ಪವಿತ್ರ ಬೈಬಲ್

ಓಪನ್ ಸಮಕಾಲೀನ ಆವೃತ್ತಿ (OCV)
ಕೀರ್ತನೆಗಳು
1. [QS]ನನ್ನ ದೇವರೇ, ನನ್ನ ದೇವರೇ, ಏಕೆ ನನ್ನನ್ನು ಕೈಬಿಟ್ಟಿದ್ದೀರಿ? [QE][QS2]ನನ್ನನ್ನು ರಕ್ಷಿಸದೆ ಏಕೆ ದೂರವಾಗಿದ್ದೀರಿ? [QE][QS2]ನನ್ನ ನರಳುವಿಕೆಯ ಮೊರೆಗೆ ಉತ್ತರ ಕೊಡದೆ ಏಕೆ ದೂರವಾಗಿದ್ದೀರಿ? [QE]
2. [QS]ಓ ನನ್ನ ದೇವರೇ, ಹಗಲಿನಲ್ಲಿ ಕರೆಯುತ್ತೇನೆ, ಆದರೆ ನೀವು ಉತ್ತರ ಕೊಡುವುದಿಲ್ಲ; [QE][QS2]ರಾತ್ರಿಯಲ್ಲಿಯೂ ನನಗೆ ವಿಶ್ರಾಂತಿ ಇರುವುದಿಲ್ಲ. [QE][PBR]
3. [QS]ನೀವು ಪರಿಶುದ್ಧರು; [QE][QS2]ನೀವು ಇಸ್ರಾಯೇಲರ ಸ್ತೋತ್ರ ಸಿಂಹಾಸನದಲ್ಲಿರುವಿರಿ. [QE]
4. [QS]ನಿಮ್ಮಲ್ಲಿಯೇ ನಮ್ಮ ಪಿತೃಗಳು ಭರವಸೆಯಿಟ್ಟರು; [QE][QS2]ಅವರು ಭರವಸೆಯಿಟ್ಟಿದ್ದರಿಂದ ನೀವು ಅವರನ್ನು ವಿಮೋಚಿಸಿದಿರಿ. [QE]
5. [QS]ಅವರು ನಿಮಗೆ ಮೊರೆಯಿಟ್ಟದ್ದರಿಂದ ನೀವು ಅವರನ್ನು ರಕ್ಷಿಸಿದಿರಿ; [QE][QS2]ನಿಮ್ಮಲ್ಲಿ ಭರವಸೆಯಿಟ್ಟಿದ್ದರಿಂದ ಅವರು ಅಪಮಾನಕ್ಕೆ ಗುರಿಯಾಗಲಿಲ್ಲ. [QE][PBR]
6. [QS]ಆದರೆ ನಾನು ಹುಳದಂಥವನೇ ಹೊರತು ಮನುಷ್ಯನಲ್ಲ; [QE][QS2]ನಾನು ಮನುಷ್ಯರಿಂದ ನಿಂದೆ ಹಾಗು ತಿರಸ್ಕಾರಕ್ಕೆ ಗುರಿಯಾಗಿದ್ದೇನೆ. [QE]
7. [QS]ನನ್ನನ್ನು ನೋಡುವವರೆಲ್ಲರೂ ನನ್ನನ್ನು ಗೇಲಿಮಾಡುತ್ತಾರೆ. [QE][QS2]ಅವರು ತಲೆ ಆಡಿಸುತ್ತಾ ಹೀಗೆ ಅವಮಾನಪಡಿಸುತ್ತಾರೆ: [QE]
8. [QS]“ಆತನು ಯೆಹೋವ ದೇವರ ಮೇಲೆ ಭರವಸೆಯಿಟ್ಟಿದ್ದಾನಲ್ಲಾ, [QE][QS2]ಯೆಹೋವ ದೇವರೇ ಆತನನ್ನು ಕಾಪಾಡಲಿ. [QE][QS]ಯೆಹೋವ ದೇವರು ಆತನಲ್ಲಿ ಹರ್ಷಿಸುವುದಾದರೆ, [QE][QS2]ಅವರೇ ಆತನನ್ನು ಬಿಡಿಸಲಿ.” [QE][PBR]
9. [QS]ತಾಯಿಯ ಗರ್ಭದೊಳಗಿಂದ ನನ್ನನ್ನು ಹೊರತಂದವರು ನೀವು; [QE][QS2]ನನ್ನ ತಾಯಿಯ ಎದೆಯಲ್ಲಿ ಇದ್ದಾಗಲೇ ನಾನು ನಿಮ್ಮಲ್ಲಿ ಭರವಸೆಯಿಡುವಂತೆ ಮಾಡಿದಿರಿ. [QE]
