ಪವಿತ್ರ ಬೈಬಲ್

ಬೈಬಲ್ ಸೊಸೈಟಿ ಆಫ್ ಇಂಡಿಯಾ (BSI)
ಯೆರೆಮಿಯ
1. ಜನಾಂಗಗಳಿಗೆ ವಿರೋಧವಾಗಿಯೂ ಐಗುಪ್ತಕ್ಕೆ ವಿರೋಧವಾಗಿಯೂ ಯೂಫ್ರೇ ಟೀಸ್ ನದಿಯ ಬಳಿಯಲ್ಲಿ ಕರ್ಕೆವಿಾಷಿನಲ್ಲಿ ಇದ್ದಂಥ
2. ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನು ಯೆಹೂ ದದ ಅರಸನಾದ ಯೋಷೀಯನ ಮಗನಾದ ಯೆಹೋ ಯಾಕೀಮನ ನಾಲ್ಕನೇ ವರುಷದಲ್ಲಿ ಹೊಡೆದಂಥ ಐಗುಪ್ತದ ಅರಸನಾದ ಫರೋಹನೆಕೋವಿನ ದಂಡಿಗೆ ವಿರೋಧವಾಗಿ ಪ್ರವಾದಿಯಾದ ಯೆರೆವಿಾಯನಿಗೆ ಉಂಟಾದ ಕರ್ತನ ವಾಕ್ಯವು.
3. ಗುರಾಣಿಯನ್ನೂ ಖೇಡ್ಯವನ್ನೂ ಸಿದ್ಧಮಾಡಿರಿ; ಯುದ್ಧಕ್ಕೆ ಸವಿಾಪಿಸಿರಿ;
4. ಕುದುರೆಗಳನ್ನು ಕಟ್ಟಿರಿ; ರಾಹುತರೇ, ಎದ್ದು ಶಿರಸ್ತ್ರಾಣಗಳನ್ನಿಟ್ಟು ನಿಂತುಕೊಳ್ಳಿರಿ, ಈಟಿಗಳನ್ನು ಮೆರುಗು ಮಾಡಿರಿ, ಕವಚಗಳನ್ನು ತೊಟ್ಟು ಕೊಳ್ಳಿರಿ;
5. ಅವರು ದಿಗಿಲುಪಟ್ಟು ಹಿಂತಿರುಗಿದ್ದನ್ನು ನಾನು ಕಂಡದ್ದೇನು? ಅವರ ಪರಾಕ್ರಮಶಾಲಿಗಳು ಬಡಿಯಲ್ಪಟ್ಟಿದ್ದಾರೆ; ಹಿಂದೆ ನೋಡದೆ ಓಡಿಹೋಗು ತ್ತಾರೆ; ಸುತ್ತಲು ಅಂಜಿಕೆ ಇದೆ ಎಂದು ಕರ್ತನು ಅನ್ನುತ್ತಾನೆ.
6. ವೇಗಶಾಲಿಗಳು ಓಡಿಹೋಗದಿರಲಿ; ಪರಾಕ್ರಮಶಾಲಿಗಳು ತಪ್ಪಿಸಿಕೊಳ್ಳದಿರಲಿ; ಉತ್ತರದಲ್ಲಿ ಯೂಫ್ರೇಟೀಸ್ ನದಿಯ ತೀರದಲ್ಲಿ ಅವರು ಎಡವಿ ಬೀಳುವರು.
7. ಹೊಳೆಗಳ ಹಾಗೆ ಕದಲುವ ನೀರುಗಳಂತಿದ್ದು ಪ್ರಳಯದ ಹಾಗೆ ಬರುವವನು ಯಾರು?
8. ಐಗುಪ್ತವು ಪ್ರಳಯದ ಹಾಗೆ ಏರುತ್ತದೆ; ಅದರ ನೀರುಗಳು ಹೊಳೆಗಳ ಹಾಗೆ ಕದಲುತ್ತವೆ; ನಾನು ಏರುತ್ತೇನೆ, ಭೂಮಿಯನ್ನು ಮುಚ್ಚುತ್ತೇನೆ, ಪಟ್ಟಣವನ್ನೂ ಅದರ ನಿವಾಸಿಗಳನ್ನೂ ನಾಶಮಾಡುತ್ತೇನೆ ಎಂದು ಆತನು ಹೇಳುತ್ತಾನೆ.
