1. {#1ಅನ್ಯಜನರೊಂದಿಗೆ ಯೆಹೂದ ಮತ್ತು ಯೆರೂಸಲೇಮಿನ ತೀರ್ಪು } {#2ಪಶ್ಚಾತ್ತಾಪಪಡಲು ಯೆಹೂದಕ್ಕೆ ಆದೇಶ } [QS]ನಾಚಿಕೆ ಇಲ್ಲದ ಜನಾಂಗದವರೇ, [QE][QS2]ಒಟ್ಟಾಗಿ ಕೂಡಿಕೊಳ್ಳಿರಿ, ನೀವು ಒಟ್ಟಾಗಿ ಕೂಡಿಕೊಳ್ಳಿರಿ, [QE]
2. [QS]ತೀರ್ಪು ಕಾರ್ಯಗತಗೊಳ್ಳುವ ಮುಂಚೆ [QE][QS2]ಮತ್ತು ಆ ದಿನವು ಗಾಳಿ ಬೀಸಿದ ಹೊಟ್ಟಿನಂತೆ ಹಾರಿಹೋಗುವುದಕ್ಕಿಂತ ಮುಂಚೆ [QE][QS]ಯೆಹೋವ ದೇವರ ಉಗ್ರಕೋಪವು [QE][QS2]ನಿಮ್ಮ ಮೇಲೆ ಬರುವ ಮುಂಚೆ, [QE][QS]ಯೆಹೋವ ದೇವರ ಕೋಪದ ದಿನವು [QE][QS2]ನಿಮ್ಮ ಮೇಲೆ ಬರುವ ಮುಂಚೆ, [QE]
3. [QS]ದೇಶದ ದೀನರೇ, ಅವರ ಆಜ್ಞೆಗಳನ್ನು ಕೈಕೊಂಡು ನಡೆಯುವವರೆಲ್ಲರೇ [QE][QS2]ಯೆಹೋವ ದೇವರನ್ನು ಹುಡುಕಿರಿ. [QE][QS]ನೀತಿಯನ್ನು ಹುಡುಕಿರಿ, ವಿನಯವನ್ನು ಹುಡುಕಿರಿ. [QE][QS2]ಒಂದು ವೇಳೆ ಯೆಹೋವ ದೇವರ ಕೋಪದ ದಿವಸದಲ್ಲಿ ಆಶ್ರಯ ಹೊಂದುವಿರಿ. [QE]
4. {#2ಫಿಲಿಷ್ಟಿಯದ ವಿರೋಧವಾಗಿ } [QS]ಗಾಜವು ಕೈಬಿಡಲಾಗುವುದು; [QE][QS2]ಅಷ್ಕೆಲೋನ್ ಹಾಳಾಗುವುದು; [QE][QS]ಅಷ್ಡೋದನ್ನು ಮಧ್ಯಾಹ್ನದಲ್ಲಿ ಖಾಲಿಮಾಡುವರು, [QE][QS2]ಎಕ್ರೋನ್ ಕಿತ್ತೆಸೆಯಲಾಗುವುದು. [QE]
5. [QS]ಅಯ್ಯೋ, ಕರಾವಳಿಯಲ್ಲಿ ವಾಸಿಸುವ [QE][QS2]ಕೆರೇತ್ಯ ಜನಾಂಗವೇ, [QE][QS]ನಿನ್ನ ಗತಿಯನ್ನು ಏನು ಹೇಳಲಿ! [QE][QS2]ಕಾನಾನೇ, ಫಿಲಿಷ್ಟಿಯ ದೇಶವೇ, [QE][QS]ಯೆಹೋವ ದೇವರ ವಾಕ್ಯವು ನಿನಗೆ ವಿರುದ್ಧವಾಗಿದೆ, [QE][QS2]“ನಿನ್ನಲ್ಲಿ ನಿವಾಸಿಯೇ ನಿಲ್ಲದಂತೆ ನಿನ್ನನ್ನು ನಾಶಮಾಡುವೆನು,” [QE][QS2]ಎಂದು ಅವರು ಹೇಳುತ್ತಾರೆ. [QE]
