ ಇರುವುದು.
30 ಅವನ ಸಂತತಿಯವರು ನನ್ನ ಧರ್ಮಶಾಸ್ತ್ರವನ್ನು ತೊರೆದುಬಿಟ್ಟು ನನ್ನ ಆಜ್ಞೆಗಳಿಗೆ ಅವಿಧೇಯರಾದರೆ ಅವರನ್ನು ಶಿಕ್ಷಿಸುವೆನು.
31 ನಾನು ಆರಿಸಿಕೊಂಡ ರಾಜನ ಸಂತತಿಯವರು ನನ್ನ ಕಟ್ಟಳೆಗಳನ್ನು ಉಲ್ಲಂಘಿಸಿ ನನ್ನ ಆಜ್ಞೆಗಳನ್ನು ಅಲಕ್ಷಿಸಿದರೆ,
32 ನಾನು ಅವರನ್ನು ಅವರ ದ್ರೋಹಕ್ಕಾಗಿ ಬಹು ಕಠಿಣವಾಗಿ ಶಿಕ್ಷಿಸುವೆನು. ಅವರ ಅಪರಾಧಕ್ಕಾಗಿ ಬೆತ್ತದಿಂದ ಹೊಡೆಯುವೆನು.
33 ಆದರೆ ಅವರ ಮೇಲೆ ನನಗಿರುವ ಪ್ರೀತಿಯು ಎಂದಿಗೂ ನಿಂತುಹೋಗುವುದಿಲ್ಲ. ನಾನು ಅವರಿಗೆ ಯಾವಾಗಲೂ ನಂಬಿಗಸ್ತನಾಗಿರುವೆನು.
34 ನಾನು ದಾವೀದನೊಂದಿಗೆ ಮಾಡಿಕೊಂಡಿರುವ ಒಡಂಬಡಿಕೆಯನ್ನು ಮುರಿದುಹಾಕುವುದೂ ಇಲ್ಲ, ಬದಲಾಯಿಸುವುದೂ ಇಲ್ಲ.
35 ನನ್ನ ಪವಿತ್ರತ್ವದ ಮೇಲೆ ಆಣೆಯಿಟ್ಟು ದಾವೀದನಿಗೆ ವಿಶೇಷವಾದ ವಾಗ್ದಾನವನ್ನು ಮಾಡಿದೆನು. ನಾನು ದಾವೀದನಿಗೆ ಸುಳ್ಳುಗಾರನಾಗುವುದಿಲ್ಲ.
36 ದಾವೀದನ ಕುಟುಂಬವು ಶಾಶ್ವತವಾಗಿರುವುದು. ಅವನ ರಾಜ್ಯವು ಸೂರ್ಯನು ಇರುವವರೆಗೂ ಇರುವುದು. 37 ಅದು ಚಂದ್ರನಂತೆ ಶಾಶ್ವತವಾಗಿರುವುದು.
ಈ ಒಪ್ಪಂದಕ್ಕೆ ಆಕಾಶವೇ ಸಾಕ್ಷಿ. ಈ ಒಪ್ಪಂದವು ನಂಬಿಕೆಗೆ ಯೋಗ್ಯವಾಗಿದೆ.”
38 ಆದರೆ ನೀನು ಅಭಿಷೇಕಿಸಿದ ರಾಜನ ಮೇಲೆ ನೀನು ಕೋಪಗೊಂಡಿದ್ದರಿಂದಲೇ ಅವನನ್ನು ಒಬ್ಬಂಟಿಗನನ್ನಾಗಿ ಬಿಟ್ಟುಬಿಟ್ಟೆ.
39 ನೀನು ನಿನ್ನ ಒಡಂಬಡಿಕೆಯನ್ನು ತಿರಸ್ಕರಿಸಿ ಅವನ ಕಿರೀಟವನ್ನು ನೆಲದ ಮೇಲೆ ಎಸೆದುಬಿಟ್ಟೆ.
40 ಅವನ ಪಟ್ಟಣದ ಗೋಡೆಗಳನ್ನು ಕೆಡವಿಹಾಕಿದೆ; ಅವನ ರಕ್ಷಣಾದುರ್ಗಗಳನ್ನೆಲ್ಲಾ ನಾಶಮಾಡಿದೆ.
41 ಅವನ ನೆರೆಹೊರೆಯವರು ಅವನನ್ನು ನೋಡಿ ನಗುವರು. ದಾರಿಯಲ್ಲಿ ಹಾದುಹೋಗುವವರು ಅವನಿಂದ ವಸ್ತುಗಳನ್ನು ಕದ್ದುಕೊಳ್ಳುವರು.
42 ಅವನ ಶತ್ರುಗಳಿಗೆಲ್ಲಾ ನೀನು ಸಂತೋಷವನ್ನುಂಟು ಮಾಡಿರುವೆ. ಅವನ ಶತ್ರುಗಳಿಗೆ ಯುದ್ಧದಲ್ಲಿ ಜಯವಾಗುವಂತೆ ಮಾಡಿರುವೆ.
43 ತಮ್ಮನ್ನು ರಕ್ಷಿಸಿಕೊಳ್ಳಲು ನೀನು ಅವರಿಗೆ ಸಹಾಯ ಮಾಡಿದೆ. ನಿನ್ನ ರಾಜನಿಗಾದರೋ ಯುದ್ಧದಲ್ಲಿ ಗೆಲ್ಲಲು ಸಹಾಯಮಾಡಲಿಲ್ಲ.
