1. {#1ರೂತಳು ಬೋವಜನನ್ನು ಸಂಧಿಸಿದ್ದು }
2. [PS]ನೊವೊಮಿಯ ಗಂಡ ಎಲೀಮೆಲೆಕನ ಗೋತ್ರದಲ್ಲಿ ಬೋವಜ ಎಂಬ ಹೆಸರುಳ್ಳ ಪ್ರಬಲ ಮತ್ತು ಧನವಂತನಾಗಿರುವ ಬಂಧುವಿದ್ದನು. [PE][PS]ಮೋವಾಬ್ಯಳಾದ ರೂತಳು ನೊವೊಮಿಗೆ, “ನಾನು ಹೊಲಕ್ಕೆ ಹೋಗಿ ಯಾರ ದಯೆಯು ನನಗೆ ಆಗುವುದೋ ಅವನ ಹೊಲದಲ್ಲಿ ಹಕ್ಕಲ ತೆನೆಗಳನ್ನು ಕೂಡಿಸಿ ಕೊಳ್ಳುವೆನು,” ಎಂದಳು. [PE][PS]ನೊವೊಮಿ, “ಹೋಗಿ ಬಾ, ಮಗಳೇ,” ಎಂದಳು.
3. ರೂತಳು ಹೊಲದಲ್ಲಿ ಕೊಯ್ಯುವವರ ಹಿಂದೆ ಹೋಗಿ ತೆನೆಗಳನ್ನು ಆಯ್ದುಕೊಳ್ಳುತ್ತಿದ್ದಳು. ಆ ಹೊಲದ ಭಾಗ ಎಲೀಮೆಲೆಕನ ಕುಲದವನಾದ ಬೋವಜನದಾಗಿತ್ತು. [PE]
4.
5. [PS]ಬೋವಜನು ಬೇತ್ಲೆಹೇಮಿನಿಂದ ಬಂದು ಕೊಯ್ಯುವವರಿಗೆ, “ಯೆಹೋವ ದೇವರು ನಿಮ್ಮ ಸಂಗಡ ಇರಲಿ,” ಎಂದನು. [PE][PS]ಅದಕ್ಕೆ ಅವರು, “ಯೆಹೋವ ದೇವರು ನಿನ್ನನ್ನು ಆಶೀರ್ವದಿಸಲಿ,” ಎಂದರು. [PE]
6. [PS]ಬೋವಜನು ಕೊಯ್ಯುವವರ ಮೇಲೆ ಮೇಲ್ವಿಚಾರಕನಾಗಿದ್ದ ತನ್ನ ಸೇವಕನಿಗೆ, “ಈ ಯುವತಿ ಯಾರು?” ಎಂದನು. [PE][PS]ಅದಕ್ಕೆ ಆ ಮೇಲ್ವಿಚಾರಕನು, “ಇವಳು ಮೋವಾಬ್ ಸೀಮೆಯಿಂದ ನೊವೊಮಿಯ ಸಂಗಡ ಹಿಂದಿರುಗಿ ಬಂದ ಮೋವಾಬಿನ ಯುವತಿ.
7. ಇವಳು, ‘ಕೊಯ್ಯುವವರ ಹಿಂದೆ ಹೋಗಿ ಸಿವುಡುಗಳ ನಡುವೆ ನಾನು ಹಕ್ಕಲಾರಿಸಿಕೊಳ್ಳುವುದಕ್ಕೆ ಅಪ್ಪಣೆಯಾಗಬೇಕು’ ಎಂದು ಕೇಳಿಕೊಂಡಳು. ಸ್ವಲ್ಪ ಸಮಯ ನೆರಳಿನಲ್ಲಿ ವಿಶ್ರಮಿಸಿಕೊಂಡು, ಬೆಳಗಿನಿಂದ ಈವರೆಗೂ ಇಲ್ಲಿಯೇ ಇದ್ದಾಳೆ,” ಎಂದನು. [PE]
8. [PS]ಆಗ ಬೋವಜನು ರೂತಳಿಗೆ, “ನನ್ನ ಮಗಳೇ, ನನ್ನ ಮಾತನ್ನು ಕೇಳು. ನೀನು ಹಕ್ಕಲಾದುಕೊಳ್ಳಲು ಬೇರೆಯವರ ಹೊಲಕ್ಕೆ ಹೋಗದೆ, ಈ ಸ್ಥಳವನ್ನು ಬಿಟ್ಟು ಹೊರಡದೆ, ಇಲ್ಲಿಯೇ ನನ್ನ ದಾಸಿಗಳ ಜೊತೆಯಲ್ಲಿಯೇ ಇರು.
