ಪವಿತ್ರ ಬೈಬಲ್

ಈಸೀ ಟು ರೀಡ್ ವರ್ಷನ್ (ESV)
ಕೀರ್ತನೆಗಳು

ಕೀರ್ತನೆಗಳು ಅಧ್ಯಾಯ 69

1 ದೇವರೇ, ನನ್ನನ್ನು ರಕ್ಷಿಸು! ನನ್ನ ಕತ್ತಿನವರೆಗೂ ನೀರು ಏರಿಬಂದಿದೆ.
2 ನಿಂತುಕೊಳ್ಳಲು ನೆಲೆ ಸಿಕ್ಕುತ್ತಿಲ್ಲ; ಆಳವಾದ ಮರಳಿನೊಳಕ್ಕೆ ಮುಳುಗಿಹೋಗುತ್ತಿದ್ದೇನೆ.
ನಾನು ಆಳವಾದ ನೀರಿನಲ್ಲಿದ್ದೇನೆ. ಅಲೆಗಳು ನನ್ನನ್ನು ಆವರಿಸಿಕೊಳ್ಳುತ್ತಿವೆ.
3 ಸಹಾಯಕ್ಕಾಗಿ ಕೂಗಿಕೂಗಿ ಬಲಹೀನನಾಗಿರುವೆ. ನನ್ನ ಗಂಟಲು ನೋಯುತ್ತಿದೆ.
ನಿನ್ನ ಸಹಾಯಕ್ಕಾಗಿ ಎದುರುನೋಡುತ್ತಾ ನನ್ನ ಕಣ್ಣುಗಳು ನೋಯುತ್ತಿವೆ.
4 ಶತ್ರುಗಳು ನನ್ನ ತಲೆಕೂದಲುಗಳಿಗಿಂತ ಹೆಚ್ಚಾಗಿದ್ದಾರೆ. ಅವರು ನಿಷ್ಕಾರಣವಾಗಿ ನನ್ನನ್ನು ದ್ವೇಷಿಸುತ್ತಾರೆ; ನನ್ನನ್ನು ನಾಶಮಾಡಲು ಬಹು ಪ್ರಯತ್ನ ಮಾಡುತ್ತಿದ್ದಾರೆ.
ನನ್ನ ಶತ್ರಗಳು ನನ್ನ ಬಗ್ಗೆ ಸುಳ್ಳು ಹೇಳುವರು. ನಾನು ಕದ್ದಿಲ್ಲದಿದ್ದರೂ ಸುಳ್ಳು ಅಪವಾದ ಹೊರಿಸಿ ನನ್ನಿಂದ ದಂಡ ವಸೂಲಿ ಮಾಡಿದರು.
5 ದೇವರೇ, ನಾನೇನೂ ತಪ್ಪುಮಾಡಿಲ್ಲವೆಂದು ನಿನಗೆ ಗೊತ್ತಿದೆ. ನನ್ನ ಪಾಪಗಳನ್ನು ನಿನಗೆ ಮರೆಮಾಡಲು ನನ್ನಿಂದಾಗದು.
6 ಸೇನಾಧೀಶ್ವರನಾದ ನನ್ನ ಯೆಹೋವನೇ, ನಿನ್ನ ಹಿಂಬಾಲಕರಿಗೆ ನನ್ನಿಂದ ನಾಚಿಕೆಯಾಗದಿರಲಿ. ಇಸ್ರೇಲರ ದೇವರೇ, ನಿನ್ನ ಆರಾಧಕರಿಗೆ ನನ್ನಿಂದ ಅವಮಾನವಾಗದಿರಲಿ.
7 ನಾಚಿಕೆಯು ನನ್ನ ಮುಖವನ್ನು ಕವಿದಿದೆ. ನಿನಗೋಸ್ಕರವಾಗಿ ಈ ನಾಚಿಕೆಯನ್ನು ಹೊತ್ತುಕೊಂಡಿದ್ದೇನೆ.
8 ನನ್ನ ಸಹೋದರರು ನನ್ನನ್ನು ಅಪರಿಚಿತನಂತೆ ಕಾಣುತ್ತಾರೆ. ನನ್ನ ತಾಯಿಯ ಪುತ್ರರು ನನ್ನನ್ನು ಪರಕೀಯನಂತೆ ಕಾಣುತ್ತಾರೆ.
9 ನಿನ್ನ ಆಲಯಾಭಿಮಾನವು ನನ್ನನ್ನು ದಹಿಸುತ್ತಿದೆ. ನಿನ್ನನ್ನು ಗೇಲಿಮಾಡುವ ಜನರಿಂದ ನನಗೆ ಅಪಮಾನವಾಗುತ್ತಿದೆ.
10 ನಾನು ಅಳುತ್ತಾ ಉಪವಾಸಮಾಡುವೆನು. ಅವರು ಅದಕ್ಕೂ ನನ್ನನ್ನು ಗೇಲಿಮಾಡುವರು.
11 ನಾನು ಶೋಕವಸ್ತ್ರವನ್ನು ಧರಿಸಿಕೊಂಡದ್ದು ಗಾದೆಯ ಮಾತಾಯಿತು.
12 ಅವರು ನನ್ನ ಬಗ್ಗೆ ಬಹಿರಂಗ ಸ್ಥಳಗಳಲ್ಲಿ ಮಾತಾಡುವರು. ಕುಡುಕರು ನನ್ನ ವಿಷಯದಲ್ಲಿ ಹಾಡನ್ನು ರಚಿಸುವರು.
