1. [QS]ಯೆಹೋವ ದೇವರೇ, ನನ್ನ ಸಂಗಡ ವ್ಯಾಜ್ಯ ಮಾಡುವವರ ಸಂಗಡ ವ್ಯಾಜ್ಯ ಮಾಡಿರಿ; [QE][QS2]ನನಗೆ ವಿರೋಧವಾಗಿ ಯುದ್ಧ ಮಾಡುವವರ ಸಂಗಡ ಯುದ್ಧಮಾಡಿರಿ. [QE]
2. [QS]ಗುರಾಣಿಯನ್ನೂ ಖಡ್ಗವನ್ನೂ ಹಿಡಿದುಕೊಂಡು [QE][QS2]ನನ್ನ ಸಹಾಯಕ್ಕೆ ಎದ್ದು ಬನ್ನಿರಿ. [QE]
3. [QS]ಬರ್ಜಿಯನ್ನೂ ಭಲ್ಲೆಯನ್ನೂ ಹಿಡಿದು [QE][QS2]ನನ್ನನ್ನು ಹಿಂಸಿಸುವವರಿಗೆ ಎದುರಾಗಿ ಅಡ್ಡಗಟ್ಟಿರಿ. [QE][QS]“ನಾನೇ ನಿಮ್ಮ ರಕ್ಷಣೆ” ಎಂದು [QE][QS2]ನನಗೆ ಹೇಳಿರಿ. [QE][PBR]
4. [QS]ನನ್ನ ಪ್ರಾಣವನ್ನು ಹುಡುಕುವವರು [QE][QS2]ನಾಚಿಕೆಪಟ್ಟು ಅವಮಾನ ಹೊಂದಲಿ; [QE][QS]ನನಗೆ ಕೇಡನ್ನು ಕಲ್ಪಿಸುವವರು [QE][QS2]ಹಿಂದಿರುಗಿ ಲಜ್ಜೆಪಡಲಿ. [QE]
5. [QS]ಅವರು ಗಾಳಿಗೆ ಹಾರುವ ಹೊಟ್ಟಿನ ಹಾಗೆ ಆಗಲಿ; [QE][QS2]ಯೆಹೋವ ದೇವರ ದೂತನು ಅವರನ್ನು ಹಿಂದಟ್ಟಲಿ. [QE]
6. [QS]ಅಂಥವರ ಮಾರ್ಗವು ಕತ್ತಲೆಯೂ ಜಾರುವಿಕೆಯೂ ಆಗಿರಲಿ; [QE][QS2]ಯೆಹೋವ ದೇವರ ದೂತನು ಅವರನ್ನು ಹಿಂದಟ್ಟಲಿ. [QE][PBR]
7. [QS]ಏಕೆಂದರೆ ಕಾರಣವಿಲ್ಲದೆ ತಮ್ಮ ಬಲೆಯನ್ನು ನನಗೆ ಒಡ್ಡಿದ್ದಾರೆ; [QE][QS2]ಕಾರಣವಿಲ್ಲದೆ ನನಗೆ ಗುಂಡಿಯನ್ನು ಅಗೆದಿದ್ದಾರೆ. [QE]
8. [QS]ನಾಶವು ಅವರಿಗೆ ಅನಿರೀಕ್ಷಿತವಾಗಿ ಬರಲಿ; [QE][QS2]ಅವರು ಅಡಗಿಸಿಟ್ಟ ಬಲೆಯು ಅವರನ್ನೇ ಹಿಡಿಯಲಿ; [QE][QS2]ವಿನಾಶನಕ್ಕಾಗಿ ಅವರು ಗುಂಡಿಯಲ್ಲಿ ಬೀಳಲಿ. [QE]
9. [QS]ಆಗ ನನ್ನ ಪ್ರಾಣವು ಯೆಹೋವ ದೇವರಲ್ಲಿ ಉಲ್ಲಾಸಗೊಂಡು, [QE][QS2]ದೇವರ ರಕ್ಷಣೆಯಲ್ಲಿ ಸಂತೋಷಿಸುವುದು. [QE]
10. [QS]ಯೆಹೋವ ದೇವರೇ, “ನಿಮ್ಮ ಹಾಗೆ ಯಾರು ಇದ್ದಾರೆ? [QE][QS2]ಬಡವನನ್ನು ಅವನಿಗಿಂತ ಬಲಿಷ್ಠನಿಂದ ಕಾಪಾಡುತ್ತೀರಿ ದರಿದ್ರನನ್ನೂ, [QE][QS]ಕೊರತೆಯುಳ್ಳವನನ್ನೂ ಸುಲಿದುಕೊಳ್ಳುವವನಿಂದ ಬಿಡಿಸುತ್ತೀರಿ,” [QE][QS2]ಎಂದು ನನ್ನ ಪೂರ್ಣ ಪ್ರಾಣವೇ ಹೇಳುವುದು. [QE][PBR]
