1. [QS]ಎಲ್ಲಾ ಜನರೇ, ಇದನ್ನು ಕೇಳಿರಿ; [QE][QS2]ಭೂಲೋಕದ ನಿವಾಸಿಗಳೇ, [QE]
2. [QS]ಸಾಮಾನ್ಯರೇ, ಉನ್ನತರೇ, ಐಶ್ವರ್ಯವಂತರೇ, [QE][QS2]ಬಡವರೇ ಎಲ್ಲರೂ ಕಿವಿಗೊಡಿರಿ. [QE]
3. [QS]ನನ್ನ ಬಾಯಿ ಜ್ಞಾನವನ್ನು ನುಡಿಯುವುದು, [QE][QS2]ನನ್ನ ಹೃದಯದ ಧ್ಯಾನವು ವಿವೇಕವಾಗಿರುವುದು. [QE]
4. [QS]ಸಾಮ್ಯಕ್ಕೆ ನನ್ನ ಕಿವಿಗೊಟ್ಟು [QE][QS2]ಒಗಟನ್ನು ಕಿನ್ನರಿಯಿಂದ ಬಿಚ್ಚುವೆನು. [QE][PBR]
5. [QS]ಕೇಡಿನ ದಿವಸಗಳಲ್ಲಿ ನನಗೆ ಒಳಸಂಚು ಮಾಡುವವರ [QE][QS2]ಅಕ್ರಮವು ನನ್ನನ್ನು ಸುತ್ತಿಕೊಳ್ಳುವಾಗ ನಾನು ಏಕೆ ಭಯಪಡಬೇಕು? [QE]
6. [QS]ಅವರು ತಮ್ಮ ಸಂಪತ್ತಿನಲ್ಲಿ ಭರವಸೆಯಿಟ್ಟು, [QE][QS2]ತಮ್ಮ ಅಧಿಕ ಐಶ್ವರ್ಯಗಳಲ್ಲಿ ಜಂಭಪಡುವರು. [QE]
7. [QS]ಯಾರೂ ಇನ್ನೊಬ್ಬರ ಜೀವವನ್ನು ವಿಮೋಚಿಸಲಾರರು; [QE][QS2]ಅಥವಾ ಇತರರಿಗಾಗಿ ಯಾರೂ ದೇವರಿಗೆ ಈಡು ಕೊಡಲಾರರು. [QE]
8. [QS]ಆತ್ಮದ ವಿಮೋಚನೆಯು ಬಹು ಬೆಲೆಯುಳ್ಳದ್ದು, [QE][QS2]ಅದಕ್ಕೆ ಸಾಕಷ್ಟು ಬೆಲೆಯನ್ನು ಕಟ್ಟಲು ಯಾರಿಗೂ ಸಾಧ್ಯವಿಲ್ಲ. [QE]
9. [QS]ಮನುಷ್ಯರು ಮರಣ ನಾಶವನ್ನು ಕಾಣದೆ, [QE][QS2]ಶಾಶ್ವತವಾಗಿ ಬದುಕುವಂತೆ ಮಾಡಲು ಯಾರಿಗೂ ಸಾಧ್ಯವಿಲ್ಲ. [QE]
10. [QS]ಏಕೆಂದರೆ, ಜ್ಞಾನಿಗಳು ಸಾಯುವುದನ್ನು ಕಾಣುತ್ತೇವೆ. [QE][QS2]ಹಾಗೆಯೇ ಮೂರ್ಖರೂ ಜ್ಞಾನಹೀನರೂ ಸಹ ನಾಶವಾಗುತ್ತಾರೆ. [QE][QS2]ಅವರ ಆಸ್ತಿಯನ್ನು ಇತರರು ಪಡೆಯುತ್ತಾರೆ. [QE]
11. [QS]ಜಮೀನುಗಳಿಗೆ ತಮ್ಮ ಹೆಸರುಗಳನ್ನು ಇಟ್ಟುಕೊಳ್ಳುತ್ತಾರೆ. [QE][QS2]ಆದರೂ ಸಮಾಧಿಯೇ ಅವರಿಗೆ ಶಾಶ್ವತಮಂದಿರವು. [QE][QS2]ಅದೇ ಅವರ ತಲತಲಾಂತರಕ್ಕೂ ನಿವಾಸಸ್ಥಾನ. [QE][PBR]
