ಪವಿತ್ರ ಬೈಬಲ್

ದೇವರ ಕೃಪೆಯ ಉಡುಗೊರೆ
ಕೀರ್ತನೆಗಳು
1. [QS]ದೇವರೇ, ನನ್ನನ್ನು ನಿರ್ದೋಷಿ ಎಂದು ನಿರ್ಣಯಿಸಿರಿ, [QE][QS2]ಭಕ್ತಿಹೀನ ಜನತೆಯ ವಿರೋಧವಾಗಿ [QE][QS2]ನನ್ನ ನ್ಯಾಯವನ್ನು ವಾದಿಸಿರಿ. [QE][QS]ಮೋಸವೂ ಅನ್ಯಾಯವೂ ಉಳ್ಳ ಮನುಷ್ಯನಿಂದ [QE][QS2]ನನ್ನನ್ನು ತಪ್ಪಿಸಿರಿ. [QE]
2. [QS]ನೀವು ನನ್ನ ದೇವರು, ನನ್ನ ಬಲವಾದ ಕೋಟೆಯು; [QE][QS2]ನೀವು ಏಕೆ ನನ್ನನ್ನು ತಳ್ಳಿಬಿಟ್ಟಿದ್ದೀರಿ? [QE][QS]ಏಕೆ ನಾನು ಶತ್ರುವಿನ ಬಾಧೆಯಿಂದ [QE][QS2]ದುಃಖದಲ್ಲಿ ನಡೆದುಕೊಳ್ಳಬೇಕು? [QE]
3. [QS]ನಿಮ್ಮ ಬೆಳಕನ್ನೂ ನಿಮ್ಮ ಸತ್ಯವನ್ನೂ ಕಳುಹಿಸಿರಿ; [QE][QS2]ಅವು ನನ್ನನ್ನು ನೀವು ವಾಸಿಸುವ [QE][QS]ನಿಮ್ಮ ಪರಿಶುದ್ಧ ಪರ್ವತಕ್ಕೆ [QE][QS2]ನನ್ನನ್ನು ಬರಮಾಡಲಿ. [QE]
4. [QS]ದೇವರೇ, ನನ್ನ ದೇವರೇ, ಆಗ ನಿಮ್ಮ ಬಲಿಪೀಠದ ಬಳಿಗೆ ಬರುವೆನು. [QE][QS2]ನನ್ನ ಸಂತೋಷವೂ ಹರ್ಷವೂ [QE][QS]ಆಗಿರುವ ನಿಮ್ಮ ಬಳಿಗೂ ಬಂದು, [QE][QS2]ಕಿನ್ನರಿಯಿಂದ ನಿಮ್ಮನ್ನು ಕೊಂಡಾಡುವೆನು. [QE][PBR]
5. [QS]ನನ್ನ ಪ್ರಾಣವೇ, ನೀನು ಏಕೆ ಕುಗ್ಗಿ ಹೋಗಿದ್ದೀ? [QE][QS2]ನನ್ನಲ್ಲಿ ನೀನು ಏಕೆ ವ್ಯಥೆಪಡುತ್ತೀ? [QE][QS]ದೇವರನ್ನು ನಿರೀಕ್ಷಿಸು; ಅವರೇ ನನ್ನ ರಕ್ಷಕರೂ ದೇವರೂ ಆಗಿದ್ದಾರೆ. [QE][QS2]ಹೌದು, ನಾನು [QE][QS2]ದೇವರನ್ನೇ ಕೊಂಡಾಡುತ್ತಿರುವೆನು. [QE]
ಒಟ್ಟು 150 ಅಧ್ಯಾಯಗಳು, ಆಯ್ಕೆ ಮಾಡಲಾಗಿದೆ ಅಧ್ಯಾಯ 43 / 150
1 ದೇವರೇ, ನನ್ನನ್ನು ನಿರ್ದೋಷಿ ಎಂದು ನಿರ್ಣಯಿಸಿರಿ, ಭಕ್ತಿಹೀನ ಜನತೆಯ ವಿರೋಧವಾಗಿ ನನ್ನ ನ್ಯಾಯವನ್ನು ವಾದಿಸಿರಿ. ಮೋಸವೂ ಅನ್ಯಾಯವೂ ಉಳ್ಳ ಮನುಷ್ಯನಿಂದ ನನ್ನನ್ನು ತಪ್ಪಿಸಿರಿ. 2 ನೀವು ನನ್ನ ದೇವರು, ನನ್ನ ಬಲವಾದ ಕೋಟೆಯು; ನೀವು ಏಕೆ ನನ್ನನ್ನು ತಳ್ಳಿಬಿಟ್ಟಿದ್ದೀರಿ? ಏಕೆ ನಾನು ಶತ್ರುವಿನ ಬಾಧೆಯಿಂದ ದುಃಖದಲ್ಲಿ ನಡೆದುಕೊಳ್ಳಬೇಕು? 3 ನಿಮ್ಮ ಬೆಳಕನ್ನೂ ನಿಮ್ಮ ಸತ್ಯವನ್ನೂ ಕಳುಹಿಸಿರಿ; ಅವು ನನ್ನನ್ನು ನೀವು ವಾಸಿಸುವ ನಿಮ್ಮ ಪರಿಶುದ್ಧ ಪರ್ವತಕ್ಕೆ ನನ್ನನ್ನು ಬರಮಾಡಲಿ. 4 ದೇವರೇ, ನನ್ನ ದೇವರೇ, ಆಗ ನಿಮ್ಮ ಬಲಿಪೀಠದ ಬಳಿಗೆ ಬರುವೆನು. ನನ್ನ ಸಂತೋಷವೂ ಹರ್ಷವೂ ಆಗಿರುವ ನಿಮ್ಮ ಬಳಿಗೂ ಬಂದು, ಕಿನ್ನರಿಯಿಂದ ನಿಮ್ಮನ್ನು ಕೊಂಡಾಡುವೆನು. 5 ನನ್ನ ಪ್ರಾಣವೇ, ನೀನು ಏಕೆ ಕುಗ್ಗಿ ಹೋಗಿದ್ದೀ? ನನ್ನಲ್ಲಿ ನೀನು ಏಕೆ ವ್ಯಥೆಪಡುತ್ತೀ? ದೇವರನ್ನು ನಿರೀಕ್ಷಿಸು; ಅವರೇ ನನ್ನ ರಕ್ಷಕರೂ ದೇವರೂ ಆಗಿದ್ದಾರೆ. ಹೌದು, ನಾನು ದೇವರನ್ನೇ ಕೊಂಡಾಡುತ್ತಿರುವೆನು.
ಒಟ್ಟು 150 ಅಧ್ಯಾಯಗಳು, ಆಯ್ಕೆ ಮಾಡಲಾಗಿದೆ ಅಧ್ಯಾಯ 43 / 150
×

Alert

×

Kannada Letters Keypad References