ಪವಿತ್ರ ಬೈಬಲ್

ದೇವರ ಕೃಪೆಯ ಉಡುಗೊರೆ
ಕೀರ್ತನೆಗಳು
1. ಆಕಾಶಗಳು ದೇವರ ಮಹಿಮೆಯನ್ನು ಸಾರುತ್ತವೆ; ಅಂತರಿಕ್ಷವು ಆತನ ಕೈ ಕೆಲಸ ವನ್ನು ತೋರಿಸುತ್ತದೆ.
2. ದಿನವು ದಿನಕ್ಕೆ ಮಾತನ್ನು ಉಚ್ಚರಿಸುತ್ತದೆ; ರಾತ್ರಿಯು ರಾತ್ರಿಗೆ ತಿಳುವಳಿಕೆಯನ್ನು ಅರುಹುತ್ತದೆ.
3. ಮಾತಿಲ್ಲ, ಭಾಷೆಯೂ ಇಲ್ಲ; ಅವುಗಳ ಶಬ್ದವು ಕೇಳುವದಿಲ್ಲ.
4. ಭೂಮಿಯ ಮೇಲೆಲ್ಲಾ ಅವು ಗಳ ಪ್ರಭುತ್ವವೂ ಭೂಲೋಕದ ಅಂತ್ಯದ ವರೆಗೆ ಅವುಗಳ ನುಡಿಗಳೂ ಹರಡಿವೆ; ಅವುಗಳಲ್ಲಿ ಆತನು ಸೂರ್ಯನಿಗೆ ಗುಡಾರವನ್ನು ಹಾಕಿದ್ದಾನೆ.
5. ಅವನು ಮದಲಿಂಗನ ಹಾಗೆ ತನ್ನ ಕೊಠಡಿಯಿಂದ ಹೊರಟುಬಂದು ಪರಾಕ್ರಮಶಾಲಿಯ ಹಾಗೆ ಓಡಲು ಸಂತೋಷಿಸುತ್ತಾನೆ.
6. ಆಕಾಶದ ಅಂತ್ಯದಿಂದ ಹೊರಟು ಅದರ ಅಂತ್ಯಗಳ ವರೆಗೆ ಸುತ್ತುತ್ತಾನೆ; ಅವನ ಬಿಸಿಲಿಗೆ ಮರೆಯಾದದ್ದು ಒಂದೂ ಇಲ್ಲ.
7. ಕರ್ತನ ನ್ಯಾಯಪ್ರಮಾಣವು ಸಂಪೂರ್ಣವಾಗಿದ್ದು ಪ್ರಾಣಕ್ಕೆ ಜೀವಕರವಾಗಿದೆ: ಕರ್ತನ ಸಾಕ್ಷಿಯು ಮೂರ್ಖರನ್ನು ಜ್ಞಾನಿಗಳನ್ನಾಗಿ ಮಾಡುತ್ತದೆ.
8. ಕರ್ತನ ಕಟ್ಟಳೆಗಳು ನ್ಯಾಯವಾದವುಗಳಾಗಿದ್ದು ಹೃದಯಕ್ಕೆ ಸಂತೋಷಕರವಾಗಿವೆ; ಕರ್ತನ ಆಜ್ಞೆಯು ಶುದ್ಧವಾ ದದ್ದು; ಕಣ್ಣುಗಳನ್ನು ಬೆಳಗಿಸುತ್ತದೆ.
9. ಕರ್ತನ ಭಯವು ಪವಿತ್ರವಾಗಿದ್ದು ಎಂದೆಂದಿಗೂ ನೆಲೆಯಾಗಿದೆ. ಕರ್ತನ ನ್ಯಾಯಗಳು ಸತ್ಯವಾಗಿದ್ದು ಒಟ್ಟಾಗಿ ನೀತಿಯುಳ್ಳವುಗ ಳಾಗಿವೆ.
10. ಅವು ಬಂಗಾರಕ್ಕಿಂತಲೂ ಬಹಳ ಅಪರಂಜಿ ಗಿಂತಲೂ ಅಪೇಕ್ಷಿಸತಕ್ಕವುಗಳು; ಜೇನಿಗಿಂತಲೂ ಶೋಧಿಸಿದ ಜೇನು ತುಪ್ಪಕ್ಕಿಂತಲೂ ಸಿಹಿಯಾದವು ಗಳು.
11. ನಿನ್ನ ಸೇವಕನು ಅವುಗಳಿಂದ ಎಚ್ಚರಿಸಲ್ಪಡು ತ್ತಾನೆ; ಅವುಗಳನ್ನು ಕೈಕೊಳ್ಳುವದರಲ್ಲಿ ದೊಡ್ಡ ಪ್ರತಿ ಫಲ ಉಂಟು.
12. ತನ್ನ ತಪ್ಪುಗಳನ್ನು ತಿಳಿದುಕೊಳ್ಳುವವನಾರು? ಗುಪ್ತವಾದ ಪಾಪಗಳಿಂದ ನನ್ನನ್ನು ನಿರ್ಮಲಮಾಡು.
13. ಗರ್ವದ ಪಾಪಗಳಿಂದ ನಿನ್ನ ಸೇವಕನನ್ನು ದೂರ ಮಾಡು. ಅವು ನನ್ನನ್ನು ಆಳದೆ ಇರಲಿ; ಆಗ ನಾನು ಸಂಪೂರ್ಣನಾಗಿದ್ದು ಮಹಾದ್ರೋಹದಿಂದ ನಿರಪರಾ ಧಿಯಾಗುವೆನು.ನನ್ನ ಬಲವೂ ನನ್ನ ವಿಮೋಚ ಕನೂ ಆಗಿರುವ ಕರ್ತನೇ, ನನ್ನ ಬಾಯಿಯ ಮಾತು ಗಳೂ ನನ್ನ ಹೃದಯದ ಧ್ಯಾನವೂ ನಿನ್ನ ಮುಂದೆ ಮೆಚ್ಚಿಕೆಯಾಗಿರಲಿ.
14. ನನ್ನ ಬಲವೂ ನನ್ನ ವಿಮೋಚ ಕನೂ ಆಗಿರುವ ಕರ್ತನೇ, ನನ್ನ ಬಾಯಿಯ ಮಾತು ಗಳೂ ನನ್ನ ಹೃದಯದ ಧ್ಯಾನವೂ ನಿನ್ನ ಮುಂದೆ ಮೆಚ್ಚಿಕೆಯಾಗಿರಲಿ.

Notes

No Verse Added

Total 150 Chapters, Current Chapter 19 of Total Chapters 150
ಕೀರ್ತನೆಗಳು 19

×

Alert

×

kannada Letters Keypad References