44 ನೀನು ಅವನ ತೇಜಸ್ಸನ್ನು ತಡೆದುಬಿಟ್ಟಿದ್ದಿ; ನೀನು ಅವನ ಸಿಂಹಾಸನವನ್ನು ನೆಲಕ್ಕೆ ಉರುಳಿಸಿಬಿಟ್ಟೆ.
45 ನೀನು ಅವನ ಜೀವಿತವನ್ನು ಮೊಟಕುಗೊಳಿಸಿ ಅವನಿಗೆ ಅವಮಾನ ಮಾಡಿದೆ. 46 ಯೆಹೋವನೇ, ಇನ್ನೆಷ್ಟರವರೆಗೆ ನೀನು ನಮಗೆ ಮರೆಯಾಗಿರುವೆ? ನಿನ್ನ ಕೋಪಾಗ್ನಿಯು ನಮ್ಮ ಮೇಲೆ ಶಾಶ್ವತವಾಗಿ ಉರಿಯುವುದೋ?
47 ನಮ್ಮ ಜೀವಿತಕಾಲ ಸ್ವಲ್ಪವೆಂಬುದನ್ನು ಜ್ಞಾಪಿಸಿಕೊ. ನಾವು ಸ್ವಲ್ಪಕಾಲ ಬದುಕಿ ಸಾಯುವುದಕ್ಕಾಗಿಯೇ ನೀನು ನಮ್ಮನ್ನು ಸೃಷ್ಟಿಸಿದೆ.
48 ಮರಣ ಹೊಂದದೆ ಚಿರಂಜೀವಿಯಾಗಿರುವವನು ಯಾರೂ ಇಲ್ಲ. ಯಾವ ವ್ಯಕ್ತಿಯೂ ಸಮಾಧಿಯಿಂದ ತಪ್ಪಿಸಿಕೊಳ್ಳಲಾರನು. 49 ಯೆಹೋವನೇ, ಹಿಂದಿನಕಾಲದಲ್ಲಿ ನೀನು ತೋರಿದ ಪ್ರೀತಿ ಎಲ್ಲಿ ಹೋಯಿತು? ದಾವೀದ ಕುಟುಂಬಕ್ಕೆ ನಂಬಿಗಸ್ತನಾಗಿರುತ್ತೇನೆಂದು ನೀನು ವಾಗ್ದಾನ ಮಾಡಿದೆಯಲ್ಲಾ!
50 (50-51) ಯೆಹೋವನೇ ನಿನ್ನ ಸೇವಕನಿಗೆ ಜನರು ಮಾಡಿದ ಅವಮಾನವನ್ನು ದಯವಿಟ್ಟು ಜ್ಞಾಪಿಸಿಕೊ.
ಯೆಹೋವನೇ, ನಿನ್ನ ಶತ್ರುಗಳಿಂದ ಅವಮಾನಕರವಾದ ಮಾತುಗಳನ್ನು ನಾನು ಕೇಳಬೇಕಾಯಿತು. ನೀನು ಅಭಿಷೇಕಿಸಿದ ರಾಜನನ್ನು ಅವರು ಅವಮಾನ ಮಾಡಿದರು!
51 52 ಯೆಹೋವನನ್ನು ಎಂದೆಂದಿಗೂ ಕೊಂಡಾಡಿರಿ!
ಆಮೆನ್, ಆಮೆನ್!
1. ಯೆಹೋವನೇ, ನಿನ್ನ ಪ್ರೀತಿಯನ್ನೂ ನಂಬಿಗಸ್ತಿಕೆಯನ್ನೂ ಸದಾಕಾಲ ಹಾಡಿ ಕೊಂಡಾಡುವೆನು! 2. ನಿನ್ನ ಶಾಶ್ವತ ಪ್ರೀತಿಯಲ್ಲಿ ನನಗೆ ದೃಢವಾದ ನಂಬಿಕೆಯಿದೆ. ನಿನ್ನ ನಂಬಿಗಸ್ತಿಕೆಯು ಆಕಾಶಗಳಂತೆ ಶಾಶ್ವತವಾಗಿದೆ. 3. ಆತನು ಹೇಳಿದ್ದೇನೆಂದರೆ: “ನಾನು ಆರಿಸಿಕೊಂಡ ರಾಜನೊಂದಿಗೆ ಒಂದು ಒಡಂಬಡಿಕೆಯನ್ನು ಮಾಡಿಕೊಂಡೆನು. ನನ್ನ ಸೇವಕನಾದ ದಾವೀದನಿಗೆ ಒಂದು ವಾಗ್ದಾನವನ್ನು ಮಾಡಿದೆನು; ಅದೇನೆಂದರೆ, 4. ‘ದಾವೀದನೇ, ನಿನ್ನ ಕುಟುಂಬವನ್ನು ಶಾಶ್ವಾತಗೊಳಿಸುವೆನು, ನಿನ್ನ ರಾಜ್ಯವನ್ನೂ ಶಾಶ್ವತಗೊಳಿಸುವೆನು.’ ” 5. ಯೆಹೋವನೇ, ನಿನ್ನ ಮಹತ್ಕಾರ್ಯಗಳ ಕುರಿತು ಆಕಾಶಮಂಡಲವು ಸ್ತುತಿಸುತ್ತಿದೆ. ಪರಿಶುದ್ಧರ ಸಭೆಯು ಅವುಗಳ ಕುರಿತು ಹಾಡಿಕೊಂಡಾಡುವುದು. 6. ಪರಲೋಕದಲ್ಲಿ ಯಾವನೂ ಯೆಹೋವನಿಗೆ ಸಮಾನನಲ್ಲ. ಯಾವ ದೇವರುಗಳನ್ನೂ ಯೆಹೋವನಿಗೆ ಹೋಲಿಸಲಾಗದು. 