ಪವಿತ್ರ ಬೈಬಲ್

ಓಪನ್ ಸಮಕಾಲೀನ ಆವೃತ್ತಿ (OCV)
ಪರಮ ಗೀತ
1. {ಸ್ನೇಹಿತರು } [QS]ನಿನ್ನ ಪ್ರಿಯನು ಎಲ್ಲಿಗೆ ಹೋದನು? [QE][QS2]ಸ್ತ್ರೀಯರಲ್ಲಿ ಅತಿ ಸುಂದರಿಯೇ, [QE][QS]ನಾವು ಅವನನ್ನು ನಿನ್ನ ಸಂಗಡ ಹುಡುಕುವಂತೆ [QE][QS2]ನಿನ್ನ ಪ್ರಿಯನು ಯಾವ ಕಡೆಗೆ ಹೋಗಿದ್ದಾನೆ? [QE]
2. {ಪ್ರಿಯತಮೆ } [QS]ನನ್ನ ಪ್ರಿಯನು ತೋಟಗಳಲ್ಲಿ ಮಂದೆ ಮೇಯಿಸುವುದಕ್ಕೂ, [QE][QS2]ನೆಲದಾವರೆಗಳನ್ನು ಕೊಯ್ದು ತರುವುದಕ್ಕೂ, [QE][QS]ಸುಗಂಧ ಸಸ್ಯಗಳಿರುವ [QE][QS2]ಉದ್ಯಾನವನಕ್ಕೆ ಹೋಗಿದ್ದಾನೆ. [QE]
3. [QS]ನನ್ನ ಪ್ರಿಯನು ನನ್ನವನೇ, ನಾನು ಅವನವಳೇ. [QE][QS2]ಅವನು ನೆಲದಾವರೆಗಳ ನಡುವೆ ಮಂದೆಯನ್ನು ಮೇಯಿಸುತ್ತಾನೆ. [QE]
4. {ಪ್ರಿಯಕರ } [QS]ನನ್ನ ಪ್ರಿಯಳೇ, ನೀನು ತಿರ್ಚ ನಗರದಂತೆ ಸುಂದರಿ, [QE][QS2]ಯೆರೂಸಲೇಮಿನ ಹಾಗೆ ರಮ್ಯಳು, [QE][QS2]ಧ್ವಜಗಳಿರುವ ದಂಡಿನ ಹಾಗೆ ಗಂಭೀರಳೂ ಆಗಿರುವೆ. [QE]
5. [QS]ನಿನ್ನ ಕಣ್ಣುಗಳನ್ನು ನನ್ನ ಕಡೆಯಿಂದ ತಿರುಗಿಸು, [QE][QS2]ಏಕೆಂದರೆ ಅವು ನನ್ನನ್ನು ಜಯಿಸಿವೆ. [QE][QS]ನಿನ್ನ ತಲೆಗೂದಲು ಗಿಲ್ಯಾದ್ ಪರ್ವತದಿಂದ ಇಳಿಯುವ [QE][QS2]ಮೇಕೆಯ ಮಂದೆಯಂತಿದೆ. [QE]
6. [QS]ನಿನ್ನ ಹಲ್ಲುಗಳ ಹೊಳಪು [QE][QS2]ಉಣ್ಣೆ ಕತ್ತರಿಸಿ ಸ್ನಾನಮಾಡಿಸಿದ ಕುರಿಮಂದೆಗೆ ಸಮಾನ. [QE][QS]ಅವು ಜೊತೆಯಾಗಿಯೇ ಇರುತ್ತವೆ. [QE][QS2]ಅವುಗಳಲ್ಲಿ ಒಂದೂ ಒಂಟಿಯಾಗಿರದು. [QE]
