1. [QS]ಸೇನಾಧೀಶ್ವರ ಯೆಹೋವ ದೇವರೇ, [QE][QS2]ನಿಮ್ಮ ನಿವಾಸಗಳು ಎಷ್ಟೋ ರಮ್ಯವಾಗಿವೆ! [QE]
2. [QS]ಯೆಹೋವ ದೇವರ ಅಂಗಳಗಳಲ್ಲಿ ಸೇರಲು [QE][QS2]ನನ್ನ ಪ್ರಾಣವು ಬಯಸಿ ಕುಂದುತ್ತದೆ. [QE][QS]ನನ್ನ ಹೃದಯವೂ, ನನ್ನ ಶರೀರವೂ [QE][QS2]ಜೀವವುಳ್ಳ ದೇವರಿಗಾಗಿ ಕೂಗಿಕೊಳ್ಳುತ್ತದೆ. [QE]
3. [QS]ಓ ಸೇನಾಧೀಶ್ವರ ಯೆಹೋವ ದೇವರೇ, [QE][QS2]ನನ್ನ ಅರಸರಾಗಿರುವವರೇ, ನನ್ನ ದೇವರೇ, [QE][QS2]ಗುಬ್ಬಿಯು ಮನೆಯನ್ನೂ, [QE][QS]ಬಾನಕ್ಕಿಯು ತನ್ನ ಮರಿಗಳನ್ನಿಡುವ ಗೂಡನ್ನೂ [QE][QS2]ನಿಮ್ಮ ಬಲಿಪೀಠಗಳ ಬಳಿಯಲ್ಲಿ ದೊರಕಿತಲ್ಲಾ. [QE]
4. [QS]ನಿಮ್ಮ ಆಲಯದಲ್ಲಿ ವಾಸವಾಗಿರುವವರು ಧನ್ಯರು; [QE][QS2]ನಿಮ್ಮನ್ನು ಅವರು ಯಾವಾಗಲೂ ಸ್ತುತಿಸುವರು. [QE][PBR]
5. [QS]ನಿಮ್ಮಲ್ಲಿ ಯಾರು ಬಲಹೊಂದಿರುವರೋ, [QE][QS2]ಯಾರು ಯಾತ್ರಿಗಳಾಗಿದ್ದಾರೋ ಅವರು ಧನ್ಯರು. [QE]
6. [QS]ಬಾಕಾ[* ಬಾಕಾ ಇದು ಒಂದು ಬಗ್ಗೆ ಮರುಭೂಮಿಯಲ್ಲಿ ಬೆಳೆಯುವ ಗಿಡ ಮತ್ತು ಕೆಲವು ಪ್ರತಿಗಳಲ್ಲಿ ಕಣ್ಣೀರು ಎಂದು ಅರ್ಥ ] ತಗ್ಗನ್ನು ದಾಟುವಾಗ [QE][QS2]ಅವರು ಅದನ್ನು ಬುಗ್ಗೆಯಾಗಿ ಮಾಡುತ್ತಾರೆ. [QE][QS2]ಮುಂಗಾರು ಮಳೆಯು ಕೊಳಗಳನ್ನು ತುಂಬುತ್ತದೆ. [QE]
7. [QS]ಅವರು ಬಲದಿಂದ ಬಲಕ್ಕೆ ಸಾಗಿ, [QE][QS2]ಚೀಯೋನಿನಲ್ಲಿ ದೇವರ ಮುಂದೆ ಕಾಣಿಸಿಕೊಳ್ಳುತ್ತಾರೆ. [QE][PBR]
8. [QS]ಸರ್ವಶಕ್ತರಾದ ಯೆಹೋವ ದೇವರೇ, ನನ್ನ ಪ್ರಾರ್ಥನೆಯನ್ನು ಕೇಳಿರಿ. [QE][QS2]ಯಾಕೋಬನ ದೇವರೇ, ಕಿವಿಗೊಡಿರಿ. [QE]
9. [QS]ನಮ್ಮ ಗುರಾಣಿಯಾಗಿರುವ ದೇವರೇ, ನೋಡಿರಿ. [QE][QS2]ನಿಮ್ಮ ಅಭಿಷಿಕ್ತನ ಮುಖವನ್ನು ದೃಷ್ಟಿಸಿ ನೋಡಿರಿ. [QE][PBR]
10. [QS]ಏಕೆಂದರೆ ನಿಮ್ಮ ಆಲಯದ ಅಂಗಳಗಳಲ್ಲಿ ಕಳೆದ ಒಂದು ದಿನವು [QE][QS2]ಬೇರೆ ಸಹಸ್ರ ದಿನಗಳಿಗಿಂತ ಉತ್ತಮವಾಗಿದೆ. [QE][QS]ದುಷ್ಟರ ಗುಡಾರಗಳಲ್ಲಿ ವಾಸಿಸುವುದಕ್ಕಿಂತ [QE][QS2]ನನ್ನ ದೇವರ ಆಲಯದ ಬಾಗಿಲು ಕಾಯುವವನಾಗಿರುವುದೇ ಲೇಸು. [QE]
11. [QS]ಯೆಹೋವ ದೇವರು ಸೂರ್ಯನಂತೆ ಪ್ರಕಾಶಿಸುವವವರೂ ಗುರಾಣಿಯೂ ಆಗಿದ್ದಾರೆ. [QE][QS2]ಯೆಹೋವ ದೇವರು ಕೃಪೆಯನ್ನೂ ಮಹಿಮೆಯನ್ನೂ ಕೊಡುತ್ತಾರೆ. [QE][QS]ನಿಷ್ಕಳಂಕವಾಗಿ ನಡೆದುಕೊಳ್ಳುವವರಿಗೆ [QE][QS2]ಅವರು ಒಳ್ಳೆಯದನ್ನು ಮಾಡಲು ಹಿಂದೆಗೆಯುವುದಿಲ್ಲ. [QE][PBR]
12. [QS]ಸೇನಾಧೀಶ್ವರ ಯೆಹೋವ ದೇವರೇ, [QE][QS2]ನಿಮ್ಮಲ್ಲಿ ಭರವಸವಿಡುವವನೇ ಭಾಗ್ಯವಂತನು. [QE]