12. [QS]ಮನುಷ್ಯನು ಎಷ್ಟು ಆಸ್ತಿ ಗೌರವ ಸಂಪಾದಿಸಿದ್ದರೂ, [QE][QS2]ಮಡಿದು ಹೋಗುವ ಪಶುಗಳಿಗೆ ಸಮಾನವಾಗಿದ್ದಾನೆ. [QE][PBR]
13. [QS]ತಮ್ಮಲ್ಲಿಯೇ ಭರವಸೆ ಇಟ್ಟುಕೊಳ್ಳುವವರಿಗೂ ಇದೇ ಗತಿ. [QE][QS2]ಅಂಥವರ ಮಾತುಗಳನ್ನು ಒಪ್ಪಿ ಅನುಸರಿಸುವವರ ಗತಿಯೂ ಇದೆ. [QE]
14. [QS]ಅವರು ಕುರಿಗಳಂತೆ ಸಾಯಲು ನೇಮಕವಾಗಿದ್ದಾರೆ. [QE][QS2]ಮರಣವೇ ಅವರ ಕುರುಬ; [QE][QS]ಅವರ ವೈಭವ ನಿವಾಸದಿಂದ ದೂರ ಸಮಾಧಿಯಲ್ಲಿರುವುದು [QE][QS2]ಅವರ ರೂಪ ಕ್ಷಯವಾಗುವುದು. [QE][QS2]ಆದರೆ ಯಥಾರ್ಥರು ಬೆಳಿಗ್ಗೆ ಅವರನ್ನು ಬಿಟ್ಟು ಸಾಗುತ್ತಿರುವರು. [QE]
15. [QS]ಆದರೆ ದೇವರು ನನ್ನ ಪ್ರಾಣವನ್ನು ಮರಣದಿಂದ ವಿಮೋಚನೆ ಮಾಡುವರು. [QE][QS2]ದೇವರು ನನ್ನನ್ನು ತಮಗಾಗಿ ಅಂಗೀಕರಿಸುವರು. [QE]
16. [QS]ಒಬ್ಬನು ಐಶ್ವರ್ಯವಂತನಾದರೆ [QE][QS2]ಮತ್ತು ಅವನ ಮನೆಯ ಘನತೆ ದೊಡ್ಡದಾದರೆ ಕಳವಳ ಪಡಬೇಡ. [QE]
17. [QS]ಅವನು ಸಾಯುವಾಗ ಏನೂ ತೆಗೆದುಕೊಂಡು ಹೋಗಲಾರನಷ್ಟೆ; [QE][QS2]ಅವನ ವೈಭವವು ಅವನೊಡನೆ ಹೋಗುವುದಿಲ್ಲ. [QE]
18. [QS]ಸಿರಿ ಬಂದಾಗ ಜನರ ಹೊಗಳಿಕೆ ತಪ್ಪದು ಎಂಬಂತೆ ಅವನು ಜೀವಮಾನದಲ್ಲಿ ಆತ್ಮಸ್ತುತಿಯಿಂದಲೂ, [QE][QS2]ಜನಸ್ತುತಿಯಿಂದಲೂ ಕೂಡಿದವನಾದರೂ [QE]
19. [QS]ಅವನು ತನ್ನ ಪೂರ್ವಿಕರ ಬಳಿಗೆ ಹೋಗುವನು; [QE][QS2]ಅವರು ಸದಾಕಾಲಕ್ಕೂ ಜೀವ ಬೆಳಕನ್ನು ಕಾಣುವುದಿಲ್ಲ. [QE][PBR]
20. [QS]ಮನುಷ್ಯನು ಎಷ್ಟು ಘನತೆಯಲ್ಲಿದ್ದು ವಿವೇಕವಿಲ್ಲದವರಾದರೆ [QE][QS2]ಮಡಿದು ಹೋಗುವ ಪಶುಗಳಿಗೆ ಸಮಾನವಾಗಿದ್ದಾನೆ. [QE]