7. ದೇವರು ಪರಿಶುದ್ಧರ ಸಭೆ ಸೇರಿಸುವನು. ಆ ದೇವದೂತರೆಲ್ಲಾ ಆತನ ಸುತ್ತಲೂ ಸೇರಿಬರುವರು. ಅವರು ದೇವರಲ್ಲಿ ಭಯಭಕ್ತಿಯಿಂದಿರುವರು. ಆತನಿಗೆ ಭಯಪಡುತ್ತಾ ಆತನ ಸನ್ನಿಧಿಯಲ್ಲಿ ನಿಂತುಕೊಳ್ಳುವರು. 8. ಸೇನಾಧೀಶ್ವರನಾದ ಯೆಹೋವ ದೇವರೇ, ನಿನ್ನಂತೆ ಬೇರೆ ಯಾರೂ ಇಲ್ಲ. ನೀನು ನಮ್ಮ ಸಂಪೂರ್ಣಭರವಸೆಗೆ ಯೋಗ್ಯನಾಗಿರುವೆ. 9. ಸಮುದ್ರವು ನಿನ್ನ ಅಧೀನದಲ್ಲಿದೆ. ಅದರ ರೋಷದ ಅಲೆಗಳನ್ನು ನೀನು ಶಾಂತಗೊಳಿಸುವೆ. 10. ರಹಾಬನನ್ನು ಸೋಲಿಸಿದಾತನು ನೀನೇ. ನಿನ್ನ ಭುಜಬಲದಿಂದ ನೀನು ಶತ್ರುಗಳನ್ನು ಚದರಿಸಿಬಿಟ್ಟಿ. 11. ದೇವರೇ, ಭೂಮ್ಯಾಕಾಶಗಳಲ್ಲಿರುವುದೆಲ್ಲಾ ನಿನ್ನವೇ. ಪ್ರಪಂಚವನ್ನೂ ಅದರಲ್ಲಿರುವ ಸಮಸ್ತವನ್ನೂ ಸೃಷ್ಟಿಸಿದಾತನು ನೀನೇ. 12. ಉತ್ತರ, ದಕ್ಷಿಣ ದಿಕ್ಕುಗಳನ್ನೂ ಪ್ರತಿಯೊಂದನ್ನೂ ಸೃಷ್ಟಿಸಿದಾತನು ನೀನೇ. ತಾಬೋರ್ ಮತ್ತು ಹೆರ್ಮೋನ್ ಬೆಟ್ಟಗಳು ನಿನ್ನ ಹೆಸರನ್ನು ಸಂಕೀರ್ತಿಸುತ್ತವೆ. 13. ದೇವರೇ, ಬಲವು ನಿನ್ನಲ್ಲೇ ಇದೆ. ನಿನ್ನ ಬಲವು ಮಹಾ ಬಲವೇ ಸರಿ! ಜಯವಂತೂ ನಿನ್ನದೇ! 14. ನಿನ್ನ ರಾಜ್ಯವು ಸತ್ಯದ ಮೇಲೆಯೂ ನ್ಯಾಯದ ಮೇಲೆಯೂ ಕಟ್ಟಲ್ಪಟ್ಟಿದೆ. ನಿನ್ನ ಸಿಂಹಾಸನದ ಮುಂದೆ ಪ್ರೀತಿಯೂ ನಂಬಿಗಸ್ತಿಕೆಯೂ ಸೇವಕರುಗಳಾಗಿವೆ. 15. ಯೆಹೋವನೇ, ನಿನ್ನ ಸದ್ಭಕ್ತರು ನಿಜವಾಗಿಯೂ ಸಂತೋಷವಾಗಿದ್ದಾರೆ. ಅವರು ನಿನ್ನ ಕರುಣೆಯ ಬೆಳಕಿನಲ್ಲಿ ವಾಸಿಸುತ್ತಿದ್ದಾರೆ. 16. ನಿನ್ನ ಹೆಸರು ಅವರನ್ನು ಯಾವಾಗಲೂ ಸಂತೋಷಗೊಳಿಸುತ್ತದೆ. ಅವರು ನಿನ್ನ ನೀತಿಯನ್ನು ಸ್ತುತಿಸುವರು. 17. ನೀನೇ ಅವರ ಅದ್ಭುತ ಶಕ್ತಿಯಾಗಿರುವೆ. ಅವರ ಶಕ್ತಿಯು ನಿನ್ನಿಂದಲೇ ಬರುತ್ತದೆ. 18. ಯೆಹೋವನೇ, ನೀನೇ ನಮ್ಮ ಸಂರಕ್ಷಕನು. ಇಸ್ರೇಲಿನ ಪರಿಶುದ್ಧನೇ ನಮ್ಮ ರಾಜನು. 19. ನೀನು ನಿನ್ನ ಸದ್ಭಕ್ತರೊಂದಿಗೆ ದರ್ಶನದಲ್ಲಿ ಮಾತಾಡಿದ್ದೇನೆಂದರೆ: “ಯುದ್ಧವೀರನೊಬ್ಬನಿಗೆ ಬಲವನ್ನು ಅನುಗ್ರಹಿಸಿದೆ. ಜನಸಮೂಹದಿಂದ ಒಬ್ಬ ಯೌವನಸ್ಥನನ್ನು ಆರಿಸಿಕೊಂಡು ಗಣ್ಯವ್ಯಕ್ತಿಯನ್ನಾಗಿ ಮಾಡಿದೆ. 20. ನನ್ನ ಸೇವಕನಾದ ದಾವೀದನನ್ನು ಕಂಡುಕೊಂಡೆ. ನನ್ನ ವಿಶೇಷವಾದ ಎಣ್ಣೆಯಿಂದ ಅವನನ್ನು ಅಭಿಷೇಕಿಸಿದೆ. 21. ನನ್ನ ಬಲಗೈಯಿಂದ ದಾವೀದನಿಗೆ ಬೆಂಬಲ ನೀಡಿದೆ, ನನ್ನ ಶಕ್ತಿಯಿಂದ ಅವನನ್ನು ಬಲಗೊಳಿಸಿದೆ. 