1. [QS]ದೇವರೇ, ನನ್ನ ಪ್ರಾರ್ಥನೆಗೆ ಕಿವಿಗೊಡಿರಿ, [QE][QS2]ನನ್ನ ವಿಜ್ಞಾಪನೆಗೆ ನಿಮ್ಮನ್ನು ಮರೆಮಾಡಿಕೊಳ್ಳಬೇಡಿರಿ. [QE]
2. [QS2]ನನ್ನನ್ನು ಆಲೈಸಿರಿ, ನನಗೆ ಉತ್ತರಕೊಡಿರಿ. [QE][QS]ನಾನು ನನ್ನ ಚಿಂತೆಯಿಂದ ದುಃಖಿಸುತ್ತಾ ಬೇಸರವಾಗಿದ್ದೇನೆ. [QE]
2. [QS2]ಶತ್ರುವಿನ ಗರ್ಜನೆಯಿಂದಲೂ [QE][QS2]ದುಷ್ಟರ ಬೆದರಿಕೆಯಿಂದಲೂ ನರಳುತ್ತೇನೆ. [QE][QS]ಏಕೆಂದರೆ ಅವರು ಅಪರಾಧವನ್ನು ನನ್ನ ಮೇಲೆ ಬರಮಾಡಿ, [QE][QS2]ಕೋಪದಿಂದ ನನ್ನನ್ನು ಹಗೆ ಮಾಡುತ್ತಾರೆ. [QE][PBR]
4. [QS]ನನ್ನ ಹೃದಯವು ನನ್ನ ಅಂತರಂಗದಲ್ಲಿ ನೊಂದುಕೊಳ್ಳುತ್ತದೆ. [QE][QS2]ಮರಣದ ಬೆದರಿಕೆಗಳು ನನ್ನ ಮೇಲೆ ಬಿದ್ದಿವೆ. [QE]
5. [QS]ಭಯವೂ ನಡುಗೂ ನನಗೆ ಬಂದಿವೆ; [QE][QS2]ಭೀತಿಯು ನನ್ನನ್ನು ಮುಚ್ಚಿದೆ. [QE]
6. [QS]“ಓ, ಪಾರಿವಾಳದಂತೆ ನನಗೆ ರೆಕ್ಕೆಗಳು ಇರುತ್ತಿದ್ದರೆ, [QE][QS2]ಹಾರಿಹೋಗಿ ವಿಶ್ರಾಂತಿಯನ್ನು ತೆಗೆದುಕೊಳ್ಳುತ್ತಿದ್ದೆ. [QE]
7. [QS]ನಾನು ದೂರ ಹಾರಿಹೋಗಿ [QE][QS2]ಮರುಭೂಮಿಯಲ್ಲಿ ವಾಸಿಸುತ್ತಿದ್ದೆ. [QE]
8. [QS]ಚಂಡಮಾರುತದಿಂದಲೂ ಬಿರುಗಾಳಿಯಿಂದಲೂ [QE][QS2]ತಪ್ಪಿಸಿಕೊಳ್ಳುತ್ತಿದ್ದೆ,” ಎಂದುಕೊಂಡೆನು. [QE][PBR]
9. [QS]ಯೆಹೋವ ದೇವರೇ, ದುಷ್ಟರನ್ನು ಕಳವಳಗೊಳಿಸಿರಿ, ಅವರ ಮಾತುಗಳನ್ನು ನಿಲ್ಲಿಸಿಬಿಡಿರಿ. [QE][QS2]ಬಲಾತ್ಕಾರವನ್ನೂ ವಿವಾದವನ್ನೂ ಪಟ್ಟಣದಲ್ಲಿ ನಾನು ಕಾಣುತ್ತಿದ್ದೇನೆ. [QE]
10. [QS]ಅವರು ಹಗಲಿರುಳು ಪಟ್ಟಣದ ಗೋಡೆಗಳನ್ನು ಸುತ್ತುತ್ತಾರೆ. [QE][QS2]ಕೇಡು ಅನಾಚಾರಗಳು ಅದರ ಮಧ್ಯದಲ್ಲಿ ಇವೆ. [QE]
11. [QS]ನಾಶಕರ ಶಕ್ತಿಗಳು ನಗರ ಮಧ್ಯದಲ್ಲಿ ಇವೆ. [QE][QS2]ಬೀದಿಗಳೊಳಗಿಂದ ಬೆದರಿಕೆಯೂ ವಂಚನೆಯೂ ತೊಲಗುವುದಿಲ್ಲ. [QE][PBR]
12. [QS]ನನ್ನನ್ನು ನಿಂದಿಸುವವನು ಶತ್ರುವಲ್ಲ, [QE][QS2]ಶತ್ರುವಾದರೆ ತಾಳಿಕೊಳ್ಳುತ್ತಿದ್ದೆ. [QE][QS]ನನಗೆ ವಿರೋಧವಾಗಿರುವವನು ನನ್ನ ವೈರಿಯಾಗಿದ್ದರೆ, [QE][QS2]ಅವನಿಂದ ಅಡಗಿಕೊಳ್ಳುತ್ತಿದ್ದೆನು. [QE]
13. [QS]ಆದರೆ ನನ್ನ ಜೊತೆಗಾರನೂ ನನ್ನ ಆಪ್ತನೂ, [QE][QS2]ನನಗೆ ಸಮನಾದವನೇ ವಿರೋಧವಾಗಿದ್ದಾನೆ. [QE]
