1. [QS]ಯೆಹೋವ ದೇವರೇ, ನನಗೆ ಉತ್ತರಕೊಡಿರಿ. [QE][QS2]ನಾನು ದೀನನೂ ಅಗತ್ಯತೆಯಲ್ಲಿ ಇರುವವನೂ ಆಗಿದ್ದೇನೆ. [QE]
2. [QS]ನನ್ನ ಪ್ರಾಣವನ್ನು ಕಾಪಾಡಿರಿ, ನಾನು ನಿಮ್ಮ ಭಕ್ತ, [QE][QS2]ನೀವು ನನ್ನ ದೇವರು. [QE][QS]ನಿಮ್ಮಲ್ಲಿ ಭರವಸವಿಟ್ಟಿರುವ ನಿಮ್ಮ ಸೇವಕನನ್ನು ರಕ್ಷಿಸಿರಿ.
3. ಯೆಹೋವ ದೇವರೇ, ನನ್ನನ್ನು ಕರುಣಿಸಿರಿ. [QE][QS2]ನಿಮಗೆ ದಿನವೆಲ್ಲಾ ಮೊರೆಯಿಡುತ್ತೇನೆ. [QE]
4. [QS]ನಿಮ್ಮ ಸೇವಕನ ಪ್ರಾಣವನ್ನು ಸಂತೋಷಪಡಿಸಿರಿ. [QE][QS2]ಯೆಹೋವ ದೇವರೇ, ನಿಮ್ಮಲ್ಲೇ ನನ್ನ ಪ್ರಾಣವನ್ನು ಇಟ್ಟಿದ್ದೇನೆ. [QE][PBR]
5. [QS]ಯೆಹೋವ ದೇವರೇ, ನೀವು ಒಳ್ಳೆಯವರೂ ಕ್ಷಮಿಸುವುದಕ್ಕೆ ಸಿದ್ಧರೂ ಆಗಿದ್ದೀರಿ. [QE][QS2]ನಿಮ್ಮನ್ನು ಬೇಡುವವರೆಲ್ಲರಿಗೆ ಪ್ರೀತಿಯಲ್ಲಿ ಸಮೃದ್ಧಿವಂತರೂ ಆಗಿರುವಿರಿ. [QE]
6. [QS]ಯೆಹೋವ ದೇವರೇ, ನನ್ನ ಪ್ರಾರ್ಥನೆಗೆ ಕಿವಿಗೊಡಿರಿ. [QE][QS2]ನನ್ನ ವಿಜ್ಞಾಪನೆಗಳ ಸ್ವರವನ್ನು ಆಲೈಸಿರಿ. [QE]
7. [QS]ನನ್ನ ಇಕ್ಕಟ್ಟಿನ ದಿವಸದಲ್ಲಿ ನಿಮ್ಮನ್ನು ಕರೆಯುವೆನು. [QE][QS2]ನೀವು ನನಗೆ ಉತ್ತರ ಕೊಡುವಿರಿ. [QE][PBR]
8. [QS]ಯೆಹೋವ ದೇವರೇ, ದೇವರುಗಳಲ್ಲಿ ನಿಮ್ಮ ಹಾಗೆ ಯಾರೂ ಇಲ್ಲ. [QE][QS2]ನಿಮ್ಮ ಕೆಲಸಗಳ ಹಾಗೆ ಒಂದೂ ಇಲ್ಲ. [QE]
9. [QS]ಯೆಹೋವ ದೇವರೇ, ನೀವು ಉಂಟುಮಾಡಿದ ಜನಾಂಗದವರೆಲ್ಲರೂ ಬಂದು [QE][QS2]ನಿಮ್ಮ ಮುಂದೆ ಅಡ್ಡಬಿದ್ದು, [QE][QS2]ನಿಮ್ಮ ಹೆಸರಿಗೆ ಮಹಿಮೆ ಸಲ್ಲಿಸುವರು. [QE]
10. [QS]ನೀವು ದೊಡ್ಡವರೂ ಅದ್ಭುತಗಳನ್ನು ಮಾಡುವವರೂ ಆಗಿದ್ದೀರಿ. [QE][QS2]ನೀವೊಬ್ಬರೇ ದೇವರು. [QE][PBR]