22. ನಾನು ಆರಿಸಿಕೊಂಡ ರಾಜನನ್ನು ಸೋಲಿಸಲು ಶತ್ರುವಿಗೆ ಆಗಲಿಲ್ಲ. ಅವನನ್ನು ಸೋಲಿಸಲು ದುಷ್ಟಜನರಿಗೆ ಆಗಲಿಲ್ಲ. 23. ನಾನು ಅವನ ಶತ್ರುಗಳನ್ನು ಮುಗಿಸಿದೆನು. ನಾನು ಆರಿಸಿಕೊಂಡ ರಾಜನ ಮೇಲೆ ದ್ವೇಷಕಾರಿದ ಜನರನ್ನು ಸೋಲಿಸಿದೆನು. 24. ನಾನು ಆರಿಸಿಕೊಂಡ ರಾಜನನ್ನು ಯಾವಾಗಲೂ ಪ್ರೀತಿಸುವೆನು; ಅವನಿಗೆ ಬೆಂಬಲ ನೀಡುವೆನು. ನಾನು ಅವನನ್ನು ಯಾವಾಗಲೂ ಬಲಗೊಳಿಸುವೆನು. 25. ನಾನು ಆರಿಸಿಕೊಂಡ ರಾಜನನ್ನು ಸಮುದ್ರದ ಮೇಲೆ ಅಧಿಕಾರಿಯನ್ನಾಗಿ ನೇಮಿಸುವೆನು. ಅವನು ನದಿಗಳನ್ನು ಹತೋಟಿಯಲ್ಲಿಡುವನು. 26. ಅವನು ನನಗೆ, ‘ನೀನೇ ನನ್ನ ತಂದೆ; ನೀನೇ ನನ್ನ ದೇವರು. ನೀನೇ ನನ್ನ ಬಂಡೆ; ನೀನೇ ನನ್ನ ರಕ್ಷಕ’ ಎಂದು ಹೇಳುವನು. 27. ನಾನು ಅವನನ್ನು ನನ್ನ ಚೊಚ್ಚಲು ಮಗನನ್ನಾಗಿ ಮಾಡುವೆನು. ಅವನು ಭೂಲೋಕದಲ್ಲಿ ಮಹಾರಾಜನಾಗಿರುವನು. 28. ನಾನು ಆರಿಸಿಕೊಂಡ ರಾಜನನ್ನು ನನ್ನ ಪ್ರೀತಿಯು ಸದಾಕಾಲ ಸಂರಕ್ಷಿಸುವುದು. ನಾನು ಅವನೊಂದಿಗೆ ಮಾಡಿಕೊಂಡಿರುವ ಒಡಂಬಡಿಕೆಯು ಎಂದಿಗೂ ಕೊನೆಯಾಗದು. 29. ಅವನ ಕುಟುಂಬವು ಶಾಶ್ವತವಾಗಿರುವುದು. ಅವನ ರಾಜ್ಯವು ಆಕಾಶಗಳಿರುವವರೆಗೂ ಇರುವುದು. 30. ಅವನ ಸಂತತಿಯವರು ನನ್ನ ಧರ್ಮಶಾಸ್ತ್ರವನ್ನು ತೊರೆದುಬಿಟ್ಟು ನನ್ನ ಆಜ್ಞೆಗಳಿಗೆ ಅವಿಧೇಯರಾದರೆ ಅವರನ್ನು ಶಿಕ್ಷಿಸುವೆನು. 31. ನಾನು ಆರಿಸಿಕೊಂಡ ರಾಜನ ಸಂತತಿಯವರು ನನ್ನ ಕಟ್ಟಳೆಗಳನ್ನು ಉಲ್ಲಂಘಿಸಿ ನನ್ನ ಆಜ್ಞೆಗಳನ್ನು ಅಲಕ್ಷಿಸಿದರೆ, 32. ನಾನು ಅವರನ್ನು ಅವರ ದ್ರೋಹಕ್ಕಾಗಿ ಬಹು ಕಠಿಣವಾಗಿ ಶಿಕ್ಷಿಸುವೆನು. ಅವರ ಅಪರಾಧಕ್ಕಾಗಿ ಬೆತ್ತದಿಂದ ಹೊಡೆಯುವೆನು. 33. ಆದರೆ ಅವರ ಮೇಲೆ ನನಗಿರುವ ಪ್ರೀತಿಯು ಎಂದಿಗೂ ನಿಂತುಹೋಗುವುದಿಲ್ಲ. ನಾನು ಅವರಿಗೆ ಯಾವಾಗಲೂ ನಂಬಿಗಸ್ತನಾಗಿರುವೆನು. 34. ನಾನು ದಾವೀದನೊಂದಿಗೆ ಮಾಡಿಕೊಂಡಿರುವ ಒಡಂಬಡಿಕೆಯನ್ನು ಮುರಿದುಹಾಕುವುದೂ ಇಲ್ಲ, ಬದಲಾಯಿಸುವುದೂ ಇಲ್ಲ. 35. ನನ್ನ ಪವಿತ್ರತ್ವದ ಮೇಲೆ ಆಣೆಯಿಟ್ಟು ದಾವೀದನಿಗೆ ವಿಶೇಷವಾದ ವಾಗ್ದಾನವನ್ನು ಮಾಡಿದೆನು. ನಾನು ದಾವೀದನಿಗೆ ಸುಳ್ಳುಗಾರನಾಗುವುದಿಲ್ಲ. 36. ದಾವೀದನ ಕುಟುಂಬವು ಶಾಶ್ವತವಾಗಿರುವುದು. ಅವನ ರಾಜ್ಯವು ಸೂರ್ಯನು ಇರುವವರೆಗೂ ಇರುವುದು. 