7. [QS]ಮುಸುಕಿನೊಳಗಿನ ನಿನ್ನ ಕೆನ್ನೆ [QE][QS2]ವಿಭಾಗಿಸಿದ ದಾಳಿಂಬೆಯ ಹಣ್ಣಿನ ಹಾಗೆ ಇದೆ. [QE]
8. [QS]ಅರಸನಿಗೆ ಅರವತ್ತು ಮಂದಿ ರಾಣಿಯರೂ [QE][QS2]ಎಂಬತ್ತು ಮಂದಿ ಉಪಪತ್ನಿಯರೂ [QE][QS2]ಲೆಕ್ಕವಿಲ್ಲದ ಕನ್ಯೆಯರೂ ಇದ್ದಾರೆ. [QE]
9. [QS]ಆದರೆ ನನಗೆ ನನ್ನ ಪಾರಿವಾಳವು, ನನ್ನ ಪರಿಪೂರ್ಣಳು ಒಬ್ಬಳೇ. [QE][QS2]ಇವಳು ತನ್ನ ತಾಯಿಗೆ ಒಬ್ಬಳೇ ಮಗಳು. [QE][QS2]ತನ್ನ ಹೆತ್ತವಳಿಗೆ ಪ್ರಿಯಳು. [QE][QS]ಕನ್ನಿಕೆಯರು ಇವಳನ್ನು ಕಂಡು ಆಶೀರ್ವದಿಸಿದರು. [QE][QS2]ಹೌದು, ರಾಣಿಯರೂ ಉಪಪತ್ನಿಯರೂ ಇವಳನ್ನು ಹೀಗೆಂದು ಹೊಗಳಿದರು: [QE]
10. {ಸ್ನೇಹಿತರು } [QS]ಮೆರವಣೆಗೆಯಲ್ಲಿ ನಕ್ಷತ್ರಗಳ ಹಾಗೆ ಗಂಭೀರಳೂ, [QE][QS2]ಚಂದ್ರನ ಹಾಗೆ ಸುಂದರಿಯೂ, ಸೂರ್ಯನ ಹಾಗೆ ಪ್ರಕಾಶಿಸುವವಳೂ [QE][QS2]ಆಗಿರುವ ಈ ಉದಯವಂತೆ ಯಾರು? [QE]
11. {ಪ್ರಿಯಕರ } [QS]ದ್ರಾಕ್ಷಿಬಳ್ಳಿಯು ಚಿಗುರಿದೆಯೋ, [QE][QS2]ದಾಳಿಂಬೆ ಗಿಡ ಹೂಬಿಟ್ಟಿದೆಯೋ ಎಂದು [QE][QS]ಕಣಿವೆಯಲ್ಲಿನ ಫಲಗಳನ್ನು ನೋಡಲು [QE][QS2]ನಾನು ಬಾದಾಮಿಯ ತೋಟಕ್ಕೆ ಹೋದೆನು. [QE]
12. [QS]ನಾನು ಅದನ್ನು ಅರಿತುಕೊಳ್ಳುವ ಮೊದಲು, [QE][QS2]ನನ್ನ ಆಸೆ ನನ್ನ ಜನ ಪ್ರಧಾನರ ನಡುವೆ ರಥದ ಮೇಲೆ ಕೂತಿರುವಂತೆ ನನ್ನನ್ನು ನಡೆಸಿತು. [QE]
