ಪವಿತ್ರ ಬೈಬಲ್

ಓಪನ್ ಸಮಕಾಲೀನ ಆವೃತ್ತಿ (OCV)
ಕೀರ್ತನೆಗಳು
1. [QS]ನಾನು ಎಲ್ಲಾ ಕಾಲಗಳಲ್ಲಿ ಯೆಹೋವ ದೇವರನ್ನು ಸ್ತುತಿಸುವೆನು; [QE][QS2]ಅವರ ಸ್ತೋತ್ರವು ಯಾವಾಗಲೂ ನನ್ನ ಬಾಯಲ್ಲಿ ಇರುವುದು. [QE]
2. [QS]ಯೆಹೋವ ದೇವರಲ್ಲಿ ನನ್ನ ಪ್ರಾಣವು ಹಿಗ್ಗುವುದು; [QE][QS2]ಇದನ್ನು ದೀನರು ಕೇಳಿ ಸಂತೋಷಪಡುವರು. [QE]
3. [QS]ನನ್ನ ಸಂಗಡ ಯೆಹೋವ ದೇವರನ್ನು ಮಹಿಮೆಪಡಿಸಿರಿ; [QE][QS2]ನಾವು ಒಟ್ಟಾಗಿ ಅವರ ಹೆಸರನ್ನು ಘನಪಡಿಸೋಣ. [QE][PBR]
4. [QS]ನಾನು ಯೆಹೋವ ದೇವರನ್ನು ಹುಡುಕಿದೆನು; ಆಗ ಅವರು ನನಗೆ ಉತ್ತರಕೊಟ್ಟು, [QE][QS2]ಸಕಲ ಭೀತಿಗಳಿಂದ ನನ್ನನ್ನು ಬಿಡಿಸಿದರು. [QE]
5. [QS]ದೇವರನ್ನು ದೃಷ್ಟಿಸಿದವರು ಪ್ರಕಾಶ ಹೊಂದಿದರು; [QE][QS2]ಅಂಥವರ ಮುಖಗಳು ನಾಚಿಕೆಯಿಂದ ಕುಂದಿಹೋಗುವುದಿಲ್ಲ. [QE]
6. [QS]ಬಡವನಾದ ನಾನು ಕರೆಯಲು ಯೆಹೋವ ದೇವರು ಕೇಳಿ [QE][QS2]ನನ್ನ ಎಲ್ಲಾ ಇಕ್ಕಟ್ಟುಗಳೊಳಗಿಂದ ನನ್ನನ್ನು ರಕ್ಷಿಸಿದರು. [QE]
7. [QS]ದೇವರಿಗೆ ಭಯಪಡುವವರ ಸುತ್ತಲೂ ಯೆಹೋವ ದೇವರ ದೂತನು ಇಳಿದುಕೊಂಡು [QE][QS2]ಅವರನ್ನು ಕಾಪಾಡುತ್ತಾನೆ. [QE][PBR]
8. [QS]ಯೆಹೋವ ದೇವರು ಒಳ್ಳೆಯವರೆಂದು ರುಚಿಸಿ ನೋಡಿರಿ; [QE][QS2]ಅವರನ್ನು ಆಶ್ರಯಿಸುವ ಮನುಷ್ಯನು ಭಾಗ್ಯವಂತನು. [QE]
9. [QS]ದೇವರ ಭಕ್ತರೇ, ನೀವು ಯೆಹೋವ ದೇವರಿಗೆ ಭಯಪಡಿರಿ; [QE][QS2]ಏಕೆಂದರೆ ದೇವಭಕ್ತಿಯುಳ್ಳವರಿಗೆ ಯಾವ ಕೊರತೆಯೂ ಇಲ್ಲ. [QE]
10. [QS]ಸಿಂಹಗಳು ಹಸಿದು ಬಳಲಬಹುದು, [QE][QS2]ಆದರೆ ಯೆಹೋವ ದೇವರನ್ನು ಹುಡುಕುವವರಿಗೆ ಯಾವ ಒಳ್ಳೆಯದರ ಕೊರತೆಯೂ ಇರುವುದಿಲ್ಲ. [QE]