37. ಅದು ಚಂದ್ರನಂತೆ ಶಾಶ್ವತವಾಗಿರುವುದು. ಈ ಒಪ್ಪಂದಕ್ಕೆ ಆಕಾಶವೇ ಸಾಕ್ಷಿ. ಈ ಒಪ್ಪಂದವು ನಂಬಿಕೆಗೆ ಯೋಗ್ಯವಾಗಿದೆ.” 38. ಆದರೆ ನೀನು ಅಭಿಷೇಕಿಸಿದ ರಾಜನ ಮೇಲೆ ನೀನು ಕೋಪಗೊಂಡಿದ್ದರಿಂದಲೇ ಅವನನ್ನು ಒಬ್ಬಂಟಿಗನನ್ನಾಗಿ ಬಿಟ್ಟುಬಿಟ್ಟೆ. 39. ನೀನು ನಿನ್ನ ಒಡಂಬಡಿಕೆಯನ್ನು ತಿರಸ್ಕರಿಸಿ ಅವನ ಕಿರೀಟವನ್ನು ನೆಲದ ಮೇಲೆ ಎಸೆದುಬಿಟ್ಟೆ. 40. ಅವನ ಪಟ್ಟಣದ ಗೋಡೆಗಳನ್ನು ಕೆಡವಿಹಾಕಿದೆ; ಅವನ ರಕ್ಷಣಾದುರ್ಗಗಳನ್ನೆಲ್ಲಾ ನಾಶಮಾಡಿದೆ. 41. ಅವನ ನೆರೆಹೊರೆಯವರು ಅವನನ್ನು ನೋಡಿ ನಗುವರು. ದಾರಿಯಲ್ಲಿ ಹಾದುಹೋಗುವವರು ಅವನಿಂದ ವಸ್ತುಗಳನ್ನು ಕದ್ದುಕೊಳ್ಳುವರು. 42. ಅವನ ಶತ್ರುಗಳಿಗೆಲ್ಲಾ ನೀನು ಸಂತೋಷವನ್ನುಂಟು ಮಾಡಿರುವೆ. ಅವನ ಶತ್ರುಗಳಿಗೆ ಯುದ್ಧದಲ್ಲಿ ಜಯವಾಗುವಂತೆ ಮಾಡಿರುವೆ. 43. ತಮ್ಮನ್ನು ರಕ್ಷಿಸಿಕೊಳ್ಳಲು ನೀನು ಅವರಿಗೆ ಸಹಾಯ ಮಾಡಿದೆ. ನಿನ್ನ ರಾಜನಿಗಾದರೋ ಯುದ್ಧದಲ್ಲಿ ಗೆಲ್ಲಲು ಸಹಾಯಮಾಡಲಿಲ್ಲ. 44. ನೀನು ಅವನ ತೇಜಸ್ಸನ್ನು ತಡೆದುಬಿಟ್ಟಿದ್ದಿ; ನೀನು ಅವನ ಸಿಂಹಾಸನವನ್ನು ನೆಲಕ್ಕೆ ಉರುಳಿಸಿಬಿಟ್ಟೆ. 45. ನೀನು ಅವನ ಜೀವಿತವನ್ನು ಮೊಟಕುಗೊಳಿಸಿ ಅವನಿಗೆ ಅವಮಾನ ಮಾಡಿದೆ. 46. ಯೆಹೋವನೇ, ಇನ್ನೆಷ್ಟರವರೆಗೆ ನೀನು ನಮಗೆ ಮರೆಯಾಗಿರುವೆ? ನಿನ್ನ ಕೋಪಾಗ್ನಿಯು ನಮ್ಮ ಮೇಲೆ ಶಾಶ್ವತವಾಗಿ ಉರಿಯುವುದೋ? 47. ನಮ್ಮ ಜೀವಿತಕಾಲ ಸ್ವಲ್ಪವೆಂಬುದನ್ನು ಜ್ಞಾಪಿಸಿಕೊ. ನಾವು ಸ್ವಲ್ಪಕಾಲ ಬದುಕಿ ಸಾಯುವುದಕ್ಕಾಗಿಯೇ ನೀನು ನಮ್ಮನ್ನು ಸೃಷ್ಟಿಸಿದೆ. 48. ಮರಣ ಹೊಂದದೆ ಚಿರಂಜೀವಿಯಾಗಿರುವವನು ಯಾರೂ ಇಲ್ಲ. ಯಾವ ವ್ಯಕ್ತಿಯೂ ಸಮಾಧಿಯಿಂದ ತಪ್ಪಿಸಿಕೊಳ್ಳಲಾರನು. 49. ಯೆಹೋವನೇ, ಹಿಂದಿನಕಾಲದಲ್ಲಿ ನೀನು ತೋರಿದ ಪ್ರೀತಿ ಎಲ್ಲಿ ಹೋಯಿತು? ದಾವೀದ ಕುಟುಂಬಕ್ಕೆ ನಂಬಿಗಸ್ತನಾಗಿರುತ್ತೇನೆಂದು ನೀನು ವಾಗ್ದಾನ ಮಾಡಿದೆಯಲ್ಲಾ! 50. (50-51) ಯೆಹೋವನೇ ನಿನ್ನ ಸೇವಕನಿಗೆ ಜನರು ಮಾಡಿದ ಅವಮಾನವನ್ನು ದಯವಿಟ್ಟು ಜ್ಞಾಪಿಸಿಕೊ. ಯೆಹೋವನೇ, ನಿನ್ನ ಶತ್ರುಗಳಿಂದ ಅವಮಾನಕರವಾದ ಮಾತುಗಳನ್ನು ನಾನು ಕೇಳಬೇಕಾಯಿತು. ನೀನು ಅಭಿಷೇಕಿಸಿದ ರಾಜನನ್ನು ಅವರು ಅವಮಾನ ಮಾಡಿದರು! 51. 52. ಯೆಹೋವನನ್ನು ಎಂದೆಂದಿಗೂ ಕೊಂಡಾಡಿರಿ! ಆಮೆನ್, ಆಮೆನ್!
