ಪವಿತ್ರ ಬೈಬಲ್

ಓಪನ್ ಸಮಕಾಲೀನ ಆವೃತ್ತಿ (OCV)
ಕೀರ್ತನೆಗಳು
1. [QS]ದೇವರೇ, ನನ್ನ ದೂರುಗಳನ್ನು ನಿಮ್ಮ ಮುಂದಿಡುವಾಗ ನನ್ನ ಬಿನ್ನಹವನ್ನು ಕೇಳಿರಿ. [QE][QS2]ಶತ್ರುವಿನ ಹೆದರಿಕೆಯಿಂದ ನನ್ನ ಜೀವವನ್ನು ಕಾಪಾಡಿರಿ. [QE][PBR]
2. [QS]ದುರ್ಮಾರ್ಗಿಗಳ ಗುಪ್ತ ಆಲೋಚನೆಗಳಿಗೂ, [QE][QS2]ದುಷ್ಟರ ಒಳಸಂಚಿಗೂ ನನ್ನನ್ನು ಮರೆಮಾಡಿರಿ. [QE]
3. [QS]ಅವರು ತಮ್ಮ ನಾಲಿಗೆಯನ್ನು [QE][QS2]ಖಡ್ಗದಂತೆ ಮಸೆಯುತ್ತಾರೆ. [QE]
4. [QS]ನಿರ್ದೋಷಿಯ ಕಡೆಗೆ ಕಹಿಮಾತುಗಳನ್ನು ಬಾಣದಂತೆ ಗುರಿಯಿಟ್ಟಿದ್ದಾರೆ. [QE][QS2]ಅಂಜದೆ ಫಕ್ಕನೆ ಅವನ ಕಡೆಗೆ ಎಸೆಯುತ್ತಾರೆ. [QE][PBR]
5. [QS]ತಮ್ಮೊಳಗೆ ಕೇಡನ್ನು ಪ್ರೋತ್ಸಾಹ ಮಾಡುತ್ತಾರೆ. [QE][QS2]ರಹಸ್ಯವಾಗಿ ಬಲೆಗಳನ್ನು ಒಡ್ಡುವುದಕ್ಕೆ ಮಾತನಾಡುತ್ತಾ, [QE][QS2]“ನಮ್ಮನ್ನು ಕಾಣುವವರು ಯಾರು?” ಎಂದುಕೊಳ್ಳುತ್ತಾರೆ. [QE]
6. [QS]ಅವರು ಅನ್ಯಾಯಗಳನ್ನು ಕಲ್ಪಿಸಿ, [QE][QS2]“ನಾವು ಒಳ್ಳೇ ಉಪಾಯವನ್ನು ಮಾಡಿದ್ದೇವೆ,” ಅಂದುಕೊಳ್ಳುತ್ತಾರೆ. [QE][QS2]ನಿಶ್ಚಯವಾಗಿ ಮಾನವರ ಆಂತರ್ಯವೂ ಹೃದಯವೂ ಕುಯುಕ್ತಿಯಿಂದ ಕೂಡಿದೆ. [QE][PBR]
7. [QS]ಆದರೆ ದೇವರು ಅವರ ಬಾಣದಿಂದಲೇ, [QE][QS2]ಫಕ್ಕನೆ ಅವರಿಗೆ ಗಾಯಗಳಾಗುವಂತೆ ಅನುಮತಿಸುವರು. [QE]
8. [QS]ಹೀಗೆ ಅವರು ತಮ್ಮ ನಾಲಿಗೆಯಿಂದ ತಾವೇ ಎಡವಿ [QE][QS2]ಬೀಳುವಂತೆ ಮಾಡಿಕೊಳ್ಳುವರು. [QE][QS2]ಅವರನ್ನು ಕಾಣುವವರೆಲ್ಲರೂ ತಲೆಯಾಡಿಸಿ ಅಣಕಿಸುವರು. [QE]
9. [QS]ಎಲ್ಲಾ ಮನುಷ್ಯರೂ ಭಯಪಟ್ಟು [QE][QS2]ದೇವರ ಕಾರ್ಯಗಳನ್ನು ಸಾರುವರು. [QE][QS2]ದೇವರು ಮಾಡಿದವುಗಳನ್ನು ಆಲೋಚಿಸಿಕೊಳ್ಳುವರು. [QE][PBR]
