1. {#1ಯೆರೂಸಲೇಮಿನ ಭವಿಷ್ಯತ್ತು } [QS]ಅಸಹ್ಯವಾದ, ಮೈಲಿಗೆಯಾದ, [QE][QS2]ಶ್ರಮೆಪಡಿಸುವ ಪಟ್ಟಣಕ್ಕೆ ಕಷ್ಟ! [QE]
2. [QS]ಅವಳು ಯಾರಿಗೂ ವಿಧೇಯಳಾಗಲಿಲ್ಲ; [QE][QS2]ಶಿಕ್ಷೆಯನ್ನು ತೆಗೆದುಕೊಳ್ಳಲಿಲ್ಲ; [QE][QS]ಯೆಹೋವ ದೇವರಲ್ಲಿ ಭರವಸೆ ಇಡಲಿಲ್ಲ; [QE][QS2]ತನ್ನ ದೇವರ ಸಮೀಪಕ್ಕೆ ಬರಲಿಲ್ಲ. [QE]
3. [QS]ಅವಳ ಪ್ರಮುಖರು [QE][QS2]ಗರ್ಜಿಸುವ ಸಿಂಹಗಳು. [QE][QS]ಅವಳ ನ್ಯಾಯಾಧಿಪತಿಗಳು ಸಂಜೆಯ ತೋಳಗಳು. [QE][QS2]ಕಡಿಯುವುದಕ್ಕೆ ಎಲುಬನ್ನು ಕೂಡ ಮರುದಿನದವರೆಗೆ ಉಳಿಸವು. [QE]
4. [QS]ಅವಳ ಪ್ರವಾದಿಗಳು ಬಡಾಯಿ ಕೊಚ್ಚಿಕೊಳ್ಳುವವರೂ [QE][QS2]ವಿಶ್ವಾಸದ್ರೋಹಿಗಳೂ ಆಗಿದ್ದಾರೆ. [QE][QS]ಅವಳ ಯಾಜಕರು ಪರಿಶುದ್ಧ ಸ್ಥಳವನ್ನು ಅಪವಿತ್ರಮಾಡುತ್ತಾರೆ, [QE][QS2]ದೈವನಿಯಮವನ್ನು ಭಂಗಪಡಿಸುತ್ತಾರೆ. [QE]
5. [QS]ನೀತಿಯುಳ್ಳ ಯೆಹೋವ ದೇವರು ಅವಳ ಮಧ್ಯದಲ್ಲಿ ಇದ್ದಾರೆ. [QE][QS2]ಅವರು ಅನ್ಯಾಯ ಮಾಡುವುದಿಲ್ಲ; [QE][QS]ಪ್ರತಿ ಬೆಳಿಗ್ಗೆ ತಮ್ಮ ನ್ಯಾಯತೀರ್ಪನ್ನು ಬೆಳಕಿಗೆ ತರುತ್ತಾರೆ; [QE][QS2]ಅವರು ತಪ್ಪುವವರಲ್ಲ. [QE][QS2]ಆದರೆ ಅನ್ಯಾಯವಂತನು ನಾಚಿಕೆಯನ್ನು ಅರಿಯನು. [QE]
6. [QS]“ನಾನು ಜನಾಂಗಗಳನ್ನು ಕಡಿದು ಬಿಟ್ಟಿದ್ದೇನೆ. [QE][QS2]ಅವುಗಳ ಗೋಪುರಗಳು ಹಾಳಾಗಿವೆ. [QE][QS]ಅವುಗಳ ಬೀದಿಗಳನ್ನು ಯಾರೂ ಹಾದುಹೋಗದ ಹಾಗೆ ಹಾಳುಮಾಡಿದ್ದೆನೆ. [QE][QS2]ಅವುಗಳ ಪಟ್ಟಣಗಳು ನಾಶವಾದವು. [QE][QS]ಹೀಗೆ ಅಲ್ಲಿ ಯಾವನೂ ಇರುವುದಿಲ್ಲ; [QE][QS2]ಯಾವ ಮನುಷ್ಯನೂ ಅಲ್ಲಿ ವಾಸಿಸುವುದೂ ಇಲ್ಲ. [QE]
7. [QS]‘ನಿಶ್ಚಯವಾಗಿ ನೀನು ನನಗೆ ಭಯಪಟ್ಟು [QE][QS2]ಶಿಕ್ಷಣವನ್ನು ಹೊಂದುವೆ,’ [QE][QS2]ಹೀಗೆ ನಾನು ಅವರಿಗೆ ಶಿಕ್ಷೆ ವಿಧಿಸಿದರೂ [QE][QS]ಅವರ ನಿವಾಸವು ನಾಶವಾಗುವುದಿಲ್ಲ. [QE][QS2]ಆದರೆ ಅವರು ಬೇಗನೆ ಎದ್ದು [QE][QS2]ತಮ್ಮ ನಡತೆಯನ್ನೆಲ್ಲಾ ಕೆಡಿಸಿಕೊಂಡರು. [QE]
