ಪವಿತ್ರ ಬೈಬಲ್

ದೇವರ ಕೃಪೆಯ ಉಡುಗೊರೆ
ಯಾಜಕಕಾಂಡ
1. ಕರ್ತನು ಮೋಶೆಯನ್ನು ಕರೆದು ಸಭೆಯಗುಡಾರದೊಳಗಿಂದ ಅವನೊಂದಿಗೆ ಮಾತನಾಡಿ ಹೇಳಿದ್ದೇನಂದರೆ--
2. ಇಸ್ರಾಯೇಲ್‌ ಮಕ್ಕ ಳೊಂದಿಗೆ ಮಾತನಾಡಿ ಅವರಿಗೆ--ನಿಮ್ಮಲ್ಲಿ ಯಾವನಾ ದರೂ ಕರ್ತನಿಗೆ ಕಾಣಿಕೆಯನ್ನು ತರುವದಾದರೆ ನೀವು ನಿಮ್ಮ ಯಜ್ಞಗಳನ್ನು ಪಶುಗಳಿಂದಲೂ ಹಿಂಡು ಗಳಿಂದಲೂ ಮಂದೆಗಳಿಂದಲೂ ತರಬೇಕು.
3. ಅವನ ಯಜ್ಞವು ಹಿಂಡಿನ ದಹನಬಲಿಯಾಗಿದ್ದರೆ ಅವನು ದೋಷವಿಲ್ಲದ ಗಂಡನ್ನು ಅರ್ಪಿಸಲಿ; ಅವನು ಅದನ್ನು ತನ್ನ ಸ್ವಇಚ್ಛೆಯಿಂದ ಕರ್ತನ ಮುಂದೆ ಸಭೆಯ ಗುಡಾರದ ಬಾಗಿಲ ಬಳಿಯಲ್ಲಿ ಅರ್ಪಿಸಬೇಕು.
4. ಅವನು ತನ್ನ ಕೈಯನ್ನು ದಹನಬಲಿಯ ತಲೆಯ ಮೇಲೆ ಇಡಬೇಕು: ಹೀಗೆ ಅದು ಅವನಿಗೋಸ್ಕರ ಅವನ ಪ್ರಾಯಶ್ಚಿತ್ತಕ್ಕಾಗಿ ಅಂಗೀಕಾರವಾಗುವದು.
5. ಅವನು ಆ ಹೋರಿಯನ್ನು ಕರ್ತನ ಮುಂದೆ ವಧಿಸಬೇಕು; ಆಗ ಆರೋನನ ಕುಮಾರರಾದ ಯಾಜಕರು ರಕ್ತವನ್ನು ತಂದು ಸಭೆಯ ಗುಡಾರದ ಬಾಗಿಲ ಬಳಿಯಲ್ಲಿರುವ ಯಜ್ಞವೇದಿಯ ಸುತ್ತಲೂ ಚಿಮುಕಿಸಬೇಕು.
6. ಅವನು ಆ ದಹನಬಲಿಯ ಚರ್ಮವನ್ನು ಸುಲಿದು ಅದನ್ನು ತುಂಡುಗಳನ್ನಾಗಿ ಮಾಡಬೇಕು.
7. ಯಾಜಕನಾದ ಆರೋನನ ಕುಮಾ ರರು ಯಜ್ಞವೇದಿಯ ಮೇಲೆ ಬೆಂಕಿ ಇಟ್ಟು ಆ ಬೆಂಕಿಯ ಮೇಲೆ ಕ್ರಮವಾಗಿ ಕಟ್ಟಿಗೆಯನ್ನು ಇಡಬೇಕು.