10. [QS]ಹುಟ್ಟಿದಂದಿನಿಂದಲೇ ನೀವೇ ನನಗೆ ಆಧಾರ [QE][QS2]ನನ್ನ ತಾಯಿಯ ಗರ್ಭದಿಂದಲೇ ನೀವು ನನ್ನ ದೇವರು. [QE][PBR]
11. [QS]ನನ್ನಿಂದ ದೂರವಾಗಿರಬೇಡಿರಿ, [QE][QS2]ಏಕೆಂದರೆ ಇಕ್ಕಟ್ಟು ಸಮೀಪವಾಗಿದೆ, [QE][QS2]ಸಹಾಯಕರು ನನಗೆ ಯಾರೂ ಇಲ್ಲ. [QE][PBR]
12. [QS]ಬಹಳ ಹೋರಿಗಳು ನನ್ನನ್ನು ಸುತ್ತಿಕೊಂಡಿವೆ; [QE][QS2]ಬಾಷಾನಿನ ಬಲವಾದ ಹೋರಿಗಳು ನನ್ನನ್ನು ಮುತ್ತಿಕೊಂಡಿವೆ. [QE]
13. [QS]ಹರಿದು ಬಿಡುವ ಗರ್ಜಿಸುವ ಸಿಂಹದ ಹಾಗೆ [QE][QS2]ನನ್ನ ಮೇಲೆ ತಮ್ಮ ಬಾಯಿತೆರೆದಿದ್ದಾರೆ. [QE]
14. [QS]ನಾನು ಚೆಲ್ಲಿದ ನೀರಿನಂತಿದ್ದೇನೆ, [QE][QS2]ನನ್ನ ಎಲುಬುಗಳೆಲ್ಲಾ ಕೀಲು ತಪ್ಪಿ ಹೋಗಿದೆ. [QE][QS]ನನ್ನ ಹೃದಯವು ಮೇಣದ ಹಾಗೆ [QE][QS2]ನನ್ನೊಳಗೆ ಕರಗಿಹೋಗಿದೆ. [QE]
15. [QS]ನನ್ನ ಬಾಯಿ ಬೋಕಿಯ ಹಾಗೆ ಒಣಗಿಹೋಗಿದೆ, [QE][QS2]ನನ್ನ ನಾಲಿಗೆ ಅಂಗಳಕ್ಕೆ ಹತ್ತಿದೆ, [QE][QS2]ನೀವು ನನ್ನನ್ನು ಮಣ್ಣಿಗೆ ಸೇರಿಸುವಿರಿ. [QE][PBR]
16. [QS]ನಾಯಿಗಳು ನನ್ನನ್ನು ಸುತ್ತಿಕೊಂಡಿವೆ; [QE][QS2]ದುರ್ಮಾರ್ಗಿಗಳ ಗುಂಪು ನನ್ನನ್ನು ಮುತ್ತಿಕೊಂಡಿದೆ; [QE][QS2]ಅವರು ನನ್ನ ಕೈಗಳನ್ನೂ ಕಾಲುಗಳನ್ನೂ ತಿವಿದಿದ್ದಾರೆ. [QE]
17. [QS]ನನ್ನ ಎಲುಬುಗಳನ್ನೆಲ್ಲಾ ಎಣಿಸುವಂತಾಗಿದೆ; [QE][QS2]ಅವರು ನನ್ನನ್ನು ಕಂಡು ಹಿಗ್ಗುತ್ತಾರೆ. [QE]
18. [QS]ನನ್ನ ಬಟ್ಟೆಯನ್ನು ಅವರು ತಮ್ಮೊಳಗೆ ಪಾಲು ಮಾಡಿಕೊಳ್ಳುತ್ತಾರೆ; [QE][QS2]ನನ್ನ ಅಂಗಿಗೋಸ್ಕರ ಚೀಟು ಹಾಕುತ್ತಾರೆ. [QE][PBR]
19. [QS]ಆದರೆ ಯೆಹೋವ ದೇವರೇ, ನೀವು ನನ್ನಿಂದ ದೂರವಾಗಿರಬೇಡಿರಿ; [QE][QS2]ನೀವು ನನ್ನ ಬಲವಾಗಿದ್ದೀರಿ, ನನ್ನ ಸಹಾಯಕ್ಕೆ ಬೇಗ ಬನ್ನಿರಿ. [QE]