13. {ಸ್ನೇಹಿತರು } [QS]ತಿರುಗಿ ಬಾ, ತಿರುಗಿ ಬಾ, ಶೂಲಮ್ ಊರಿನವಳೇ, [QE][QS2]ನಾವು ನಿನ್ನನ್ನು ನೋಡುವಂತೆ ತಿರುಗಿ ಬಾ, ತಿರುಗಿ ಬಾ! [QE]{ಪ್ರಿಯಕರ }[QS]ಎರಡು ಗುಂಪಿನ[* ಎರಡು ಗುಂಪಿನ ಹೀಬ್ರೂ ಭಾಷೆಯಲ್ಲಿ ಮಹನಯಿಮ್ ] ನರ್ತಕಿಯರ ನಡುವೆ ಕುಣಿಯುತ್ತಿರುವ, [QE][QS2]ಶೂಲಮ್ ಊರಿನವಳನ್ನು ನೀವು ನೋಡುವುದೇಕೆ? [QE][PBR]
ಒಟ್ಟು 8 ಅಧ್ಯಾಯಗಳು, ಆಯ್ಕೆ ಮಾಡಲಾಗಿದೆ ಅಧ್ಯಾಯ 6 / 8
1 2 3 4 5 6 7 8
ಸ್ನೇಹಿತರು 1 ನಿನ್ನ ಪ್ರಿಯನು ಎಲ್ಲಿಗೆ ಹೋದನು? ಸ್ತ್ರೀಯರಲ್ಲಿ ಅತಿ ಸುಂದರಿಯೇ, ನಾವು ಅವನನ್ನು ನಿನ್ನ ಸಂಗಡ ಹುಡುಕುವಂತೆ ನಿನ್ನ ಪ್ರಿಯನು ಯಾವ ಕಡೆಗೆ ಹೋಗಿದ್ದಾನೆ? ಪ್ರಿಯತಮೆ 2 ನನ್ನ ಪ್ರಿಯನು ತೋಟಗಳಲ್ಲಿ ಮಂದೆ ಮೇಯಿಸುವುದಕ್ಕೂ, ನೆಲದಾವರೆಗಳನ್ನು ಕೊಯ್ದು ತರುವುದಕ್ಕೂ, ಸುಗಂಧ ಸಸ್ಯಗಳಿರುವ ಉದ್ಯಾನವನಕ್ಕೆ ಹೋಗಿದ್ದಾನೆ. 3 ನನ್ನ ಪ್ರಿಯನು ನನ್ನವನೇ, ನಾನು ಅವನವಳೇ. ಅವನು ನೆಲದಾವರೆಗಳ ನಡುವೆ ಮಂದೆಯನ್ನು ಮೇಯಿಸುತ್ತಾನೆ. ಪ್ರಿಯಕರ 4 ನನ್ನ ಪ್ರಿಯಳೇ, ನೀನು ತಿರ್ಚ ನಗರದಂತೆ ಸುಂದರಿ, ಯೆರೂಸಲೇಮಿನ ಹಾಗೆ ರಮ್ಯಳು, ಧ್ವಜಗಳಿರುವ ದಂಡಿನ ಹಾಗೆ ಗಂಭೀರಳೂ ಆಗಿರುವೆ. 5 ನಿನ್ನ ಕಣ್ಣುಗಳನ್ನು ನನ್ನ ಕಡೆಯಿಂದ ತಿರುಗಿಸು, ಏಕೆಂದರೆ ಅವು ನನ್ನನ್ನು ಜಯಿಸಿವೆ. ನಿನ್ನ ತಲೆಗೂದಲು ಗಿಲ್ಯಾದ್ ಪರ್ವತದಿಂದ ಇಳಿಯುವ ಮೇಕೆಯ ಮಂದೆಯಂತಿದೆ. 6 ನಿನ್ನ ಹಲ್ಲುಗಳ ಹೊಳಪು ಉಣ್ಣೆ ಕತ್ತರಿಸಿ ಸ್ನಾನಮಾಡಿಸಿದ ಕುರಿಮಂದೆಗೆ ಸಮಾನ. ಅವು ಜೊತೆಯಾಗಿಯೇ ಇರುತ್ತವೆ. ಅವುಗಳಲ್ಲಿ ಒಂದೂ ಒಂಟಿಯಾಗಿರದು. 7 ಮುಸುಕಿನೊಳಗಿನ ನಿನ್ನ ಕೆನ್ನೆ ವಿಭಾಗಿಸಿದ ದಾಳಿಂಬೆಯ ಹಣ್ಣಿನ ಹಾಗೆ ಇದೆ. 