13 ಯೆಹೋವನೇ, ನಾನಾದರೋ, ನಿನಗೆ ಮೊರೆಯಿಟ್ಟಿದ್ದೇನೆ; ನಿನ್ನ ಕೃಪೆಗೆ ತಕ್ಕಕಾಲ ಇದೇ.
ದೇವರೇ, ನಿನ್ನ ಮಹಾಪ್ರೀತಿಯಿಂದಲೂ ನಿಶ್ಚಿತವಾದ ರಕ್ಷಣೆಯಿಂದಲೂ ನನಗೆ ಉತ್ತರಿಸು.
14 ನನ್ನನ್ನು ಕಳ್ಳುಸುಬಿನಿಂದ ಮೇಲೆತ್ತು; ಮುಳುಗಿಹೋಗಲು ಬಿಡಬೇಡ.
ನನ್ನನ್ನು ದ್ವೇಷಿಸುವ ಜನರಿಂದ ನನ್ನನ್ನು ರಕ್ಷಿಸು. ಈ ಆಳವಾದ ನೀರಿನಿಂದ ನನ್ನನ್ನು ರಕ್ಷಿಸು.
15 ಅಲೆಗಳು ನನ್ನನ್ನು ಮುಳುಗಿಸಲು ಬಿಡಬೇಡ. ಆಳವಾದ ಹಳ್ಳವು ನನ್ನನ್ನು ಎಳೆದುಕೊಳ್ಳಲು ಬಿಡಬೇಡ. ಸಮಾಧಿಯು ನನ್ನನ್ನು ನುಂಗಲು ಬಿಡಬೇಡ.
16 ಯೆಹೋವನೇ, ನಿನ್ನ ಪ್ರೀತಿ ಎಷ್ಟೋ ಒಳ್ಳೆಯದು. ನಿನ್ನ ಪೂರ್ಣಪ್ರೀತಿಯಿಂದ ನನಗೆ ಉತ್ತರಿಸು. ನಿನ್ನ ಪೂರ್ಣ ಕರುಣೆಯಿಂದ ನನ್ನ ಕಡೆಗೆ ತಿರುಗಿ ಸಹಾಯಮಾಡು.
17 ನಿನ್ನ ಸೇವಕನಿಗೆ ವಿಮುಖನಾಗಬೇಡ. ನಾನು ಆಪತ್ತಿನಲ್ಲಿದ್ದೇನೆ! ಬೇಗನೆ ನನಗೆ ಸಹಾಯಮಾಡು!
18 ಬಂದು ನನ್ನ ಪ್ರಾಣವನ್ನು ರಕ್ಷಿಸು. ನನ್ನ ಶತ್ರುಗಳಿಂದ ನನ್ನನ್ನು ವಿಮೋಚಿಸು.
19 ನನ್ನ ನಾಚಿಕೆ ನಿನಗೆ ಗೊತ್ತಿದೆ. ಶತ್ರುಗಳು ನನಗೆ ಮಾಡಿದ ಅವಮಾನ ನಿನಗೆ ಗೊತ್ತಿದೆ. ಅವರು ಮಾಡಿದ್ದನ್ನೆಲ್ಲಾ ನೀನು ಕಣ್ಣಾರೆ ನೋಡಿರುವೆ.
20 ಅವಮಾನವು ನನ್ನನ್ನು ಜಜ್ಜಿಹಾಕಿದೆ! ನಾನು ನಾಚಿಕೆಯಿಂದ ಸಾಯುವಂತಿದ್ದೇನೆ.
ಕರುಣಾಳುಗಳನ್ನು ನಿರೀಕ್ಷಿಸಿದೆ, ಆದರೆ ಯಾರೂ ದೊರೆಯಲಿಲ್ಲ.
ಸಂತೈಸುವವರನ್ನು ಹಾರೈಸಿದೆ, ಆದರೆ ಯಾರೂ ಸಿಗಲಿಲ್ಲ.
21 ಅವರು ನನಗೆ ಕೊಟ್ಟದ್ದು ವಿಷ, ಆಹಾರವಲ್ಲ. ಅವರು ನನಗೆ ಕೊಟ್ಟದ್ದು ಹುಳಿರಸ, ದ್ರಾಕ್ಷಾರಸವಲ್ಲ.
22 ಅವರ ಮೇಜಿನ ಮೇಲಿರುವ ಆಹಾರ, ಪಾನೀಯಗಳು ಅವರಿಗೆ ವಿಷವಾಗಲಿ.
23 ಅವರು ಕುರುಡರಾಗಲಿ; ಅವರ ಬೆನ್ನುಗಳು ಗೂನಾಗಲಿ.
24 ನಿನ್ನ ಕೋಪವನ್ನೆಲ್ಲಾ ಅವರು ಅನುಭವಿಸಲಿ.
25 ಅವರ ಮನೆಗಳು ಬರಿದಾಗಲಿ; ಅವುಗಳಲ್ಲಿ ಯಾರೂ ವಾಸಿಸದಂತಾಗಲಿ.
26 ಅವರನ್ನು ದಂಡಿಸು. ಆಗ ಅವರು ಓಡಿಹೋಗುವರು. ಅಲ್ಲದೆ ಅವರಿಗಾದ ನೋವುಗಳು, ಗಾಯಗಳು ಅವರ ಆಡಿಕೆಗೆ ಕಾರಣವಾಗುವವು.
