ಪವಿತ್ರ ಬೈಬಲ್

ಓಪನ್ ಸಮಕಾಲೀನ ಆವೃತ್ತಿ (OCV)
ಕೀರ್ತನೆಗಳು
1. [QS]ಯೆಹೋವ ದೇವರು ಆಳಿಕೆ ಮಾಡುತ್ತಿದ್ದಾರೆ. ಘನತೆಯನ್ನು ಹೊದ್ದುಕೊಂಡಿದ್ದಾರೆ. [QE][QS2]ಬಲದಿಂದ ತಮ್ಮ ನಡುವನ್ನು ಕಟ್ಟಿಕೊಂಡಿದ್ದಾರೆ. [QE][QS2]ಆದುದರಿಂದ ಲೋಕವು ಸಹ ಸ್ಥಿರವಾಗಿದೆ, ಕದಲುವುದಿಲ್ಲ. [QE]
2. [QS]ದೇವರೇ, ನಿಮ್ಮ ಸಿಂಹಾಸನವು ಪೂರ್ವಕಾಲದಿಂದ ಸ್ಥಿರವಾಗಿದೆ. [QE][QS2]ಯುಗಯುಗದಿಂದ ನೀವು ಇದ್ದೀರಿ. [QE][PBR]
3. [QS]ಯೆಹೋವ ದೇವರೇ, ಸಮುದ್ರಗಳಲ್ಲಿ ಪ್ರವಾಹಗಳು ಮೊರೆಯುತ್ತಿವೆ. [QE][QS2]ಸಮುದ್ರಗಳು ತಮ್ಮ ಧ್ವನಿಯನ್ನು ಎತ್ತಿವೆ. [QE][QS2]ಸಮುದ್ರಗಳು ತಮ್ಮ ಅಲೆಗಳ ಘೋಷವನ್ನು ಎತ್ತಿವೆ. [QE]
4. [QS]ಮಹಾಸಾಗರದ ಶಬ್ದಕ್ಕಿಂತಲೂ, [QE][QS2]ಸಮುದ್ರದ ಬಲವಾದ ಅಲೆಗಳಿಗಿಂತಲೂ [QE][QS2]ಉನ್ನತದಲ್ಲಿರುವ ಯೆಹೋವ ದೇವರು ಬಲಿಷ್ಠರಾಗಿದ್ದಾರೆ. [QE][PBR]
5. [QS]ದೇವರೇ, ನಿಮ್ಮ ಶಾಸನಗಳು ಬಹಳ ನಿಶ್ಚಯವಾದವುಗಳು. [QE][QS2]ಯೆಹೋವ ದೇವರೇ, ಪರಿಶುದ್ಧತೆಯು ಸದಾಕಾಲ [QE][QS2]ನಿಮ್ಮ ಆಲಯವನ್ನು ಅಲಂಕರಿಸುತ್ತದೆ. [QE]
ಒಟ್ಟು 150 ಅಧ್ಯಾಯಗಳು, ಆಯ್ಕೆ ಮಾಡಲಾಗಿದೆ ಅಧ್ಯಾಯ 93 / 150
1 ಯೆಹೋವ ದೇವರು ಆಳಿಕೆ ಮಾಡುತ್ತಿದ್ದಾರೆ. ಘನತೆಯನ್ನು ಹೊದ್ದುಕೊಂಡಿದ್ದಾರೆ. ಬಲದಿಂದ ತಮ್ಮ ನಡುವನ್ನು ಕಟ್ಟಿಕೊಂಡಿದ್ದಾರೆ. ಆದುದರಿಂದ ಲೋಕವು ಸಹ ಸ್ಥಿರವಾಗಿದೆ, ಕದಲುವುದಿಲ್ಲ. 2 ದೇವರೇ, ನಿಮ್ಮ ಸಿಂಹಾಸನವು ಪೂರ್ವಕಾಲದಿಂದ ಸ್ಥಿರವಾಗಿದೆ. ಯುಗಯುಗದಿಂದ ನೀವು ಇದ್ದೀರಿ. 3 ಯೆಹೋವ ದೇವರೇ, ಸಮುದ್ರಗಳಲ್ಲಿ ಪ್ರವಾಹಗಳು ಮೊರೆಯುತ್ತಿವೆ. ಸಮುದ್ರಗಳು ತಮ್ಮ ಧ್ವನಿಯನ್ನು ಎತ್ತಿವೆ. ಸಮುದ್ರಗಳು ತಮ್ಮ ಅಲೆಗಳ ಘೋಷವನ್ನು ಎತ್ತಿವೆ. 4 ಮಹಾಸಾಗರದ ಶಬ್ದಕ್ಕಿಂತಲೂ, ಸಮುದ್ರದ ಬಲವಾದ ಅಲೆಗಳಿಗಿಂತಲೂ ಉನ್ನತದಲ್ಲಿರುವ ಯೆಹೋವ ದೇವರು ಬಲಿಷ್ಠರಾಗಿದ್ದಾರೆ. 5 ದೇವರೇ, ನಿಮ್ಮ ಶಾಸನಗಳು ಬಹಳ ನಿಶ್ಚಯವಾದವುಗಳು. ಯೆಹೋವ ದೇವರೇ, ಪರಿಶುದ್ಧತೆಯು ಸದಾಕಾಲ ನಿಮ್ಮ ಆಲಯವನ್ನು ಅಲಂಕರಿಸುತ್ತದೆ.
ಒಟ್ಟು 150 ಅಧ್ಯಾಯಗಳು, ಆಯ್ಕೆ ಮಾಡಲಾಗಿದೆ ಅಧ್ಯಾಯ 93 / 150
×

Alert

×

Kannada Letters Keypad References