6. [QS]ಸಮುದ್ರದ ತೀರವು [QE][QS2]ಕುರುಬರು ಮೇಯಿಸುವ ಸ್ಥಳಗಳಾಗಿಯೂ [QE][QS2]ಕುಂಟೆಗಳಾಗಿಯೂ ಕುರಿಹಟ್ಟಿಗಳಾಗಿಯೂ ಇರುವುದು. [QE]
7. [QS]ಅದು ಯೆಹೂದದ ಮನೆತನದಲ್ಲಿ [QE][QS2]ಉಳಿದವರ ವಶವಾಗುವುದು. [QE][QS2]ಅದರ ಮೇಲೆ ಮೇಯಿಸುವರು. [QE][QS]ಅಷ್ಕೆಲೋನಿನ ಮನೆತನಗಳಲ್ಲಿ [QE][QS2]ಸಾಯಂಕಾಲದಲ್ಲಿ ಅವರು ಮಲಗಿಕೊಳ್ಳುವರು. [QE][QS]ಏಕೆಂದರೆ ಅವರ ದೇವರಾದ ಯೆಹೋವ ದೇವರು, [QE][QS2]ಅವರನ್ನು ಪರಿಪಾಲಿಸಿ, ಮತ್ತೆ ಏಳಿಗೆಗೆ ತರುವರು. [QE]
8. {#2ಅಮ್ಮೋನು ಮತ್ತು ಮೋವಾಬುಗಳ ವಿರೋಧವಾಗಿ } [QS]“ಮೋವಾಬಿನ ನಿಂದೆಯನ್ನೂ [QE][QS2]ಅಮ್ಮೋನ್ಯರ ಬೈಗಳವನ್ನೂ [QE][QS]ಅವರು ನನ್ನ ಜನರನ್ನೂ ನಿಂದಿಸಿ, [QE][QS2]ಅವರ ಮೇರೆಗೆ ವಿರೋಧವಾಗಿ ತಮ್ಮನ್ನು ಹೆಚ್ಚಿಸಿಕೊಂಡದ್ದನ್ನೂ ನಾನು ಕೇಳಿದ್ದೇನೆ. [QE]
9. [QS]ಆದ್ದರಿಂದ ಇಸ್ರಾಯೇಲಿನ ದೇವರಾದ [QE][QS2]ಸೇನಾಧೀಶ್ವರ ಯೆಹೋವ ದೇವರು ಹೇಳುವುದೇನೆಂದರೆ: [QE][QS2]ನನ್ನ ಜೀವದಾಣೆ,” [QE][QS]“ನಿಶ್ಚಯವಾಗಿ ಮೋವಾಬು ಸೊದೋಮಿನ [QE][QS2]ಅಮ್ಮೋನ್ಯರು ಗೊಮೋರದ ಹಾಗೆ ಆಗುವುದು. [QE][QS]ತುರುಚಿ ಗಿಡಗಳನ್ನು ಹುಟ್ಟಿಸುವಂಥ ಉಪ್ಪಿನ ಕುಳಿಗಳುಳ್ಳಂಥ [QE][QS2]ನಿತ್ಯವಾಗಿ ಹಾಳಾದ ಸ್ಥಳವಾಗುವರು. [QE][QS]ನನ್ನ ಜನರಲ್ಲಿ ಉಳಿದವರು ಅವರನ್ನು ಸುಲಿದುಕೊಳ್ಳುವರು. [QE][QS2]ನನ್ನ ಜನರಲ್ಲಿ ಮಿಕ್ಕಾದವರು ಅವರ ದೇಶವನ್ನು ಸ್ವಾಧೀನಮಾಡಿಕೊಳ್ಳುವರು.” [QE][PBR]
10. [QS]ಅವರು ಸೇನಾಧೀಶ್ವರ ಯೆಹೋವ ದೇವರ ಜನರನ್ನು [QE][QS2]ಅವಮಾನಿಸಿ ಮತ್ತು ಅಪಹಾಸ್ಯ ಮಾಡಿದ್ದರಿಂದಲೇ [QE][QS2]ಅವರ ಗರ್ವಕ್ಕೋಸ್ಕರ ಇದೇ ಅವರಿಗೆ ಸಿಕ್ಕುವುದು. [QE]