27 ಅವರ ದುಷ್ಕೃತ್ಯಗಳಿಗಾಗಿ ಅವರನ್ನು ದಂಡಿಸು. ನಿನ್ನ ರಕ್ಷಣೆಯಲ್ಲಿ ಅವರಿಗೆ ಪಾಲುಕೊಡಬೇಡ.
28 ಜೀವಬಾಧ್ಯರ ಪುಸ್ತಕದಿಂದ ಅವರ ಹೆಸರುಗಳನ್ನು ಅಳಿಸಿಬಿಡು. ನೀತಿವಂತರ ಹೆಸರುಗಳೊಂದಿಗೆ ಅವರು ಹೆಸರುಗಳನ್ನು ಜೀವಬಾಧ್ಯರ ಪುಸ್ತಕದಲ್ಲಿ ಬರೆಯಬೇಡ.
29 ನಾನು ನೋವಿನಿಂದ ದುಃಖಗೊಂಡಿರುವೆ. ದೇವರೇ, ನನ್ನನ್ನು ಮೇಲೆತ್ತಿ ರಕ್ಷಿಸು!
30 ನಾನು ದೇವರ ಹೆಸರನ್ನು ಹಾಡಿಕೊಂಡಾಡುವೆನು; ಕೃತಜ್ಞತಾಗೀತೆಯೊಂದಿಗೆ ಆತನನ್ನು ಸ್ತುತಿಸುವೆನು.
31 ಇದು ಯೆಹೋವನಿಗೆ ಹೋರಿಗಳ ಸರ್ವಾಂಗಹೋಮಕ್ಕಿಂತಲೂ ಬಹು ಪ್ರಿಯವಾದದ್ದು.
32 ದೇವರನ್ನು ಆರಾಧಿಸಲು ಬಂದ ಬಡವರೇ, ಇದನ್ನು ಕೇಳಿ ಹರ್ಷಿಸಿರಿ.
33 ಯೆಹೋವನು ಬಡವರಿಗೂ ನಿಸ್ಸಹಾಯಕರಿಗೂ ಕಿವಿಗೊಡುತ್ತಾನೆ. ಸೆರೆಯಲ್ಲಿರುವ ತನ್ನ ಜನರನ್ನು ಸಹ ಕಡೆಗಣಿಸುವುದಿಲ್ಲ.
34 ಭೂಮ್ಯಾಕಾಶಗಳೇ, ಸಮುದ್ರವೇ, ಸಮುದ್ರದಲ್ಲಿರುವ ಸಮಸ್ತವೇ, ಯೆಹೋವನನ್ನು ಸ್ತುತಿಸಿರಿ!
35 ಯೆಹೋವನು ಚೀಯೋನನ್ನು ರಕ್ಷಿಸುವನು! ಆತನು ಯೆಹೂದದ ಪಟ್ಟಣಗಳನ್ನು ಮತ್ತೆ ಕಟ್ಟುವನು.
ಆತನ ಜನರು ಅಲ್ಲಿ ವಾಸವಾಗಿದ್ದು ಸ್ವದೇಶವಾಗಿ ಮಾಡಿಕೊಳ್ಳುವರು!
36 ಆತನ ಸೇವಕರ ಸಂತತಿಗಳವರು ಆ ದೇಶವನ್ನು ಪಡೆದುಕೊಳ್ಳುವರು. ಆತನ ಹೆಸರನ್ನು ಪ್ರೀತಿಸುವ ಜನರು ಅಲ್ಲಿ ವಾಸಿಸುವರು.
1. ದೇವರೇ, ನನ್ನನ್ನು ರಕ್ಷಿಸು! ನನ್ನ ಕತ್ತಿನವರೆಗೂ ನೀರು ಏರಿಬಂದಿದೆ. 2. ನಿಂತುಕೊಳ್ಳಲು ನೆಲೆ ಸಿಕ್ಕುತ್ತಿಲ್ಲ; ಆಳವಾದ ಮರಳಿನೊಳಕ್ಕೆ ಮುಳುಗಿಹೋಗುತ್ತಿದ್ದೇನೆ. ನಾನು ಆಳವಾದ ನೀರಿನಲ್ಲಿದ್ದೇನೆ. ಅಲೆಗಳು ನನ್ನನ್ನು ಆವರಿಸಿಕೊಳ್ಳುತ್ತಿವೆ. 3. ಸಹಾಯಕ್ಕಾಗಿ ಕೂಗಿಕೂಗಿ ಬಲಹೀನನಾಗಿರುವೆ. ನನ್ನ ಗಂಟಲು ನೋಯುತ್ತಿದೆ. ನಿನ್ನ ಸಹಾಯಕ್ಕಾಗಿ ಎದುರುನೋಡುತ್ತಾ ನನ್ನ ಕಣ್ಣುಗಳು ನೋಯುತ್ತಿವೆ. 4. ಶತ್ರುಗಳು ನನ್ನ ತಲೆಕೂದಲುಗಳಿಗಿಂತ ಹೆಚ್ಚಾಗಿದ್ದಾರೆ. ಅವರು ನಿಷ್ಕಾರಣವಾಗಿ ನನ್ನನ್ನು ದ್ವೇಷಿಸುತ್ತಾರೆ; ನನ್ನನ್ನು ನಾಶಮಾಡಲು ಬಹು ಪ್ರಯತ್ನ ಮಾಡುತ್ತಿದ್ದಾರೆ. ನನ್ನ ಶತ್ರಗಳು ನನ್ನ ಬಗ್ಗೆ ಸುಳ್ಳು ಹೇಳುವರು. ನಾನು ಕದ್ದಿಲ್ಲದಿದ್ದರೂ ಸುಳ್ಳು ಅಪವಾದ ಹೊರಿಸಿ ನನ್ನಿಂದ ದಂಡ ವಸೂಲಿ ಮಾಡಿದರು. 