11. [QS]ಮಕ್ಕಳೇ, ನೀವು ಬಂದು ನನ್ನ ಮಾತನ್ನು ಕೇಳಿರಿ; [QE][QS2]ನಾನು ಯೆಹೋವ ದೇವರ ಬಗ್ಗೆ ಭಯವನ್ನು ನಿಮಗೆ ಕಲಿಸುವೆನು. [QE]
12. [QS]ನಿಮ್ಮಲ್ಲಿ ಜೀವನವನ್ನು ಪ್ರೀತಿಸುವವನು [QE][QS2]ಮತ್ತು ಬಹಳ ದಿನಗಳವರೆಗೆ ಬದುಕಬೇಕೆ? [QE]
13. [QS]ನೀನು ಕೇಡಿನಿಂದ ನಿನ್ನ ನಾಲಿಗೆಯನ್ನು, [QE][QS2]ಮೋಸವನ್ನು ನುಡಿಯದ ಹಾಗೆ ನಿನ್ನ ತುಟಿಗಳನ್ನೂ ನಿಯಂತ್ರಿಸಿಕೋ. [QE]
14. [QS]ಕೇಡಿನಿಂದ ತೊಲಗಿ ಒಳ್ಳೆಯದನ್ನು ಮಾಡು; [QE][QS2]ಸಮಾಧಾನವನ್ನು ಹುಡುಕಿ ಅದನ್ನು ಹಿಂಬಾಲಿಸು. [QE][PBR]
15. [QS]ನೀತಿವಂತರ ಮೇಲೆ ಯೆಹೋವ ದೇವರು ದೃಷ್ಟಿ ಇಡುತ್ತಾರೆ, [QE][QS2]ಅವರು ಮೊರೆಯಿಡುವಾಗ ದೇವರು ಕಿವಿಗೊಡುತ್ತಾರೆ. [QE]
16. [QS]ಆದರೆ ಕೆಟ್ಟದ್ದನ್ನು ಮಾಡುವವರಿಗೆ ಯೆಹೋವ ದೇವರು ವಿಮುಖರಾಗಿದ್ದಾರೆ, [QE][QS2]ಅಂಥವರ ಹೆಸರನ್ನು ಭೂಮಿಯೊಳಗಿಂದ ತೆಗೆದುಹಾಕುವರು. [QE][PBR]
17. [QS]ನೀತಿವಂತರ ಕೂಗನ್ನು ಯೆಹೋವ ದೇವರು ಕೇಳಿ, [QE][QS2]ಅವರನ್ನು ಎಲ್ಲಾ ಇಕ್ಕಟ್ಟುಗಳೊಳಗಿಂದ ಬಿಡಿಸುತ್ತಾರೆ. [QE]
18. [QS]ಮುರಿದ ಹೃದಯದವರಿಗೆ ಯೆಹೋವ ದೇವರು ಸಮೀಪವಾಗಿದ್ದಾರೆ; [QE][QS2]ಜಜ್ಜಿದ ಆತ್ಮವುಳ್ಳವರನ್ನು ರಕ್ಷಿಸುತ್ತಾರೆ. [QE][PBR]
19. [QS]ನೀತಿವಂತನಿಗೆ ತೊಂದರೆಗಳು ಬಹಳವಾಗಿವೆ; [QE][QS2]ಆದರೆ ಅವೆಲ್ಲವುಗಳಿಂದ ಯೆಹೋವ ದೇವರು ಅವನನ್ನು ಬಿಡಿಸುತ್ತಾರೆ. [QE]
20. [QS]ಅವರು ಅವನ ಎಲುಬುಗಳನ್ನೆಲ್ಲಾ ಕಾಪಾಡುತ್ತಾರೆ; [QE][QS2]ಅವುಗಳಲ್ಲಿ ಒಂದಾದರೂ ಮುರಿದು ಹೋಗುವುದಿಲ್ಲ. [QE][PBR]