9. ಕುದುರೆಗಳೇ, ಬನ್ನಿರಿ; ರಥಗಳೇ, ಓಡಾಡಿರಿ; ಪರಾಕ್ರಮಶಾಲಿಗಳು ಹೊರಗೆ ಬರಲಿ; ಗುರಾಣಿಯನ್ನು ಹಿಡಿಯುವ ಕೂಷ್ಯರೂ ಫೊಟ್ಯರು ಬಿಲ್ಲನ್ನು ಹಿಡಿದು ಬೊಗ್ಗಿಸುವ ಲೂದ್ಯರೂ ಹೊರಗೆ ಬರಲಿ.
10. ಇದು ಸೈನ್ಯಗಳ ಕರ್ತನಾದ ದೇವರ ದಿನವೇ; ಆತನು ತನ್ನ ಶತ್ರುಗಳಿಗೆ ಮುಯ್ಯಿಗೆ ಮುಯ್ಯಿ ತೀರಿಸುವ ದಿನವು ಕತ್ತಿಯು ಸಂಹರಿಸಿ ಅವರ ರಕ್ತದಿಂದ ತೃಪ್ತಿಯಾಗಿ ಮತ್ತವಾಗುವದು; ಉತ್ತರ ದೇಶದಲ್ಲಿ ಯೂಫ್ರೇಟೀಸ್ ನದಿಯ ಬಳಿಯಲ್ಲಿ ಸೈನ್ಯಗಳ ಕರ್ತನಾದ ದೇವರಿಗೆ ಬಲಿ ಆಗುತ್ತದೆ.
11. ಐಗುಪ್ತದ ಮಗಳಾದ ಕನ್ಯಾಸ್ತ್ರೀಯೇ, ಗಿಲ್ಯಾದಿಗೆ ಹೋಗಿ ತೈಲವನ್ನು ತಕ್ಕೋ! ನೀನು ಬಹಳ ಮದ್ದು ತಕ್ಕೊಳ್ಳುವದು ವ್ಯರ್ಥವಾಗಿದೆ; ನಿನಗೆ ಗುಣವಾಗು ವದಿಲ್ಲ.
12. ಜನಾಂಗಗಳು ನಿನ್ನ ಮಾನಭಂಗವನ್ನು ಕುರಿತು ಕೇಳಿಯವೆ, ನಿನ್ನ ಕೂಗು ದೇಶವನ್ನು ತುಂಬಿಸಿ ಯದೆ; ಪರಾಕ್ರಮಶಾಲಿಯು ಪರಾಕ್ರಮಶಾಲಿಯ ಮೇಲೆ ವಿರೋಧವಾಗಿ ಎಡವಿದ್ದಾರೆ; ಏಕವಾಗಿ ಬಿದ್ದುಹೋಗಿದ್ದಾರೆ.
13. ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನು ಬಂದು ಐಗುಪ್ತದೇಶವನ್ನು ಹೇಗೆ ಹೊಡೆಯುವನೆಂಬದರ ವಿಷಯ ಕರ್ತನು ಪ್ರವಾದಿಯಾದ ಯೆರೆವಿಾಯನಿಗೆ ಹೇಳಿದ ವಾಕ್ಯವು.
14. ಐಗುಪ್ತದಲ್ಲಿ ತಿಳಿಸಿರಿ, ಮಿಗ್ದೋಲಿನಲ್ಲಿ ಪ್ರಕಟಿ ಸಿರಿ. ನೋಫ್ನಲ್ಲಿಯೂ ತಹಪನೇಸ್ನಲ್ಲಿಯೂ ಪ್ರಕ ಟಿಸಿ, ಸ್ಥಿರವಾಗಿ ನಿಂತುಕೋ; ಸಿದ್ದಮಾಡಿಕೋ; ಕತ್ತಿಯು ನಿನ್ನ ಸುತ್ತಲೂ ಸಂಹರಿಸುವದೆಂದು ಹೇಳಿರಿ.
15. ನಿನ್ನ ಬಲಿಷ್ಠರು ಯಾಕೆ ಬಡಕೊಂಡು ಹೋಗಿದ್ದಾರೆ? ಕರ್ತನು ಅವರನ್ನು ಓಡಿಸಿದ್ದದರಿಂದ ಅವರು ನಿಲ್ಲಲಿಲ್ಲ.