10. [QS]ನೀತಿವಂತರು ಯೆಹೋವ ದೇವರಲ್ಲಿ ಆನಂದಪಟ್ಟು [QE][QS2]ದೇವರನ್ನೇ ಆಶ್ರಯಿಸಿಕೊಳ್ಳುವರು. [QE][QS2]ಸರಳ ಹೃದಯದವರೆಲ್ಲರೂ ದೇವರನ್ನು ಮಹಿಮೆಪಡಿಸುವರು. [QE]
ಒಟ್ಟು 150 ಅಧ್ಯಾಯಗಳು, ಆಯ್ಕೆ ಮಾಡಲಾಗಿದೆ ಅಧ್ಯಾಯ 64 / 150
1 ದೇವರೇ, ನನ್ನ ದೂರುಗಳನ್ನು ನಿಮ್ಮ ಮುಂದಿಡುವಾಗ ನನ್ನ ಬಿನ್ನಹವನ್ನು ಕೇಳಿರಿ. ಶತ್ರುವಿನ ಹೆದರಿಕೆಯಿಂದ ನನ್ನ ಜೀವವನ್ನು ಕಾಪಾಡಿರಿ. 2 ದುರ್ಮಾರ್ಗಿಗಳ ಗುಪ್ತ ಆಲೋಚನೆಗಳಿಗೂ, ದುಷ್ಟರ ಒಳಸಂಚಿಗೂ ನನ್ನನ್ನು ಮರೆಮಾಡಿರಿ. 3 ಅವರು ತಮ್ಮ ನಾಲಿಗೆಯನ್ನು ಖಡ್ಗದಂತೆ ಮಸೆಯುತ್ತಾರೆ. 4 ನಿರ್ದೋಷಿಯ ಕಡೆಗೆ ಕಹಿಮಾತುಗಳನ್ನು ಬಾಣದಂತೆ ಗುರಿಯಿಟ್ಟಿದ್ದಾರೆ. ಅಂಜದೆ ಫಕ್ಕನೆ ಅವನ ಕಡೆಗೆ ಎಸೆಯುತ್ತಾರೆ. 5 ತಮ್ಮೊಳಗೆ ಕೇಡನ್ನು ಪ್ರೋತ್ಸಾಹ ಮಾಡುತ್ತಾರೆ. ರಹಸ್ಯವಾಗಿ ಬಲೆಗಳನ್ನು ಒಡ್ಡುವುದಕ್ಕೆ ಮಾತನಾಡುತ್ತಾ, “ನಮ್ಮನ್ನು ಕಾಣುವವರು ಯಾರು?” ಎಂದುಕೊಳ್ಳುತ್ತಾರೆ. 6 ಅವರು ಅನ್ಯಾಯಗಳನ್ನು ಕಲ್ಪಿಸಿ, “ನಾವು ಒಳ್ಳೇ ಉಪಾಯವನ್ನು ಮಾಡಿದ್ದೇವೆ,” ಅಂದುಕೊಳ್ಳುತ್ತಾರೆ. ನಿಶ್ಚಯವಾಗಿ ಮಾನವರ ಆಂತರ್ಯವೂ ಹೃದಯವೂ ಕುಯುಕ್ತಿಯಿಂದ ಕೂಡಿದೆ. 7 ಆದರೆ ದೇವರು ಅವರ ಬಾಣದಿಂದಲೇ, ಫಕ್ಕನೆ ಅವರಿಗೆ ಗಾಯಗಳಾಗುವಂತೆ ಅನುಮತಿಸುವರು. 8 ಹೀಗೆ ಅವರು ತಮ್ಮ ನಾಲಿಗೆಯಿಂದ ತಾವೇ ಎಡವಿ ಬೀಳುವಂತೆ ಮಾಡಿಕೊಳ್ಳುವರು. ಅವರನ್ನು ಕಾಣುವವರೆಲ್ಲರೂ ತಲೆಯಾಡಿಸಿ ಅಣಕಿಸುವರು. 9 ಎಲ್ಲಾ ಮನುಷ್ಯರೂ ಭಯಪಟ್ಟು ದೇವರ ಕಾರ್ಯಗಳನ್ನು ಸಾರುವರು. ದೇವರು ಮಾಡಿದವುಗಳನ್ನು ಆಲೋಚಿಸಿಕೊಳ್ಳುವರು. 10 ನೀತಿವಂತರು ಯೆಹೋವ ದೇವರಲ್ಲಿ ಆನಂದಪಟ್ಟು ದೇವರನ್ನೇ ಆಶ್ರಯಿಸಿಕೊಳ್ಳುವರು. ಸರಳ ಹೃದಯದವರೆಲ್ಲರೂ ದೇವರನ್ನು ಮಹಿಮೆಪಡಿಸುವರು.
ಒಟ್ಟು 150 ಅಧ್ಯಾಯಗಳು, ಆಯ್ಕೆ ಮಾಡಲಾಗಿದೆ ಅಧ್ಯಾಯ 64 / 150
×

Alert

×

Kannada Letters Keypad References