1. {ಪ್ರಿಯತಮೆ } [QS]ಶಾರೋನಿನ ಗುಲಾಬಿ ಹೂವೂ, [QE][QS2]ತಗ್ಗಿನ ತಾವರೆಯೂ ನಾನೇ. [QE]
2. {ಪ್ರಿಯಕರ } [QS]ಮುಳ್ಳುಪೊದರಿನ ನಡುವೆ ತಾವರೆಯಂತೆ [QE][QS2]ನನ್ನ ಪ್ರಿಯಳು ಕನ್ಯಾಮಣಿಗಳಲ್ಲಿ ಶ್ರೇಷ್ಠಳು. [QE]
3. {ಪ್ರಿಯತಮೆ } [QS]ಅಡವಿಯ ಮರಗಳಲ್ಲಿ ಸೇಬಿನ ಮರದಂತೆ [QE][QS2]ಯುವಜನರಲ್ಲಿ ನನ್ನ ಪ್ರಿಯನಿದ್ದಾನೆ. [QE][QS]ನಾನು ಅವನ ನೆರಳಿನಲ್ಲಿ ಬಹು ಆನಂದವಾಗಿ ಕುಳಿತುಕೊಂಡೆನು. [QE][QS2]ಅವನ ಫಲವು ನನ್ನ ರುಚಿಗೆ ಮಧುರವಾಗಿತ್ತು. [QE]
4. [QS]ಅವನು ಔತಣದ ಮನೆಗೆ ನನ್ನನ್ನು ಕರೆದುಕೊಂಡು ಬಂದನು. [QE][QS2]ನನ್ನ ಮೇಲೆ ಇರುವ ಅವನ ಧ್ವಜವು ಪ್ರೀತಿಯೇ. [QE]
5. [QS]ದ್ರಾಕ್ಷೆಯಿಂದ ನನ್ನನ್ನು ಬಲಪಡಿಸು. [QE][QS2]ಸೇಬು ಹಣ್ಣುಗಳಿಂದ ನನ್ನನ್ನು ಚೇತನಗೊಳಿಸು. [QE][QS2]ಏಕೆಂದರೆ ನಾನು ಪ್ರೀತಿಯ ದೆಸೆಯಿಂದ ಅಸ್ವಸ್ಥಳಾಗಿದ್ದೇನೆ. [QE]
6. [QS]ಅವನ ಎಡಗೈ ನನ್ನ ತಲೆದಿಂಬಾಗಿರಲಿ. [QE][QS2]ಅವನ ಬಲಗೈ ನನ್ನನ್ನು ಅಪ್ಪಿಕೊಳ್ಳಲಿ. [QE]
7. [QS]ಯೆರೂಸಲೇಮಿನ ಪುತ್ರಿಯರೇ, [QE][QS2]ಮೆಚ್ಚುವ ಕಾಲಕ್ಕೆ ಮುಂಚೆ ನೀವು ಪ್ರೀತಿಯನ್ನು ಎಬ್ಬಿಸಬೇಡಿರಿ. [QE][QS]ಎಚ್ಚರಿಸಲೂ ಬೇಡಿರಿ ಎಂದು [QE][QS2]ಅಡವಿಯ ಹುಲ್ಲೆ ಹರಿಣಿಗಳ ಮೇಲೆ ನಿಮ್ಮಿಂದ ಪ್ರಮಾಣಮಾಡಿಸುತ್ತೇನೆ. [QE][PBR]
8. [QS]ನನ್ನ ಪ್ರಿಯನ ಸ್ವರವು! ಇಗೋ! [QE][QS2]ಅವನು ಪರ್ವತಗಳ ಮೇಲೆ ಹಾರುತ್ತಾ, [QE][QS]ಗುಡ್ಡಗಳ ಮೇಲೆ ಜಿಗಿಯುತ್ತಾ ಬರುತ್ತಿದ್ದಾನೆ. [QE]
9. [QS]ನನ್ನ ಪ್ರಿಯನು ಜಿಂಕೆಯ ಹಾಗೆ ಇದ್ದಾನೆ. [QE][QS2]ದುಪ್ಪಿಯ ಮರಿಯ ಹಾಗೆಯೂ ಇದ್ದಾನೆ. [QE][QS]ಇಗೋ! ಅವನು ನಮ್ಮ ಗೋಡೆಯ ಹಿಂದೆ ನಿಂತಿದ್ದಾನೆ. [QE][QS2]ಜಾಲಾಂತರಗಳಲ್ಲಿ ತನ್ನನ್ನು ತೋರಿಸಿ, ಕಿಟಿಕಿಗಳಿಂದ ನೋಡುತ್ತಿದ್ದಾನೆ. [QE]