9. ನಿನ್ನ ಕಣ್ಣುಗಳು ಅವರು ಕೊಯ್ಯುವ ಹೊಲದ ಮೇಲೆ ಇರಲಿ. ಅವರ ಹಿಂದೆಯೇ ಹೋಗು, ಯಾರೂ ನಿನ್ನನ್ನು ಮುಟ್ಟದಹಾಗೆ ಅವರಿಗೆ ಆಜ್ಞಾಪಿಸಿದ್ದೇನೆ. ನಿನಗೆ ದಾಹವಾದರೆ ನೀನು ಪಾತ್ರೆಗಳ ಬಳಿಗೆ ಹೋಗಿ ನನ್ನ ಸೇವಕರು ಸೇದಿಟ್ಟ ನೀರನ್ನು ಕುಡಿ,” ಎಂದನು. [PE]
10.
11. [PS]ಆಗ ಅವಳು ಅವನಿಗೆ ಸಾಷ್ಟಾಂಗಬಿದ್ದು ವಂದಿಸಿ ಅವನಿಗೆ, “ಪರದೇಶಿಯಾದ ನನ್ನನ್ನು ಕಂಡು ನನ್ನ ಮೇಲೆ ನಿಮ್ಮ ದಯೆಯನ್ನು ತೋರಿಸಿದ್ದು ಏಕೆ?” ಎಂದಳು. [PE][PS]ಆಗ ಬೋವಜನು ಅವಳಿಗೆ ಉತ್ತರವಾಗಿ, “ನಿನ್ನ ಗಂಡನು ಸತ್ತ ತರುವಾಯ ನೀನು ನಿನ್ನ ಅತ್ತೆಗೋಸ್ಕರ ಮಾಡಿದ್ದೆಲ್ಲವೂ ನೀನು ನಿನ್ನ ತಂದೆತಾಯಿಗಳನ್ನೂ ನೀನು ಹುಟ್ಟಿದ ದೇಶವನ್ನೂ ಬಿಟ್ಟು ನೀನು ಎಂದಿಗೂ ಅರಿಯದ ಜನರ ಬಳಿಗೆ ಬಂದದ್ದೂ ನನಗೆ ಚೆನ್ನಾಗಿ ತಿಳಿದಿದೆ.
12. ನೀನು ಮಾಡಿದ್ದಕ್ಕೆ ಯೆಹೋವ ದೇವರು ನಿನಗೆ ಬದಲು ಕೊಡಲಿ. ಇಸ್ರಾಯೇಲ್ ದೇವರಾದ ಯೆಹೋವ ದೇವರ ರೆಕ್ಕೆಗಳ ಕೆಳಗೆ ಆಶ್ರಯಿಸಿಕೊಳ್ಳಲು ಬಂದ ನಿನಗೆ ಅವರಿಂದ ದೊಡ್ಡ ಪ್ರತಿಫಲ ಅನುಗ್ರಹಿಸಲಿ,” ಎಂದನು. [PE]
13.
