1. [QS]ಯೆಹೋವ ದೇವರೇ, [QE][QS2]ನಿಮ್ಮಲ್ಲಿ ಭರವಸೆಯಿಟ್ಟಿದ್ದೇನೆ. [QE][PBR]
2. [QS]ನನ್ನ ದೇವರೇ, ನಾನು ನಿಮ್ಮಲ್ಲಿ ಭರವಸೆಯಿಟ್ಟಿದ್ದೇನೆ; [QE][QS2]ನಾನು ನಾಚಿಕೆಪಡದಂತೆ ಮಾಡಿರಿ; [QE][QS2]ನನ್ನ ಶತ್ರುಗಳು ನನ್ನ ಮೇಲೆ ಜಯೋತ್ಸಾಹ ಮಾಡದಿರಲಿ. [QE]
3. [QS]ನಿಮ್ಮನ್ನು ನಿರೀಕ್ಷಿಸುವವರಲ್ಲಿ [QE][QS2]ಯಾರೂ ನಾಚಿಕೆಪಡದಿರಲಿ; [QE][QS]ನಿಷ್ಕಾರಣವಾಗಿ ವಂಚನೆ [QE][QS2]ಮಾಡುವವರು ನಾಚಿಕೆಪಡಲಿ. [QE][PBR]
4. [QS]ಯೆಹೋವ ದೇವರೇ, ನಿಮ್ಮ ಮಾರ್ಗಗಳನ್ನು ನನಗೆ ತೋರಿಸಿರಿ; [QE][QS2]ನಿಮ್ಮ ದಾರಿಗಳನ್ನು ನನಗೆ ಕಲಿಸಿರಿ. [QE]
5. [QS]ನಿಮ್ಮ ಸತ್ಯದಲ್ಲಿ ಮಾರ್ಗದರ್ಶನ ನೀಡಿ ನನಗೆ ಬೋಧಿಸಿರಿ; [QE][QS2]ಏಕೆಂದರೆ ನೀವು ನನ್ನ ರಕ್ಷಕ ಆಗಿರುವ ದೇವರಾಗಿದ್ದೀರಿ; [QE][QS2]ನಿಮ್ಮನ್ನು ನಾನು ದಿನವೆಲ್ಲಾ ನಿರೀಕ್ಷಿಸುತ್ತಿದ್ದೇನೆ. [QE]
6. [QS]ಯೆಹೋವ ದೇವರೇ, ಆದಿಯಿಂದಿರುವ ನಿಮ್ಮ ಅನುಕಂಪವನ್ನೂ ನಿಮ್ಮ ಪ್ರೀತಿಯನ್ನೂ, [QE][QS2]ಕರುಣೆಯನ್ನೂ ಜ್ಞಾಪಕಮಾಡಿಕೊಳ್ಳಿರಿ. [QE]
7. [QS]ಯೆಹೋವ ದೇವರೇ, ನನ್ನ ಯೌವನದ ಪಾಪಗಳನ್ನೂ, [QE][QS2]ನನ್ನ ತಿರುಗಿ ಬೀಳುವಿಕೆಗಳನ್ನೂ ಜ್ಞಾಪಕ ಮಾಡಿಕೊಳ್ಳಬೇಡಿರಿ. [QE][QS]ನೀವು ಒಳ್ಳೆಯವರಾಗಿರುವುದರಿಂದ ನಿಮ್ಮ ಪ್ರೀತಿಯ ಪ್ರಕಾರ [QE][QS2]ನನ್ನನ್ನು ಜ್ಞಾಪಕಮಾಡಿಕೊಳ್ಳಿರಿ. [QE][PBR]
8. [QS]ಯೆಹೋವ ದೇವರು ಒಳ್ಳೆಯವರೂ ನ್ಯಾಯವುಳ್ಳವರೂ ಆಗಿದ್ದಾರೆ; [QE][QS2]ಆದ್ದರಿಂದ ಅವರು ಪಾಪಿಗಳಿಗೆ ತಮ್ಮ ಮಾರ್ಗಗಳನ್ನು ಬೋಧಿಸುತ್ತಾರೆ. [QE]
9. [QS]ದೀನರನ್ನು ನ್ಯಾಯ ಮಾರ್ಗದಲ್ಲಿ ನಡೆಸಿ, [QE][QS2]ದೀನರಿಗೆ ತಮ್ಮ ಮಾರ್ಗವನ್ನು ಬೋಧಿಸುತ್ತಾರೆ. [QE]
10. [QS]ಯೆಹೋವ ದೇವರ ಒಡಂಬಡಿಕೆಯನ್ನು [QE][QS2]ಕೈಗೊಳ್ಳುವವರಿಗೆ ಅವರ ದಾರಿಯೆಲ್ಲವು ಪ್ರೀತಿ, ಸತ್ಯದಿಂದ ತುಂಬಿರುತ್ತವೆ. [QE]
