ಪವಿತ್ರ ಬೈಬಲ್

ದೇವರ ಕೃಪೆಯ ಉಡುಗೊರೆ
ಕೀರ್ತನೆಗಳು
1. [QS]ಯೆಹೋವ ದೇವರು ನನ್ನ ಬೆಳಕೂ ನನ್ನ ರಕ್ಷಣೆಯೂ ಆಗಿದ್ದಾರೆ. [QE][QS2]ನಾನು ಯಾರಿಗೂ ಭಯಪಡೆನು? [QE][QS]ಯೆಹೋವ ದೇವರು ನನ್ನ ಜೀವದ ಭದ್ರಾಶ್ರಯವಾಗಿದ್ದಾರೆ. [QE][QS2]ನಾನು ಯಾರಿಗೂ ಹೆದರೆನು? [QE][PBR]
2. [QS]ದುಷ್ಟರು ನನ್ನನ್ನು ಬೀಳಿಸಬೇಕೆಂದು [QE][QS2]ನನಗೆ ವಿರೋಧವಾಗಿ ಸಮೀಪಿಸುವಾಗ, [QE][QS]ನನ್ನ ವೈರಿಗಳು [QE][QS2]ತಾವೇ ಎಡವಿಬಿದ್ದರು. [QE]
3. [QS]ನನಗೆ ವಿರೋಧವಾಗಿ ಇಳಿದರೂ [QE][QS2]ನನ್ನ ಹೃದಯವು ಭಯಪಡದು; [QE][QS]ನನ್ನ ಮೇಲೆ ಯುದ್ಧ ಸೈನ್ಯವು ನಡೆದರೂ [QE][QS2]ನಾನು ಭರವಸೆಯಿಂದಿರುವೆನು. [QE][PBR]
4. [QS]ಯೆಹೋವ ದೇವರ ಮನೆಯಲ್ಲಿ ನಾನು ಜೀವಮಾನವೆಲ್ಲಾ ವಾಸಮಾಡುತ್ತಾ, [QE][QS2]ಅದರ ದಯೆಯನ್ನು ನೋಡುತ್ತಾ [QE][QS]ಅವರ ಮಂದಿರದಲ್ಲಿ ಅವರನ್ನೇ ಧ್ಯಾನಿಸುತ್ತಾ [QE][QS2]ಇರಬೇಕೆಂಬ ಒಂದೇ ವರವನ್ನು [QE][QS]ಯೆಹೋವ ದೇವರಿಂದ ಕೇಳಿಕೊಂಡು [QE][QS2]ಅದನ್ನೇ ಹುಡುಕುತ್ತಿರುವೆನು. [QE]
5. [QS]ಕೇಡಿನ ಸಮಯದಲ್ಲಿ ಯೆಹೋವ ದೇವರು ನನ್ನನ್ನು [QE][QS2]ತಮ್ಮ ಗುಡಾರದಲ್ಲಿ ಬಚ್ಚಿಡುವರು. [QE][QS]ತಮ್ಮ ಪರಿಶುದ್ಧ ಗುಡಾರದಲ್ಲಿ ನನ್ನನ್ನು ಮರೆಮಾಡುವರು. [QE][QS2]ಎತ್ತರವಾದ ಬಂಡೆಯ ಮೇಲೆ ನನ್ನನ್ನು ನಿಲ್ಲಿಸುವರು. [QE][PBR]
6. [QS]ಈಗ ನನ್ನ ತಲೆಯು ನನ್ನ ಸುತ್ತಲಿರುವ [QE][QS2]ನನ್ನ ಶತ್ರುಗಳ ಮೇಲೆ ಎತ್ತಲಾಗಿರುವುದು, [QE][QS]ಆದ್ದರಿಂದ ದೇವರ ಗುಡಾರದಲ್ಲಿ ಉತ್ಸಾಹದಿಂದ ಬಲಿಗಳನ್ನು ಅರ್ಪಿಸುವೆನು; [QE][QS2]ಯೆಹೋವ ದೇವರಿಗೆ ಹಾಡಿ ಕೊಂಡಾಡುವೆನು. [QE][PBR]
7. [QS]ಯೆಹೋವ ದೇವರೇ, ನಾನು ಕೂಗುವ ಸ್ವರವನ್ನು ಕೇಳಿರಿ; [QE][QS2]ನನ್ನನ್ನು ಕರುಣಿಸಿ ಉತ್ತರವನ್ನು ಕೊಡಿರಿ. [QE]
8. [QS]ನಿಮ್ಮ ಬಗ್ಗೆ ನನ್ನ ಹೃದಯವು ಹೀಗೆ ಹೇಳುತ್ತದೆ: “ದೇವರ ಮುಖವನ್ನು ಹುಡುಕು,” [QE][QS2]ಆದ್ದರಿಂದ ಯೆಹೋವ ದೇವರೇ, ನಿಮ್ಮ ಮುಖವನ್ನೇ ಹುಡುಕುತ್ತಿರುವೆನು. [QE]