  • ಕೀರ್ತನೆಗಳು ಅಧ್ಯಾಯ 1  
  • ಕೀರ್ತನೆಗಳು ಅಧ್ಯಾಯ 2  
  • ಕೀರ್ತನೆಗಳು ಅಧ್ಯಾಯ 3  
  • ಕೀರ್ತನೆಗಳು ಅಧ್ಯಾಯ 4  
  • ಕೀರ್ತನೆಗಳು ಅಧ್ಯಾಯ 5  
  • ಕೀರ್ತನೆಗಳು ಅಧ್ಯಾಯ 6  
  • ಕೀರ್ತನೆಗಳು ಅಧ್ಯಾಯ 7  
  • ಕೀರ್ತನೆಗಳು ಅಧ್ಯಾಯ 8  
  • ಕೀರ್ತನೆಗಳು ಅಧ್ಯಾಯ 9  
  • ಕೀರ್ತನೆಗಳು ಅಧ್ಯಾಯ 10  
  • ಕೀರ್ತನೆಗಳು ಅಧ್ಯಾಯ 11  
  • ಕೀರ್ತನೆಗಳು ಅಧ್ಯಾಯ 12  
  • ಕೀರ್ತನೆಗಳು ಅಧ್ಯಾಯ 13  
  • ಕೀರ್ತನೆಗಳು ಅಧ್ಯಾಯ 14  
  • ಕೀರ್ತನೆಗಳು ಅಧ್ಯಾಯ 15  
  • ಕೀರ್ತನೆಗಳು ಅಧ್ಯಾಯ 16  
  • ಕೀರ್ತನೆಗಳು ಅಧ್ಯಾಯ 17  
  • ಕೀರ್ತನೆಗಳು ಅಧ್ಯಾಯ 18  
  • ಕೀರ್ತನೆಗಳು ಅಧ್ಯಾಯ 19  
  • ಕೀರ್ತನೆಗಳು ಅಧ್ಯಾಯ 20  
  • ಕೀರ್ತನೆಗಳು ಅಧ್ಯಾಯ 21  
  • ಕೀರ್ತನೆಗಳು ಅಧ್ಯಾಯ 22  
  • ಕೀರ್ತನೆಗಳು ಅಧ್ಯಾಯ 23  
  • ಕೀರ್ತನೆಗಳು ಅಧ್ಯಾಯ 24  
  • ಕೀರ್ತನೆಗಳು ಅಧ್ಯಾಯ 25  
  • ಕೀರ್ತನೆಗಳು ಅಧ್ಯಾಯ 26  
  • ಕೀರ್ತನೆಗಳು ಅಧ್ಯಾಯ 27  
  • ಕೀರ್ತನೆಗಳು ಅಧ್ಯಾಯ 28  
  • ಕೀರ್ತನೆಗಳು ಅಧ್ಯಾಯ 29  
  • ಕೀರ್ತನೆಗಳು ಅಧ್ಯಾಯ 30  
  • ಕೀರ್ತನೆಗಳು ಅಧ್ಯಾಯ 31  
  • ಕೀರ್ತನೆಗಳು ಅಧ್ಯಾಯ 32  
  • ಕೀರ್ತನೆಗಳು ಅಧ್ಯಾಯ 33  
  • ಕೀರ್ತನೆಗಳು ಅಧ್ಯಾಯ 34  
  • ಕೀರ್ತನೆಗಳು ಅಧ್ಯಾಯ 35  
  • ಕೀರ್ತನೆಗಳು ಅಧ್ಯಾಯ 36  
  • ಕೀರ್ತನೆಗಳು ಅಧ್ಯಾಯ 37  
  • ಕೀರ್ತನೆಗಳು ಅಧ್ಯಾಯ 38  
  • ಕೀರ್ತನೆಗಳು ಅಧ್ಯಾಯ 39  
  • ಕೀರ್ತನೆಗಳು ಅಧ್ಯಾಯ 40  
  • ಕೀರ್ತನೆಗಳು ಅಧ್ಯಾಯ 41  
  • ಕೀರ್ತನೆಗಳು ಅಧ್ಯಾಯ 42  
  • ಕೀರ್ತನೆಗಳು ಅಧ್ಯಾಯ 43  
  • ಕೀರ್ತನೆಗಳು ಅಧ್ಯಾಯ 44  
  • ಕೀರ್ತನೆಗಳು ಅಧ್ಯಾಯ 45  
  • ಕೀರ್ತನೆಗಳು ಅಧ್ಯಾಯ 46  
  • ಕೀರ್ತನೆಗಳು ಅಧ್ಯಾಯ 47  
  • ಕೀರ್ತನೆಗಳು ಅಧ್ಯಾಯ 48  
  • ಕೀರ್ತನೆಗಳು ಅಧ್ಯಾಯ 49  