8. [QS]ಆದ್ದರಿಂದ ಯೆಹೋವ ದೇವರು ಹೀಗೆನ್ನುತ್ತಾರೆ: [QE][QS2]ನಾನು ಬೇಟೆ ಹಿಡಿಯಲಿಕ್ಕೆ ಏಳುವ ದಿವಸದವರೆಗೂ ನನಗೆ ಕಾದುಕೊಳ್ಳಿರಿ.” [QE][QS]ಏಕೆಂದರೆ ಜನಾಂಗಗಳನ್ನು ಕೂಡಿಸುವುದಕ್ಕೂ [QE][QS2]ರಾಜ್ಯಗಳನ್ನು ಒಟ್ಟು ಸೇರಿಸುವುದಕ್ಕೂ [QE][QS]ಅವುಗಳ ಮೇಲೆ ನನ್ನ ರೌದ್ರವನ್ನೂ [QE][QS2]ನನ್ನ ಕೋಪದ ಎಲ್ಲಾ ಉರಿಯನ್ನೂ [QE][QS]ಹೊಯ್ಯುವುದಕ್ಕೂ ತೀರ್ಮಾನಿಸಿಕೊಂಡಿದ್ದೇನೆ. [QE][QS2]ಏಕೆಂದರೆ ನನ್ನ ರೋಷದ ಬೆಂಕಿಯಿಂದ ಭೂಮಿಯೆಲ್ಲಾ ದಹಿಸಲಾಗುವುದು. [QE]
9. {#1ಇಸ್ರಾಯೇಲಿನ ಅವಶೇಷಗಳ ಪುನಃಸ್ಥಾಪನೆ } [QS]“ಆಗ ನಾನು ಜನರ ತುಟಿಗಳನ್ನು ಶುದ್ಧೀಕರಿಸುವೆನು. [QE][QS2]ಅವರೆಲ್ಲರೂ ಯೆಹೋವ ದೇವರ ಹೆಸರಿನಿಂದ ಮೊರೆಯಿಡುವರು. [QE][QS2]ಏಕಮನಸ್ಸಿನಿಂದ ಆತನಿಗೆ ಸೇವೆಮಾಡುವರು. [QE]
10. [QS]ಕೂಷಿನ ನದಿಗಳ ಆಚೆಯಿಂದ ನನ್ನ ಭಕ್ತರೂ ಚದರಿಹೋದ [QE][QS2]ನನ್ನ ಜನರೂ ನನಗೆ ಕಾಣಿಕೆಗಳನ್ನು ತರುವರು. [QE]
11. [QS]ಆ ದಿವಸದಲ್ಲಿ ನೀನು ನನಗೆ ವಿರೋಧವಾಗಿ ಮಾಡಿದ [QE][QS2]ದುಷ್ಕೃತ್ಯಗಳಿಗಾಗಿ ನಾಚಿಕೆಗೆ ಗುರಿಯಾಗುವುದಿಲ್ಲ; [QE][QS]ಏಕೆಂದರೆ ಆಗ ಗರ್ವದಿಂದ ಹೊಗಳಿಕೊಳ್ಳುವವರನ್ನು [QE][QS2]ನಿನ್ನ ಮಧ್ಯದೊಳಗಿಂದ ತೆಗೆದುಹಾಕುವೆನು. [QE][QS]ನನ್ನ ಪರಿಶುದ್ಧ ಪರ್ವತದಲ್ಲಿ ಇನ್ನು ಮೇಲೆ [QE][QS2]ನೀನು ಗರ್ವಪಡದೇ ಬಾಳುವೆ. [QE]
12. [QS]ಆದರೆ ನಿನ್ನ ಮಧ್ಯದಲ್ಲಿ [QE][QS2]ಸೌಮ್ಯರನ್ನೂ ದೀನರನ್ನೂ ಉಳಿಸುವೆನು. [QE][QS]ಇವರು ಯೆಹೋವ ದೇವರ ಹೆಸರಿನಲ್ಲಿ ನಂಬಿಕೆ ಇಡುವರು. [QE]
13. [QS]ಇಸ್ರಾಯೇಲಿನಲ್ಲಿ ಉಳಿದವರು [QE][QS2]ಅನ್ಯಾಯ ಮಾಡರು; ಸುಳ್ಳಾಡರು, [QE][QS]ಅವರ ಬಾಯಲ್ಲಿ ಮೋಸವಿರದು. [QE][QS2]ಅವರು ಮಂದೆಯಂತೆ ಮೇದು ಮಲಗುವರು. [QE][QS2]ಅವರನ್ನು ಭಯಪಡಿಸುವವನು ಒಬ್ಬನೂ ಇರುವುದಿಲ್ಲ.” [QE][PBR]
14. [QS]ಚೀಯೋನಿನ ಪುತ್ರಿಯೇ, ಹಾಡು. [QE][QS2]ಇಸ್ರಾಯೇಲೇ ಆರ್ಭಟಿಸು; [QE][QS]ಯೆರೂಸಲೇಮಿನ ಪುತ್ರಿಯೇ, [QE][QS2]ಪೂರ್ಣಹೃದಯದಿಂದ ಸಂಭ್ರಮಿಸಿ ಉಲ್ಲಾಸಪಡು. [QE]
