ಪವಿತ್ರ ಬೈಬಲ್

ಓಪನ್ ಸಮಕಾಲೀನ ಆವೃತ್ತಿ (OCV)
ಕೀರ್ತನೆಗಳು
1. [QS]ದೇವರೇ, ನನ್ನ ಮೊರೆಯನ್ನು ಕೇಳಿರಿ. [QE][QS2]ನನ್ನ ಪ್ರಾರ್ಥನೆಯನ್ನು ಆಲಿಸಿರಿ. [QE][PBR]
2. [QS]ನನ್ನ ಹೃದಯವು ಕುಂದಿ ಹೋಗಿರಲಾಗಿ [QE][QS2]ಭೂಮಿಯ ಅಂತ್ಯದಿಂದ ನಿಮಗೆ ಮೊರೆಯಿಡುತ್ತಿರುವೆನು. [QE][QS2]ನನಗಿಂತ ಎತ್ತರವಾದ ಬಂಡೆಗೆ ನನ್ನನ್ನು ನಡೆಸಿರಿ. [QE]
3. [QS]ನೀವೇ ನನಗೆ ಆಶ್ರಯವಾಗಿದ್ದೀರಿ. [QE][QS2]ಶತ್ರುವಿಗೆ ಎದುರಾಗಿ ಬಲವಾದ ಬುರುಜಾಗಿದ್ದೀರಿ. [QE][PBR]
4. [QS]ನಿಮ್ಮ ಗುಡಾರದಲ್ಲಿ ನಿತ್ಯವಾಗಿ ನಿವಾಸಿಸಲು ಹಾರೈಸುತ್ತಿದ್ದೇನೆ. [QE][QS2]ನಿಮ್ಮ ರೆಕ್ಕೆಗಳ ಮರೆಯನ್ನು ಆಶ್ರಯಿಸಿಕೊಳ್ಳುವೆನು. [QE]
5. [QS]ದೇವರೇ, ನೀವು ನನ್ನ ಹರಕೆಗಳನ್ನು ಕೇಳಿದ್ದೀರಿ. [QE][QS2]ನಿಮ್ಮ ಹೆಸರಿಗೆ ಭಯಪಡುವವರಿಗೆ ಕೊಡುವ ಸೊತ್ತನ್ನು ನನಗೂ ಕೊಟ್ಟಿದ್ದೀರಿ. [QE][PBR]
6. [QS]ಅರಸನ ಜೀವನದ ದಿನಗಳನ್ನು ಹೆಚ್ಚಿಸಿರಿ. [QE][QS2]ಆತನ ವರ್ಷಗಳನ್ನು ತಲತಲಾಂತರಗಳವರೆಗೆ ವೃದ್ಧಿಪಡಿಸಿರಿ. [QE]
7. [QS]ಆತನು ಎಂದೆಂದಿಗೂ ದೇವರ ಮುಂದೆ ಆಳಿಕೆಮಾಡಲಿ. [QE][QS2]ಆತನನ್ನು ಕಾಯುವ ಹಾಗೆ ನಿಮ್ಮ ಪ್ರೀತಿ, ಸತ್ಯವನ್ನು ನೇಮಿಸಿರಿ. [QE][PBR]
8. [QS]ಆಗ ನಾನು ನನ್ನ ಹರಕೆಗಳನ್ನು ದಿನದಿನವೂ ಸಲ್ಲಿಸುವೆನು. [QE][QS2]ನಿಮ್ಮ ಹೆಸರನ್ನು ನಾನು ಎಂದೆಂದಿಗೂ ಕೀರ್ತಿಸುವೆನು. [QE]
ಒಟ್ಟು 150 ಅಧ್ಯಾಯಗಳು, ಆಯ್ಕೆ ಮಾಡಲಾಗಿದೆ ಅಧ್ಯಾಯ 61 / 150
1 ದೇವರೇ, ನನ್ನ ಮೊರೆಯನ್ನು ಕೇಳಿರಿ. ನನ್ನ ಪ್ರಾರ್ಥನೆಯನ್ನು ಆಲಿಸಿರಿ. 2 ನನ್ನ ಹೃದಯವು ಕುಂದಿ ಹೋಗಿರಲಾಗಿ ಭೂಮಿಯ ಅಂತ್ಯದಿಂದ ನಿಮಗೆ ಮೊರೆಯಿಡುತ್ತಿರುವೆನು. ನನಗಿಂತ ಎತ್ತರವಾದ ಬಂಡೆಗೆ ನನ್ನನ್ನು ನಡೆಸಿರಿ. 3 ನೀವೇ ನನಗೆ ಆಶ್ರಯವಾಗಿದ್ದೀರಿ. ಶತ್ರುವಿಗೆ ಎದುರಾಗಿ ಬಲವಾದ ಬುರುಜಾಗಿದ್ದೀರಿ. 4 ನಿಮ್ಮ ಗುಡಾರದಲ್ಲಿ ನಿತ್ಯವಾಗಿ ನಿವಾಸಿಸಲು ಹಾರೈಸುತ್ತಿದ್ದೇನೆ. ನಿಮ್ಮ ರೆಕ್ಕೆಗಳ ಮರೆಯನ್ನು ಆಶ್ರಯಿಸಿಕೊಳ್ಳುವೆನು. 5 ದೇವರೇ, ನೀವು ನನ್ನ ಹರಕೆಗಳನ್ನು ಕೇಳಿದ್ದೀರಿ. ನಿಮ್ಮ ಹೆಸರಿಗೆ ಭಯಪಡುವವರಿಗೆ ಕೊಡುವ ಸೊತ್ತನ್ನು ನನಗೂ ಕೊಟ್ಟಿದ್ದೀರಿ. 6 ಅರಸನ ಜೀವನದ ದಿನಗಳನ್ನು ಹೆಚ್ಚಿಸಿರಿ. ಆತನ ವರ್ಷಗಳನ್ನು ತಲತಲಾಂತರಗಳವರೆಗೆ ವೃದ್ಧಿಪಡಿಸಿರಿ. 7 ಆತನು ಎಂದೆಂದಿಗೂ ದೇವರ ಮುಂದೆ ಆಳಿಕೆಮಾಡಲಿ. ಆತನನ್ನು ಕಾಯುವ ಹಾಗೆ ನಿಮ್ಮ ಪ್ರೀತಿ, ಸತ್ಯವನ್ನು ನೇಮಿಸಿರಿ. 8 ಆಗ ನಾನು ನನ್ನ ಹರಕೆಗಳನ್ನು ದಿನದಿನವೂ ಸಲ್ಲಿಸುವೆನು. ನಿಮ್ಮ ಹೆಸರನ್ನು ನಾನು ಎಂದೆಂದಿಗೂ ಕೀರ್ತಿಸುವೆನು.
ಒಟ್ಟು 150 ಅಧ್ಯಾಯಗಳು, ಆಯ್ಕೆ ಮಾಡಲಾಗಿದೆ ಅಧ್ಯಾಯ 61 / 150
×

Alert

×

Kannada Letters Keypad References