16. ಅನೇಕರನ್ನು ಎಡವುವಂತೆ ಮಾಡಿದನು. ಹೌದು, ಒಬ್ಬರ ಮೇಲೊ ಬ್ಬರು ಬಿದ್ದರು; ಅವರು--ಏಳು ಉಪದ್ರಪಡಿಸುವ ಕತ್ತಿಯನ್ನು ಬಿಟ್ಟು, ಸ್ವಂತ ಜನರ ಬಳಿಗೂ ನಾವು ಹುಟ್ಟಿದ ದೇಶದ ಬಳಿಗೂ ತಿರುಗಿ ಹೋಗೋಣ ಎಂದು ಹೇಳಿದರು.
17. ಐಗುಪ್ತದ ಅರಸ ನಾದ ಫರೋಹನು ನಾಶವಾದನು; ಸಮಯವನ್ನು ತಪ್ಪಿಸಿದ್ದಾನೆಂದು ಅಲ್ಲಿ ಕೂಗುತ್ತಾರೆ.
18. ಸೈನ್ಯಗಳ ಕರ್ತ ನೆಂದು ಹೆಸರುಳ್ಳ ಅರಸನು ಅನ್ನುವದೇನಂದರೆ--ನನ್ನ ಜೀವದಾಣೆ, ಬೆಟ್ಟಗಳಲ್ಲಿ ತಾಬೋರಿನಂತೆಯೂ ಸಮುದ್ರದ ಬಳಿಯಲ್ಲಿ ಕರ್ಮೆಲಿನಂತೆಯೂ ನಿಶ್ಚಯ ವಾಗಿ ಬರುವನು.
19. ಓ ಐಗುಪ್ತದ ಯುವತಿಯಾದ ನಿವಾಸಿಯೇ, ಸೆರೆಯ ಸಾಮಾನುಗಳನ್ನು ಸಜ್ಜು ಗೊಳಿಸಿಕೋ; ನೋಫ್ಹಾಳಾಗುವದು; ನಿವಾಸಿ ಗಳಿಲ್ಲದ ಬೀಡಾಗುವದು.
20. ಐಗುಪ್ತವು ಬಹಳ ಚೆಲುವಾದ ಕಡಸಾಗಿದೆ; ಆದರೆ ಉತ್ತರದಿಂದ ನಾಶ ನವು ಬಂದೇ ಬರುತ್ತದೆ.
21. ಅದರೊಳಗಿರುವ ಅದರ ಸಂಬಳದವರು ಕೊಬ್ಬಿದ ಹೋರಿಗಳ ಹಾಗಿದ್ದಾರೆ; ಅವರು ಸಹ ಹಿಂದಕ್ಕೆ ತಿರುಗಿಕೊಂಡು ಏಕವಾಗಿ ಓಡಿಹೋಗುತ್ತಾರೆ; ಅವರು ನಿಲ್ಲಲಿಲ್ಲ; ಅವರ ಆಪತ್ತಿನ ದಿವಸವೂ ಅವರ ವಿಚಾರಣೆಯ ಕಾಲವೂ ಅವರ ಮೇಲೆ ಬಂತು.
22. ಅದರ ಶಬ್ದವು ಸರ್ಪದಂತೆ ಹೊರಡುವದು; ಅವರು ದಂಡಿನ ಸಂಗಡ ಸಂಚರಿಸಿ ಕಟ್ಟಿಗೆ ಕಡಿಯುವವರ ಹಾಗೆ ಕೊಡಲಿಗಳ ಸಂಗಡ ಅದಕ್ಕೆ ವಿರೋಧವಾಗಿ ಬರುವರು.
23. ಆದರೆ ಅಡವಿ ಯನ್ನು ಅದು ಶೋಧಿಸ ಕೂಡದ್ದಾಗಿದ್ದರೂ ಕಡಿದು ಹಾಕುವರೆಂದು ಕರ್ತನು ಅನ್ನುತ್ತಾನೆ; ಅವರು ಮಿಡಿತೆ ಗಳಿಗಿಂತ ಹೆಚ್ಚಾಗಿ ಲೆಕ್ಕವಿಲ್ಲದೆ ಇದ್ದಾರೆ.