11. [QS]ಅವರು ಭೂಮಿಯ ಎಲ್ಲಾ ದೇವರುಗಳನ್ನು ನಾಶಮಾಡುವಾಗ, [QE][QS2]ಯೆಹೋವ ದೇವರು ಅವರಿಗೆ ಭಯಂಕರವಾಗಿರುವರು. [QE][QS]ಇತರ ಜನಾಂಗಗಳ ದ್ವೀಪಗಳವರೆಲ್ಲರು [QE][QS2]ತಮ್ಮ ತಮ್ಮ ಸ್ಥಳಗಳಲ್ಲಿ ಅವರನ್ನು ಆರಾಧಿಸುವರು. [QE]
12. {#2ಕೂಷ್ಯರ ವಿರೋಧವಾಗಿ } [QS]ಕೂಷ್ ದೇಶದವರೇ, ನೀವೂ ಸಹ [QE][QS2]ನನ್ನ ಖಡ್ಗದಿಂದ ಹತರಾಗುವಿರಿ. [QE]
13. {#2ಅಸ್ಸೀರಿಯ } [QS]ಅವರು ತನ್ನ ಕೈಯನ್ನು ಉತ್ತರದ ಮೇಲೆ ಚಾಚಿ, [QE][QS2]ಅಸ್ಸೀರಿಯರನ್ನು ನಾಶಮಾಡಿ [QE][QS]ನಿನೆವೆಯನ್ನು ಹಾಳಾಗಿಯೂ [QE][QS2]ಮರುಭೂಮಿಯಂತೆ ಒಣಗಿದ್ದಾಗಿಯೂ ಮಾಡುವರು. [QE]
14. [QS]ಅದು ದನಗಳ ಹಿಂಡುಗಳಿಗೂ ಕುರಿಗಳ ಮಂದೆಗಳಿಗೂ [QE][QS2]ಎಲ್ಲಾ ತರದ ಪ್ರಾಣಿಗಳಿಗೂ ಮಲಗುವ ಹಟ್ಟಿ ಆಗುವುದು, [QE][QS]ಅದರ ಹಾಳುಬಿದ್ದ ಮನೆಯ ಕಂಬಗಳ ಮೇಲೆ [QE][QS2]ಗೂಬೆಗಳೂ, ಗುಬ್ಬಚ್ಚಿಗಳೂ ತಂಗುವುವು. [QE][QS]ಗೂಬೆಯ ಘೂಂಕಾರವು ಕಿಟಕಿಗಳಿಂದ ಕೇಳಿಬರುವುದು, [QE][QS2]ಕಾಗೆಗಳ ಕೂಗು ಬಾಗಿಲಿನ ಹೊಸ್ತಿಲಲ್ಲೇ ಕೇಳುವುದು, [QE][QS2]ದೇವದಾರು ಮರದ ತೊಲೆಗಳು ಕಳಚಿಬೀಳುವುವು. [QE]
15. [QS]“ನಿಶ್ಚಿಂತೆಯಾಗಿ ವಾಸಿಸಿದಂಥ ಉಲ್ಲಾಸದ ಪಟ್ಟಣ ನಾನೇ ಹೊರತು ಮತ್ತೊಂದಿಲ್ಲಾ,” [QE][QS2]ಎಂದು ತನ್ನೊಳಗೆ ಎಂದುಕೊಂಡಂಥ [QE][QS]ಸುಭದ್ರ ನಿನೆವೆ ಪಟ್ಟಣವು ಇದೇ. [QE][QS2]ಅದು ಎಷ್ಟೋ ಹಾಳಾಯಿತು; [QE][QS]ಮೃಗಗಳು ಮಲಗಿಕೊಳ್ಳುವ ಸ್ಥಳವಾಯಿತು. [QE][QS2]ಅದರಲ್ಲಿ ಹಾದುಹೋಗುವವರೆಲ್ಲರೂ [QE][QS2]ನಿಂದಿಸಿ ಅಪಹಾಸ್ಯ ಮಾಡುವರು. [QE]