1. [QS]ಯೆಹೋವ ದೇವರು ತಮ್ಮ ಪಟ್ಟಣದ ಅಸ್ತಿವಾರವನ್ನು [QE][QS2]ಪರಿಶುದ್ಧ ಪರ್ವತದಲ್ಲಿ ಸ್ಥಾಪಿಸಿದ್ದಾರೆ. [QE]
2. [QS]ದೇವರು ಚೀಯೋನಿನ ದ್ವಾರಗಳನ್ನು [QE][QS2]ಯಾಕೋಬನ ಎಲ್ಲಾ ನಿವಾಸಗಳಿಗಿಂತ ಹೆಚ್ಚಾಗಿ ಪ್ರೀತಿ ಮಾಡುತ್ತಾರೆ. [QE][PBR]
3. [QS]ದೇವರ ಪಟ್ಟಣವೇ, [QE][QS2]ನಿನ್ನ ವಿಷಯವಾದ ಮಹಿಮೆಯು ಏನೆಂದರೆ, [QE]
4. [QS]“ರಾಹಬ್,[* ಈಜಿಪ್ಟ್ ಕಾವ್ಯಾತ್ಮಕ ಹೆಸರು ] ಬಾಬೆಲ್ ದೇಶಗಳವರನ್ನು, [QE][QS2]ನನ್ನನ್ನು ಬಲ್ಲವರಲ್ಲಿ ಎಣಿಸುವೆನು. [QE][QS]ಇಗೋ, ಫಿಲಿಷ್ಟಿಯ, ಟೈರ್, ಕೂಷ್ ಜನಾಂಗಗಳು, [QE][QS2]‘ಚೀಯೋನಿನಲ್ಲೇ ಹುಟ್ಟಿದವು.’ ” [QE]
5. [QS]ಚೀಯೋನಿನ ವಿಷಯವಾಗಿ, [QE][QS2]“ಸಕಲ ಜನಾಂಗದವರೂ ಚೀಯೋನಿನಲ್ಲಿ ಹುಟ್ಟಿದರು. [QE][QS2]ಮಹೋನ್ನತರೇ ಅದನ್ನು ಸ್ಥಿರಪಡಿಸುವರು,” ಎಂದು ಹೇಳುವರು. [QE]
6. [QS]ಯೆಹೋವ ದೇವರು ಜನಾಂಗಗಳ ಗ್ರಂಥದಲ್ಲಿ ಬರೆಯುವಾಗ, [QE][QS2]“ಚೀಯೋನಿನಲ್ಲಿ ಇವನು ಹುಟ್ಟಿದನು,” ಎಂದು ಬರೆಯುವರು. [QE][PBR]
7. [QS]“ನನ್ನ ಎಲ್ಲಾ ಬುಗ್ಗೆಗಳು ನಿಮ್ಮಲ್ಲಿಯೇ ಇವೆ,” [QE][QS2]ಎಂದು ಸಂಗೀತಕಾರರು ಹಾಡುವರು. [QE]