24. ಐಗುಪ್ತದ ಮಗಳು ನಾಚಿಕೆಪಡುವಳು, ಉತ್ತರದ ಜನರ ಕೈಯಲ್ಲಿ ಒಪ್ಪಿಸಲ್ಪಡುವಳು.
25. ಇಸ್ರಾಯೇಲಿನ ದೇವರಾದ ಸೈನ್ಯ ಗಳ ಕರ್ತನು ಹೇಳುವದೇನಂದರೆ--ಇಗೋ, ನಾನು ನೋಡುವ ಸಮೂಹವನ್ನೂ ಫರೋಹನನ್ನೂ ಐಗುಪ್ತ ವನ್ನೂ ಅದರ ದೇವರುಗಳನ್ನೂ ಅದರ ಅರಸರನ್ನೂ ಅಂತೂ ಫರೋಹನನ್ನೂ ಅವನಲ್ಲಿ ನಂಬಿಕೆಯಿಡುವ ಎಲ್ಲರನ್ನೂ ದಂಡಿಸುತ್ತೇನೆ;
26. ಅವರ ಪ್ರಾಣವನ್ನು ಹುಡುಕುವವರ ಕೈಯಲ್ಲಿಯೂ ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನ ಕೈಯಲ್ಲಿಯೂ ಅವನ ಸೇವಕರ ಕೈಯಲ್ಲಿಯೂ ಅವರನ್ನು ನಾನು ಒಪ್ಪಿಸುತ್ತೇನೆ. ಅದರ ತರುವಾಯ ಅದು ಪೂರ್ವದ ಕಾಲಗಳಂತೆ ನಿವಾಸ ವಾಗುವದೆಂದು ಕರ್ತನು ಅನ್ನುತ್ತಾನೆ.
27. ಆದರೆ ನೀನು, ಓ ನನ್ನ ಸೇವಕನಾದ ಯಾಕೋಬನೇ, ನೀನು ಭಯ ಪಡಬೇಡ; ಇಸ್ರಾಯೇಲೇ, ದಿಗ್ಭ್ರಮೆಗೊಳ್ಳಬೇಡ; ಇಗೋ, ನಾನು ನಿನ್ನನ್ನು ದೂರದಿಂದಲೂ ನಿನ್ನ ಸಂತಾನವನ್ನು ಅವರು ಸೆರೆಯಾಗಿ ಹೋದ ದೇಶ ದಿಂದಲೂ ರಕ್ಷಿಸುವೆನು; ಯಾಕೋಬನು ತಿರುಗಿ ಬಂದು ವಿಶ್ರಾಂತಿಯಾಗಿಯೂ ಸುಖವಾಗಿಯೂ ಇರುವನು; ಅವನನ್ನು ಭಯಪಡಿಸುವದಕ್ಕೆ ಯಾರೂ ಇರುವದಿಲ್ಲ.
28. ನನ್ನ ಸೇವಕನಾದ ಯಾಕೋಬನೇ, ನೀನು ಭಯಪಡ ಬೇಡವೆಂದು ಕರ್ತನು ಅನ್ನುತ್ತಾನೆ; ನಾನೇ ನಿನ್ನ ಸಂಗಡ ಇದ್ದೇನೆ; ನಾನು ನಿನ್ನನ್ನು ಎಲ್ಲಿಗೆ ಓಡಿಸಿ ದೆನೋ ಆ ಜನಾಂಗಗಳನ್ನೆಲ್ಲಾ ಸಂಪೂರ್ಣವಾಗಿ ನಾಶಮಾಡು ತ್ತೇನೆ; ಆದರೆ ನಿನ್ನನ್ನು ನಾಶಮಾಡುವದಿಲ್ಲ; ನ್ಯಾಯದಿಂದಲೇ ನಿನ್ನನ್ನು ಶಿಕ್ಷಿಸುತ್ತೇನೆ; ಆದಾಗ್ಯೂ ನಿನ್ನನ್ನು ಶಿಕ್ಷಿಸದೇ ಬಿಡುವದಿಲ್ಲ.