11. [QS]ಯೆಹೋವ ದೇವರೇ, ನಿಮ್ಮ ಮಾರ್ಗವನ್ನು ನನಗೆ ಬೋಧಿಸಿರಿ. [QE][QS2]ಆಗ, ನಿಮ್ಮ ಸತ್ಯದಲ್ಲಿ ನಡೆದುಕೊಳ್ಳುವೆನು; [QE][QS]ನಿಮ್ಮ ಹೆಸರಿಗೆ ಭಯಪಡುವಂತೆ [QE][QS2]ನನಗೆ ವಿಭಾಗವಿಲ್ಲದೆ ಹೃದಯವನ್ನು ದಯಪಾಲಿಸಿರಿ. [QE]
12. [QS]ನನ್ನ ದೇವರಾದ ಯೆಹೋವ ದೇವರೇ, ನನ್ನ ಪೂರ್ಣಹೃದಯದಿಂದ ನಿಮ್ಮನ್ನು ಕೊಂಡಾಡುವೆನು. [QE][QS2]ನಿಮ್ಮ ಹೆಸರನ್ನು ಯುಗಯುಗಕ್ಕೂ ಘನಪಡಿಸುವೆನು. [QE]
13. [QS]ನಿಮ್ಮ ಪ್ರೀತಿಯು ನನ್ನ ಮೇಲೆ ಅಗಾಧವಾಗಿದೆ. [QE][QS2]ಕೆಳಗಿನ ಪಾತಾಳದೊಳಗಿಂದ [QE][QS2]ನನ್ನ ಪ್ರಾಣವನ್ನು ಬಿಡಿಸಿದ್ದೀರಿ. [QE][PBR]
14. [QS]ದೇವರೇ, ಅಹಂಕಾರಿಗಳು ನನಗೆ ವಿರೋಧವಾಗಿ ಎದ್ದಿದ್ದಾರೆ. [QE][QS2]ಬಲಾತ್ಕಾರಿಗಳ ಗುಂಪು ನನ್ನ ಪ್ರಾಣವನ್ನು ಹುಡುಕುತ್ತದೆ. [QE][QS2]ಅವರು ನಿಮ್ಮನ್ನು ಗೌರವಿಸುವವರಲ್ಲ. [QE]
15. [QS]ಆದರೆ ನೀವು ಯೆಹೋವ ದೇವರೇ, ಅನುಕಂಪವೂ ದಯೆಯೂ ಉಳ್ಳ ದೇವರು [QE][QS2]ಮತ್ತು ದೀರ್ಘಶಾಂತರೂ ಪ್ರೀತಿಯಲ್ಲಿ ಸಮೃದ್ಧಿವಂತನೂ ಸತ್ಯತೆಯುಳ್ಳವರೂ ಆಗಿದ್ದೀರಿ. [QE]
16. [QS]ನನ್ನ ಕಡೆಗೆ ತಿರುಗಿಕೊಂಡು ನನ್ನನ್ನು ಕರುಣಿಸಿರಿ. [QE][QS2]ನಿಮ್ಮ ಸೇವಕನಿಗೆ ನಿಮ್ಮ ಬಲವನ್ನು ತೋರಿಸಿರಿ. [QE][QS2]ನನ್ನ ತಾಯಿ ನಿನ್ನ ಸೇವೆಮಾಡಿದಂತೆ ನಾನು ಸಹ ಸೇವೆಮಾಡುವುದರಿಂದ ನನ್ನನ್ನು ರಕ್ಷಿಸಿರಿ. [QE]
17. [QS]ನನಗಾಗಿ ನಿಮ್ಮ ಉಪಕಾರದ ಗುರುತೊಂದನ್ನು ತೋರಿಸಿರಿ. [QE][QS2]ಆಗ ನನ್ನ ವೈರಿಗಳು ಅದನ್ನು ಕಂಡು ನಾಚಿಕೆಪಡುವರು. [QE][QS2]ಏಕೆಂದರೆ ಯೆಹೋವ ದೇವರೇ, ನೀವು ನನಗೆ ಸಹಾಯಮಾಡಿ ನನ್ನನ್ನು ಆದರಿಸಿದ್ದೀರಿ. [QE]