KNV
19. ಮನುಷ್ಯಕುಮಾರನು ತಿನ್ನುವವನಾಗಿಯೂ ಕುಡಿಯುವವನಾಗಿಯೂ ಬಂದನು. ಅದಕ್ಕೆ ಅವರು--ಇಗೋ, ಈ ಮನುಷ್ಯನು ಹೊಟ್ಟೆ ಬಾಕನೂ ಮದ್ಯಪಾನ ಮಾಡುವವನೂ ಸುಂಕದವರ ಪಾಪಿಗಳ ಸ್ನೇಹಿತನೂ ಎಂದು ಅನ್ನುತ್ತಾರೆ. ಆದರೆ ಜ್ಞಾನವು ನೀತಿಯುಳ್ಳದ್ದೆಂದು ತನ್ನ ಮಕ್ಕಳಿಂದ ನಿರ್ಣಯಿ ಸಲ
ERVKN
19. ಮನುಷ್ಯಕುಮಾರನು ಬಂದನು. ಆತನು ಬೇರೆ ಜನರಂತೆ ಊಟಮಾಡುತ್ತಾನೆ; ದ್ರಾಕ್ಷಾರಸವನ್ನು ಕುಡಿಯುತ್ತಾನೆ. ಆದರೆ ಜನರು, ‘ನೋಡಿರಿ! ಅವನು ಹೊಟ್ಟೆಬಾಕ, ಅವನು ಕುಡುಕ, ಸುಂಕವಸೂಲಿಗಾರರು ಮತ್ತು ಕೆಟ್ಟ ಜನರು ಅವನ ಸ್ನೇಹಿತರಾಗಿದ್ದಾರೆ’ ಎಂದು ಹೇಳುತ್ತಾರೆ. ಆದರೆ ಜ್ಞಾನವು ತನ್ನ ಕ್ರಿಯೆಗಳಿಂದಲೇ ತನ್ನ ಯೋಗ್ಯತೆಯನ್ನು ತೋರ್ಪಡಿಸುತ್ತದೆ.”
IRVKN
19. ಮನುಷ್ಯಕುಮಾರನು ಬಂದನು, [‡ ಮತ್ತಾ 9:10; ಲೂಕ 15:2:] ಅವನು ಅನ್ನ ಪಾನಗಳನ್ನು ಸೇವಿಸುವವನಾಗಿದ್ದನು. ಅವರು ‘ಇಗೋ ಇವನು ಹೊಟ್ಟೆಬಾಕನು ಕುಡುಕನು ತೆರಿಗೆಯವರ ಮತ್ತು ಪಾಪಿಗಳ ಗೆಳೆಯನು’ ಅನ್ನುತ್ತಾರೆ. ಆದರೆ ಜ್ಞಾನವು ಅದರ [† ಕೆಲವು ಪ್ರತಿಗಳಲ್ಲಿ ಮಕ್ಕಳಿಂದ. ಅಂದರೆ ಜ್ಞಾನಾವಲಂಬಿಗಳಿಂದ ಎಂದು ಬರೆದದೆ; ಲೂಕ 7:35 ನೋಡಿರಿ. ] ಕಾರ್ಯಗಳಿಂದಲೇ ಜ್ಞಾನವೆಂದು ಸಮರ್ಥಿಸಲ್ಪಡುತ್ತದೆ” ಅಂದನು.
KJV
AMP
KJVP
YLT
ASV
WEB
NASB
ESV
RV
RSV
NKJV
MKJV
AKJV
NRSV
NIV
NIRV
NLT
MSG
GNB
NET
ERVEN