ಒಟ್ಟು 52 ಅಧ್ಯಾಯಗಳು, ಆಯ್ಕೆ ಮಾಡಲಾಗಿದೆ ಅಧ್ಯಾಯ 46 / 52
1 ಜನಾಂಗಗಳಿಗೆ ವಿರೋಧವಾಗಿಯೂ ಐಗುಪ್ತಕ್ಕೆ ವಿರೋಧವಾಗಿಯೂ ಯೂಫ್ರೇ ಟೀಸ್ ನದಿಯ ಬಳಿಯಲ್ಲಿ ಕರ್ಕೆವಿಾಷಿನಲ್ಲಿ ಇದ್ದಂಥ 2 ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನು ಯೆಹೂ ದದ ಅರಸನಾದ ಯೋಷೀಯನ ಮಗನಾದ ಯೆಹೋ ಯಾಕೀಮನ ನಾಲ್ಕನೇ ವರುಷದಲ್ಲಿ ಹೊಡೆದಂಥ ಐಗುಪ್ತದ ಅರಸನಾದ ಫರೋಹನೆಕೋವಿನ ದಂಡಿಗೆ ವಿರೋಧವಾಗಿ ಪ್ರವಾದಿಯಾದ ಯೆರೆವಿಾಯನಿಗೆ ಉಂಟಾದ ಕರ್ತನ ವಾಕ್ಯವು. 3 ಗುರಾಣಿಯನ್ನೂ ಖೇಡ್ಯವನ್ನೂ ಸಿದ್ಧಮಾಡಿರಿ; ಯುದ್ಧಕ್ಕೆ ಸವಿಾಪಿಸಿರಿ; 4 ಕುದುರೆಗಳನ್ನು ಕಟ್ಟಿರಿ; ರಾಹುತರೇ, ಎದ್ದು ಶಿರಸ್ತ್ರಾಣಗಳನ್ನಿಟ್ಟು ನಿಂತುಕೊಳ್ಳಿರಿ, ಈಟಿಗಳನ್ನು ಮೆರುಗು ಮಾಡಿರಿ, ಕವಚಗಳನ್ನು ತೊಟ್ಟು ಕೊಳ್ಳಿರಿ; 5 ಅವರು ದಿಗಿಲುಪಟ್ಟು ಹಿಂತಿರುಗಿದ್ದನ್ನು ನಾನು ಕಂಡದ್ದೇನು? ಅವರ ಪರಾಕ್ರಮಶಾಲಿಗಳು ಬಡಿಯಲ್ಪಟ್ಟಿದ್ದಾರೆ; ಹಿಂದೆ ನೋಡದೆ ಓಡಿಹೋಗು ತ್ತಾರೆ; ಸುತ್ತಲು ಅಂಜಿಕೆ ಇದೆ ಎಂದು ಕರ್ತನು ಅನ್ನುತ್ತಾನೆ. 6 ವೇಗಶಾಲಿಗಳು ಓಡಿಹೋಗದಿರಲಿ; ಪರಾಕ್ರಮಶಾಲಿಗಳು ತಪ್ಪಿಸಿಕೊಳ್ಳದಿರಲಿ; ಉತ್ತರದಲ್ಲಿ ಯೂಫ್ರೇಟೀಸ್ ನದಿಯ ತೀರದಲ್ಲಿ ಅವರು ಎಡವಿ ಬೀಳುವರು. 7 ಹೊಳೆಗಳ ಹಾಗೆ ಕದಲುವ ನೀರುಗಳಂತಿದ್ದು ಪ್ರಳಯದ ಹಾಗೆ ಬರುವವನು ಯಾರು? 8 ಐಗುಪ್ತವು ಪ್ರಳಯದ ಹಾಗೆ ಏರುತ್ತದೆ; ಅದರ ನೀರುಗಳು ಹೊಳೆಗಳ ಹಾಗೆ ಕದಲುತ್ತವೆ; ನಾನು ಏರುತ್ತೇನೆ, ಭೂಮಿಯನ್ನು ಮುಚ್ಚುತ್ತೇನೆ, ಪಟ್ಟಣವನ್ನೂ ಅದರ ನಿವಾಸಿಗಳನ್ನೂ ನಾಶಮಾಡುತ್ತೇನೆ ಎಂದು ಆತನು ಹೇಳುತ್ತಾನೆ. 9 ಕುದುರೆಗಳೇ, ಬನ್ನಿರಿ; ರಥಗಳೇ, ಓಡಾಡಿರಿ; ಪರಾಕ್ರಮಶಾಲಿಗಳು ಹೊರಗೆ ಬರಲಿ; ಗುರಾಣಿಯನ್ನು ಹಿಡಿಯುವ ಕೂಷ್ಯರೂ ಫೊಟ್ಯರು ಬಿಲ್ಲನ್ನು ಹಿಡಿದು ಬೊಗ್ಗಿಸುವ ಲೂದ್ಯರೂ ಹೊರಗೆ ಬರಲಿ. 