1. [QS]ಯೆಹೋವ ದೇವರೇ, ನಿಮ್ಮಲ್ಲಿಯೇ ನಾನು ನನ್ನ ಭರವಸೆಯನ್ನಿಟ್ಟಿದ್ದೇನೆ. [QE][QS2]ನನಗೆ ಎಂದೂ ಆಶಾಭಂಗವಾಗದಿರಲಿ. [QE]
2. [QS]ನಿಮ್ಮ ನೀತಿಯಿಂದ ನನ್ನನ್ನು ಬಿಡಿಸಿ, ನನ್ನನ್ನು ಪಾರುಮಾಡಿರಿ. [QE][QS2]ನಿಮ್ಮ ಕಿವಿಯನ್ನು ನನ್ನ ಕಡೆಗೆ ತಿರುಗಿಸಿ, ನನ್ನನ್ನು ರಕ್ಷಿಸಿರಿ. [QE]
3. [QS]ನಾನು ಯಾವಾಗಲೂ ಆಶ್ರಯಿಸಿಕೊಳ್ಳುವ ಬಂಡೆಯಾಗಿರಿ. [QE][QS2]ನನ್ನನ್ನು ರಕ್ಷಿಸುವುದಕ್ಕೆ ಆಜ್ಞಾಪಿಸಿರಿ. [QE][QS]ನನ್ನ ಬಂಡೆಯೂ [QE][QS2]ನನ್ನ ಕೋಟೆಯೂ ನೀವೇ ಆಗಿದ್ದೀರಿ. [QE]
4. [QS]ನನ್ನ ದೇವರೇ, ದುಷ್ಟನ ಕೈಗೂ [QE][QS2]ಅನ್ಯಾಯ ಮಾಡುವವನ ಮತ್ತು ಕ್ರೂರನ ಕೈಗೂ ನನ್ನನ್ನು ಸಿಕ್ಕಿಸದಿರಿ. [QE][PBR]
5. [QS]ಸಾರ್ವಭೌಮ ಯೆಹೋವ ದೇವರೇ, ನೀವು ನನ್ನ ನಿರೀಕ್ಷೆ ಆಗಿದ್ದೀರಿ. [QE][QS2]ನನ್ನ ಯೌವನದಿಂದ ನನ್ನ ಭರವಸೆಯೂ ಆಗಿದ್ದೀರಿ. [QE]
6. [QS]ಹುಟ್ಟಿನಿಂದ ನೀವೇ ನನ್ನ ಭರವಸೆ. [QE][QS2]ತಾಯಿಯ ಗರ್ಭದಿಂದ ನೀವೇ ನನ್ನನ್ನು ಹೊರಗೆ ತಂದಿದ್ದೀರಿ. [QE][QS2]ನಾನು ಯಾವಾಗಲೂ ನಿಮ್ಮನ್ನು ಸ್ತುತಿಸುತ್ತಿರುವೆನು. [QE]
7. [QS]ಅನೇಕರು ನನ್ನ ಸ್ಥಿತಿಯನ್ನು ಕಂಡು ಆಶ್ಚರ್ಯ ಪಡುತ್ತಾರೆ. [QE][QS2]ಆದರೆ ನೀವು ನನ್ನ ಬಲವಾದ ಆಶ್ರಯವಾಗಿದ್ದೀರಿ. [QE]
8. [QS]ನನ್ನ ಬಾಯಿ ನಿಮ್ಮ ಸ್ತೋತ್ರದಿಂದ ತುಂಬಿರಲಿ. [QE][QS2]ನಾನು ದಿನವೆಲ್ಲಾ ನಿಮ್ಮ ವೈಭವವನ್ನೇ ಸಾರುತ್ತಿರುವೆ. [QE][PBR]
9. [QS]ನನ್ನ ಮುಪ್ಪಿನ ಕಾಲದಲ್ಲಿ ನನ್ನನ್ನು ತಳ್ಳಿಬಿಡಬೇಡಿರಿ. [QE][QS2]ನನ್ನ ಶಕ್ತಿಯು ಕುಂದುತ್ತಿರುವಾಗ ನನ್ನನ್ನು ಕೈಬಿಡಬೇಡಿರಿ. [QE]
10. [QS]ನನ್ನ ಶತ್ರುಗಳು ನನಗೆ ವಿರೋಧವಾಗಿ ಮಾತನಾಡುತ್ತಾರೆ; [QE][QS2]ನನ್ನ ಪ್ರಾಣಕ್ಕೆ ಒಳಸಂಚು ಮಾಡುವವರು ಕೂಡಿಕೊಂಡು ದುರಾಲೋಚನೆ ಮಾಡುತ್ತಾರೆ. [QE]
11. [QS]ಅದೇನೆಂದರೆ, “ದೇವರು ಅವನನ್ನು ಕೈಬಿಟ್ಟಿದ್ದಾನೆ. [QE][QS2]ಅವನನ್ನು ಬೆನ್ನಟ್ಟಿ ಹಿಡಿಯಿರಿ, [QE][QS2]ಅವನನ್ನು ಬಿಡಿಸುವವರು ಯಾರೂ ಇಲ್ಲ,” ಎನ್ನುತ್ತಾರೆ. [QE]
12. [QS]ದೇವರೇ, ನನ್ನಿಂದ ದೂರವಾಗಿರಬೇಡಿರಿ. [QE][QS2]ದೇವರೇ, ಬೇಗ ಬಂದು ನನಗೆ ಸಹಾಯಮಾಡಿರಿ. [QE]
13. [QS]ನನ್ನನ್ನು ಆರೋಪಿಸುವವರು, [QE][QS2]ನಾಚಿಕೆಪಟ್ಟು ನಾಶವಾಗಲಿ. [QE][QS2]ನನ್ನ ಕೇಡಿಗಾಗಿ ಹುಡುಕುವವರನ್ನು ನಿಂದಾಪಮಾನಗಳು ಕವಿಯಲಿ. [QE][PBR]
