ಪವಿತ್ರ ಬೈಬಲ್

ಓಪನ್ ಸಮಕಾಲೀನ ಆವೃತ್ತಿ (OCV)
ಕೀರ್ತನೆಗಳು
1. [QS]ದೇವರೇ ನನ್ನನ್ನು ಕರುಣಿಸಿರಿ, ನನ್ನನ್ನು ಕರುಣಿಸಿರಿ. [QE][QS2]ನನ್ನ ಪ್ರಾಣವು ನಿಮ್ಮನ್ನು ಆಶ್ರಯಿಸಿಕೊಂಡಿದೆ; [QE][QS]ಆಪತ್ತುಗಳು ದಾಟುವವರೆಗೂ [QE][QS2]ನಿಮ್ಮ ರೆಕ್ಕೆಗಳ ನೆರಳನ್ನೇ ನಾನು ಆಶ್ರಯಿಸಿಕೊಳ್ಳುತ್ತೇನೆ. [QE][PBR]
2. [QS]ಮಹೋನ್ನತನಾದ ದೇವರಿಗೆ, ಮೊರೆಯಿಡುತ್ತೇನೆ. [QE][QS2]ನನಗಾಗಿ ಕಾರ್ಯಗಳಿಗೆ ನ್ಯಾಯ ನೀಡುವ ದೇವರಿಗೆ ಮೊರೆಯಿಡುತ್ತೇನೆ. [QE]
3. [QS]ದೇವರು ಪರಲೋಕದಿಂದ ಸಹಾಯ ಕಳುಹಿಸಿ, [QE][QS2]ನನ್ನನ್ನು ನಿಂದಿಸುವವರನ್ನು ದಂಡಿಸಿ, ನನ್ನನ್ನು ರಕ್ಷಿಸುವರು. [QE][QS2]ದೇವರು ತಮ್ಮ ಒಡಂಬಡಿಕೆಯ ಪ್ರೀತಿಯನ್ನೂ ತಮ್ಮ ಸತ್ಯವನ್ನೂ ಕಳುಹಿಸುವರು. [QE][PBR]
4. [QS]ನಾನು ಸಿಂಹಗಳಂಥವರ ಮಧ್ಯದಲ್ಲಿದ್ದೇನೆ. [QE][QS2]ಕ್ರೂರಮೃಗಗಳಂಥವರ ಮಧ್ಯದಲ್ಲಿ ಒತ್ತಾಯವಾಗಿ ವಾಸಮಾಡುತ್ತಿದ್ದೇನೆ. [QE][QS]ಅವರ ಹಲ್ಲು, ಭಲ್ಲೆ, ಬಾಣಗಳೂ [QE][QS2]ಅವರ ನಾಲಿಗೆ ಹದವಾದ ಖಡ್ಗವೂ ಆಗಿವೆ. [QE][PBR]
5. [QS]ಓ, ದೇವರೇ, ಆಕಾಶಗಳ ಮೇಲೆ ನಿಮ್ಮ ಘನವು ಮೆರೆಯಲಿ. [QE][QS2]ಭೂಮಿಯ ಮೇಲೆಲ್ಲಾ ನಿಮ್ಮ ಮಹಿಮೆಯು ಹರಡಲಿ. [QE][PBR]
6. [QS]ಶತ್ರುಗಳು ನನ್ನ ಕಾಲುಗಳಿಗೆ ಬಲೆಯೊಡ್ಡಿದ್ದಾರೆ. [QE][QS2]ನನ್ನ ಪ್ರಾಣವು ಕುಗ್ಗಿಹೋಗಿದೆ. [QE][QS]ನನ್ನ ದಾರಿಯಲ್ಲಿ ಕುಣಿಯನ್ನು ಅಗೆದಿದ್ದಾರೆ. [QE][QS2]ಅದರಲ್ಲಿ ತಾವೇ ಬಿದ್ದುಹೋದರು. [QE][PBR]
