ಪವಿತ್ರ ಬೈಬಲ್

ದೇವರ ಕೃಪೆಯ ಉಡುಗೊರೆ
ಕೀರ್ತನೆಗಳು
1. [QS]ನಿಮ್ಮನ್ನು ಕೊಂಡಾಡುತ್ತೇವೆ; ದೇವರೇ, [QE][QS2]ನಿಮ್ಮನ್ನು ಕೊಂಡಾಡುತ್ತೇವೆ; ಏಕೆಂದರೆ ಜನರು ನಿಮ್ಮ ನಾಮವನ್ನು ಜಪಿಸಿ, [QE][QS2]ನಿಮ್ಮ ಅದ್ಭುತಗಳನ್ನು ಕುರಿತು ಹೇಳುತ್ತಾರೆ. [QE][PBR]
2. [QS]“ನಿಯಮಿತ ಸಮಯವನ್ನು ಆಯ್ದುಕೊಳ್ಳುವೆನು. [QE][QS2]ನ್ಯಾಯಕ್ಕೆ ಸರಿಯಾಗಿ ನ್ಯಾಯತೀರಿಸುವೆನು, [QE]
3. [QS]ಭೂಮಿಯೂ ಅದರ ನಿವಾಸಿಗಳೆಲ್ಲರೂ ಬೆರಗಾಗಿದ್ದಾರೆ. [QE][QS2]ನಾನು ಅದರ ಸ್ತಂಭಗಳನ್ನು ನಿಲ್ಲಿಸಿದ್ದೇನೆ. [QE]
4. [QS]‘ಅಹಂಕಾರದಿಂದ ವರ್ತಿಸಬೇಡಿರಿ,’ ಎಂದು ಅಹಂಕಾರಿಗೆ ಹೇಳುತ್ತೇನೆ. [QE][QS2]‘ನಿಮ್ಮ ಕೊಂಬು ಎತ್ತಬೇಡಿರಿ,’ ಎಂದು ದುಷ್ಟರಿಗೆ ಹೇಳುವೆನು. [QE]
5. [QS]ನಿಮ್ಮ ಕೊಂಬನ್ನು ಪರಲೋಕದ ಕಡೆಗೆ ಎತ್ತಬೇಡಿರಿ. [QE][QS2]ಹಟಮಾರಿತನದಿಂದ ಮಾತನಾಡಬೇಡಿರಿ,” ಎಂದು ನೀವು ಹೇಳಿದ್ದೀರಿ. [QE][PBR]
6. [QS]ಏಕೆಂದರೆ ಉದ್ಧಾರವು ಪೂರ್ವದಿಂದಲೂ [QE][QS2]ಪಶ್ಚಿಮದಿಂದಲೂ ಅಲ್ಲ, ಇಲ್ಲವೆ ದಕ್ಷಿಣದ ಮರುಭೂಮಿಯಿಂದಲೂ ಬರುವುದಿಲ್ಲ. [QE]
7. [QS]ಆದರೆ ದೇವರು ನ್ಯಾಯತೀರಿಸುವವರಾಗಿದ್ದಾರೆ. [QE][QS2]ದೇವರು ಒಬ್ಬನನ್ನು ತಗ್ಗಿಸುತ್ತಾರೆ, ಒಬ್ಬನನ್ನು ಎತ್ತುತ್ತಾರೆ. [QE]
8. [QS]ಯೆಹೋವ ದೇವರ ಕೈಯಲ್ಲಿ ಒಂದು ಪಾತ್ರೆಯು ಇದೆ. [QE][QS2]ಔಷಧಿಮಿಶ್ರವಾಗಿ ಉಕ್ಕುವ ದ್ರಾಕ್ಷಾರಸದಿಂದ ತುಂಬಿ ಇದೆ. [QE][QS]ಅದನ್ನು ಅವರು ಹೊಯ್ಯುತ್ತಾರೆ. [QE][QS2]ಅದರ ಮಡ್ಡಿಯನ್ನು ಸಹ ಭೂಮಿಯ ದುಷ್ಟರೆಲ್ಲರೂ ಹೀರಿಕೊಂಡು ಕುಡಿಯುವರು. [QE][PBR]
9. [QS]ನಾನಾದರೋ ಸದಾ ವರ್ಣಿಸುವವನಾಗಿ [QE][QS2]ಯಾಕೋಬ ವಂಶದವರ ದೇವರನ್ನು ಸಂಕೀರ್ತಿಸುವೆನು. [QE]
