1. ಮೋಶೆಯು ಮದುವೆಯಾಗಿದ್ದ ಐಥೋಪ್ಯಳಾದ ಸ್ತ್ರೀಯ ನಿಮಿತ್ತ ಮಿರ್ಯಾಮಳೂ ಆರೋನನೂ ಅವನಿಗೆ ವಿರೋಧವಾಗಿ ಮಾತ ನಾಡಿದರು. ಯಾಕಂದರೆ ಅವನು ಐಥೋಪ್ಯಳಾದ ಸ್ತ್ರೀಯನ್ನು ಮದುವೆ ಮಾಡಿಕೊಂಡಿದ್ದನು.
|
4. ಆಗ ಕರ್ತನು ಫಕ್ಕನೆ ಮೋಶೆಗೂ ಆರೋನನಿಗೂ ಮಿರ್ಯಾಮಳಿಗೂ--ನೀವು ಮೂರು ಮಂದಿ ಹೊರಗೆ ಸಭೆಯ ಗುಡಾರದ ಸವಿಾಪಕ್ಕೆ ಬನ್ನಿರಿ ಅಂದನು. ಆ ಮೂವರು ಹೊರಗೆ ಬಂದಾಗ.
|
5. ಕರ್ತನು ಮೇಘಸ್ತಂಭದಲ್ಲಿ ಇಳಿದು ಗುಡಾರದ ಬಾಗಿಲ ಬಳಿಯಲ್ಲಿ ನಿಂತು ಆರೋನನನ್ನೂ ಮಿರ್ಯಾಮ ಳನ್ನೂ ಕರೆದಾಗ ಅವರಿಬ್ಬರೂ ಮುಂದೆ ಬಂದರು.
|
6. ಆತನು--ನನ್ನ ಮಾತುಗಳನ್ನು ಈಗ ಕೇಳಿರಿ--ನಿಮ್ಮಲ್ಲಿ ಒಬ್ಬ ಪ್ರವಾದಿ ಇದ್ದರೆ ಕರ್ತನಾದ ನಾನು ದರ್ಶನದಲ್ಲಿ ಅವನಿಗೆ ತಿಳಿಯಪಡಿಸುವೆನು, ಸ್ವಪ್ನದಲ್ಲಿ ಅವನ ಸಂಗಡ ಮಾತನಾಡುವೆನು.
|
8. ಗೂಢವಾಗಿ ಅಲ್ಲ, ಮುಖಾಮುಖಿಯಾಗಿ ಅಂದರೆ ಪ್ರತ್ಯಕ್ಷವಾಗಿ ನಾನು ಅವನ ಸಂಗಡ ಮಾತನಾ ಡುತ್ತೇನೆ. ಅವನು ಕರ್ತನ ರೂಪವನ್ನು ನೋಡುತ್ತಾನೆ; ಹೀಗಿರಲು ನೀವು ನನ್ನ ಸೇವಕನಾದ ಮೋಶೆಗೆ ವಿರೋಧವಾಗಿ ಮಾತನಾಡಲು ಯಾಕೆ ಭಯಪಡಲಿಲ್ಲ ಎಂದು ಹೇಳಿದನು.
|
10. ಆ ಮೇಘವು ಗುಡಾರದ ಮೇಲಿನಿಂದ ತೊಲಗಿ ಹೋಯಿತು; ಆಗ ಇಗೋ, ಮಿರ್ಯಾಮಳು ಹಿಮದ ಹಾಗೆ ಕುಷ್ಠವುಳ್ಳವಳಾದಳು. ಆರೋನನು ಮಿರ್ಯಾಮಳ ಕಡೆಗೆ ನೋಡಿದಾಗ ಇಗೋ, ಅವಳು ಕುಷ್ಠರೋಗಿ ಯಾಗಿದ್ದಳು.
|
11. ಆರೋನನು ಮೋಶೆಗೆ--ಅಯ್ಯೋ, ನನ್ನ ಒಡೆಯನೇ, ನಾವು ಪಾಪಮಾಡಿದೆವು, ಬುದ್ಧಿಯಿಲ್ಲದೆ ಮಾಡಿದ ಈ ಪಾಪವನ್ನು ನಮ್ಮ ಮೇಲೆ ಹಾಕಬೇಡ.
|
12. ತನ್ನ ತಾಯಿಯ ಗರ್ಭದಿಂದ ಹೊರಗೆ ಬಂದಾಗಲೇ ಅರ್ಧ ಮಾಂಸ ಕೊಳೆತುಹೋದಂಥ ಶವದಂತೆ ಆಕೆಯನ್ನು ಇರಗೊಡಿಸಬೇಡ ಎಂದು ನಾನು ನಿನ್ನನ್ನು ಬೇಡಿಕೊಳ್ಳುತ್ತೇನೆ ಅಂದನು.
|
13. ಆಗ ಮೋಶೆಯು ಕರ್ತನಿಗೆ ಕೂಗಿ--ಓ ದೇವರೇ, ಅವಳನ್ನು ಈಗ ಸ್ವಸ್ಥಮಾಡು ಎಂದು ನಾನು ನಿನ್ನನ್ನು ಬೇಡಿಕೊಳ್ಳುತ್ತೇನೆ ಅಂದನು.
|
14. ಆಗ ಕರ್ತನು ಮೋಶೆಗೆ--ಆಕೆಯ ತಂದೆ ಆಕೆಯ ಮುಖದ ಮೇಲೆ ಉಗುಳಿದರೆ ಆಕೆಯು ಏಳು ದಿವಸ ನಾಚಿಕೊಳ್ಳುವದಿಲ್ಲವೋ? ಆಕೆಯು ಏಳು ದಿವಸ ಪಾಳೆಯದ ಹೊರಗೆ ಮರೆಯಾಗಿದ್ದು ತರುವಾಯ ಸೇರಿಸಲ್ಪಡಲಿ ಎಂದು ಹೇಳಿದನು.
|
15. ಹಾಗೆಯೇ ಮಿರ್ಯಾಮಳನ್ನು ಪಾಳೆಯದ ಹೊರಗೆ ಏಳು ದಿವಸ ಮರೆಯಾಗಿಯಿಟ್ಟರು. ಮಿರ್ಯಾಮಳು ತಿರಿಗಿ ಒಳಗೆ ಬರುವ ವರೆಗೆ ಜನರು ಪ್ರಯಾಣ ಮಾಡಲಿಲ್ಲ.ತರುವಾಯ ಜನರು ಹಚೇರೋತಿನಿಂದ ಹೊರಟು ಪಾರಾನ್ ಅರಣ್ಯದಲ್ಲಿ ಇಳುಕೊಂಡರು.
|