14. [QS]ದೇವರ ಆಲಯಕ್ಕೆ ಆರಾಧಕರ [QE][QS2]ಗುಂಪಿನೊಂದಿಗೆ ನಾವಿಬ್ಬರೂ [QE][QS]ನಡೆದು ಹೋಗುವಾಗ [QE][QS2]ಮಧುರ ಅನ್ಯೋನ್ಯತೆಯನ್ನು ಅನುಭವಿಸಿದೆವು. [QE][PBR]
15. [QS]ಮರಣ ನನ್ನ ವೈರಿಗಳನ್ನು ತಟ್ಟನೆ ಹಿಡಿಯಲಿ. [QE][QS2]ಜೀವಸಹಿತ ಪಾತಾಳಕ್ಕೆ ಅವರು ಇಳಿಯಲಿ, [QE][QS2]ಅವರ ಮನೆಯಲ್ಲಿ ದುಷ್ಟತನವು ಇದೆ. [QE][PBR]
16. [QS]ಆದರೆ ನಾನು ದೇವರನ್ನು ಕರೆಯುವೆನು. [QE][QS2]ಯೆಹೋವ ದೇವರು ನನ್ನನ್ನು ರಕ್ಷಿಸುವರು. [QE]
17. [QS]ಸಂಜೆ, ಮುಂಜಾನೆ, ಮಧ್ಯಾಹ್ನಗಳಲ್ಲಿ [QE][QS2]ಹಂಬಲಿಸಿ ಮೊರೆಯಿಡುವೆನು. [QE][QS2]ದೇವರು ನನ್ನ ಧ್ವನಿಯನ್ನು ಕೇಳುವರು. [QE]
18. [QS]ಅನೇಕರು ನನ್ನನ್ನು ವಿರೋಧಿಸಿದರೂ [QE][QS2]ನನಗೆ ವಿರೋಧವಾಗಿ ಆಗುವ ಯುದ್ಧಗಳಲ್ಲಿ [QE][QS2]ದೇವರು ನನ್ನನ್ನು ಯಾವುದೇ ಹಾನಿಯಾಗದಂತೆ ವಿಮೋಚಿಸುವರು. [QE]
19. [QS]ಆದಿಯಿಂದ ಸಿಂಹಾಸನಾರೂಢರಾಗಿರುವ ದೇವರು, [QE][QS2]ಅವರ ಮೊರೆಯನ್ನು ಕೇಳಿ ಅವರನ್ನು ತಗ್ಗಿಸುವರು, [QE][QS]ಏಕೆಂದರೆ, ಅವರು ದೇವರಿಗೆ ಭಯಪಡುವುದಿಲ್ಲ. [QE][QS2]ದೇವರು ಬದಲಾಗುವುದಿಲ್ಲ. [QE][PBR]
20. [QS]ನನ್ನ ಜೊತೆಗಾರನು ತನ್ನ ಸ್ನೇಹಿತನ ಮೇಲೆ ದಾಳಿಮಾಡಿದ್ದಾನೆ. [QE][QS2]ತಾನು ಮಾಡಿದ ಒಡಂಬಡಿಕೆಯನ್ನು ಭಂಗಪಡಿಸಿದ್ದಾನೆ. [QE]
21. [QS]ಅವನ ಬಾಯಿಯ ಮಾತುಗಳು ಬೆಣ್ಣೆಗಿಂತ ನುಣ್ಣಗಾಗಿವೆ; [QE][QS2]ಆದರೆ ಅವನ ಹೃದಯದಲ್ಲಿ ಕಾಳಗವಿದೆ; [QE][QS]ಅವನ ಮಾತುಗಳು ಎಣ್ಣೆಗಿಂತ ನಯವಾಗಿವೆ; [QE][QS2]ಆದರೆ ಅವು ಬಿಚ್ಚುಗತ್ತಿಗಳಾಗಿವೆ. [QE][PBR]
22. [QS]ಯೆಹೋವ ದೇವರ ಮೇಲೆ ನಿಮ್ಮ ಭಾರವನ್ನು ಹಾಕಿರಿ. [QE][QS2]ಅವರು ನಿಮಗೆ ಆಧಾರವಾಗಿರುವರು. [QE][QS]ದೇವರು ಎಂದೆಂದಿಗೂ [QE][QS2]ನೀತಿವಂತನನ್ನು ಕದಲಗೊಡಿಸುವುದಿಲ್ಲ. [QE]
23. [QS]ಆದರೆ ದೇವರೇ, ದುಷ್ಟರನ್ನು ನಾಶದ [QE][QS2]ಕುಣಿಯಲ್ಲಿ ಇಳಿಯ ಮಾಡುವಿರಿ. [QE][QS]ಕೊಲೆಪಾತಕರೂ ಮೋಸಗಾರರೂ [QE][QS2]ತಮ್ಮ ಆಯುಷ್ಕಾಲದಲ್ಲಿ ಅರ್ಧವನ್ನೂ ಜೀವಿಸುವುದಿಲ್ಲ. [QE][PBR] [QS]ನಾನಾದರೋ ನಿಮ್ಮಲ್ಲಿ ಭರವಸವಿಡುತ್ತೇನೆ. [QE]