10. [QS]ನನ್ನ ಪ್ರಿಯನು ನನ್ನೊಡನೆ ಮಾತನಾಡಿ ಹೀಗೆಂದನು: [QE][QS2]“ನನ್ನ ಪ್ರಿಯಳೇ ಎದ್ದು ಬಾ, [QE][QS2]ನನ್ನ ಸುಂದರಿಯೇ, ಹೊರಟು ಬಾ. [QE]
11. [QS]ಇಗೋ! ಚಳಿಗಾಲ ಕಳೆಯಿತು, [QE][QS2]ಮಳೆ ನಿಂತುಹೋಯಿತು. [QE]
12. [QS]ಪುಷ್ಪಗಳು ಭೂಮಿಯ ಮೇಲೆ ಕಾಣಿಸುತ್ತಿವೆ. [QE][QS2]ಪಕ್ಷಿಗಳು ಹಾಡುವ ಕಾಲ ಬಂತು. [QE][QS]ಪಾರಿವಾಳಗಳ ಸ್ವರ [QE][QS2]ನಮ್ಮ ಊರಲ್ಲಿ ಕೇಳಿಸುತ್ತಿದೆ. [QE]
13. [QS]ಅಂಜೂರದ ಕಾಯಿಗಳು ಹಣ್ಣಾಗಿವೆ. [QE][QS2]ದ್ರಾಕ್ಷಿಬಳ್ಳಿಗಳು ಹೂಬಿಟ್ಟಿವೆ. ಅದರ ಪರಿಮಳ ಹರಡುತ್ತಿದೆ. [QE][QS]ಎದ್ದು ಬಾ, ನನ್ನ ಪ್ರಿಯಳೇ, [QE][QS2]ನನ್ನ ಸುಂದರಿಯೇ, ನನ್ನೊಂದಿಗೆ ಬಾ.” [QE]
14. {ಪ್ರಿಯಕರ } [QS]ಬಂಡೆಯ ಬಿರುಕುಗಳಲ್ಲಿಯೂ [QE][QS2]ಸಂದುಗಳ ಮರೆಯಲ್ಲಿಯೂ ಇರುವ ನನ್ನ ಪಾರಿವಾಳವೇ ಬಾ. [QE][QS]ನಿನ್ನ ಮುಖವನ್ನು ನನಗೆ ತೋರಿಸು. [QE][QS2]ನಿನ್ನ ಸ್ವರವನ್ನು ನನಗೆ ಕೇಳಿಸು. [QE][QS]ನಿನ್ನ ಸ್ವರವು ಇಂಪಾಗಿದೆ. [QE][QS2]ನಿನ್ನ ಮುಖವು ಸುಂದರವಾಗಿಯೂ ಇದೆ. [QE]
15. [QS]ದ್ರಾಕ್ಷಿತೋಟಗಳನ್ನು ಹಾಳುಮಾಡುವ ನರಿಗಳನ್ನೂ [QE][QS2]ನರಿಮರಿಗಳನ್ನೂ ಹಿಡಿಯಿರಿ. [QE][QS2]ನಮ್ಮ ದ್ರಾಕ್ಷಿತೋಟಗಳಲ್ಲಿ ಹೂಗಳು ಅರಳಿವೆ. [QE]
16. {ಪ್ರಿಯತಮೆ } [QS]ನನ್ನ ಪ್ರಿಯನು ನನ್ನವನೇ, ನಾನು ಅವನವಳೇ. [QE][QS2]ಅವನು ನೆಲದಾವರೆಗಳ ನಡುವೆ ಮಂದೆಯನ್ನು ಮೇಯಿಸುತ್ತಾನೆ. [QE]
17. [QS]ನನ್ನ ಪ್ರಿಯನೇ, [QE][QS2]ಹೊತ್ತು ಮೂಡುವ ಮುಂಚೆ [QE][QS]ಕತ್ತಲು ಕವಿಯುವ ಮೊದಲು ಹೊರಟು ಬಾ. [QE][QS2]ಒರಟಾದ ಪರ್ವತಗಳ[* ಅಥವಾ ಬೆತೇರ್ ಪರ್ವತ ] [QE][QS]ಮೇಲಿರುವ ಜಿಂಕೆಯಂತಿರು. [QE][QS2]ಹೌದು, ಪ್ರಾಯದ ದುಪ್ಪಿಯಂತೆಯೂ ಇರು. [QE][PBR]