5. ದೇವರೇ, ನಾನೇನೂ ತಪ್ಪುಮಾಡಿಲ್ಲವೆಂದು ನಿನಗೆ ಗೊತ್ತಿದೆ. ನನ್ನ ಪಾಪಗಳನ್ನು ನಿನಗೆ ಮರೆಮಾಡಲು ನನ್ನಿಂದಾಗದು. 6. ಸೇನಾಧೀಶ್ವರನಾದ ನನ್ನ ಯೆಹೋವನೇ, ನಿನ್ನ ಹಿಂಬಾಲಕರಿಗೆ ನನ್ನಿಂದ ನಾಚಿಕೆಯಾಗದಿರಲಿ. ಇಸ್ರೇಲರ ದೇವರೇ, ನಿನ್ನ ಆರಾಧಕರಿಗೆ ನನ್ನಿಂದ ಅವಮಾನವಾಗದಿರಲಿ. 7. ನಾಚಿಕೆಯು ನನ್ನ ಮುಖವನ್ನು ಕವಿದಿದೆ. ನಿನಗೋಸ್ಕರವಾಗಿ ಈ ನಾಚಿಕೆಯನ್ನು ಹೊತ್ತುಕೊಂಡಿದ್ದೇನೆ. 8. ನನ್ನ ಸಹೋದರರು ನನ್ನನ್ನು ಅಪರಿಚಿತನಂತೆ ಕಾಣುತ್ತಾರೆ. ನನ್ನ ತಾಯಿಯ ಪುತ್ರರು ನನ್ನನ್ನು ಪರಕೀಯನಂತೆ ಕಾಣುತ್ತಾರೆ. 9. ನಿನ್ನ ಆಲಯಾಭಿಮಾನವು ನನ್ನನ್ನು ದಹಿಸುತ್ತಿದೆ. ನಿನ್ನನ್ನು ಗೇಲಿಮಾಡುವ ಜನರಿಂದ ನನಗೆ ಅಪಮಾನವಾಗುತ್ತಿದೆ. 10. ನಾನು ಅಳುತ್ತಾ ಉಪವಾಸಮಾಡುವೆನು. ಅವರು ಅದಕ್ಕೂ ನನ್ನನ್ನು ಗೇಲಿಮಾಡುವರು. 11. ನಾನು ಶೋಕವಸ್ತ್ರವನ್ನು ಧರಿಸಿಕೊಂಡದ್ದು ಗಾದೆಯ ಮಾತಾಯಿತು. 12. ಅವರು ನನ್ನ ಬಗ್ಗೆ ಬಹಿರಂಗ ಸ್ಥಳಗಳಲ್ಲಿ ಮಾತಾಡುವರು. ಕುಡುಕರು ನನ್ನ ವಿಷಯದಲ್ಲಿ ಹಾಡನ್ನು ರಚಿಸುವರು. 13. ಯೆಹೋವನೇ, ನಾನಾದರೋ, ನಿನಗೆ ಮೊರೆಯಿಟ್ಟಿದ್ದೇನೆ; ನಿನ್ನ ಕೃಪೆಗೆ ತಕ್ಕಕಾಲ ಇದೇ. ದೇವರೇ, ನಿನ್ನ ಮಹಾಪ್ರೀತಿಯಿಂದಲೂ ನಿಶ್ಚಿತವಾದ ರಕ್ಷಣೆಯಿಂದಲೂ ನನಗೆ ಉತ್ತರಿಸು. 14. ನನ್ನನ್ನು ಕಳ್ಳುಸುಬಿನಿಂದ ಮೇಲೆತ್ತು; ಮುಳುಗಿಹೋಗಲು ಬಿಡಬೇಡ. ನನ್ನನ್ನು ದ್ವೇಷಿಸುವ ಜನರಿಂದ ನನ್ನನ್ನು ರಕ್ಷಿಸು. ಈ ಆಳವಾದ ನೀರಿನಿಂದ ನನ್ನನ್ನು ರಕ್ಷಿಸು. 15. ಅಲೆಗಳು ನನ್ನನ್ನು ಮುಳುಗಿಸಲು ಬಿಡಬೇಡ. ಆಳವಾದ ಹಳ್ಳವು ನನ್ನನ್ನು ಎಳೆದುಕೊಳ್ಳಲು ಬಿಡಬೇಡ. ಸಮಾಧಿಯು ನನ್ನನ್ನು ನುಂಗಲು ಬಿಡಬೇಡ. 16. ಯೆಹೋವನೇ, ನಿನ್ನ ಪ್ರೀತಿ ಎಷ್ಟೋ ಒಳ್ಳೆಯದು. ನಿನ್ನ ಪೂರ್ಣಪ್ರೀತಿಯಿಂದ ನನಗೆ ಉತ್ತರಿಸು. ನಿನ್ನ ಪೂರ್ಣ ಕರುಣೆಯಿಂದ ನನ್ನ ಕಡೆಗೆ ತಿರುಗಿ ಸಹಾಯಮಾಡು. 17. ನಿನ್ನ ಸೇವಕನಿಗೆ ವಿಮುಖನಾಗಬೇಡ. ನಾನು ಆಪತ್ತಿನಲ್ಲಿದ್ದೇನೆ! ಬೇಗನೆ ನನಗೆ ಸಹಾಯಮಾಡು! 18. ಬಂದು ನನ್ನ ಪ್ರಾಣವನ್ನು ರಕ್ಷಿಸು. ನನ್ನ ಶತ್ರುಗಳಿಂದ ನನ್ನನ್ನು ವಿಮೋಚಿಸು. 19. ನನ್ನ ನಾಚಿಕೆ ನಿನಗೆ ಗೊತ್ತಿದೆ. ಶತ್ರುಗಳು ನನಗೆ ಮಾಡಿದ ಅವಮಾನ ನಿನಗೆ ಗೊತ್ತಿದೆ. ಅವರು ಮಾಡಿದ್ದನ್ನೆಲ್ಲಾ ನೀನು ಕಣ್ಣಾರೆ ನೋಡಿರುವೆ. 