11. [QS]ಸುಳ್ಳುಸಾಕ್ಷಿಗಳು ನನಗೆ ಎದುರಾಗಿ ಎದ್ದು, [QE][QS2]ನಾನು ತಿಳಿಯದವುಗಳ ಬಗ್ಗೆ ಪ್ರಶ್ನೆ ಮಾಡುತ್ತಾರೆ. [QE]
12. [QS]ನನ್ನ ಉಪಕಾರಕ್ಕೆ ಬದಲಾಗಿ ನನಗೆ ಕೇಡನ್ನು ಮಾಡಿ [QE][QS2]ನನ್ನನ್ನು ದುಃಖದಲ್ಲಿರುವವರಂತೆ ಬಿಟ್ಟುಬಿಟ್ಟಿದ್ದರೆ [QE]
13. [QS]ನಾನಾದರೋ ಅವರು ಅಸ್ವಸ್ಥರಾದಾಗ ಗೋಣಿತಟ್ಟು ಹೊದ್ದುಕೊಂಡು [QE][QS2]ಉಪವಾಸದಿಂದ ತಗ್ಗಿಸಿಕೊಂಡೆನು; [QE][QS]ನನ್ನ ಪ್ರಾರ್ಥನೆಗಳಿಗೆ ಉತ್ತರ ದೊರೆಯಲಿಲ್ಲ. [QE]
2. [QS2]ಆದುದರಿಂದ ಸ್ವಸ್ಥರಾದವನು ನನಗೆ ಸ್ನೇಹಿತನೂ [QE][QS2]ಇಲ್ಲವೆ ಸಹೋದರನೂ ಎಂದು ಭಾವಿಸಿಕೊಂಡು, [QE][QS]ನನ್ನ ತಾಯಿಗಾಗಿ ದುಃಖಪಡುವವನ ಹಾಗೆ [QE][QS2]ಭಾರವುಳ್ಳವನಾಗಿ ತಲೆಬಾಗಿ ಅಳುತ್ತಿದ್ದೆನು. [QE]
15. [QS]ಆದರೆ ನಾನು ಎಡವಿದಾಗ ಅವರು ಸಂತೋಷಿಸುತ್ತಾ ಕೂಡಿಕೊಂಡರು; [QE][QS2]ಹೌದು, ದೂಷಕರು ನನಗೆ ತಿಳಿಯದೆ ನನ್ನ ವಿರೋಧವಾಗಿ ಕೂಡಿಕೊಂಡರು. [QE][QS2]ಅವರು ನನ್ನನ್ನು ದೂಷಿಸುವುದನ್ನು ನಿಲ್ಲಿಸಲೇ ಇಲ್ಲ. [QE]
16. [QS]ಔತಣಗಳಲ್ಲಿ ಗೇಲಿಮಾಡುವ ಕಪಟಿಗಳಂತೆ [QE][QS2]ಅವರು ನನ್ನ ಮೇಲೆ ಹಲ್ಲುಗಳನ್ನು ಕಡಿಯುತ್ತಾರೆ. [QE][PBR]
17. [QS]ಯೆಹೋವ ದೇವರೇ, ಎಷ್ಟರವರೆಗೆ ನೀವು ಸುಮ್ಮನೆ ನೋಡುತ್ತಾ ಇರುವಿರಿ? [QE][QS2]ಅವರ ಅಪಾಯಗಳಿಂದ ನನ್ನ ಪ್ರಾಣವನ್ನು ಬಿಡಿಸಿರಿ. [QE][QS2]ಆ ಸಿಂಹಗಳಿಂದ ನನ್ನ ಅಮೂಲ್ಯ ಪ್ರಾಣವನ್ನೂ ತಪ್ಪಿಸಿರಿ. [QE]
18. [QS]ಆಗ ನಾನು ದೊಡ್ಡ ಸಭೆಗಳಲ್ಲಿ ನಿಮ್ಮನ್ನು ಕೊಂಡಾಡುವೆನು; [QE][QS2]ಬಹುಜನರಲ್ಲಿ ನಿಮ್ಮನ್ನು ಸ್ತುತಿಸುವೆನು. [QE]
19. [QS]ನಿಷ್ಕಾರಣವಾಗಿರುವ ನನ್ನ ಶತ್ರುಗಳು [QE][QS2]ನನ್ನ ಮೇಲೆ ಸುಳ್ಳಾಗಿ ಸಂತೋಷಪಡದೆ ಇರಲಿ; [QE][QS]ನನ್ನನ್ನು ಕಾರಣವಿಲ್ಲದೆ ದ್ವೇಷಿಸುವವರು [QE][QS2]ಕಣ್ಣು ಸನ್ನೆ ಮಾಡದೆ ಇರಲಿ. [QE]