11. [QS]ನನ್ನ ಅನ್ಯಾಯವು ಬಹು ಘೋರವಾಗಿದ್ದರೂ ನಿಮ್ಮ ಹೆಸರಿನ ನಿಮಿತ್ತ ಯೆಹೋವ ದೇವರೇ [QE][QS2]ನನ್ನನ್ನು ಮನ್ನಿಸಿರಿ. [QE][PBR]
12. [QS]ಯಾವನು ಯೆಹೋವ ದೇವರಿಗೆ ಭಯಪಡುವನೋ, [QE][QS2]ಅಂಥವನಿಗೆ ಅವರು ಆಯ್ದುಕೊಳ್ಳತಕ್ಕ ಮಾರ್ಗವನ್ನು ಬೋಧಿಸುವರು. [QE]
13. [QS]ಅಂಥವರು ಜೀವಮಾನವೆಲ್ಲಾ ಸಫಲರಾಗಿರುವರು. [QE][QS2]ಅಂಥವರ ಸಂತಾನವು ದೇಶವನ್ನು ಸ್ವಾಧೀನ ಮಾಡಿಕೊಳ್ಳುವುದು. [QE]
14. [QS]ಯೆಹೋವ ದೇವರ ರಹಸ್ಯವು ಅವರಿಗೆ ಭಯಪಡುವವರೊಂದಿಗೆ ಇರುವುದು; [QE][QS2]ತಮ್ಮ ಒಡಂಬಡಿಕೆಯನ್ನು ಅವರು ಅಂಥವರಿಗೇ ತಿಳಿಸುವರು. [QE]
15. [QS]ನನ್ನ ಕಣ್ಣುಗಳು ಯಾವಾಗಲೂ ಯೆಹೋವ ದೇವರ ಕಡೆಗೆ ಇರುತ್ತವೆ; [QE][QS2]ಏಕೆಂದರೆ ಅವರೇ ನನ್ನ ಪಾದಗಳನ್ನು ಬಲೆಯಿಂದ ಬಿಡಿಸುವವರು. [QE][PBR]
16. [QS]ನೀವು ನನ್ನ ಕಡೆಗೆ ತಿರುಗಿ ನನ್ನನ್ನು ಕರುಣಿಸಿರಿ; [QE][QS2]ನಾನು ಒಬ್ಬಂಟಿಗನಾಗಿಯೂ ಬಾಧೆಪಡುವವನಾಗಿಯೂ ಇದ್ದೇನೆ. [QE]
17. [QS]ನನ್ನ ಹೃದಯದ ಕಷ್ಟಗಳನ್ನು ಪರಿಹರಿಸಿರಿ; [QE][QS2]ನೀವು ನನ್ನ ಸಂಕಟಗಳಿಂದ ನನ್ನನ್ನು ಬಿಡಿಸಿರಿ. [QE]
18. [QS]ನನ್ನ ಬಾಧೆಯನ್ನೂ ವ್ಯಥೆಯನ್ನೂ ನೋಡಿರಿ; [QE][QS2]ನನ್ನ ಪಾಪಗಳನ್ನೆಲ್ಲಾ ತೆಗೆದುಹಾಕಿರಿ. [QE]
19. [QS]ನನ್ನ ಶತ್ರುಗಳನ್ನು ನೋಡಿರಿ, ಅವರು ಹೆಚ್ಚಾಗಿದ್ದಾರೆ; [QE][QS2]ತೀವ್ರ ಹಗೆಯಿಂದ ಅವರು ನನ್ನನ್ನು ದ್ವೇಷಿಸುತ್ತಾರೆ. [QE][PBR]
20. [QS]ನನ್ನ ಪ್ರಾಣವನ್ನು ಕಾಪಾಡಿ, ನನ್ನನ್ನು ಬಿಡಿಸಿರಿ; [QE][QS2]ನಾನು ನಾಚಿಕೆಪಡದಂತೆ ಮಾಡಿರಿ, [QE][QS2]ಏಕೆಂದರೆ ನಾನು ನಿಮ್ಮಲ್ಲಿ ಆಶ್ರಯಪಡೆದಿದ್ದೇನೆ. [QE]
21. [QS]ಯಥಾರ್ಥತೆಯೂ ನಿಷ್ಕಪಟವೂ ನನ್ನನ್ನು ಕಾಯಲಿ, [QE][QS2]ಏಕೆಂದರೆ ನನ್ನ ನಿರೀಕ್ಷೆಯು ನಿಮ್ಮ ಮೇಲೆ ಇದೆ. [QE][PBR]
22. [QS]ದೇವರೇ, ಇಸ್ರಾಯೇಲರನ್ನು [QE][QS2]ಅವರ ಎಲ್ಲಾ ಇಕ್ಕಟ್ಟುಗಳೊಳಗಿಂದ ವಿಮೋಚಿಸಿರಿ. [QE]