20. ಅವಮಾನವು ನನ್ನನ್ನು ಜಜ್ಜಿಹಾಕಿದೆ! ನಾನು ನಾಚಿಕೆಯಿಂದ ಸಾಯುವಂತಿದ್ದೇನೆ. ಕರುಣಾಳುಗಳನ್ನು ನಿರೀಕ್ಷಿಸಿದೆ, ಆದರೆ ಯಾರೂ ದೊರೆಯಲಿಲ್ಲ. ಸಂತೈಸುವವರನ್ನು ಹಾರೈಸಿದೆ, ಆದರೆ ಯಾರೂ ಸಿಗಲಿಲ್ಲ. 21. ಅವರು ನನಗೆ ಕೊಟ್ಟದ್ದು ವಿಷ, ಆಹಾರವಲ್ಲ. ಅವರು ನನಗೆ ಕೊಟ್ಟದ್ದು ಹುಳಿರಸ, ದ್ರಾಕ್ಷಾರಸವಲ್ಲ. 22. ಅವರ ಮೇಜಿನ ಮೇಲಿರುವ ಆಹಾರ, ಪಾನೀಯಗಳು ಅವರಿಗೆ ವಿಷವಾಗಲಿ. 23. ಅವರು ಕುರುಡರಾಗಲಿ; ಅವರ ಬೆನ್ನುಗಳು ಗೂನಾಗಲಿ. 24. ನಿನ್ನ ಕೋಪವನ್ನೆಲ್ಲಾ ಅವರು ಅನುಭವಿಸಲಿ. 25. ಅವರ ಮನೆಗಳು ಬರಿದಾಗಲಿ; ಅವುಗಳಲ್ಲಿ ಯಾರೂ ವಾಸಿಸದಂತಾಗಲಿ. 26. ಅವರನ್ನು ದಂಡಿಸು. ಆಗ ಅವರು ಓಡಿಹೋಗುವರು. ಅಲ್ಲದೆ ಅವರಿಗಾದ ನೋವುಗಳು, ಗಾಯಗಳು ಅವರ ಆಡಿಕೆಗೆ ಕಾರಣವಾಗುವವು. 27. ಅವರ ದುಷ್ಕೃತ್ಯಗಳಿಗಾಗಿ ಅವರನ್ನು ದಂಡಿಸು. ನಿನ್ನ ರಕ್ಷಣೆಯಲ್ಲಿ ಅವರಿಗೆ ಪಾಲುಕೊಡಬೇಡ. 28. ಜೀವಬಾಧ್ಯರ ಪುಸ್ತಕದಿಂದ ಅವರ ಹೆಸರುಗಳನ್ನು ಅಳಿಸಿಬಿಡು. ನೀತಿವಂತರ ಹೆಸರುಗಳೊಂದಿಗೆ ಅವರು ಹೆಸರುಗಳನ್ನು ಜೀವಬಾಧ್ಯರ ಪುಸ್ತಕದಲ್ಲಿ ಬರೆಯಬೇಡ. 29. ನಾನು ನೋವಿನಿಂದ ದುಃಖಗೊಂಡಿರುವೆ. ದೇವರೇ, ನನ್ನನ್ನು ಮೇಲೆತ್ತಿ ರಕ್ಷಿಸು! 30. ನಾನು ದೇವರ ಹೆಸರನ್ನು ಹಾಡಿಕೊಂಡಾಡುವೆನು; ಕೃತಜ್ಞತಾಗೀತೆಯೊಂದಿಗೆ ಆತನನ್ನು ಸ್ತುತಿಸುವೆನು. 31. ಇದು ಯೆಹೋವನಿಗೆ ಹೋರಿಗಳ ಸರ್ವಾಂಗಹೋಮಕ್ಕಿಂತಲೂ ಬಹು ಪ್ರಿಯವಾದದ್ದು. 32. ದೇವರನ್ನು ಆರಾಧಿಸಲು ಬಂದ ಬಡವರೇ, ಇದನ್ನು ಕೇಳಿ ಹರ್ಷಿಸಿರಿ. 33. ಯೆಹೋವನು ಬಡವರಿಗೂ ನಿಸ್ಸಹಾಯಕರಿಗೂ ಕಿವಿಗೊಡುತ್ತಾನೆ. ಸೆರೆಯಲ್ಲಿರುವ ತನ್ನ ಜನರನ್ನು ಸಹ ಕಡೆಗಣಿಸುವುದಿಲ್ಲ. 34. ಭೂಮ್ಯಾಕಾಶಗಳೇ, ಸಮುದ್ರವೇ, ಸಮುದ್ರದಲ್ಲಿರುವ ಸಮಸ್ತವೇ, ಯೆಹೋವನನ್ನು ಸ್ತುತಿಸಿರಿ! 35. ಯೆಹೋವನು ಚೀಯೋನನ್ನು ರಕ್ಷಿಸುವನು! ಆತನು ಯೆಹೂದದ ಪಟ್ಟಣಗಳನ್ನು ಮತ್ತೆ ಕಟ್ಟುವನು. ಆತನ ಜನರು ಅಲ್ಲಿ ವಾಸವಾಗಿದ್ದು ಸ್ವದೇಶವಾಗಿ ಮಾಡಿಕೊಳ್ಳುವರು! 36. ಆತನ ಸೇವಕರ ಸಂತತಿಗಳವರು ಆ ದೇಶವನ್ನು ಪಡೆದುಕೊಳ್ಳುವರು. ಆತನ ಹೆಸರನ್ನು ಪ್ರೀತಿಸುವ ಜನರು ಅಲ್ಲಿ ವಾಸಿಸುವರು.