8. ಆಗ ಆರೋನನ ಕುಮಾರರಾದ ಯಾಜಕರು ಅದರ ಭಾಗಗಳನ್ನು ಅಂದರೆ ತಲೆಯನ್ನೂ ಕೊಬ್ಬನ್ನೂ ಯಜ್ಞವೇದಿಯ ಮೇಲಿನ ಬೆಂಕಿಯ ಮೇಲಿರುವ ಕಟ್ಟಿಗೆಯ ಮೇಲೆ ಕ್ರಮವಾಗಿ ಇಡಬೇಕು;
9. ಅದರ ಕರುಳುಗಳನ್ನೂ ಕಾಲುಗಳನ್ನೂ ಅವನು ನೀರಿನಲ್ಲಿ ತೊಳೆಯಬೇಕು; ಯಾಜಕನು ಎಲ್ಲವನ್ನೂ ಯಜ್ಞವೇದಿಯ ಮೇಲೆ ಬೆಂಕಿಯಿಂದ ಸಮರ್ಪಿಸುವ ದಹನಬಲಿಯಂತೆಯೂ ಕರ್ತನಿಗೆ ಸುವಾಸನೆಯಾಗು ವಂತೆಯೂ ಸುಡಬೇಕು.
10. ದಹನಬಲಿಗೋಸ್ಕರ ತನ್ನ ಕಾಣಿಕೆಯು ಮಂದೆ ಯಿಂದಾದರೆ ಅವನು ಕುರಿಯನ್ನಾಗಲಿ ಆಡನ್ನಾಗಲಿ ದೋಷವಿಲ್ಲದ ಒಂದು ಗಂಡನ್ನು ತರಬೇಕು.
11. ಅವನು ಅದನ್ನು ಯಜ್ಞವೇದಿಯ ಉತ್ತರದ ಕಡೆಯಲ್ಲಿ ಕರ್ತನ ಮುಂದೆ ವಧಿಸಬೇಕು. ಇದಲ್ಲದೆ ಆರೋನನ ಕುಮಾರ ರಾದ ಯಾಜಕರು ಅದರ ರಕ್ತವನ್ನು ಯಜ್ಞವೇದಿಯ ಸುತ್ತಲೂ ಚಿಮುಕಿಸಬೇಕು.
12. ಅವನು ಅದರ ತಲೆ ಮತ್ತು ಕೊಬ್ಬಿನೊಂದಿಗೆ ತುಂಡುಗಳನ್ನಾಗಿ ಮಾಡ ಬೇಕು. ಯಾಜಕನು ಅವುಗಳನ್ನು ಕ್ರಮವಾಗಿ ಯಜ್ಞ ವೇದಿಯ ಮೇಲಿನ ಬೆಂಕಿಯ ಮೇಲಿರುವ ಕಟ್ಟಿಗೆಯ ಮೇಲೆ ಇಡಬೇಕು.
13. ಆದರೆ ಅವನು ಕರುಳುಗಳನ್ನೂ ಕಾಲುಗಳನ್ನೂ ನೀರಿನಿಂದ ತೊಳೆಯಬೇಕು; ಆಗ ಯಾಜಕನು ಅವೆಲ್ಲವುಗಳನ್ನು ತಂದು ಯಜ್ಞವೇದಿಯ ಮೇಲೆ ಸುಡಬೇಕು. ಬೆಂಕಿಯಿಂದ ಸಮರ್ಪಿಸುವ ದಹನಬಲಿಯ ಹಾಗೆಯೂ ಕರ್ತನಿಗೆ ಸುವಾಸನೆ ಯಾಗುವಂತೆಯೂ ಸುಡಬೇಕು.
14. ಅವನು ಕರ್ತನಿಗೆ ಸಮರ್ಪಿಸುವ ದಹನಬಲಿಯು ಪಕ್ಷಿಗಳಾಗಿದ್ದರೆ ಅವನು ತನ್ನ ಯಜ್ಞಕ್ಕಾಗಿ ಬೆಳವಕ್ಕಿಯ ನ್ನಾಗಲಿ ಪಾರಿವಾಳದ ಮರಿಯನ್ನಾಗಲಿ ತರಬೇಕು.
15. ಆಗ ಯಾಜಕನು ಅದನ್ನು ಯಜ್ಞವೇದಿಯ ಬಳಿಗೆ ತಂದು ಅದರ ತಲೆಯನ್ನು ಮುರಿದು ಯಜ್ಞವೇದಿಯ ಮೇಲೆ ಸುಡಬೇಕು; ಅದರ ರಕ್ತವನ್ನು ಯಜ್ಞವೇದಿಯ ಹೊರಬದಿಯಲ್ಲಿ ಹಿಂಡಬೇಕು.
