ಪವಿತ್ರ ಬೈಬಲ್

ಓಪನ್ ಸಮಕಾಲೀನ ಆವೃತ್ತಿ (OCV)
ಕೀರ್ತನೆಗಳು
1. [QS]ಬನ್ನಿರಿ, ಯೆಹೋವ ದೇವರಿಗೆ ಉತ್ಸಾಹ ಗೀತೆಯನ್ನು ಹಾಡೋಣ; [QE][QS2]ನಮ್ಮ ರಕ್ಷಣೆಯ ಬಂಡೆಯಾಗಿರುವ ದೇವರಿಗೆ ಜಯಧ್ವನಿ ಮಾಡೋಣ. [QE]
2. [QS]ಧನ್ಯವಾದದೊಡನೆ ಅವರ ಸನ್ನಿಧಿಯಲ್ಲಿ ಮುಂದೆ ಬಂದು [QE][QS2]ಕೀರ್ತನೆಗಳಿಂದ ಅವರಿಗೆ ಜಯಧ್ವನಿ ಮಾಡೋಣ. [QE][PBR]
3. [QS]ಯೆಹೋವ ದೇವರು ಮಹಾ ದೇವರು, [QE][QS2]ಎಲ್ಲಾ ದೇವರುಗಳ ಮೇಲೆ ಮಹಾರಾಜರೂ ಆಗಿದ್ದಾರೆ. [QE]
4. [QS]ಅವರ ಕೈಯಲ್ಲಿ ಭೂಮಿಯ ಆಳವಾದ ಸ್ಥಳಗಳು ಇವೆ; [QE][QS2]ಬೆಟ್ಟಗಳ ಬಲವು ಅವರದೇ. [QE]
5. [QS]ಸಮುದ್ರವು ಅವರಿಗೆ ಸೇರಿದ್ದು; ಅವರು ಅದನ್ನು ಸೃಷ್ಟಿಸಿದರು; [QE][QS2]ಅವರ ಕೈಗಳು ಒಣ ಭೂಮಿಯನ್ನು ರೂಪಿಸಿದವು. [QE][PBR]
6. [QS]ಬನ್ನಿರಿ, ಆರಾಧಿಸೋಣ; [QE][QS2]ನಮ್ಮನ್ನು ಸೃಷ್ಟಿಸಿದ ಯೆಹೋವ ದೇವರ ಮುಂದೆ ಮೊಣಕಾಲು ಊರೋಣ. [QE]
7. [QS]ಅವರು ನಮ್ಮ ದೇವರು; [QE][QS2]ನಾವು ಅವರ ಹುಲ್ಲುಗಾವಲಿನ ಪ್ರಜೆಗಳಾಗಿದ್ದೇವೆ, [QE][QS2]ನಾವು ಅವರು ಪರಿಪಾಲಿಸುವ ಮಂದೆಯೂ ಆಗಿದ್ದೇವೆ. [QE][PBR] [QS]ನೀವು ಈ ಹೊತ್ತು ಅವರ ಸ್ವರಕ್ಕೆ ಕಿವಿಗೊಟ್ಟರೆ ಎಷ್ಟೋ ಒಳ್ಳೆಯದು. [QE]
8. [QS]“ನೀವು ಮೆರೀಬದಲ್ಲಿ[* ಮೆರೀಬ ಅಂದರೆ ಜಗಳ ಎಂದು ಅರ್ಥ. ನೋಡಿರಿ ವಿಮೋ 17:7; ಅರಣ್ಯ 17:7 ] ಮಾಡಿದಂತೆ, [QE][QS2]ಹೌದು, ಅಂದು ನೀವು ಮರುಭೂಮಿಯ ಮಸ್ಸಾ [† ಮಸ್ಸಾ ಅಂದರೆ ಪರೀಕ್ಷೆ. ನೋಡಿರಿ ವಿಮೋ 17:7; ಅರಣ್ಯ 17:7 ] ಎಂಬ ಸ್ಥಳದಲ್ಲಿ ಮಾಡಿದಂತೆ, ನಿಮ್ಮ ಹೃದಯವನ್ನು ಕಠಿಣಪಡಿಸಬೇಡಿರಿ. [QE]
9. [QS]ನಾನು ಮಾಡಿದ್ದನ್ನು ಕಂಡಿದ್ದರೂ, [QE][QS2]ಅಲ್ಲಿ ನಿಮ್ಮ ಪಿತೃಗಳು ನನ್ನನ್ನು ಶೋಧಿಸಿ, ನನ್ನನ್ನು ಪರೀಕ್ಷಿಸಿದರು. [QE]
10. [QS]ನಾಲ್ವತ್ತು ವರ್ಷ ಆ ಸಂತತಿಗೆ ಬೇಸರಗೊಂಡು, [QE][QS2]‘ಇವರು ತಮ್ಮ ಹೃದಯದಲ್ಲಿ ತಪ್ಪಿಹೋಗುವ ಜನರಾಗಿದ್ದಾರೆ, [QE][QS2]ನನ್ನ ಮಾರ್ಗಗಳನ್ನು ಇವರು ಅರಿಯರು,’ ಎಂದೆನು. [QE]