  • ಕೀರ್ತನೆಗಳು ಅಧ್ಯಾಯ 50  
  • ಕೀರ್ತನೆಗಳು ಅಧ್ಯಾಯ 51  
  • ಕೀರ್ತನೆಗಳು ಅಧ್ಯಾಯ 52  
  • ಕೀರ್ತನೆಗಳು ಅಧ್ಯಾಯ 53  
  • ಕೀರ್ತನೆಗಳು ಅಧ್ಯಾಯ 54  
  • ಕೀರ್ತನೆಗಳು ಅಧ್ಯಾಯ 55  
  • ಕೀರ್ತನೆಗಳು ಅಧ್ಯಾಯ 56  
  • ಕೀರ್ತನೆಗಳು ಅಧ್ಯಾಯ 57  
  • ಕೀರ್ತನೆಗಳು ಅಧ್ಯಾಯ 58  
  • ಕೀರ್ತನೆಗಳು ಅಧ್ಯಾಯ 59  
  • ಕೀರ್ತನೆಗಳು ಅಧ್ಯಾಯ 60  
  • ಕೀರ್ತನೆಗಳು ಅಧ್ಯಾಯ 61  
  • ಕೀರ್ತನೆಗಳು ಅಧ್ಯಾಯ 62  
  • ಕೀರ್ತನೆಗಳು ಅಧ್ಯಾಯ 63  
  • ಕೀರ್ತನೆಗಳು ಅಧ್ಯಾಯ 64  
  • ಕೀರ್ತನೆಗಳು ಅಧ್ಯಾಯ 65  
  • ಕೀರ್ತನೆಗಳು ಅಧ್ಯಾಯ 66  
  • ಕೀರ್ತನೆಗಳು ಅಧ್ಯಾಯ 67  
  • ಕೀರ್ತನೆಗಳು ಅಧ್ಯಾಯ 68  
  • ಕೀರ್ತನೆಗಳು ಅಧ್ಯಾಯ 69  
  • ಕೀರ್ತನೆಗಳು ಅಧ್ಯಾಯ 70  
  • ಕೀರ್ತನೆಗಳು ಅಧ್ಯಾಯ 71  
  • ಕೀರ್ತನೆಗಳು ಅಧ್ಯಾಯ 72  
  • ಕೀರ್ತನೆಗಳು ಅಧ್ಯಾಯ 73  
  • ಕೀರ್ತನೆಗಳು ಅಧ್ಯಾಯ 74  
  • ಕೀರ್ತನೆಗಳು ಅಧ್ಯಾಯ 75  
  • ಕೀರ್ತನೆಗಳು ಅಧ್ಯಾಯ 76  
  • ಕೀರ್ತನೆಗಳು ಅಧ್ಯಾಯ 77  
  • ಕೀರ್ತನೆಗಳು ಅಧ್ಯಾಯ 78  
  • ಕೀರ್ತನೆಗಳು ಅಧ್ಯಾಯ 79  
  • ಕೀರ್ತನೆಗಳು ಅಧ್ಯಾಯ 80  
  • ಕೀರ್ತನೆಗಳು ಅಧ್ಯಾಯ 81  
  • ಕೀರ್ತನೆಗಳು ಅಧ್ಯಾಯ 82  
  • ಕೀರ್ತನೆಗಳು ಅಧ್ಯಾಯ 83  
  • ಕೀರ್ತನೆಗಳು ಅಧ್ಯಾಯ 84  
  • ಕೀರ್ತನೆಗಳು ಅಧ್ಯಾಯ 85  
  • ಕೀರ್ತನೆಗಳು ಅಧ್ಯಾಯ 86  
  • ಕೀರ್ತನೆಗಳು ಅಧ್ಯಾಯ 87  
  • ಕೀರ್ತನೆಗಳು ಅಧ್ಯಾಯ 88  
  • ಕೀರ್ತನೆಗಳು ಅಧ್ಯಾಯ 89  
  • ಕೀರ್ತನೆಗಳು ಅಧ್ಯಾಯ 90  
  • ಕೀರ್ತನೆಗಳು ಅಧ್ಯಾಯ 91  
  • ಕೀರ್ತನೆಗಳು ಅಧ್ಯಾಯ 92  
  • ಕೀರ್ತನೆಗಳು ಅಧ್ಯಾಯ 93  
  • ಕೀರ್ತನೆಗಳು ಅಧ್ಯಾಯ 94  
  • ಕೀರ್ತನೆಗಳು ಅಧ್ಯಾಯ 95  
  • ಕೀರ್ತನೆಗಳು ಅಧ್ಯಾಯ 96  
  • ಕೀರ್ತನೆಗಳು ಅಧ್ಯಾಯ 97  
  • ಕೀರ್ತನೆಗಳು ಅಧ್ಯಾಯ 98  
  • ಕೀರ್ತನೆಗಳು ಅಧ್ಯಾಯ 99  
  • ಕೀರ್ತನೆಗಳು ಅಧ್ಯಾಯ 100  
  • ಕೀರ್ತನೆಗಳು ಅಧ್ಯಾಯ 101  