9. [QS]ನಿಮ್ಮ ಮುಖವನ್ನು ನನಗೆ ಮರೆಮಾಡಬೇಡಿರಿ; [QE][QS2]ನಿಮ್ಮ ಸೇವಕನಾದ ನನ್ನನ್ನು ತಳ್ಳಬೇಡಿರಿ; [QE][QS2]ನೀವೇ ನನಗೆ ಸಹಾಯಕರಾಗಿದ್ದೀರಿ; [QE][QS]ನನ್ನ ರಕ್ಷಕ ಆಗಿರುವ ದೇವರೇ, ನನ್ನನ್ನು ತ್ಯಜಿಸಬೇಡಿರಿ. [QE][QS2]ನನ್ನನ್ನು ಬಿಟ್ಟುಬಿಡಬೇಡಿರಿ. [QE]
10. [QS]ನನ್ನ ತಂದೆತಾಯಂದಿರು ನನ್ನನ್ನು ಬಿಟ್ಟುಬಿಟ್ಟರೂ, [QE][QS2]ಯೆಹೋವ ದೇವರು ನನ್ನನ್ನು ಸೇರಿಸಿಕೊಳ್ಳುವರು. [QE]
11. [QS]ಯೆಹೋವ ದೇವರೇ, ನಿಮ್ಮ ಮಾರ್ಗವನ್ನು ನನಗೆ ಬೋಧಿಸಿರಿ; [QE][QS2]ನನ್ನ ವಿರೋಧಿಗಳ ನಿಮಿತ್ತ [QE][QS2]ಸಮಹಾದಿಯಲ್ಲಿ ನನ್ನನ್ನು ನಡೆಸಿರಿ. [QE]
12. [QS]ನನ್ನ ವೈರಿಗಳ ವಶಕ್ಕೆ ನನ್ನನ್ನು ಕೊಡಬೇಡಿರಿ; [QE][QS2]ಸುಳ್ಳುಸಾಕ್ಷಿಗಳೂ ಕ್ರೂರ ನಿಂದಕರೂ [QE][QS2]ನನಗೆ ವಿರೋಧವಾಗಿ ಎದ್ದಿದ್ದಾರೆ. [QE][PBR]
13. [QS]ಇದೊಂದು ನನ್ನ ಭರವಸೆಯಾಗಿರುವುದು: [QE][QS2]ನಾನಂತೂ ಯೆಹೋವ ದೇವರ ಒಳಿತನ್ನು [QE][QS2]ಜೀವಿತರ ದೇಶದಲ್ಲಿ ಕಾಣುವೆನು. [QE]
14. [QS]ಯೆಹೋವ ದೇವರಿಗಾಗಿ ಕಾದಿರು, ಧೈರ್ಯವಾಗಿರು; [QE][QS2]ಅವರು ನಿನ್ನ ಹೃದಯವನ್ನು ದೃಢಪಡಿಸುವರು; [QE][QS2]ಯೆಹೋವ ದೇವರಿಗಾಗಿ ಕಾದಿರು. [QE]
ಒಟ್ಟು 150 ಅಧ್ಯಾಯಗಳು, ಆಯ್ಕೆ ಮಾಡಲಾಗಿದೆ ಅಧ್ಯಾಯ 27 / 150
1 ಯೆಹೋವ ದೇವರು ನನ್ನ ಬೆಳಕೂ ನನ್ನ ರಕ್ಷಣೆಯೂ ಆಗಿದ್ದಾರೆ. ನಾನು ಯಾರಿಗೂ ಭಯಪಡೆನು? ಯೆಹೋವ ದೇವರು ನನ್ನ ಜೀವದ ಭದ್ರಾಶ್ರಯವಾಗಿದ್ದಾರೆ. ನಾನು ಯಾರಿಗೂ ಹೆದರೆನು? 2 ದುಷ್ಟರು ನನ್ನನ್ನು ಬೀಳಿಸಬೇಕೆಂದು ನನಗೆ ವಿರೋಧವಾಗಿ ಸಮೀಪಿಸುವಾಗ, ನನ್ನ ವೈರಿಗಳು ತಾವೇ ಎಡವಿಬಿದ್ದರು. 3 ನನಗೆ ವಿರೋಧವಾಗಿ ಇಳಿದರೂ ನನ್ನ ಹೃದಯವು ಭಯಪಡದು; ನನ್ನ ಮೇಲೆ ಯುದ್ಧ ಸೈನ್ಯವು ನಡೆದರೂ ನಾನು ಭರವಸೆಯಿಂದಿರುವೆನು. 4 ಯೆಹೋವ ದೇವರ ಮನೆಯಲ್ಲಿ ನಾನು ಜೀವಮಾನವೆಲ್ಲಾ ವಾಸಮಾಡುತ್ತಾ, ಅದರ ದಯೆಯನ್ನು ನೋಡುತ್ತಾ ಅವರ ಮಂದಿರದಲ್ಲಿ ಅವರನ್ನೇ ಧ್ಯಾನಿಸುತ್ತಾ ಇರಬೇಕೆಂಬ ಒಂದೇ ವರವನ್ನು ಯೆಹೋವ ದೇವರಿಂದ ಕೇಳಿಕೊಂಡು ಅದನ್ನೇ ಹುಡುಕುತ್ತಿರುವೆನು. 