  • ಕೀರ್ತನೆಗಳು ಅಧ್ಯಾಯ 1  
  • ಕೀರ್ತನೆಗಳು ಅಧ್ಯಾಯ 2  
  • ಕೀರ್ತನೆಗಳು ಅಧ್ಯಾಯ 3  
  • ಕೀರ್ತನೆಗಳು ಅಧ್ಯಾಯ 4  
  • ಕೀರ್ತನೆಗಳು ಅಧ್ಯಾಯ 5  
  • ಕೀರ್ತನೆಗಳು ಅಧ್ಯಾಯ 6  
  • ಕೀರ್ತನೆಗಳು ಅಧ್ಯಾಯ 7  
  • ಕೀರ್ತನೆಗಳು ಅಧ್ಯಾಯ 8  
  • ಕೀರ್ತನೆಗಳು ಅಧ್ಯಾಯ 9  
  • ಕೀರ್ತನೆಗಳು ಅಧ್ಯಾಯ 10  
  • ಕೀರ್ತನೆಗಳು ಅಧ್ಯಾಯ 11  
  • ಕೀರ್ತನೆಗಳು ಅಧ್ಯಾಯ 12  
  • ಕೀರ್ತನೆಗಳು ಅಧ್ಯಾಯ 13  
  • ಕೀರ್ತನೆಗಳು ಅಧ್ಯಾಯ 14  
  • ಕೀರ್ತನೆಗಳು ಅಧ್ಯಾಯ 15  
  • ಕೀರ್ತನೆಗಳು ಅಧ್ಯಾಯ 16  
  • ಕೀರ್ತನೆಗಳು ಅಧ್ಯಾಯ 17  
  • ಕೀರ್ತನೆಗಳು ಅಧ್ಯಾಯ 18  
  • ಕೀರ್ತನೆಗಳು ಅಧ್ಯಾಯ 19  
  • ಕೀರ್ತನೆಗಳು ಅಧ್ಯಾಯ 20  
  • ಕೀರ್ತನೆಗಳು ಅಧ್ಯಾಯ 21  
  • ಕೀರ್ತನೆಗಳು ಅಧ್ಯಾಯ 22  
  • ಕೀರ್ತನೆಗಳು ಅಧ್ಯಾಯ 23  
  • ಕೀರ್ತನೆಗಳು ಅಧ್ಯಾಯ 24  
  • ಕೀರ್ತನೆಗಳು ಅಧ್ಯಾಯ 25  
  • ಕೀರ್ತನೆಗಳು ಅಧ್ಯಾಯ 26  
  • ಕೀರ್ತನೆಗಳು ಅಧ್ಯಾಯ 27  
  • ಕೀರ್ತನೆಗಳು ಅಧ್ಯಾಯ 28  
  • ಕೀರ್ತನೆಗಳು ಅಧ್ಯಾಯ 29  
  • ಕೀರ್ತನೆಗಳು ಅಧ್ಯಾಯ 30  
  • ಕೀರ್ತನೆಗಳು ಅಧ್ಯಾಯ 31  
  • ಕೀರ್ತನೆಗಳು ಅಧ್ಯಾಯ 32  
  • ಕೀರ್ತನೆಗಳು ಅಧ್ಯಾಯ 33  
  • ಕೀರ್ತನೆಗಳು ಅಧ್ಯಾಯ 34  
  • ಕೀರ್ತನೆಗಳು ಅಧ್ಯಾಯ 35  
  • ಕೀರ್ತನೆಗಳು ಅಧ್ಯಾಯ 36  
  • ಕೀರ್ತನೆಗಳು ಅಧ್ಯಾಯ 37  
  • ಕೀರ್ತನೆಗಳು ಅಧ್ಯಾಯ 38  
  • ಕೀರ್ತನೆಗಳು ಅಧ್ಯಾಯ 39  
  • ಕೀರ್ತನೆಗಳು ಅಧ್ಯಾಯ 40  
  • ಕೀರ್ತನೆಗಳು ಅಧ್ಯಾಯ 41  
  • ಕೀರ್ತನೆಗಳು ಅಧ್ಯಾಯ 42  
  • ಕೀರ್ತನೆಗಳು ಅಧ್ಯಾಯ 43  
  • ಕೀರ್ತನೆಗಳು ಅಧ್ಯಾಯ 44  
  • ಕೀರ್ತನೆಗಳು ಅಧ್ಯಾಯ 45  
  • ಕೀರ್ತನೆಗಳು ಅಧ್ಯಾಯ 46  
  • ಕೀರ್ತನೆಗಳು ಅಧ್ಯಾಯ 47  
  • ಕೀರ್ತನೆಗಳು ಅಧ್ಯಾಯ 48  
  • ಕೀರ್ತನೆಗಳು ಅಧ್ಯಾಯ 49  
  • ಕೀರ್ತನೆಗಳು ಅಧ್ಯಾಯ 50  
  • ಕೀರ್ತನೆಗಳು ಅಧ್ಯಾಯ 51  