20. [QS]ನನ್ನ ಪ್ರಾಣವನ್ನು ಖಡ್ಗದಿಂದಲೂ [QE][QS2]ನನ್ನ ಅಮೂಲ್ಯ ಜೀವವನ್ನು ನಾಯಿಗಳ ಬಲದಿಂದಲೂ ಬಿಡಿಸಿರಿ. [QE]
21. [QS]ಸಿಂಹಗಳ ಬಾಯಿಂದ ನನ್ನನ್ನು ರಕ್ಷಿಸಿರಿ; [QE][QS2]ಕಾಡುಕೋಣಗಳ ಕೊಂಬುಗಳಿಂದ ನನ್ನನ್ನು ತಪ್ಪಿಸಿರಿ. [QE][PBR]
22. [QS]ನಾನು ನಿಮ್ಮ ಹೆಸರನ್ನು ನನ್ನ ಸಹೋದರರಿಗೆ ಸಾರುವೆನು; [QE][QS2]ಸಭಾ ಮಧ್ಯದಲ್ಲಿ ನಿಮ್ಮನ್ನು ಸ್ತುತಿಸುವೆನು. [QE]
23. [QS]ಯೆಹೋವ ದೇವರಿಗೆ ಭಯಪಡುವವರೇ, ಅವರನ್ನು ಸ್ತುತಿಸಿರಿ; [QE][QS2]ಯಾಕೋಬನ ಎಲ್ಲಾ ಸಂತತಿಯವರೇ, ಅವರನ್ನು ಕೊಂಡಾಡಿರಿ; [QE][QS2]ಇಸ್ರಾಯೇಲರ ಎಲ್ಲಾ ಸಂತತಿಯವರೇ, ಅವರಲ್ಲಿ ಭಯಭಕ್ತಿಯುಳ್ಳವರಾಗಿರಿ. [QE]
24. [QS]ಏಕೆಂದರೆ ಸಂಕಟಪಡುವವನ ಸಂಕಟವನ್ನು [QE][QS2]ಅವರು ತಿರಸ್ಕರಿಸಲಿಲ್ಲ, ಅಸಹ್ಯಪಡಲಿಲ್ಲ; [QE][QS]ತಮ್ಮ ಮುಖವನ್ನು ಅವನಿಂದ ಮರೆಮಾಡಲಿಲ್ಲ; [QE][QS2]ಆದರೆ ಆತನು ಮೊರೆ ಇಡಲು, ಅವರು ಕೇಳಿದರು. [QE][PBR]
25. [QS]ಮಹಾಸಭೆಯಲ್ಲಿ ನಿಮ್ಮನ್ನು ಕುರಿತು ನನ್ನ ಸ್ತೋತ್ರವು ನಿಮ್ಮಿಂದ ಬರುವುದು; [QE][QS2]ನನ್ನ ಹರಕೆಗಳನ್ನು ನಿಮಗೆ ಭಯಪಡುವವರ ಮುಂದೆ ಸಲ್ಲಿಸುವೆನು. [QE]
26. [QS]ದೀನರು ಉಂಡು ತೃಪ್ತರಾಗುವರು; [QE][QS2]ಯೆಹೋವ ದೇವರನ್ನು ಹುಡುಕುವವರು ಅವರನ್ನು ಸ್ತುತಿಸುವರು; [QE][QS2]ಅಂಥವರ ಹೃದಯವು ಎಂದೆಂದಿಗೂ ಚೈತನ್ಯ ಹೊಂದಲಿ. [QE][PBR]
27. [QS]ಲೋಕದಲ್ಲಿರುವ ಎಲ್ಲರೂ ಎಚ್ಚರವಾಗಿ [QE][QS2]ಯೆಹೋವ ದೇವರ ಕಡೆಗೆ ತಿರುಗಿಕೊಳ್ಳುವರು; [QE][QS]ಜನಾಂಗಗಳ ಕುಟುಂಬಗಳೆಲ್ಲಾ [QE][QS2]ದೇವರ ಮುಂದೆ ಅಡ್ಡಬೀಳುವವು. [QE]
28. [QS]ಏಕೆಂದರೆ ರಾಜ್ಯವು ಯೆಹೋವ ದೇವರದೇ; [QE][QS2]ಜನಾಂಗಗಳನ್ನು ಆಳುವವರು ಅವರೇ. [QE][PBR]