  • ಕೀರ್ತನೆಗಳು ಅಧ್ಯಾಯ 102  
  • ಕೀರ್ತನೆಗಳು ಅಧ್ಯಾಯ 103  
  • ಕೀರ್ತನೆಗಳು ಅಧ್ಯಾಯ 104  
  • ಕೀರ್ತನೆಗಳು ಅಧ್ಯಾಯ 105  
  • ಕೀರ್ತನೆಗಳು ಅಧ್ಯಾಯ 106  
  • ಕೀರ್ತನೆಗಳು ಅಧ್ಯಾಯ 107  
  • ಕೀರ್ತನೆಗಳು ಅಧ್ಯಾಯ 108  
  • ಕೀರ್ತನೆಗಳು ಅಧ್ಯಾಯ 109  
  • ಕೀರ್ತನೆಗಳು ಅಧ್ಯಾಯ 110  
  • ಕೀರ್ತನೆಗಳು ಅಧ್ಯಾಯ 111  
  • ಕೀರ್ತನೆಗಳು ಅಧ್ಯಾಯ 112  
  • ಕೀರ್ತನೆಗಳು ಅಧ್ಯಾಯ 113  
  • ಕೀರ್ತನೆಗಳು ಅಧ್ಯಾಯ 114  
  • ಕೀರ್ತನೆಗಳು ಅಧ್ಯಾಯ 115  
  • ಕೀರ್ತನೆಗಳು ಅಧ್ಯಾಯ 116  
  • ಕೀರ್ತನೆಗಳು ಅಧ್ಯಾಯ 117  
  • ಕೀರ್ತನೆಗಳು ಅಧ್ಯಾಯ 118  
  • ಕೀರ್ತನೆಗಳು ಅಧ್ಯಾಯ 119  
  • ಕೀರ್ತನೆಗಳು ಅಧ್ಯಾಯ 120  
  • ಕೀರ್ತನೆಗಳು ಅಧ್ಯಾಯ 121  
  • ಕೀರ್ತನೆಗಳು ಅಧ್ಯಾಯ 122  
  • ಕೀರ್ತನೆಗಳು ಅಧ್ಯಾಯ 123  
  • ಕೀರ್ತನೆಗಳು ಅಧ್ಯಾಯ 124  
  • ಕೀರ್ತನೆಗಳು ಅಧ್ಯಾಯ 125  
  • ಕೀರ್ತನೆಗಳು ಅಧ್ಯಾಯ 126  
  • ಕೀರ್ತನೆಗಳು ಅಧ್ಯಾಯ 127  
  • ಕೀರ್ತನೆಗಳು ಅಧ್ಯಾಯ 128  
  • ಕೀರ್ತನೆಗಳು ಅಧ್ಯಾಯ 129  
  • ಕೀರ್ತನೆಗಳು ಅಧ್ಯಾಯ 130  
  • ಕೀರ್ತನೆಗಳು ಅಧ್ಯಾಯ 131  
  • ಕೀರ್ತನೆಗಳು ಅಧ್ಯಾಯ 132  
  • ಕೀರ್ತನೆಗಳು ಅಧ್ಯಾಯ 133  
  • ಕೀರ್ತನೆಗಳು ಅಧ್ಯಾಯ 134  
  • ಕೀರ್ತನೆಗಳು ಅಧ್ಯಾಯ 135  
  • ಕೀರ್ತನೆಗಳು ಅಧ್ಯಾಯ 136  
  • ಕೀರ್ತನೆಗಳು ಅಧ್ಯಾಯ 137  
  • ಕೀರ್ತನೆಗಳು ಅಧ್ಯಾಯ 138  
  • ಕೀರ್ತನೆಗಳು ಅಧ್ಯಾಯ 139  
  • ಕೀರ್ತನೆಗಳು ಅಧ್ಯಾಯ 140  
  • ಕೀರ್ತನೆಗಳು ಅಧ್ಯಾಯ 141  
  • ಕೀರ್ತನೆಗಳು ಅಧ್ಯಾಯ 142  
  • ಕೀರ್ತನೆಗಳು ಅಧ್ಯಾಯ 143  
  • ಕೀರ್ತನೆಗಳು ಅಧ್ಯಾಯ 144  
  • ಕೀರ್ತನೆಗಳು ಅಧ್ಯಾಯ 145  
  • ಕೀರ್ತನೆಗಳು ಅಧ್ಯಾಯ 146  
  • ಕೀರ್ತನೆಗಳು ಅಧ್ಯಾಯ 147  
  • ಕೀರ್ತನೆಗಳು ಅಧ್ಯಾಯ 148  
  • ಕೀರ್ತನೆಗಳು ಅಧ್ಯಾಯ 149  
  • ಕೀರ್ತನೆಗಳು ಅಧ್ಯಾಯ 150  
×

Alert

×

Kannada Letters Keypad References