16. ಇದಲ್ಲದೆ ಅವನು ಅದರ ರೆಕ್ಕೆ (ಪುಕ್ಕ)ಗಳೊಂದಿಗೆ ಕರುಳುಗಳನ್ನೂ ಕಿತ್ತು ಯಜ್ಞವೇದಿಯ ಬಳಿ ಪೂರ್ವಭಾಗದಲ್ಲಿ ಬೂದಿ ಯಿರುವ ಸ್ಥಳದಲ್ಲಿ ಬಿಸಾಡಬೇಕು.ಅವನು ಅದನ್ನು ರೆಕ್ಕೆಗಳೊಂದಿಗೆ ಹರಿಯಬೇಕು, ಆದರೆ ಬೇರೆಬೇರೆ ಯಾಗಿ ವಿಭಾಗಿಸಬಾರದು; ಆಗ ಯಾಜಕನು ಅದನ್ನು ಯಜ್ಞವೇದಿಯ ಬೆಂಕಿಮೇಲಿರುವ ಕಟ್ಟಿಗೆಯ ಮೇಲೆ ಸಮರ್ಪಿಸುವ ದಹನಬಲಿ ಹಾಗೆಯೂ ಕರ್ತನಿಗೆ ಸುವಾಸನೆಯಾಗುವಂತೆಯೂ ಸುಡಬೇಕು.
17. ಅವನು ಅದನ್ನು ರೆಕ್ಕೆಗಳೊಂದಿಗೆ ಹರಿಯಬೇಕು, ಆದರೆ ಬೇರೆಬೇರೆ ಯಾಗಿ ವಿಭಾಗಿಸಬಾರದು; ಆಗ ಯಾಜಕನು ಅದನ್ನು ಯಜ್ಞವೇದಿಯ ಬೆಂಕಿಮೇಲಿರುವ ಕಟ್ಟಿಗೆಯ ಮೇಲೆ ಸಮರ್ಪಿಸುವ ದಹನಬಲಿ ಹಾಗೆಯೂ ಕರ್ತನಿಗೆ ಸುವಾಸನೆಯಾಗುವಂತೆಯೂ ಸುಡಬೇಕು.

Notes

No Verse Added

Total 27 Chapters, Current Chapter 1 of Total Chapters 27
ಯಾಜಕಕಾಂಡ 1
1. ಕರ್ತನು ಮೋಶೆಯನ್ನು ಕರೆದು ಸಭೆಯಗುಡಾರದೊಳಗಿಂದ ಅವನೊಂದಿಗೆ ಮಾತನಾಡಿ ಹೇಳಿದ್ದೇನಂದರೆ--
2. ಇಸ್ರಾಯೇಲ್‌ ಮಕ್ಕ ಳೊಂದಿಗೆ ಮಾತನಾಡಿ ಅವರಿಗೆ--ನಿಮ್ಮಲ್ಲಿ ಯಾವನಾ ದರೂ ಕರ್ತನಿಗೆ ಕಾಣಿಕೆಯನ್ನು ತರುವದಾದರೆ ನೀವು ನಿಮ್ಮ ಯಜ್ಞಗಳನ್ನು ಪಶುಗಳಿಂದಲೂ ಹಿಂಡು ಗಳಿಂದಲೂ ಮಂದೆಗಳಿಂದಲೂ ತರಬೇಕು.
3. ಅವನ ಯಜ್ಞವು ಹಿಂಡಿನ ದಹನಬಲಿಯಾಗಿದ್ದರೆ ಅವನು ದೋಷವಿಲ್ಲದ ಗಂಡನ್ನು ಅರ್ಪಿಸಲಿ; ಅವನು ಅದನ್ನು ತನ್ನ ಸ್ವಇಚ್ಛೆಯಿಂದ ಕರ್ತನ ಮುಂದೆ ಸಭೆಯ ಗುಡಾರದ ಬಾಗಿಲ ಬಳಿಯಲ್ಲಿ ಅರ್ಪಿಸಬೇಕು.
4. ಅವನು ತನ್ನ ಕೈಯನ್ನು ದಹನಬಲಿಯ ತಲೆಯ ಮೇಲೆ ಇಡಬೇಕು: ಹೀಗೆ ಅದು ಅವನಿಗೋಸ್ಕರ ಅವನ ಪ್ರಾಯಶ್ಚಿತ್ತಕ್ಕಾಗಿ ಅಂಗೀಕಾರವಾಗುವದು.