14. [PS]ಅದಕ್ಕೆ ಅವಳು, “ನನ್ನ ಒಡೆಯನೇ, ನನಗೆ ನಿಮ್ಮ ದೃಷ್ಟಿಯಲ್ಲಿ ಉಪಕಾರವಾಗಲಿ. ಏಕೆಂದರೆ ನಾನು ನಿಮ್ಮ ದಾಸಿಯರಲ್ಲಿ ಒಬ್ಬಳಂತೆ ನಿಲ್ಲುವುದಕ್ಕೂ ಯೋಗ್ಯಳಲ್ಲ ಆದರೂ ದಯೆಯಿಂದ ಮಾತನಾಡಿಸಿದಿರಿ” ಎಂದಳು. [PE][PS]ಊಟದ ವೇಳೆಯಲ್ಲಿ ಬೋವಜನು ಅವಳಿಗೆ, “ಇಲ್ಲಿ ಹತ್ತಿರ ಬಂದು ರೊಟ್ಟಿ ತಿಂದು ತುತ್ತನ್ನು ಹುಳಿರಸದಲ್ಲಿ ಅದ್ದಿ ತಿನ್ನು,” ಎಂದನು. [PE][PS]ಅವಳು ಕೊಯ್ಯುವವರ ಬಳಿಯಲ್ಲಿ ಕುಳಿತಳು. ಆಗ ಅವನು ಅವಳಿಗೆ ಹುರಿದ ತೆನೆಯನ್ನು ಕೊಟ್ಟನು. ಅವಳು ತಿಂದು ತೃಪ್ತಿಪಟ್ಟು, ಇನ್ನೂ ಉಳಿಸಿಕೊಂಡಳು.
15. ಅವಳು ಹಕ್ಕಲಾದುಕೊಳ್ಳಲು ಏಳುವಾಗ ಬೋವಜನು ತನ್ನ ಸೇವಕರಿಗೆ ಆಜ್ಞಾಪಿಸಿ, “ಇವಳು ಕೊಯ್ದ ಸಿವುಡುಗಳ ಮಧ್ಯದಲ್ಲಿ ಹಕ್ಕಲಾದುಕೊಳ್ಳಲಿ. ನೀವು ಅವಳನ್ನು ಬೈಯಬೇಡಿರಿ.
16. ಅವಳು ಹಕ್ಕಲಾದುಕೊಳ್ಳುವ ಹಾಗೆ ನೀವು ಅವಳಿಗೋಸ್ಕರ ಸಿವುಡುಗಳಲ್ಲಿ ಕೆಲವನ್ನು ಕೆಳಗೆ ಹಾಕಿರಿ. ಅವಳನ್ನು ಗದರಿಸಬೇಡಿರಿ,” ಎಂದನು. [PE]
17. [PS]ಹಾಗೆಯೇ ಅವಳು ಸಾಯಂಕಾಲದವರೆಗೂ ಹೊಲದಲ್ಲಿ ಹಕ್ಕಲಾದುಕೊಂಡಳು. ಅವಳು ಹಕ್ಕಲಾದುಕೊಂಡದ್ದನ್ನು ಬಡಿದಾಗ ಅದು ಹೆಚ್ಚು ಕಡಿಮೆ ಮೂವತ್ತು ಕಿಲೋಗ್ರಾಂ ಜವೆಗೋಧಿಯಾಗಿತ್ತು.
18. ಅವಳು ಅದನ್ನು ತೆಗೆದುಕೊಂಡು ಪಟ್ಟಣಕ್ಕೆ ಬಂದಳು. ಅವಳು ಹಕ್ಕಲಾದುಕೊಂಡಿದ್ದನ್ನು ಅವಳ ಅತ್ತೆಯು ಕಂಡಳು. ರೂತಳು ತೃಪ್ತಿಯಾದ ಮೇಲೆ ಉಳಿಸಿ ತಂದದ್ದನ್ನು ಅವಳಿಗೆ ಕೊಟ್ಟಳು. [PE]
19.