7. [QS]ದೇವರೇ, ನನ್ನ ಹೃದಯವು ಸ್ಥಿರವಾಗಿದೆ. [QE][QS2]ಹೌದು, ನನ್ನ ಹೃದಯವು ಸ್ಥಿರವಾಗಿದೆ. [QE][QS2]ನಾನು ಸಂಗೀತದೊಡನೆ ಹಾಡುವೆನು. [QE]
8. [QS]ಎಚ್ಚರವಾಗು, ನನ್ನ ಪ್ರಾಣವೇ, [QE][QS2]ವೀಣೆಯೇ, ಕಿನ್ನರಿಯೇ ಎಚ್ಚರವಾಗಿರಿ, [QE][QS2]ನಾನು ಉದಯಕಾಲವನ್ನು ಎಚ್ಚರಗೊಳಿಸುವೆನು. [QE][PBR]
9. [QS]ಯೆಹೋವ ದೇವರೇ, ಜನಾಂಗಗಳಲ್ಲಿ ನಾನು ನಿಮ್ಮನ್ನು ಕೊಂಡಾಡುವೆನು. [QE][QS2]ಜನರ ಮಧ್ಯದಲ್ಲಿ ನಿಮ್ಮನ್ನು ಹಾಡಿ ಕೊಂಡಾಡುವೆನು. [QE]
10. [QS]ಆಕಾಶಕ್ಕಿಂತ ನಿಮ್ಮ ಪ್ರೀತಿ ದೊಡ್ಡದು. [QE][QS2]ಮೇಘವನ್ನು ನಿಲುಕುವಷ್ಟು ನಿಮ್ಮ ಸತ್ಯವು ಉನ್ನತವಾಗಿವೆ. [QE][PBR]
11. [QS]ಓ, ದೇವರೇ, ಆಕಾಶಗಳ ಮೇಲೆ ನಿಮ್ಮ ಘನವು ಮೆರೆಯಲಿ. [QE][QS2]ಭೂಮಿಯ ಮೇಲೆಲ್ಲಾ ನಿಮ್ಮ ಮಹಿಮೆಯು ಹರಡಲಿ. [QE]
ಒಟ್ಟು 150 ಅಧ್ಯಾಯಗಳು, ಆಯ್ಕೆ ಮಾಡಲಾಗಿದೆ ಅಧ್ಯಾಯ 57 / 150
1 ದೇವರೇ ನನ್ನನ್ನು ಕರುಣಿಸಿರಿ, ನನ್ನನ್ನು ಕರುಣಿಸಿರಿ. ನನ್ನ ಪ್ರಾಣವು ನಿಮ್ಮನ್ನು ಆಶ್ರಯಿಸಿಕೊಂಡಿದೆ; ಆಪತ್ತುಗಳು ದಾಟುವವರೆಗೂ ನಿಮ್ಮ ರೆಕ್ಕೆಗಳ ನೆರಳನ್ನೇ ನಾನು ಆಶ್ರಯಿಸಿಕೊಳ್ಳುತ್ತೇನೆ. 2 ಮಹೋನ್ನತನಾದ ದೇವರಿಗೆ, ಮೊರೆಯಿಡುತ್ತೇನೆ. ನನಗಾಗಿ ಕಾರ್ಯಗಳಿಗೆ ನ್ಯಾಯ ನೀಡುವ ದೇವರಿಗೆ ಮೊರೆಯಿಡುತ್ತೇನೆ. 