  • ಕೀರ್ತನೆಗಳು ಅಧ್ಯಾಯ 52  
  • ಕೀರ್ತನೆಗಳು ಅಧ್ಯಾಯ 53  
  • ಕೀರ್ತನೆಗಳು ಅಧ್ಯಾಯ 54  
  • ಕೀರ್ತನೆಗಳು ಅಧ್ಯಾಯ 55  
  • ಕೀರ್ತನೆಗಳು ಅಧ್ಯಾಯ 56  
  • ಕೀರ್ತನೆಗಳು ಅಧ್ಯಾಯ 57  
  • ಕೀರ್ತನೆಗಳು ಅಧ್ಯಾಯ 58  
  • ಕೀರ್ತನೆಗಳು ಅಧ್ಯಾಯ 59  
  • ಕೀರ್ತನೆಗಳು ಅಧ್ಯಾಯ 60  
  • ಕೀರ್ತನೆಗಳು ಅಧ್ಯಾಯ 61  
  • ಕೀರ್ತನೆಗಳು ಅಧ್ಯಾಯ 62  
  • ಕೀರ್ತನೆಗಳು ಅಧ್ಯಾಯ 63  
  • ಕೀರ್ತನೆಗಳು ಅಧ್ಯಾಯ 64  
  • ಕೀರ್ತನೆಗಳು ಅಧ್ಯಾಯ 65  
  • ಕೀರ್ತನೆಗಳು ಅಧ್ಯಾಯ 66  
  • ಕೀರ್ತನೆಗಳು ಅಧ್ಯಾಯ 67  
  • ಕೀರ್ತನೆಗಳು ಅಧ್ಯಾಯ 68  
  • ಕೀರ್ತನೆಗಳು ಅಧ್ಯಾಯ 69  
  • ಕೀರ್ತನೆಗಳು ಅಧ್ಯಾಯ 70  
  • ಕೀರ್ತನೆಗಳು ಅಧ್ಯಾಯ 71  
  • ಕೀರ್ತನೆಗಳು ಅಧ್ಯಾಯ 72  
  • ಕೀರ್ತನೆಗಳು ಅಧ್ಯಾಯ 73  
  • ಕೀರ್ತನೆಗಳು ಅಧ್ಯಾಯ 74  
  • ಕೀರ್ತನೆಗಳು ಅಧ್ಯಾಯ 75  
  • ಕೀರ್ತನೆಗಳು ಅಧ್ಯಾಯ 76  
  • ಕೀರ್ತನೆಗಳು ಅಧ್ಯಾಯ 77  
  • ಕೀರ್ತನೆಗಳು ಅಧ್ಯಾಯ 78  
  • ಕೀರ್ತನೆಗಳು ಅಧ್ಯಾಯ 79  
  • ಕೀರ್ತನೆಗಳು ಅಧ್ಯಾಯ 80  
  • ಕೀರ್ತನೆಗಳು ಅಧ್ಯಾಯ 81  
  • ಕೀರ್ತನೆಗಳು ಅಧ್ಯಾಯ 82  
  • ಕೀರ್ತನೆಗಳು ಅಧ್ಯಾಯ 83  
  • ಕೀರ್ತನೆಗಳು ಅಧ್ಯಾಯ 84  
  • ಕೀರ್ತನೆಗಳು ಅಧ್ಯಾಯ 85  
  • ಕೀರ್ತನೆಗಳು ಅಧ್ಯಾಯ 86  
  • ಕೀರ್ತನೆಗಳು ಅಧ್ಯಾಯ 87  
  • ಕೀರ್ತನೆಗಳು ಅಧ್ಯಾಯ 88  
  • ಕೀರ್ತನೆಗಳು ಅಧ್ಯಾಯ 89  
  • ಕೀರ್ತನೆಗಳು ಅಧ್ಯಾಯ 90  
  • ಕೀರ್ತನೆಗಳು ಅಧ್ಯಾಯ 91  
  • ಕೀರ್ತನೆಗಳು ಅಧ್ಯಾಯ 92  
  • ಕೀರ್ತನೆಗಳು ಅಧ್ಯಾಯ 93  
  • ಕೀರ್ತನೆಗಳು ಅಧ್ಯಾಯ 94  
  • ಕೀರ್ತನೆಗಳು ಅಧ್ಯಾಯ 95  
  • ಕೀರ್ತನೆಗಳು ಅಧ್ಯಾಯ 96  
  • ಕೀರ್ತನೆಗಳು ಅಧ್ಯಾಯ 97  
  • ಕೀರ್ತನೆಗಳು ಅಧ್ಯಾಯ 98  
  • ಕೀರ್ತನೆಗಳು ಅಧ್ಯಾಯ 99  
  • ಕೀರ್ತನೆಗಳು ಅಧ್ಯಾಯ 100  
  • ಕೀರ್ತನೆಗಳು ಅಧ್ಯಾಯ 101  
  • ಕೀರ್ತನೆಗಳು ಅಧ್ಯಾಯ 102  