20. [PS]ಆಗ ರೂತಳ ಅತ್ತೆಯು ಆಕೆಗೆ, “ನೀನು ಈ ಹೊತ್ತು ಎಲ್ಲಿ ಹಕ್ಕಲಾದುಕೊಂಡೆ? ಎಲ್ಲಿ ಕೆಲಸಮಾಡಿದೆ? ನಿನ್ನನ್ನು ಪರಾಮರಿಸಿದವನಿಗೆ ಆಶೀರ್ವಾದವಾಗಲಿ,” ಎಂದಳು. [PE][PS]ಅದಕ್ಕವಳು ತಾನು ಯಾರ ಹತ್ತಿರ ಕೆಲಸಮಾಡಿದಳೋ ಅದನ್ನು ತನ್ನ ಅತ್ತೆಗೆ ತಿಳಿಸಿ, “ನಾನು ಈ ಹೊತ್ತು ಕೆಲಸ ಮಾಡಿದವನ ಹೆಸರು ಬೋವಜ,” ಎಂದು ಹೇಳಿದಳು. [PE]
21. [PS]ನೊವೊಮಿ ತನ್ನ ಸೊಸೆಗೆ, “ಜೀವಂತ ಇರುವವರಿಗೂ ಸತ್ತವರಿಗೂ ದಯೆ ತೋರಿಸುತ್ತಿರುವ ಯೆಹೋವ ದೇವರಿಂದ ಅವನಿಗೆ ಆಶೀರ್ವಾದವಾಗಲಿ,” ಎಂದಳು. ಅನಂತರ ನೊವೊಮಿ ಅವಳಿಗೆ, “ಆ ಮನುಷ್ಯನು ನಮ್ಮ ಬಂಧುವೂ ವಿಮೋಚಿಸತಕ್ಕ[* ವಿಮೋಚಿಸತಕ್ಕ ಅಂದರೆ ತೀವ್ರ ತೊಂದರೆಯಲ್ಲಿರುವ ಸಂಬಂಧಿಯನ್ನು ರಕ್ಷಿಸುವ ಬಾಧ್ಯತೆ ] ನಮ್ಮ ಬಾಧ್ಯರಲ್ಲಿ ಒಬ್ಬನಾಗಿಯೂ ಇದ್ದಾನೆ,” ಎಂದಳು. [PE]
22. [PS]ಅದಕ್ಕೆ ಮೋವಾಬ್ಯಳಾದ ರೂತಳು, “ಅವನು, ‘ನನ್ನ ಪೈರೆಲ್ಲಾ ಕೊಯ್ದು ತೀರುವವರೆಗೂ, ನೀನು ನನ್ನ ಕೆಲಸದವರ ಸಂಗಡ ಕೂಡಿಕೊಂಡಿರು’ ಎಂದು ನನಗೆ ಹೇಳಿದನು,” ಎಂದಳು. [PE]
23. [PS]ಆಗ ನೊವೊಮಿಯು ತನ್ನ ಸೊಸೆಯಾದ ರೂತಳಿಗೆ, “ನನ್ನ ಮಗಳೇ, ಮತ್ತೊಂದು ಹೊಲದಲ್ಲಿ ಮನುಷ್ಯರು ನಿನ್ನನ್ನು ಕಂಡುಕೊಳ್ಳದ ಹಾಗೆ ನೀನು ಅವನ ದಾಸಿಗಳ ಸಂಗಡ ಹೊರಟುಹೋಗುವುದು ಒಳ್ಳೆಯದು,” ಎಂದಳು. [PE][PS]ಹೀಗೆ ಅವಳು ತನ್ನ ಅತ್ತೆಯ ಮನೆಯಲ್ಲಿ ವಾಸವಾಗಿದ್ದು ಹಾಗೆಯೇ ಜವೆಗೋಧಿಯ ಸುಗ್ಗಿಯು ತೀರುವವರೆಗೆ ಹಕ್ಕಲಾದುಕೊಳ್ಳುವುದಕ್ಕೋಸ್ಕರ ಬೋವಜನ ದಾಸಿಗಳ ಸಂಗಡ ಕೂಡಿಕೊಂಡು ಹೋಗುತ್ತಿದ್ದಳು. [PE]