3 ದೇವರು ಪರಲೋಕದಿಂದ ಸಹಾಯ ಕಳುಹಿಸಿ, ನನ್ನನ್ನು ನಿಂದಿಸುವವರನ್ನು ದಂಡಿಸಿ, ನನ್ನನ್ನು ರಕ್ಷಿಸುವರು. ದೇವರು ತಮ್ಮ ಒಡಂಬಡಿಕೆಯ ಪ್ರೀತಿಯನ್ನೂ ತಮ್ಮ ಸತ್ಯವನ್ನೂ ಕಳುಹಿಸುವರು. 4 ನಾನು ಸಿಂಹಗಳಂಥವರ ಮಧ್ಯದಲ್ಲಿದ್ದೇನೆ. ಕ್ರೂರಮೃಗಗಳಂಥವರ ಮಧ್ಯದಲ್ಲಿ ಒತ್ತಾಯವಾಗಿ ವಾಸಮಾಡುತ್ತಿದ್ದೇನೆ. ಅವರ ಹಲ್ಲು, ಭಲ್ಲೆ, ಬಾಣಗಳೂ ಅವರ ನಾಲಿಗೆ ಹದವಾದ ಖಡ್ಗವೂ ಆಗಿವೆ. 5 ಓ, ದೇವರೇ, ಆಕಾಶಗಳ ಮೇಲೆ ನಿಮ್ಮ ಘನವು ಮೆರೆಯಲಿ. ಭೂಮಿಯ ಮೇಲೆಲ್ಲಾ ನಿಮ್ಮ ಮಹಿಮೆಯು ಹರಡಲಿ. 6 ಶತ್ರುಗಳು ನನ್ನ ಕಾಲುಗಳಿಗೆ ಬಲೆಯೊಡ್ಡಿದ್ದಾರೆ. ನನ್ನ ಪ್ರಾಣವು ಕುಗ್ಗಿಹೋಗಿದೆ. ನನ್ನ ದಾರಿಯಲ್ಲಿ ಕುಣಿಯನ್ನು ಅಗೆದಿದ್ದಾರೆ. ಅದರಲ್ಲಿ ತಾವೇ ಬಿದ್ದುಹೋದರು. 7 ದೇವರೇ, ನನ್ನ ಹೃದಯವು ಸ್ಥಿರವಾಗಿದೆ. ಹೌದು, ನನ್ನ ಹೃದಯವು ಸ್ಥಿರವಾಗಿದೆ. ನಾನು ಸಂಗೀತದೊಡನೆ ಹಾಡುವೆನು. 8 ಎಚ್ಚರವಾಗು, ನನ್ನ ಪ್ರಾಣವೇ, ವೀಣೆಯೇ, ಕಿನ್ನರಿಯೇ ಎಚ್ಚರವಾಗಿರಿ, ನಾನು ಉದಯಕಾಲವನ್ನು ಎಚ್ಚರಗೊಳಿಸುವೆನು. 9 ಯೆಹೋವ ದೇವರೇ, ಜನಾಂಗಗಳಲ್ಲಿ ನಾನು ನಿಮ್ಮನ್ನು ಕೊಂಡಾಡುವೆನು. ಜನರ ಮಧ್ಯದಲ್ಲಿ ನಿಮ್ಮನ್ನು ಹಾಡಿ ಕೊಂಡಾಡುವೆನು. 10 ಆಕಾಶಕ್ಕಿಂತ ನಿಮ್ಮ ಪ್ರೀತಿ ದೊಡ್ಡದು. ಮೇಘವನ್ನು ನಿಲುಕುವಷ್ಟು ನಿಮ್ಮ ಸತ್ಯವು ಉನ್ನತವಾಗಿವೆ. 11 ಓ, ದೇವರೇ, ಆಕಾಶಗಳ ಮೇಲೆ ನಿಮ್ಮ ಘನವು ಮೆರೆಯಲಿ. ಭೂಮಿಯ ಮೇಲೆಲ್ಲಾ ನಿಮ್ಮ ಮಹಿಮೆಯು ಹರಡಲಿ.
ಒಟ್ಟು 150 ಅಧ್ಯಾಯಗಳು, ಆಯ್ಕೆ ಮಾಡಲಾಗಿದೆ ಅಧ್ಯಾಯ 57 / 150
×

Alert

×

Kannada Letters Keypad References