5 ಕೇಡಿನ ಸಮಯದಲ್ಲಿ ಯೆಹೋವ ದೇವರು ನನ್ನನ್ನು ತಮ್ಮ ಗುಡಾರದಲ್ಲಿ ಬಚ್ಚಿಡುವರು. ತಮ್ಮ ಪರಿಶುದ್ಧ ಗುಡಾರದಲ್ಲಿ ನನ್ನನ್ನು ಮರೆಮಾಡುವರು. ಎತ್ತರವಾದ ಬಂಡೆಯ ಮೇಲೆ ನನ್ನನ್ನು ನಿಲ್ಲಿಸುವರು. 6 ಈಗ ನನ್ನ ತಲೆಯು ನನ್ನ ಸುತ್ತಲಿರುವ ನನ್ನ ಶತ್ರುಗಳ ಮೇಲೆ ಎತ್ತಲಾಗಿರುವುದು, ಆದ್ದರಿಂದ ದೇವರ ಗುಡಾರದಲ್ಲಿ ಉತ್ಸಾಹದಿಂದ ಬಲಿಗಳನ್ನು ಅರ್ಪಿಸುವೆನು; ಯೆಹೋವ ದೇವರಿಗೆ ಹಾಡಿ ಕೊಂಡಾಡುವೆನು. 7 ಯೆಹೋವ ದೇವರೇ, ನಾನು ಕೂಗುವ ಸ್ವರವನ್ನು ಕೇಳಿರಿ; ನನ್ನನ್ನು ಕರುಣಿಸಿ ಉತ್ತರವನ್ನು ಕೊಡಿರಿ. 8 ನಿಮ್ಮ ಬಗ್ಗೆ ನನ್ನ ಹೃದಯವು ಹೀಗೆ ಹೇಳುತ್ತದೆ: “ದೇವರ ಮುಖವನ್ನು ಹುಡುಕು,” ಆದ್ದರಿಂದ ಯೆಹೋವ ದೇವರೇ, ನಿಮ್ಮ ಮುಖವನ್ನೇ ಹುಡುಕುತ್ತಿರುವೆನು. 9 ನಿಮ್ಮ ಮುಖವನ್ನು ನನಗೆ ಮರೆಮಾಡಬೇಡಿರಿ; ನಿಮ್ಮ ಸೇವಕನಾದ ನನ್ನನ್ನು ತಳ್ಳಬೇಡಿರಿ; ನೀವೇ ನನಗೆ ಸಹಾಯಕರಾಗಿದ್ದೀರಿ; ನನ್ನ ರಕ್ಷಕ ಆಗಿರುವ ದೇವರೇ, ನನ್ನನ್ನು ತ್ಯಜಿಸಬೇಡಿರಿ. ನನ್ನನ್ನು ಬಿಟ್ಟುಬಿಡಬೇಡಿರಿ. 10 ನನ್ನ ತಂದೆತಾಯಂದಿರು ನನ್ನನ್ನು ಬಿಟ್ಟುಬಿಟ್ಟರೂ, ಯೆಹೋವ ದೇವರು ನನ್ನನ್ನು ಸೇರಿಸಿಕೊಳ್ಳುವರು. 11 ಯೆಹೋವ ದೇವರೇ, ನಿಮ್ಮ ಮಾರ್ಗವನ್ನು ನನಗೆ ಬೋಧಿಸಿರಿ; ನನ್ನ ವಿರೋಧಿಗಳ ನಿಮಿತ್ತ ಸಮಹಾದಿಯಲ್ಲಿ ನನ್ನನ್ನು ನಡೆಸಿರಿ. 12 ನನ್ನ ವೈರಿಗಳ ವಶಕ್ಕೆ ನನ್ನನ್ನು ಕೊಡಬೇಡಿರಿ; ಸುಳ್ಳುಸಾಕ್ಷಿಗಳೂ ಕ್ರೂರ ನಿಂದಕರೂ ನನಗೆ ವಿರೋಧವಾಗಿ ಎದ್ದಿದ್ದಾರೆ. 13 ಇದೊಂದು ನನ್ನ ಭರವಸೆಯಾಗಿರುವುದು: ನಾನಂತೂ ಯೆಹೋವ ದೇವರ ಒಳಿತನ್ನು ಜೀವಿತರ ದೇಶದಲ್ಲಿ ಕಾಣುವೆನು. 14 ಯೆಹೋವ ದೇವರಿಗಾಗಿ ಕಾದಿರು, ಧೈರ್ಯವಾಗಿರು; ಅವರು ನಿನ್ನ ಹೃದಯವನ್ನು ದೃಢಪಡಿಸುವರು; ಯೆಹೋವ ದೇವರಿಗಾಗಿ ಕಾದಿರು.
ಒಟ್ಟು 150 ಅಧ್ಯಾಯಗಳು, ಆಯ್ಕೆ ಮಾಡಲಾಗಿದೆ ಅಧ್ಯಾಯ 27 / 150
×

Alert

×

Kannada Letters Keypad References