1. [QS]ದೇವಾಧಿ ದೇವರಾದ ಯೆಹೋವ ದೇವರು ತಾವೇ ಮಾತನಾಡುತ್ತಿದ್ದಾರೆ, [QE][QS2]ಸೂರ್ಯೋದಯದಿಂದ ಅಸ್ತಮಾನದವರೆಗೂ [QE][QS2]ಇರುವ ಭೂಲೋಕದವರು ಕರೆಯುತ್ತಿದ್ದಾರೆ. [QE]
2. [QS]ಪರಿಪೂರ್ಣ ಸೌಂದರ್ಯದ ಚೀಯೋನಿನಿಂದ [QE][QS2]ದೇವರು ಪ್ರಕಾಶಿಸುತ್ತಿದ್ದಾರೆ. [QE]
3. [QS]ನಮ್ಮ ದೇವರು ಬರುತ್ತಾರೆ, [QE][QS2]ಎಷ್ಟು ಮಾತ್ರವೂ ಮೌನವಾಗಿರುವುದಿಲ್ಲ. [QE][QS]ಬೆಂಕಿಯು ಅವರ ಮುಂದೆ ಪ್ರಜ್ವಲಿಸುವುದು; [QE][QS2]ಅವರ ಸುತ್ತಲೂ ದೊಡ್ಡ ಬಿರುಗಾಳಿಯು ಬೀಸುವುದು. [QE]
4. [QS]ತಮ್ಮ ಜನರಿಗೆ ನ್ಯಾಯತೀರಿಸುವುದಕ್ಕೆ ಭೂಮಿ ಆಕಾಶಗಳನ್ನೂ [QE][QS2]ಹೀಗೆಂದು ಕರೆಯುತ್ತಿದ್ದಾರೆ: [QE]
5. [QS]“ಯಜ್ಞದಿಂದ ನನ್ನ ಸಂಗಡ ಒಡಂಬಡಿಕೆ ಮಾಡಿಕೊಂಡ [QE][QS2]ನನ್ನ ಭಕ್ತರನ್ನು ನನ್ನ ಬಳಿಗೆ ಒಟ್ಟುಗೂಡಿಸಿರಿ.” [QE]
6. [QS]ಮತ್ತು ದೇವರು ನ್ಯಾಯಾಧಿಪತಿಯಾಗಿದ್ದಾರೆ. [QE][QS2]ಆಕಾಶಗಳು ದೇವರ ನೀತಿಯನ್ನು ಪ್ರಕಟಿಸುತ್ತವೆ. [QE][PBR]
7. [QS]“ನನ್ನ ಜನರೇ, ಕೇಳಿರಿ, ನಾನು ಮಾತನಾಡುತ್ತಿದ್ದೇನೆ, [QE][QS2]ಇಸ್ರಾಯೇಲೇ, ನಿಮಗೆ ವಿರೋಧವಾಗಿ ಹೀಗೆಂದು ನಾನು ಸಾಕ್ಷಿ ಕೊಡುವೆನು: [QE][QS2]ನಾನು ದೇವರು, ಹೌದು ನಿಮ್ಮ ದೇವರು ನಾನೇ. [QE]
8. [QS]ನಿಮ್ಮ ಯಜ್ಞಗಳ ವಿರೋಧವಾಗಿ ನಾನು ತಪ್ಪು ಹೊರಿಸುತ್ತಾಯಿಲ್ಲ, [QE][QS2]ಅಥವಾ ನನ್ನ ಮುಂದೆ ಯಾವಾಗಲೂ ಇರುವ ದಹನಬಲಿಗಳ [QE][QS2]ವಿರೋಧವಾಗಿಯೂ ನಾನು ತಪ್ಪು ಹೊರಿಸುತ್ತಾಯಿಲ್ಲ. [QE]
9. [QS]ನಿಮ್ಮ ಮನೆಯಿಂದ ಹೋರಿಯಾಗಲಿ [QE][QS2]ಕೊಟ್ಟಿಗೆಯಿಂದ ಹೋತಗಳಾಗಲಿ ನನಗೆ ಅವಶ್ಯವಿಲ್ಲ. [QE]
10. [QS]ಏಕೆಂದರೆ ಅಡವಿಯ ಮೃಗಗಳೆಲ್ಲವೂ ನನ್ನವೇ. [QE][QS2]ಸಾವಿರ ಬೆಟ್ಟಗಳಲ್ಲಿರುವ ಪಶುಗಳೂ ಸಹ ನನ್ನವೇ. [QE]
11. [QS]ಬೆಟ್ಟಗಳ ಪಕ್ಷಿಗಳನ್ನೆಲ್ಲಾ ನಾನು ಬಲ್ಲೆನು; [QE][QS2]ಬಯಲಿನ ಮೃಗಗಳು ನನ್ನವುಗಳಾಗಿವೆ. [QE]
12. [QS]ನನಗೆ ಹಸಿವಾದರೆ ನಿಮಗೆ ಹೇಳಬೇಕಾಗಿಲ್ಲ, [QE][QS2]ಏಕೆಂದರೆ ಭೂಲೋಕವೂ ಅದರಲ್ಲಿರುವುದೆಲ್ಲವೂ ನನ್ನವೇ. [QE]
13. [QS]ಹೋರಿಗಳ ಮಾಂಸವನ್ನು ನಾನು ಭುಜಿಸುವುದಿಲ್ಲ. [QE][QS2]ಹೋತಗಳ ರಕ್ತವನ್ನು ನಾನು ಕುಡಿಯುವುದಿಲ್ಲ. [QE][PBR]