11. [QS]ಆದ್ದರಿಂದ, ‘ಅವರು ನನ್ನ ವಿಶ್ರಾಂತಿಯಲ್ಲಿ ಸೇರುವುದೇ ಇಲ್ಲ,’ ” ಎಂದು [QE][QS2]ನಾನು ಅಸಂತೋಷದಿಂದ ಆಣೆ ಇಟ್ಟುಕೊಂಡೆನು. [QE]
ಒಟ್ಟು 150 ಅಧ್ಯಾಯಗಳು, ಆಯ್ಕೆ ಮಾಡಲಾಗಿದೆ ಅಧ್ಯಾಯ 95 / 150
1 ಬನ್ನಿರಿ, ಯೆಹೋವ ದೇವರಿಗೆ ಉತ್ಸಾಹ ಗೀತೆಯನ್ನು ಹಾಡೋಣ; ನಮ್ಮ ರಕ್ಷಣೆಯ ಬಂಡೆಯಾಗಿರುವ ದೇವರಿಗೆ ಜಯಧ್ವನಿ ಮಾಡೋಣ. 2 ಧನ್ಯವಾದದೊಡನೆ ಅವರ ಸನ್ನಿಧಿಯಲ್ಲಿ ಮುಂದೆ ಬಂದು ಕೀರ್ತನೆಗಳಿಂದ ಅವರಿಗೆ ಜಯಧ್ವನಿ ಮಾಡೋಣ. 3 ಯೆಹೋವ ದೇವರು ಮಹಾ ದೇವರು, ಎಲ್ಲಾ ದೇವರುಗಳ ಮೇಲೆ ಮಹಾರಾಜರೂ ಆಗಿದ್ದಾರೆ. 4 ಅವರ ಕೈಯಲ್ಲಿ ಭೂಮಿಯ ಆಳವಾದ ಸ್ಥಳಗಳು ಇವೆ; ಬೆಟ್ಟಗಳ ಬಲವು ಅವರದೇ. 5 ಸಮುದ್ರವು ಅವರಿಗೆ ಸೇರಿದ್ದು; ಅವರು ಅದನ್ನು ಸೃಷ್ಟಿಸಿದರು; ಅವರ ಕೈಗಳು ಒಣ ಭೂಮಿಯನ್ನು ರೂಪಿಸಿದವು. 6 ಬನ್ನಿರಿ, ಆರಾಧಿಸೋಣ; ನಮ್ಮನ್ನು ಸೃಷ್ಟಿಸಿದ ಯೆಹೋವ ದೇವರ ಮುಂದೆ ಮೊಣಕಾಲು ಊರೋಣ. 7 ಅವರು ನಮ್ಮ ದೇವರು; ನಾವು ಅವರ ಹುಲ್ಲುಗಾವಲಿನ ಪ್ರಜೆಗಳಾಗಿದ್ದೇವೆ, ನಾವು ಅವರು ಪರಿಪಾಲಿಸುವ ಮಂದೆಯೂ ಆಗಿದ್ದೇವೆ. ನೀವು ಈ ಹೊತ್ತು ಅವರ ಸ್ವರಕ್ಕೆ ಕಿವಿಗೊಟ್ಟರೆ ಎಷ್ಟೋ ಒಳ್ಳೆಯದು. 8 “ನೀವು ಮೆರೀಬದಲ್ಲಿ* ಮೆರೀಬ ಅಂದರೆ ಜಗಳ ಎಂದು ಅರ್ಥ. ನೋಡಿರಿ ವಿಮೋ 17:7; ಅರಣ್ಯ 17:7 ಮಾಡಿದಂತೆ, ಹೌದು, ಅಂದು ನೀವು ಮರುಭೂಮಿಯ ಮಸ್ಸಾ ಮಸ್ಸಾ ಅಂದರೆ ಪರೀಕ್ಷೆ. ನೋಡಿರಿ ವಿಮೋ 17:7; ಅರಣ್ಯ 17:7 ಎಂಬ ಸ್ಥಳದಲ್ಲಿ ಮಾಡಿದಂತೆ, ನಿಮ್ಮ ಹೃದಯವನ್ನು ಕಠಿಣಪಡಿಸಬೇಡಿರಿ. 9 ನಾನು ಮಾಡಿದ್ದನ್ನು ಕಂಡಿದ್ದರೂ, ಅಲ್ಲಿ ನಿಮ್ಮ ಪಿತೃಗಳು ನನ್ನನ್ನು ಶೋಧಿಸಿ, ನನ್ನನ್ನು ಪರೀಕ್ಷಿಸಿದರು. 10 ನಾಲ್ವತ್ತು ವರ್ಷ ಆ ಸಂತತಿಗೆ ಬೇಸರಗೊಂಡು, ‘ಇವರು ತಮ್ಮ ಹೃದಯದಲ್ಲಿ ತಪ್ಪಿಹೋಗುವ ಜನರಾಗಿದ್ದಾರೆ, ನನ್ನ ಮಾರ್ಗಗಳನ್ನು ಇವರು ಅರಿಯರು,’ ಎಂದೆನು. 11 ಆದ್ದರಿಂದ, ‘ಅವರು ನನ್ನ ವಿಶ್ರಾಂತಿಯಲ್ಲಿ ಸೇರುವುದೇ ಇಲ್ಲ,’ ” ಎಂದು ನಾನು ಅಸಂತೋಷದಿಂದ ಆಣೆ ಇಟ್ಟುಕೊಂಡೆನು.
ಒಟ್ಟು 150 ಅಧ್ಯಾಯಗಳು, ಆಯ್ಕೆ ಮಾಡಲಾಗಿದೆ ಅಧ್ಯಾಯ 95 / 150
×

Alert

×

Kannada Letters Keypad References