  • ಕೀರ್ತನೆಗಳು ಅಧ್ಯಾಯ 103  
  • ಕೀರ್ತನೆಗಳು ಅಧ್ಯಾಯ 104  
  • ಕೀರ್ತನೆಗಳು ಅಧ್ಯಾಯ 105  
  • ಕೀರ್ತನೆಗಳು ಅಧ್ಯಾಯ 106  
  • ಕೀರ್ತನೆಗಳು ಅಧ್ಯಾಯ 107  
  • ಕೀರ್ತನೆಗಳು ಅಧ್ಯಾಯ 108  
  • ಕೀರ್ತನೆಗಳು ಅಧ್ಯಾಯ 109  
  • ಕೀರ್ತನೆಗಳು ಅಧ್ಯಾಯ 110  
  • ಕೀರ್ತನೆಗಳು ಅಧ್ಯಾಯ 111  
  • ಕೀರ್ತನೆಗಳು ಅಧ್ಯಾಯ 112  
  • ಕೀರ್ತನೆಗಳು ಅಧ್ಯಾಯ 113  
  • ಕೀರ್ತನೆಗಳು ಅಧ್ಯಾಯ 114  
  • ಕೀರ್ತನೆಗಳು ಅಧ್ಯಾಯ 115  
  • ಕೀರ್ತನೆಗಳು ಅಧ್ಯಾಯ 116  
  • ಕೀರ್ತನೆಗಳು ಅಧ್ಯಾಯ 117  
  • ಕೀರ್ತನೆಗಳು ಅಧ್ಯಾಯ 118  
  • ಕೀರ್ತನೆಗಳು ಅಧ್ಯಾಯ 119  
  • ಕೀರ್ತನೆಗಳು ಅಧ್ಯಾಯ 120  
  • ಕೀರ್ತನೆಗಳು ಅಧ್ಯಾಯ 121  
  • ಕೀರ್ತನೆಗಳು ಅಧ್ಯಾಯ 122  
  • ಕೀರ್ತನೆಗಳು ಅಧ್ಯಾಯ 123  
  • ಕೀರ್ತನೆಗಳು ಅಧ್ಯಾಯ 124  
  • ಕೀರ್ತನೆಗಳು ಅಧ್ಯಾಯ 125  
  • ಕೀರ್ತನೆಗಳು ಅಧ್ಯಾಯ 126  
  • ಕೀರ್ತನೆಗಳು ಅಧ್ಯಾಯ 127  
  • ಕೀರ್ತನೆಗಳು ಅಧ್ಯಾಯ 128  
  • ಕೀರ್ತನೆಗಳು ಅಧ್ಯಾಯ 129  
  • ಕೀರ್ತನೆಗಳು ಅಧ್ಯಾಯ 130  
  • ಕೀರ್ತನೆಗಳು ಅಧ್ಯಾಯ 131  
  • ಕೀರ್ತನೆಗಳು ಅಧ್ಯಾಯ 132  
  • ಕೀರ್ತನೆಗಳು ಅಧ್ಯಾಯ 133  
  • ಕೀರ್ತನೆಗಳು ಅಧ್ಯಾಯ 134  
  • ಕೀರ್ತನೆಗಳು ಅಧ್ಯಾಯ 135  
  • ಕೀರ್ತನೆಗಳು ಅಧ್ಯಾಯ 136  
  • ಕೀರ್ತನೆಗಳು ಅಧ್ಯಾಯ 137  
  • ಕೀರ್ತನೆಗಳು ಅಧ್ಯಾಯ 138  
  • ಕೀರ್ತನೆಗಳು ಅಧ್ಯಾಯ 139  
  • ಕೀರ್ತನೆಗಳು ಅಧ್ಯಾಯ 140  
  • ಕೀರ್ತನೆಗಳು ಅಧ್ಯಾಯ 141  
  • ಕೀರ್ತನೆಗಳು ಅಧ್ಯಾಯ 142  
  • ಕೀರ್ತನೆಗಳು ಅಧ್ಯಾಯ 143  
  • ಕೀರ್ತನೆಗಳು ಅಧ್ಯಾಯ 144  
  • ಕೀರ್ತನೆಗಳು ಅಧ್ಯಾಯ 145  
  • ಕೀರ್ತನೆಗಳು ಅಧ್ಯಾಯ 146  
  • ಕೀರ್ತನೆಗಳು ಅಧ್ಯಾಯ 147  
  • ಕೀರ್ತನೆಗಳು ಅಧ್ಯಾಯ 148  
  • ಕೀರ್ತನೆಗಳು ಅಧ್ಯಾಯ 149  
  • ಕೀರ್ತನೆಗಳು ಅಧ್ಯಾಯ 150  
×

Alert

×

Kannada Letters Keypad References