14. [QS]“ದೇವರಾಗಿರುವ ನನಗೆ ಸ್ತೋತ್ರವನ್ನು ಬಲಿಯಾಗಿ ಅರ್ಪಿಸಿರಿ. [QE][QS2]ಮಹೋನ್ನತನಾಗಿರುವ ನನಗೆ ಹರಕೆಗಳನ್ನು ಸಲ್ಲಿಸಿರಿ. [QE]
15. [QS]ಇಕ್ಕಟ್ಟಿನ ದಿವಸದಲ್ಲಿ ನನ್ನನ್ನು ಕರೆಯಿರಿ, [QE][QS2]ನಾನು ನಿಮ್ಮನ್ನು ಬಿಡಿಸುವೆನು, ನೀವು ನನ್ನನ್ನು ಘನಪಡಿಸುವಿರಿ.” [QE]
16. [PS]ಆದರೆ ದುಷ್ಟನಿಗೆ ದೇವರು ಹೇಳುವುದೇನೆಂದರೆ: [PE][QS]“ನನ್ನ ನಿಯಮಗಳನ್ನು ಪಠಿಸುವುದಕ್ಕೆ ಹಕ್ಕು ನಿಮಗೆ ಏನಿದೆ? [QE][QS2]ಇಲ್ಲವೆ ನನ್ನ ಒಡಂಬಡಿಕೆಯನ್ನು ನಿಮ್ಮ ಬಾಯಲ್ಲಿ ಉಚ್ಛರಿಸುವುದೇಕೆ? [QE]
17. [QS]ನೀನು ನನ್ನ ಶಿಕ್ಷಣವನ್ನು ದ್ವೇಷಿಸಿ, ನನ್ನ ವಾಕ್ಯಗಳನ್ನು [QE][QS2]ನಿಮ್ಮ ಹಿಂದೆ ಬಿಸಾಡಿಬಿಟ್ಟೀರಲ್ಲಾ. [QE]
18. [QS]ಕಳ್ಳನನ್ನು ಕಂಡರೆ ಅವನೊಂದಿಗೆ ಸೇರಿಕೊಳ್ಳುತ್ತೀರಿ. [QE][QS2]ವ್ಯಭಿಚಾರಿಗಳ ಸಂಗಡ ನಿಮಗೆ ಪಾಲು ಇದೆ. [QE]
19. [QS]ನೀವು ನಿಮ್ಮ ಬಾಯನ್ನು ಕೇಡಿಗೆ ಉಪಯೋಗಿಸುತ್ತೀರಿ. [QE][QS2]ನಿಮ್ಮ ನಾಲಿಗೆಯು ಮೋಸವನ್ನು ಜೋಡಿಸುತ್ತದೆ. [QE]
20. [QS]ನೀವು ಕುಳಿತುಕೊಂಡು ನಿಮ್ಮ ಸಹೋದರರಿಗೆ ವಿರೋಧವಾಗಿ ಸುಳ್ಳಾಡುತ್ತೀರಿ. [QE][QS2]ನಿಮ್ಮ ಒಡಹುಟ್ಟಿದವರ ಮೇಲೆ ಚಾಡಿ ಹೇಳುತ್ತೀರಿ. [QE]
21. [QS]ಇವುಗಳನ್ನೆಲ್ಲಾ ನೀವು ಮಾಡಿದ್ದೀರಿ, [QE][QS2]ಆದರೂ ನಾನು ಮೌನವಾಗಿದ್ದೆನು. [QE][QS]ಆದ್ದರಿಂದ ನಾನೂ ಸಹ ನಿಮ್ಮ ಹಾಗೆ ಒಬ್ಬನೆಂದು ನೀವು ನೆನಸಿಕೊಂಡಿದ್ದೀರಿ. [QE][QS2]ಆದರೆ ಈಗ ನಾನು ನಿಮ್ಮನ್ನು ಗದರಿಸಿ ನಿಮ್ಮ ಕಣ್ಣು ಮುಂದೆಯೇ [QE][QS2]ನಿಮ್ಮ ಅಪರಾಧ ಪ್ರಕಟಿಸುವೆನು. [QE][PBR]
22. [QS]“ದೇವರನ್ನು ಮರೆತು ಬಿಡುವವರೇ, ಇದನ್ನು ನಿಮ್ಮ ಮನಸ್ಸಿಗೆ ತಂದುಕೊಳ್ಳಿರಿ. [QE][QS2]ಇಲ್ಲವಾದರೆ ಎಚ್ಚರಿಕೆಯಾಗಿರಿ. [QE][QS2]ನನ್ನ ಕೈಯಿಂದ ಬಿಡಿಸುವವರು ಯಾರೂ ಇರುವುದಿಲ್ಲವೆಂಬುದನ್ನು ಗ್ರಹಿಸಿಕೊಳ್ಳಿರಿ. [QE]
23. [QS]ಯಾರು ಧನ್ಯವಾದದ ಬಲಿಯನ್ನು ಅರ್ಪಿಸುವರೋ ಅವರೇ ನನ್ನನ್ನು ಘನಪಡಿಸುವರು. [QE][QS2]ತಮ್ಮ ನಡವಳಿಕೆಯನ್ನು ಕ್ರಮಪಡಿಸಿಕೊಳ್ಳುವವರಿಗೆ ನನ್ನ ರಕ್ಷಣೆಯನ್ನು ತೋರಿಸುವೆನು.” [QE]