5. ಅವನು ಹೋರಿಯನ್ನು ಕರ್ತನ ಮುಂದೆ ವಧಿಸಬೇಕು; ಆಗ ಆರೋನನ ಕುಮಾರರಾದ ಯಾಜಕರು ರಕ್ತವನ್ನು ತಂದು ಸಭೆಯ ಗುಡಾರದ ಬಾಗಿಲ ಬಳಿಯಲ್ಲಿರುವ ಯಜ್ಞವೇದಿಯ ಸುತ್ತಲೂ ಚಿಮುಕಿಸಬೇಕು.
6. ಅವನು ದಹನಬಲಿಯ ಚರ್ಮವನ್ನು ಸುಲಿದು ಅದನ್ನು ತುಂಡುಗಳನ್ನಾಗಿ ಮಾಡಬೇಕು.
7. ಯಾಜಕನಾದ ಆರೋನನ ಕುಮಾ ರರು ಯಜ್ಞವೇದಿಯ ಮೇಲೆ ಬೆಂಕಿ ಇಟ್ಟು ಬೆಂಕಿಯ ಮೇಲೆ ಕ್ರಮವಾಗಿ ಕಟ್ಟಿಗೆಯನ್ನು ಇಡಬೇಕು.
8. ಆಗ ಆರೋನನ ಕುಮಾರರಾದ ಯಾಜಕರು ಅದರ ಭಾಗಗಳನ್ನು ಅಂದರೆ ತಲೆಯನ್ನೂ ಕೊಬ್ಬನ್ನೂ ಯಜ್ಞವೇದಿಯ ಮೇಲಿನ ಬೆಂಕಿಯ ಮೇಲಿರುವ ಕಟ್ಟಿಗೆಯ ಮೇಲೆ ಕ್ರಮವಾಗಿ ಇಡಬೇಕು;
9. ಅದರ ಕರುಳುಗಳನ್ನೂ ಕಾಲುಗಳನ್ನೂ ಅವನು ನೀರಿನಲ್ಲಿ ತೊಳೆಯಬೇಕು; ಯಾಜಕನು ಎಲ್ಲವನ್ನೂ ಯಜ್ಞವೇದಿಯ ಮೇಲೆ ಬೆಂಕಿಯಿಂದ ಸಮರ್ಪಿಸುವ ದಹನಬಲಿಯಂತೆಯೂ ಕರ್ತನಿಗೆ ಸುವಾಸನೆಯಾಗು ವಂತೆಯೂ ಸುಡಬೇಕು.
10. ದಹನಬಲಿಗೋಸ್ಕರ ತನ್ನ ಕಾಣಿಕೆಯು ಮಂದೆ ಯಿಂದಾದರೆ ಅವನು ಕುರಿಯನ್ನಾಗಲಿ ಆಡನ್ನಾಗಲಿ ದೋಷವಿಲ್ಲದ ಒಂದು ಗಂಡನ್ನು ತರಬೇಕು.
11. ಅವನು ಅದನ್ನು ಯಜ್ಞವೇದಿಯ ಉತ್ತರದ ಕಡೆಯಲ್ಲಿ ಕರ್ತನ ಮುಂದೆ ವಧಿಸಬೇಕು. ಇದಲ್ಲದೆ ಆರೋನನ ಕುಮಾರ ರಾದ ಯಾಜಕರು ಅದರ ರಕ್ತವನ್ನು ಯಜ್ಞವೇದಿಯ ಸುತ್ತಲೂ ಚಿಮುಕಿಸಬೇಕು.
12. ಅವನು ಅದರ ತಲೆ ಮತ್ತು ಕೊಬ್ಬಿನೊಂದಿಗೆ ತುಂಡುಗಳನ್ನಾಗಿ ಮಾಡ ಬೇಕು. ಯಾಜಕನು ಅವುಗಳನ್ನು ಕ್ರಮವಾಗಿ ಯಜ್ಞ ವೇದಿಯ ಮೇಲಿನ ಬೆಂಕಿಯ ಮೇಲಿರುವ ಕಟ್ಟಿಗೆಯ ಮೇಲೆ ಇಡಬೇಕು.