10 ಇದು ಸೈನ್ಯಗಳ ಕರ್ತನಾದ ದೇವರ ದಿನವೇ; ಆತನು ತನ್ನ ಶತ್ರುಗಳಿಗೆ ಮುಯ್ಯಿಗೆ ಮುಯ್ಯಿ ತೀರಿಸುವ ದಿನವು ಕತ್ತಿಯು ಸಂಹರಿಸಿ ಅವರ ರಕ್ತದಿಂದ ತೃಪ್ತಿಯಾಗಿ ಮತ್ತವಾಗುವದು; ಉತ್ತರ ದೇಶದಲ್ಲಿ ಯೂಫ್ರೇಟೀಸ್ ನದಿಯ ಬಳಿಯಲ್ಲಿ ಸೈನ್ಯಗಳ ಕರ್ತನಾದ ದೇವರಿಗೆ ಬಲಿ ಆಗುತ್ತದೆ. 11 ಐಗುಪ್ತದ ಮಗಳಾದ ಕನ್ಯಾಸ್ತ್ರೀಯೇ, ಗಿಲ್ಯಾದಿಗೆ ಹೋಗಿ ತೈಲವನ್ನು ತಕ್ಕೋ! ನೀನು ಬಹಳ ಮದ್ದು ತಕ್ಕೊಳ್ಳುವದು ವ್ಯರ್ಥವಾಗಿದೆ; ನಿನಗೆ ಗುಣವಾಗು ವದಿಲ್ಲ. 12 ಜನಾಂಗಗಳು ನಿನ್ನ ಮಾನಭಂಗವನ್ನು ಕುರಿತು ಕೇಳಿಯವೆ, ನಿನ್ನ ಕೂಗು ದೇಶವನ್ನು ತುಂಬಿಸಿ ಯದೆ; ಪರಾಕ್ರಮಶಾಲಿಯು ಪರಾಕ್ರಮಶಾಲಿಯ ಮೇಲೆ ವಿರೋಧವಾಗಿ ಎಡವಿದ್ದಾರೆ; ಏಕವಾಗಿ ಬಿದ್ದುಹೋಗಿದ್ದಾರೆ. 13 ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನು ಬಂದು ಐಗುಪ್ತದೇಶವನ್ನು ಹೇಗೆ ಹೊಡೆಯುವನೆಂಬದರ ವಿಷಯ ಕರ್ತನು ಪ್ರವಾದಿಯಾದ ಯೆರೆವಿಾಯನಿಗೆ ಹೇಳಿದ ವಾಕ್ಯವು. 14 ಐಗುಪ್ತದಲ್ಲಿ ತಿಳಿಸಿರಿ, ಮಿಗ್ದೋಲಿನಲ್ಲಿ ಪ್ರಕಟಿ ಸಿರಿ. ನೋಫ್ನಲ್ಲಿಯೂ ತಹಪನೇಸ್ನಲ್ಲಿಯೂ ಪ್ರಕ ಟಿಸಿ, ಸ್ಥಿರವಾಗಿ ನಿಂತುಕೋ; ಸಿದ್ದಮಾಡಿಕೋ; ಕತ್ತಿಯು ನಿನ್ನ ಸುತ್ತಲೂ ಸಂಹರಿಸುವದೆಂದು ಹೇಳಿರಿ. 15 ನಿನ್ನ ಬಲಿಷ್ಠರು ಯಾಕೆ ಬಡಕೊಂಡು ಹೋಗಿದ್ದಾರೆ? ಕರ್ತನು ಅವರನ್ನು ಓಡಿಸಿದ್ದದರಿಂದ ಅವರು ನಿಲ್ಲಲಿಲ್ಲ. 16 ಅನೇಕರನ್ನು ಎಡವುವಂತೆ ಮಾಡಿದನು. ಹೌದು, ಒಬ್ಬರ ಮೇಲೊ ಬ್ಬರು ಬಿದ್ದರು; ಅವರು--ಏಳು ಉಪದ್ರಪಡಿಸುವ ಕತ್ತಿಯನ್ನು ಬಿಟ್ಟು, ಸ್ವಂತ ಜನರ ಬಳಿಗೂ ನಾವು ಹುಟ್ಟಿದ ದೇಶದ ಬಳಿಗೂ ತಿರುಗಿ ಹೋಗೋಣ ಎಂದು ಹೇಳಿದರು.