20. [QS]ಅವರು ಅಸಮಾಧಾನವಾಗಿ ಮಾತನಾಡಿ [QE][QS2]ದೇಶದಲ್ಲಿರುವ ಶಾಂತರಾಗಿ ಬಾಳುವವರ ಮೇಲೆ ಮೋಸದ [QE][QS2]ವಿಷಯಗಳನ್ನು ಕಲ್ಪಿಸುತ್ತಾರೆ. [QE]
21. [QS]ಹೌದು, ಅವರು ತಮ್ಮ ಬಾಯನ್ನು ತೆರೆದು ನನಗೆ ವಿರೋಧವಾಗಿ, “ಆಹಾ, ಆಹಾ, [QE][QS2]ನಾವು ಕಣ್ಣಾರೆ ಕಂಡೆವು,” ಎನ್ನುತ್ತಾರೆ. [QE][PBR]
22. [QS]ಯೆಹೋವ ದೇವರೇ, ನೀವು ಇದನ್ನು ನೋಡಿದ್ದೀರಿ; ಯೆಹೋವ ದೇವರೇ, ಮೌನವಾಗಿರಬೇಡಿರಿ; [QE][QS2]ನನಗೆ ದೂರವಾಗಿರಲೂ ಬೇಡಿರಿ. [QE]
23. [QS]ನನ್ನ ದೇವರೇ, ನನ್ನ ಯೆಹೋವ ದೇವರೇ, [QE][QS2]ನನ್ನ ನ್ಯಾಯವನ್ನು ನಿರ್ಣಯಿಸಿರಿ, ನನ್ನ ವ್ಯಾಜ್ಯದ ಪರವಾಗಿ ಎದ್ದೇಳಿರಿ. [QE]
24. [QS]ಯೆಹೋವ ದೇವರೇ, ನನ್ನ ದೇವರೇ, ನಿಮ್ಮ ನೀತಿಯ ಪ್ರಕಾರ ನನಗೆ ನ್ಯಾಯತೀರಿಸಿರಿ; [QE][QS2]ಅವರು ನನ್ನ ವಿರುದ್ಧ ಸಂತೋಷಪಡದೆ ಇರಲಿ. [QE]
25. [QS]ಅವರು ತಮ್ಮ ಹೃದಯದಲ್ಲಿ, “ಆಹಾ, ನಮ್ಮ ಇಷ್ಟವೇ ನೆರವೇರಿತು,” ಎಂದು ಹೇಳದಿರಲಿ; [QE][QS2]“ಅವನನ್ನು ನುಂಗಿಬಿಟ್ಟೆವು,” ಎಂದೂ ಅವರು ಹೇಳದೇ ಇರಲಿ. [QE][PBR]
26. [QS]ನನ್ನ ಕೇಡಿನಲ್ಲಿ ಸಂತೋಷಪಡುವವರು ನಾಚಿಕೊಂಡು ಒಟ್ಟಿಗೆ ಕಳವಳಗೊಳ್ಳಲಿ; [QE][QS2]ನನಗೆ ವಿರೋಧವಾಗಿ ತಮ್ಮನ್ನು [QE][QS]ಹೆಚ್ಚಿಸಿಕೊಳ್ಳುವವರು ನಾಚಿಕೆಯನ್ನೂ [QE][QS2]ಅವಮಾನವನ್ನೂ ಹೊಂದಲಿ. [QE]
27. [QS]ನನ್ನ ನೀತಿಯಲ್ಲಿ ಸಂತೋಷಪಡುವವರು [QE][QS2]ಉತ್ಸಾಹಧ್ವನಿ ಮಾಡಿ, ಆನಂದಪಡಲಿ; [QE][QS]“ಹೌದು, ತಮ್ಮ ಸೇವಕನ ಅಭಿವೃದ್ಧಿಯಲ್ಲಿ ಸಂತೋಷಪಡುವ [QE][QS2]ಯೆಹೋವ ದೇವರು ಮಹಿಮೆಪಡಲಿ,” ಎಂದು ಅವರು ಯಾವಾಗಲೂ ಹೇಳಲಿ. [QE][PBR]
28. [QS]ಆಗ ನನ್ನ ನಾಲಿಗೆಯು ನಿಮ್ಮ ನೀತಿಯನ್ನೂ [QE][QS2]ದಿನವೆಲ್ಲಾ ನಿಮ್ಮ ಸ್ತೋತ್ರವನ್ನೂ ವರ್ಣಿಸುವುದು. [QE]