21. [QS]ಕೇಡು ದುಷ್ಟನನ್ನೇ ಕೊಲ್ಲುವುದು; [QE][QS2]ನೀತಿವಂತನನ್ನು ದ್ವೇಷಿಸುವವರು ಶಿಕ್ಷೆಗೆ ಒಳಗಾಗುವರು. [QE]
22. [QS]ಯೆಹೋವ ದೇವರು ತಮ್ಮ ಸೇವಕರ ಪ್ರಾಣವನ್ನು ವಿಮೋಚಿಸುತ್ತಾರೆ; [QE][QS2]ದೇವರನ್ನು ಆಶ್ರಯಿಸುವವರು ಯಾರೂ ಶಿಕ್ಷೆಗೆ ಒಳಗಾಗುವುದಿಲ್ಲ. [QE]
ಒಟ್ಟು 150 ಅಧ್ಯಾಯಗಳು, ಆಯ್ಕೆ ಮಾಡಲಾಗಿದೆ ಅಧ್ಯಾಯ 34 / 150
1 ನಾನು ಎಲ್ಲಾ ಕಾಲಗಳಲ್ಲಿ ಯೆಹೋವ ದೇವರನ್ನು ಸ್ತುತಿಸುವೆನು; ಅವರ ಸ್ತೋತ್ರವು ಯಾವಾಗಲೂ ನನ್ನ ಬಾಯಲ್ಲಿ ಇರುವುದು. 2 ಯೆಹೋವ ದೇವರಲ್ಲಿ ನನ್ನ ಪ್ರಾಣವು ಹಿಗ್ಗುವುದು; ಇದನ್ನು ದೀನರು ಕೇಳಿ ಸಂತೋಷಪಡುವರು. 3 ನನ್ನ ಸಂಗಡ ಯೆಹೋವ ದೇವರನ್ನು ಮಹಿಮೆಪಡಿಸಿರಿ; ನಾವು ಒಟ್ಟಾಗಿ ಅವರ ಹೆಸರನ್ನು ಘನಪಡಿಸೋಣ. 4 ನಾನು ಯೆಹೋವ ದೇವರನ್ನು ಹುಡುಕಿದೆನು; ಆಗ ಅವರು ನನಗೆ ಉತ್ತರಕೊಟ್ಟು, ಸಕಲ ಭೀತಿಗಳಿಂದ ನನ್ನನ್ನು ಬಿಡಿಸಿದರು. 5 ದೇವರನ್ನು ದೃಷ್ಟಿಸಿದವರು ಪ್ರಕಾಶ ಹೊಂದಿದರು; ಅಂಥವರ ಮುಖಗಳು ನಾಚಿಕೆಯಿಂದ ಕುಂದಿಹೋಗುವುದಿಲ್ಲ. 6 ಬಡವನಾದ ನಾನು ಕರೆಯಲು ಯೆಹೋವ ದೇವರು ಕೇಳಿ ನನ್ನ ಎಲ್ಲಾ ಇಕ್ಕಟ್ಟುಗಳೊಳಗಿಂದ ನನ್ನನ್ನು ರಕ್ಷಿಸಿದರು. 7 ದೇವರಿಗೆ ಭಯಪಡುವವರ ಸುತ್ತಲೂ ಯೆಹೋವ ದೇವರ ದೂತನು ಇಳಿದುಕೊಂಡು ಅವರನ್ನು ಕಾಪಾಡುತ್ತಾನೆ. 8 ಯೆಹೋವ ದೇವರು ಒಳ್ಳೆಯವರೆಂದು ರುಚಿಸಿ ನೋಡಿರಿ; ಅವರನ್ನು ಆಶ್ರಯಿಸುವ ಮನುಷ್ಯನು ಭಾಗ್ಯವಂತನು. 9 ದೇವರ ಭಕ್ತರೇ, ನೀವು ಯೆಹೋವ ದೇವರಿಗೆ ಭಯಪಡಿರಿ; ಏಕೆಂದರೆ ದೇವಭಕ್ತಿಯುಳ್ಳವರಿಗೆ ಯಾವ ಕೊರತೆಯೂ ಇಲ್ಲ. 10 ಸಿಂಹಗಳು ಹಸಿದು ಬಳಲಬಹುದು, ಆದರೆ ಯೆಹೋವ ದೇವರನ್ನು ಹುಡುಕುವವರಿಗೆ ಯಾವ ಒಳ್ಳೆಯದರ ಕೊರತೆಯೂ ಇರುವುದಿಲ್ಲ. 11 ಮಕ್ಕಳೇ, ನೀವು ಬಂದು ನನ್ನ ಮಾತನ್ನು ಕೇಳಿರಿ; ನಾನು ಯೆಹೋವ ದೇವರ ಬಗ್ಗೆ ಭಯವನ್ನು ನಿಮಗೆ ಕಲಿಸುವೆನು. 