15. [QS]ಯೆಹೋವ ದೇವರು ನಿನ್ನ ಶಿಕ್ಷೆಗಳನ್ನು ದೂರಮಾಡಿ [QE][QS2]ನಿನ್ನ ಶತ್ರುವನ್ನು ತೆಗೆದುಹಾಕಿದ್ದಾರೆ. [QE][QS]ಇಸ್ರಾಯೇಲಿನ ಅರಸನಾದ ಯೆಹೋವ ದೇವರು ನಿನ್ನ ಮಧ್ಯದಲ್ಲಿ ಇದ್ದಾರೆ. [QE][QS2]ಇನ್ನು ಮೇಲೆ ನಿನಗೆ ಯಾವ ಕೇಡಿನ ಭಯವಿರುವುದಿಲ್ಲ. [QE]
16. [QS]ಆ ದಿವಸದಲ್ಲಿ ಯೆರೂಸಲೇಮಿಗೆ ಹೀಗೆಂದು ಹೇಳುವರು, [QE][QS2]“ಚೀಯೋನೇ, ನೀನು ಭಯಪಡಬೇಡ; [QE][QS2]ನಿನ್ನ ಕೈಗಳು ಬಲಹೀನವಾಗದಿರಲಿ. [QE]
17. [QS]ನಿನ್ನ ದೇವರಾದ ಯೆಹೋವ ದೇವರು ನಿನ್ನೊಂದಿಗಿದ್ದಾರೆ. [QE][QS2]ನಿನ್ನನ್ನು ರಕ್ಷಿಸಲು ಶಕ್ತರಾಗಿದ್ದಾರೆ. [QE][QS]ನಿನ್ನಲ್ಲಿ ಬಹಳವಾಗಿ ಹರ್ಷಾನಂದಗೊಳ್ಳುವರು. [QE][QS2]ತಮ್ಮ ಪ್ರೀತಿಯ ನಿಮಿತ್ತ ಅವರು ಇನ್ನು ಮುಂದೆ ನಿನ್ನನ್ನು ಖಂಡಿಸುವುದಿಲ್ಲ, [QE][QS2]ಆದರೆ ಆನಂದ ಸ್ವರದಿಂದ ನಿನ್ನ ಮೇಲೆ ಉಲ್ಲಾಸಿಸುವರು.” [QE][PBR]
18. [QS]“ನೇಮಕವಾದ ಹಬ್ಬಗಳ ನಷ್ಟಕ್ಕಾಗಿರುವ ನಿಮ್ಮ ದುಃಖವನ್ನು [QE][QS2]ನಿಮ್ಮಿಂದ ನಾನು ತೆಗೆದುಬಿಡುವೆನು. [QE][QS2]ಅವು ನಿನಗೆ ಭಾರವಾಗಿಯೂ ನಿಂದೆಯಾಗಿಯೂ ಇದ್ದವು. [QE]
19. [QS]ಆ ಕಾಲದಲ್ಲಿ [QE][QS2]ನಿನ್ನನ್ನು ಪೀಡಿಸುವವರನ್ನೆಲ್ಲಾ ದಂಡಿಸುವೆನು, [QE][QS]ಕುಂಟಾದದ್ದನ್ನು ರಕ್ಷಿಸಿ, [QE][QS2]ಚದರಿಹೋದವರನ್ನು ಕೂಡಿಸುವೆನು; [QE][QS]ಅವರು ಅವಮಾನ ಹೊಂದಿದ ದೇಶಗಳಲ್ಲೆಲ್ಲಾ [QE][QS2]ಅವರಿಗೆ ಹೊಗಳಿಕೆಯನ್ನೂ ಕೀರ್ತಿಯನ್ನೂ ಉಂಟುಮಾಡುವೆನು. [QE]
20. [QS]ಆ ಕಾಲದಲ್ಲಿ ನಾನು ನಿಮ್ಮನ್ನು ಒಟ್ಟುಗೂಡಿಸುವೆನು. [QE][QS2]ಆ ಸಮಯದಲ್ಲಿ ನಾನು ಮನೆಗೆ ನಿಮ್ಮನ್ನು ಕರೆದುಕೊಂಡು ಬರುವೆನು. [QE][QS]ನಾನು ನಿಮ್ಮ ಸೌಭಾಗ್ಯವನ್ನು [QE][QS2]ನಿಮ್ಮ ಕಣ್ಣೆದುರಿಗೆ ಪುನಃಸ್ಥಾಪಿಸಿ [QE][QS]ಭೂಮಿಯ ಎಲ್ಲಾ ಜನರಲ್ಲಿ [QE][QS2]ನಿಮಗೆ ಕೀರ್ತಿಯನ್ನೂ ಹೊಗಳಿಕೆಯನ್ನೂ ಉಂಟುಮಾಡುವೆನು,” [QE][QS2]ಎಂದು ಯೆಹೋವ ದೇವರು ಹೇಳುತ್ತಾರೆ. [QE]