17 ಐಗುಪ್ತದ ಅರಸ ನಾದ ಫರೋಹನು ನಾಶವಾದನು; ಸಮಯವನ್ನು ತಪ್ಪಿಸಿದ್ದಾನೆಂದು ಅಲ್ಲಿ ಕೂಗುತ್ತಾರೆ.
18 ಸೈನ್ಯಗಳ ಕರ್ತ ನೆಂದು ಹೆಸರುಳ್ಳ ಅರಸನು ಅನ್ನುವದೇನಂದರೆ--ನನ್ನ ಜೀವದಾಣೆ, ಬೆಟ್ಟಗಳಲ್ಲಿ ತಾಬೋರಿನಂತೆಯೂ ಸಮುದ್ರದ ಬಳಿಯಲ್ಲಿ ಕರ್ಮೆಲಿನಂತೆಯೂ ನಿಶ್ಚಯ ವಾಗಿ ಬರುವನು. 19 ಓ ಐಗುಪ್ತದ ಯುವತಿಯಾದ ನಿವಾಸಿಯೇ, ಸೆರೆಯ ಸಾಮಾನುಗಳನ್ನು ಸಜ್ಜು ಗೊಳಿಸಿಕೋ; ನೋಫ್ಹಾಳಾಗುವದು; ನಿವಾಸಿ ಗಳಿಲ್ಲದ ಬೀಡಾಗುವದು. 20 ಐಗುಪ್ತವು ಬಹಳ ಚೆಲುವಾದ ಕಡಸಾಗಿದೆ; ಆದರೆ ಉತ್ತರದಿಂದ ನಾಶ ನವು ಬಂದೇ ಬರುತ್ತದೆ. 21 ಅದರೊಳಗಿರುವ ಅದರ ಸಂಬಳದವರು ಕೊಬ್ಬಿದ ಹೋರಿಗಳ ಹಾಗಿದ್ದಾರೆ; ಅವರು ಸಹ ಹಿಂದಕ್ಕೆ ತಿರುಗಿಕೊಂಡು ಏಕವಾಗಿ ಓಡಿಹೋಗುತ್ತಾರೆ; ಅವರು ನಿಲ್ಲಲಿಲ್ಲ; ಅವರ ಆಪತ್ತಿನ ದಿವಸವೂ ಅವರ ವಿಚಾರಣೆಯ ಕಾಲವೂ ಅವರ ಮೇಲೆ ಬಂತು. 22 ಅದರ ಶಬ್ದವು ಸರ್ಪದಂತೆ ಹೊರಡುವದು; ಅವರು ದಂಡಿನ ಸಂಗಡ ಸಂಚರಿಸಿ ಕಟ್ಟಿಗೆ ಕಡಿಯುವವರ ಹಾಗೆ ಕೊಡಲಿಗಳ ಸಂಗಡ ಅದಕ್ಕೆ ವಿರೋಧವಾಗಿ ಬರುವರು. 23 ಆದರೆ ಅಡವಿ ಯನ್ನು ಅದು ಶೋಧಿಸ ಕೂಡದ್ದಾಗಿದ್ದರೂ ಕಡಿದು ಹಾಕುವರೆಂದು ಕರ್ತನು ಅನ್ನುತ್ತಾನೆ; ಅವರು ಮಿಡಿತೆ ಗಳಿಗಿಂತ ಹೆಚ್ಚಾಗಿ ಲೆಕ್ಕವಿಲ್ಲದೆ ಇದ್ದಾರೆ. 24 ಐಗುಪ್ತದ ಮಗಳು ನಾಚಿಕೆಪಡುವಳು, ಉತ್ತರದ ಜನರ ಕೈಯಲ್ಲಿ ಒಪ್ಪಿಸಲ್ಪಡುವಳು. 