14. [QS]ಆದರೆ ನಾನು ಎಂದೆಂದೂ ನಿಮ್ಮನ್ನು ನಿರೀಕ್ಷಿಸುತ್ತಾ, [QE][QS2]ನಿಮ್ಮನ್ನು ಇನ್ನೂ ಹೆಚ್ಚೆಚ್ಚಾಗಿ ಸ್ತುತಿಸುವೆನು. [QE][PBR]
15. [QS]ನನ್ನ ಬಾಯಿ ದಿನವೆಲ್ಲಾ ನಿಮ್ಮ ನೀತಿಯನ್ನೂ [QE][QS2]ನಿಮ್ಮ ರಕ್ಷಣೆಯನ್ನೂ ಪ್ರಕಟಿಸುವುದು. [QE][QS2]ಅವುಗಳನ್ನು ವಿವರಿಸಲು ನನಗೆ ತಿಳಿಯದು. [QE]
16. [QS]ಸಾರ್ವಭೌಮ ಯೆಹೋವ ದೇವರೇ ನಾನು ನಿಮ್ಮ ಮಹಾಕೃತ್ಯಗಳನ್ನು ಸಾರುವೆನು. [QE][QS2]ನಿಮ್ಮ ನೀತಿ ಕೃತ್ಯಗಳನ್ನು ಪ್ರಕಟಪಡಿಸುವೆನು. [QE]
17. [QS]ದೇವರೇ, ನನ್ನ ಯೌವನದಿಂದ ನನಗೆ ನೀವು ಕಲಿಸಿದ್ದೀರಿ. [QE][QS2]ಈವರೆಗೂ ನಿಮ್ಮ ಅದ್ಭುತಕಾರ್ಯಗಳನ್ನು ಘೋಷಿಸುತ್ತಿದ್ದೇನೆ. [QE]
18. [QS]ದೇವರೇ, ನಾನು ಮುಪ್ಪಿನವನೂ, ನೆರೆಕೂದಲಿನವನೂ ಆದಾಗ [QE][QS2]ಈ ಸಂತತಿಯವರಿಗೆ ನಿಮ್ಮ ಶಕ್ತಿಯನ್ನೂ, [QE][QS]ಮುಂದಿನ ಪೀಳಿಗೆಗೆ ನಿಮ್ಮ ಪರಾಕ್ರಮವನ್ನೂ ತಿಳಿಸುವವರೆಗೂ [QE][QS2]ನನ್ನನ್ನು ಕೈಬಿಡಬೇಡಿರಿ. [QE][PBR]
19. [QS]ದೇವರೇ, ನಿಮ್ಮ ನೀತಿಯು ಆಕಾಶವನ್ನು ಮುಟ್ಟುತ್ತದೆ. [QE][QS2]ಮಹತ್ಕಾರ್ಯಗಳನ್ನು ಮಾಡಿದ ದೇವರೇ, [QE][QS2]ನಿಮ್ಮ ಹಾಗೆ ಯಾರಿದ್ದಾರೆ? [QE]
20. [QS]ಅನೇಕ ಕಠಿಣವಾದ ಇಕ್ಕಟ್ಟುಗಳನ್ನು [QE][QS2]ನೋಡ ಮಾಡಿದ ನನ್ನನ್ನು [QE][QS2]ನೀವು ತಿರುಗಿ ಬದುಕಿಸಿದ್ದೀರಿ. [QE][QS]ಭೂಮಿಯ ಅಧೋಭಾಗದಿಂದ [QE][QS2]ಪುನಃ ನನ್ನನ್ನು ಮೇಲಕ್ಕೆ ಎತ್ತುವಿರಿ. [QE]
21. [QS]ನೀವು ನನ್ನ ಗೌರವವನ್ನು ಹೆಚ್ಚಿಸಿ [QE][QS2]ನನ್ನನ್ನು ಮತ್ತೊಮ್ಮೆ ಆದರಿಸಿರಿ. [QE][PBR]
22. [QS]ನನ್ನ ದೇವರೇ, ನಾನು ನಿಮ್ಮನ್ನು ಸ್ತುತಿಸುವೆನು. [QE][QS2]ನಿಮ್ಮ ನಂಬಿಗಸ್ತಿಕೆಗಾಗಿ ವೀಣೆಯಿಂದ ಕೊಂಡಾಡುವೆನು. [QE][QS]ಇಸ್ರಾಯೇಲರ ಪರಿಶುದ್ಧರೇ, [QE][QS2]ಕಿನ್ನರಿಯಿಂದ ನಿಮ್ಮನ್ನು ಸ್ತುತಿಸುವೆನು. [QE]
23. [QS]ನೀವು ನನ್ನನ್ನು ಬಿಡಿಸಿದ್ದಕ್ಕಾಗಿ [QE][QS2]ನನ್ನ ತುಟಿಗಳು ಆನಂದದಿಂದ [QE][QS2]ಹಾಡಿ ಸ್ತುತಿಸುತ್ತವೆ. [QE]
24. [QS]ನನ್ನ ನಾಲಿಗೆಯು ಸಹ ದಿನವೆಲ್ಲಾ [QE][QS2]ನಿಮ್ಮ ನೀತಿಯನ್ನು ಮಾತನಾಡುವುದು, [QE][QS]ಏಕೆಂದರೆ ನನಗೆ ಕೇಡು ಬಗೆಯುವವರು [QE][QS2]ನಾಚಿಕೊಂಡು ತಲೆ ತಗ್ಗಿಸಿದ್ದಾರೆ. [QE]