10. [QS]ದುಷ್ಟರ ಕೊಂಬುಗಳನ್ನೆಲ್ಲಾ ಕಡಿದುಹೋಗುವುದು. [QE][QS2]ಆದರೆ ನೀತಿವಂತನ ಕೊಂಬುಗಳು ಎತ್ತಲಾಗುವುದು. [QE]
ಒಟ್ಟು 150 ಅಧ್ಯಾಯಗಳು, ಆಯ್ಕೆ ಮಾಡಲಾಗಿದೆ ಅಧ್ಯಾಯ 75 / 150
1 ನಿಮ್ಮನ್ನು ಕೊಂಡಾಡುತ್ತೇವೆ; ದೇವರೇ, ನಿಮ್ಮನ್ನು ಕೊಂಡಾಡುತ್ತೇವೆ; ಏಕೆಂದರೆ ಜನರು ನಿಮ್ಮ ನಾಮವನ್ನು ಜಪಿಸಿ, ನಿಮ್ಮ ಅದ್ಭುತಗಳನ್ನು ಕುರಿತು ಹೇಳುತ್ತಾರೆ. 2 “ನಿಯಮಿತ ಸಮಯವನ್ನು ಆಯ್ದುಕೊಳ್ಳುವೆನು. ನ್ಯಾಯಕ್ಕೆ ಸರಿಯಾಗಿ ನ್ಯಾಯತೀರಿಸುವೆನು, 3 ಭೂಮಿಯೂ ಅದರ ನಿವಾಸಿಗಳೆಲ್ಲರೂ ಬೆರಗಾಗಿದ್ದಾರೆ. ನಾನು ಅದರ ಸ್ತಂಭಗಳನ್ನು ನಿಲ್ಲಿಸಿದ್ದೇನೆ. 4 ‘ಅಹಂಕಾರದಿಂದ ವರ್ತಿಸಬೇಡಿರಿ,’ ಎಂದು ಅಹಂಕಾರಿಗೆ ಹೇಳುತ್ತೇನೆ. ‘ನಿಮ್ಮ ಕೊಂಬು ಎತ್ತಬೇಡಿರಿ,’ ಎಂದು ದುಷ್ಟರಿಗೆ ಹೇಳುವೆನು. 5 ನಿಮ್ಮ ಕೊಂಬನ್ನು ಪರಲೋಕದ ಕಡೆಗೆ ಎತ್ತಬೇಡಿರಿ. ಹಟಮಾರಿತನದಿಂದ ಮಾತನಾಡಬೇಡಿರಿ,” ಎಂದು ನೀವು ಹೇಳಿದ್ದೀರಿ. 6 ಏಕೆಂದರೆ ಉದ್ಧಾರವು ಪೂರ್ವದಿಂದಲೂ ಪಶ್ಚಿಮದಿಂದಲೂ ಅಲ್ಲ, ಇಲ್ಲವೆ ದಕ್ಷಿಣದ ಮರುಭೂಮಿಯಿಂದಲೂ ಬರುವುದಿಲ್ಲ. 7 ಆದರೆ ದೇವರು ನ್ಯಾಯತೀರಿಸುವವರಾಗಿದ್ದಾರೆ. ದೇವರು ಒಬ್ಬನನ್ನು ತಗ್ಗಿಸುತ್ತಾರೆ, ಒಬ್ಬನನ್ನು ಎತ್ತುತ್ತಾರೆ. 8 ಯೆಹೋವ ದೇವರ ಕೈಯಲ್ಲಿ ಒಂದು ಪಾತ್ರೆಯು ಇದೆ. ಔಷಧಿಮಿಶ್ರವಾಗಿ ಉಕ್ಕುವ ದ್ರಾಕ್ಷಾರಸದಿಂದ ತುಂಬಿ ಇದೆ. ಅದನ್ನು ಅವರು ಹೊಯ್ಯುತ್ತಾರೆ. ಅದರ ಮಡ್ಡಿಯನ್ನು ಸಹ ಭೂಮಿಯ ದುಷ್ಟರೆಲ್ಲರೂ ಹೀರಿಕೊಂಡು ಕುಡಿಯುವರು. 9 ನಾನಾದರೋ ಸದಾ ವರ್ಣಿಸುವವನಾಗಿ ಯಾಕೋಬ ವಂಶದವರ ದೇವರನ್ನು ಸಂಕೀರ್ತಿಸುವೆನು. 10 ದುಷ್ಟರ ಕೊಂಬುಗಳನ್ನೆಲ್ಲಾ ಕಡಿದುಹೋಗುವುದು. ಆದರೆ ನೀತಿವಂತನ ಕೊಂಬುಗಳು ಎತ್ತಲಾಗುವುದು.
ಒಟ್ಟು 150 ಅಧ್ಯಾಯಗಳು, ಆಯ್ಕೆ ಮಾಡಲಾಗಿದೆ ಅಧ್ಯಾಯ 75 / 150
×

Alert

×

Kannada Letters Keypad References