25 ಇಸ್ರಾಯೇಲಿನ ದೇವರಾದ ಸೈನ್ಯ ಗಳ ಕರ್ತನು ಹೇಳುವದೇನಂದರೆ--ಇಗೋ, ನಾನು ನೋಡುವ ಸಮೂಹವನ್ನೂ ಫರೋಹನನ್ನೂ ಐಗುಪ್ತ ವನ್ನೂ ಅದರ ದೇವರುಗಳನ್ನೂ ಅದರ ಅರಸರನ್ನೂ ಅಂತೂ ಫರೋಹನನ್ನೂ ಅವನಲ್ಲಿ ನಂಬಿಕೆಯಿಡುವ ಎಲ್ಲರನ್ನೂ ದಂಡಿಸುತ್ತೇನೆ; 26 ಅವರ ಪ್ರಾಣವನ್ನು ಹುಡುಕುವವರ ಕೈಯಲ್ಲಿಯೂ ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನ ಕೈಯಲ್ಲಿಯೂ ಅವನ ಸೇವಕರ ಕೈಯಲ್ಲಿಯೂ ಅವರನ್ನು ನಾನು ಒಪ್ಪಿಸುತ್ತೇನೆ. ಅದರ ತರುವಾಯ ಅದು ಪೂರ್ವದ ಕಾಲಗಳಂತೆ ನಿವಾಸ ವಾಗುವದೆಂದು ಕರ್ತನು ಅನ್ನುತ್ತಾನೆ. 27 ಆದರೆ ನೀನು, ಓ ನನ್ನ ಸೇವಕನಾದ ಯಾಕೋಬನೇ, ನೀನು ಭಯ ಪಡಬೇಡ; ಇಸ್ರಾಯೇಲೇ, ದಿಗ್ಭ್ರಮೆಗೊಳ್ಳಬೇಡ; ಇಗೋ, ನಾನು ನಿನ್ನನ್ನು ದೂರದಿಂದಲೂ ನಿನ್ನ ಸಂತಾನವನ್ನು ಅವರು ಸೆರೆಯಾಗಿ ಹೋದ ದೇಶ ದಿಂದಲೂ ರಕ್ಷಿಸುವೆನು; ಯಾಕೋಬನು ತಿರುಗಿ ಬಂದು ವಿಶ್ರಾಂತಿಯಾಗಿಯೂ ಸುಖವಾಗಿಯೂ ಇರುವನು; ಅವನನ್ನು ಭಯಪಡಿಸುವದಕ್ಕೆ ಯಾರೂ ಇರುವದಿಲ್ಲ. 28 ನನ್ನ ಸೇವಕನಾದ ಯಾಕೋಬನೇ, ನೀನು ಭಯಪಡ ಬೇಡವೆಂದು ಕರ್ತನು ಅನ್ನುತ್ತಾನೆ; ನಾನೇ ನಿನ್ನ ಸಂಗಡ ಇದ್ದೇನೆ; ನಾನು ನಿನ್ನನ್ನು ಎಲ್ಲಿಗೆ ಓಡಿಸಿ ದೆನೋ ಆ ಜನಾಂಗಗಳನ್ನೆಲ್ಲಾ ಸಂಪೂರ್ಣವಾಗಿ ನಾಶಮಾಡು ತ್ತೇನೆ; ಆದರೆ ನಿನ್ನನ್ನು ನಾಶಮಾಡುವದಿಲ್ಲ; ನ್ಯಾಯದಿಂದಲೇ ನಿನ್ನನ್ನು ಶಿಕ್ಷಿಸುತ್ತೇನೆ; ಆದಾಗ್ಯೂ ನಿನ್ನನ್ನು ಶಿಕ್ಷಿಸದೇ ಬಿಡುವದಿಲ್ಲ.
ಒಟ್ಟು 52 ಅಧ್ಯಾಯಗಳು, ಆಯ್ಕೆ ಮಾಡಲಾಗಿದೆ ಅಧ್ಯಾಯ 46 / 52
×

Alert

×

Kannada Letters Keypad References