12 ನಿಮ್ಮಲ್ಲಿ ಜೀವನವನ್ನು ಪ್ರೀತಿಸುವವನು ಮತ್ತು ಬಹಳ ದಿನಗಳವರೆಗೆ ಬದುಕಬೇಕೆ? 13 ನೀನು ಕೇಡಿನಿಂದ ನಿನ್ನ ನಾಲಿಗೆಯನ್ನು, ಮೋಸವನ್ನು ನುಡಿಯದ ಹಾಗೆ ನಿನ್ನ ತುಟಿಗಳನ್ನೂ ನಿಯಂತ್ರಿಸಿಕೋ. 14 ಕೇಡಿನಿಂದ ತೊಲಗಿ ಒಳ್ಳೆಯದನ್ನು ಮಾಡು; ಸಮಾಧಾನವನ್ನು ಹುಡುಕಿ ಅದನ್ನು ಹಿಂಬಾಲಿಸು. 15 ನೀತಿವಂತರ ಮೇಲೆ ಯೆಹೋವ ದೇವರು ದೃಷ್ಟಿ ಇಡುತ್ತಾರೆ, ಅವರು ಮೊರೆಯಿಡುವಾಗ ದೇವರು ಕಿವಿಗೊಡುತ್ತಾರೆ. 16 ಆದರೆ ಕೆಟ್ಟದ್ದನ್ನು ಮಾಡುವವರಿಗೆ ಯೆಹೋವ ದೇವರು ವಿಮುಖರಾಗಿದ್ದಾರೆ, ಅಂಥವರ ಹೆಸರನ್ನು ಭೂಮಿಯೊಳಗಿಂದ ತೆಗೆದುಹಾಕುವರು. 17 ನೀತಿವಂತರ ಕೂಗನ್ನು ಯೆಹೋವ ದೇವರು ಕೇಳಿ, ಅವರನ್ನು ಎಲ್ಲಾ ಇಕ್ಕಟ್ಟುಗಳೊಳಗಿಂದ ಬಿಡಿಸುತ್ತಾರೆ. 18 ಮುರಿದ ಹೃದಯದವರಿಗೆ ಯೆಹೋವ ದೇವರು ಸಮೀಪವಾಗಿದ್ದಾರೆ; ಜಜ್ಜಿದ ಆತ್ಮವುಳ್ಳವರನ್ನು ರಕ್ಷಿಸುತ್ತಾರೆ. 19 ನೀತಿವಂತನಿಗೆ ತೊಂದರೆಗಳು ಬಹಳವಾಗಿವೆ; ಆದರೆ ಅವೆಲ್ಲವುಗಳಿಂದ ಯೆಹೋವ ದೇವರು ಅವನನ್ನು ಬಿಡಿಸುತ್ತಾರೆ. 20 ಅವರು ಅವನ ಎಲುಬುಗಳನ್ನೆಲ್ಲಾ ಕಾಪಾಡುತ್ತಾರೆ; ಅವುಗಳಲ್ಲಿ ಒಂದಾದರೂ ಮುರಿದು ಹೋಗುವುದಿಲ್ಲ. 21 ಕೇಡು ದುಷ್ಟನನ್ನೇ ಕೊಲ್ಲುವುದು; ನೀತಿವಂತನನ್ನು ದ್ವೇಷಿಸುವವರು ಶಿಕ್ಷೆಗೆ ಒಳಗಾಗುವರು. 22 ಯೆಹೋವ ದೇವರು ತಮ್ಮ ಸೇವಕರ ಪ್ರಾಣವನ್ನು ವಿಮೋಚಿಸುತ್ತಾರೆ; ದೇವರನ್ನು ಆಶ್ರಯಿಸುವವರು ಯಾರೂ ಶಿಕ್ಷೆಗೆ ಒಳಗಾಗುವುದಿಲ್ಲ.
ಒಟ್ಟು 150 ಅಧ್ಯಾಯಗಳು, ಆಯ್ಕೆ ಮಾಡಲಾಗಿದೆ ಅಧ್ಯಾಯ 34 / 150
×

Alert

×

Kannada Letters Keypad References