13. ಆದರೆ ಅವನು ಕರುಳುಗಳನ್ನೂ ಕಾಲುಗಳನ್ನೂ ನೀರಿನಿಂದ ತೊಳೆಯಬೇಕು; ಆಗ ಯಾಜಕನು ಅವೆಲ್ಲವುಗಳನ್ನು ತಂದು ಯಜ್ಞವೇದಿಯ ಮೇಲೆ ಸುಡಬೇಕು. ಬೆಂಕಿಯಿಂದ ಸಮರ್ಪಿಸುವ ದಹನಬಲಿಯ ಹಾಗೆಯೂ ಕರ್ತನಿಗೆ ಸುವಾಸನೆ ಯಾಗುವಂತೆಯೂ ಸುಡಬೇಕು.
14. ಅವನು ಕರ್ತನಿಗೆ ಸಮರ್ಪಿಸುವ ದಹನಬಲಿಯು ಪಕ್ಷಿಗಳಾಗಿದ್ದರೆ ಅವನು ತನ್ನ ಯಜ್ಞಕ್ಕಾಗಿ ಬೆಳವಕ್ಕಿಯ ನ್ನಾಗಲಿ ಪಾರಿವಾಳದ ಮರಿಯನ್ನಾಗಲಿ ತರಬೇಕು.
15. ಆಗ ಯಾಜಕನು ಅದನ್ನು ಯಜ್ಞವೇದಿಯ ಬಳಿಗೆ ತಂದು ಅದರ ತಲೆಯನ್ನು ಮುರಿದು ಯಜ್ಞವೇದಿಯ ಮೇಲೆ ಸುಡಬೇಕು; ಅದರ ರಕ್ತವನ್ನು ಯಜ್ಞವೇದಿಯ ಹೊರಬದಿಯಲ್ಲಿ ಹಿಂಡಬೇಕು.
16. ಇದಲ್ಲದೆ ಅವನು ಅದರ ರೆಕ್ಕೆ (ಪುಕ್ಕ)ಗಳೊಂದಿಗೆ ಕರುಳುಗಳನ್ನೂ ಕಿತ್ತು ಯಜ್ಞವೇದಿಯ ಬಳಿ ಪೂರ್ವಭಾಗದಲ್ಲಿ ಬೂದಿ ಯಿರುವ ಸ್ಥಳದಲ್ಲಿ ಬಿಸಾಡಬೇಕು.ಅವನು ಅದನ್ನು ರೆಕ್ಕೆಗಳೊಂದಿಗೆ ಹರಿಯಬೇಕು, ಆದರೆ ಬೇರೆಬೇರೆ ಯಾಗಿ ವಿಭಾಗಿಸಬಾರದು; ಆಗ ಯಾಜಕನು ಅದನ್ನು ಯಜ್ಞವೇದಿಯ ಬೆಂಕಿಮೇಲಿರುವ ಕಟ್ಟಿಗೆಯ ಮೇಲೆ ಸಮರ್ಪಿಸುವ ದಹನಬಲಿ ಹಾಗೆಯೂ ಕರ್ತನಿಗೆ ಸುವಾಸನೆಯಾಗುವಂತೆಯೂ ಸುಡಬೇಕು.
17. ಅವನು ಅದನ್ನು ರೆಕ್ಕೆಗಳೊಂದಿಗೆ ಹರಿಯಬೇಕು, ಆದರೆ ಬೇರೆಬೇರೆ ಯಾಗಿ ವಿಭಾಗಿಸಬಾರದು; ಆಗ ಯಾಜಕನು ಅದನ್ನು ಯಜ್ಞವೇದಿಯ ಬೆಂಕಿಮೇಲಿರುವ ಕಟ್ಟಿಗೆಯ ಮೇಲೆ ಸಮರ್ಪಿಸುವ ದಹನಬಲಿ ಹಾಗೆಯೂ ಕರ್ತನಿಗೆ ಸುವಾಸನೆಯಾಗುವಂತೆಯೂ ಸುಡಬೇಕು.
Total 27 Chapters, Current Chapter 1 of Total Chapters 27
×

Alert

×

kannada Letters Keypad References