8 ಅರಸನಿಗೆ ಅರವತ್ತು ಮಂದಿ ರಾಣಿಯರೂ ಎಂಬತ್ತು ಮಂದಿ ಉಪಪತ್ನಿಯರೂ ಲೆಕ್ಕವಿಲ್ಲದ ಕನ್ಯೆಯರೂ ಇದ್ದಾರೆ. 9 ಆದರೆ ನನಗೆ ನನ್ನ ಪಾರಿವಾಳವು, ನನ್ನ ಪರಿಪೂರ್ಣಳು ಒಬ್ಬಳೇ. ಇವಳು ತನ್ನ ತಾಯಿಗೆ ಒಬ್ಬಳೇ ಮಗಳು. ತನ್ನ ಹೆತ್ತವಳಿಗೆ ಪ್ರಿಯಳು. ಕನ್ನಿಕೆಯರು ಇವಳನ್ನು ಕಂಡು ಆಶೀರ್ವದಿಸಿದರು. ಹೌದು, ರಾಣಿಯರೂ ಉಪಪತ್ನಿಯರೂ ಇವಳನ್ನು ಹೀಗೆಂದು ಹೊಗಳಿದರು: ಸ್ನೇಹಿತರು 10 ಮೆರವಣೆಗೆಯಲ್ಲಿ ನಕ್ಷತ್ರಗಳ ಹಾಗೆ ಗಂಭೀರಳೂ, ಚಂದ್ರನ ಹಾಗೆ ಸುಂದರಿಯೂ, ಸೂರ್ಯನ ಹಾಗೆ ಪ್ರಕಾಶಿಸುವವಳೂ ಆಗಿರುವ ಈ ಉದಯವಂತೆ ಯಾರು? ಪ್ರಿಯಕರ 11 ದ್ರಾಕ್ಷಿಬಳ್ಳಿಯು ಚಿಗುರಿದೆಯೋ, ದಾಳಿಂಬೆ ಗಿಡ ಹೂಬಿಟ್ಟಿದೆಯೋ ಎಂದು ಕಣಿವೆಯಲ್ಲಿನ ಫಲಗಳನ್ನು ನೋಡಲು ನಾನು ಬಾದಾಮಿಯ ತೋಟಕ್ಕೆ ಹೋದೆನು. 12 ನಾನು ಅದನ್ನು ಅರಿತುಕೊಳ್ಳುವ ಮೊದಲು, ನನ್ನ ಆಸೆ ನನ್ನ ಜನ ಪ್ರಧಾನರ ನಡುವೆ ರಥದ ಮೇಲೆ ಕೂತಿರುವಂತೆ ನನ್ನನ್ನು ನಡೆಸಿತು. ಸ್ನೇಹಿತರು 13 ತಿರುಗಿ ಬಾ, ತಿರುಗಿ ಬಾ, ಶೂಲಮ್ ಊರಿನವಳೇ, ನಾವು ನಿನ್ನನ್ನು ನೋಡುವಂತೆ ತಿರುಗಿ ಬಾ, ತಿರುಗಿ ಬಾ! ಪ್ರಿಯಕರ ಎರಡು ಗುಂಪಿನ* ಎರಡು ಗುಂಪಿನ ಹೀಬ್ರೂ ಭಾಷೆಯಲ್ಲಿ ಮಹನಯಿಮ್ ನರ್ತಕಿಯರ ನಡುವೆ ಕುಣಿಯುತ್ತಿರುವ, ಶೂಲಮ್ ಊರಿನವಳನ್ನು ನೀವು ನೋಡುವುದೇಕೆ?
ಒಟ್ಟು 8 ಅಧ್ಯಾಯಗಳು, ಆಯ್ಕೆ ಮಾಡಲಾಗಿದೆ ಅಧ್ಯಾಯ 6 / 8
1 2 3 4 5 6 7 8
×

Alert

×

Kannada Letters Keypad References