29. [QS]ಭೂಮಿಯ ಶ್ರೀಮಂತರೆಲ್ಲರು ಉಂಡು ಆರಾಧಿಸುವರು; [QE][QS2]ತಮ್ಮ ಪ್ರಾಣವನ್ನು ಬದುಕಿಸಲಾರದೆ [QE][QS2]ಧೂಳಿನಲ್ಲಿ ಇಳಿಯುವವರೆಲ್ಲರು ಅವರ ಮುಂದೆ ಅಡ್ಡಬೀಳುವರು. [QE]
30. [QS]ಸಂತಾನವು ದೇವರನ್ನು ಸೇವಿಸುವುದು; [QE][QS2]ಮುಂದಿನ ಸಂತತಿಗಳಿಗೆ ಯೆಹೋವ ದೇವರ ಬಗ್ಗೆ ಹೇಳಲಾಗುವುದು. [QE]
31. [QS]ಆ ಸಂತತಿಯವರು ದೇವರ ನೀತಿಯನ್ನು ಇನ್ನೂ ಜನಿಸದ [QE][QS2]ಜನಾಂಗಕ್ಕೆ ಸಾರಿ ತಿಳಿಸುವರು, ಏಕೆಂದರೆ [QE][QS2]ಇದನ್ನೆಲ್ಲ ಮಾಡಿದವರು ದೇವರೇ! [QE]
ಒಟ್ಟು 150 ಅಧ್ಯಾಯಗಳು, ಆಯ್ಕೆ ಮಾಡಲಾಗಿದೆ ಅಧ್ಯಾಯ 22 / 150
1 ನನ್ನ ದೇವರೇ, ನನ್ನ ದೇವರೇ, ಏಕೆ ನನ್ನನ್ನು ಕೈಬಿಟ್ಟಿದ್ದೀರಿ? ನನ್ನನ್ನು ರಕ್ಷಿಸದೆ ಏಕೆ ದೂರವಾಗಿದ್ದೀರಿ? ನನ್ನ ನರಳುವಿಕೆಯ ಮೊರೆಗೆ ಉತ್ತರ ಕೊಡದೆ ಏಕೆ ದೂರವಾಗಿದ್ದೀರಿ? 2 ಓ ನನ್ನ ದೇವರೇ, ಹಗಲಿನಲ್ಲಿ ಕರೆಯುತ್ತೇನೆ, ಆದರೆ ನೀವು ಉತ್ತರ ಕೊಡುವುದಿಲ್ಲ; ರಾತ್ರಿಯಲ್ಲಿಯೂ ನನಗೆ ವಿಶ್ರಾಂತಿ ಇರುವುದಿಲ್ಲ. 3 ನೀವು ಪರಿಶುದ್ಧರು; ನೀವು ಇಸ್ರಾಯೇಲರ ಸ್ತೋತ್ರ ಸಿಂಹಾಸನದಲ್ಲಿರುವಿರಿ. 4 ನಿಮ್ಮಲ್ಲಿಯೇ ನಮ್ಮ ಪಿತೃಗಳು ಭರವಸೆಯಿಟ್ಟರು; ಅವರು ಭರವಸೆಯಿಟ್ಟಿದ್ದರಿಂದ ನೀವು ಅವರನ್ನು ವಿಮೋಚಿಸಿದಿರಿ. 5 ಅವರು ನಿಮಗೆ ಮೊರೆಯಿಟ್ಟದ್ದರಿಂದ ನೀವು ಅವರನ್ನು ರಕ್ಷಿಸಿದಿರಿ; ನಿಮ್ಮಲ್ಲಿ ಭರವಸೆಯಿಟ್ಟಿದ್ದರಿಂದ ಅವರು ಅಪಮಾನಕ್ಕೆ ಗುರಿಯಾಗಲಿಲ್ಲ. 6 ಆದರೆ ನಾನು ಹುಳದಂಥವನೇ ಹೊರತು ಮನುಷ್ಯನಲ್ಲ; ನಾನು ಮನುಷ್ಯರಿಂದ ನಿಂದೆ ಹಾಗು ತಿರಸ್ಕಾರಕ್ಕೆ ಗುರಿಯಾಗಿದ್ದೇನೆ. 7 ನನ್ನನ್ನು ನೋಡುವವರೆಲ್ಲರೂ ನನ್ನನ್ನು ಗೇಲಿಮಾಡುತ್ತಾರೆ. ಅವರು ತಲೆ ಆಡಿಸುತ್ತಾ ಹೀಗೆ ಅವಮಾನಪಡಿಸುತ್ತಾರೆ: 8 “ಆತನು ಯೆಹೋವ ದೇವರ ಮೇಲೆ ಭರವಸೆಯಿಟ್ಟಿದ್ದಾನಲ್ಲಾ, ಯೆಹೋವ ದೇವರೇ ಆತನನ್ನು ಕಾಪಾಡಲಿ. ಯೆಹೋವ ದೇವರು ಆತನಲ್ಲಿ ಹರ್ಷಿಸುವುದಾದರೆ, ಅವರೇ ಆತನನ್ನು ಬಿಡಿಸಲಿ.” 9 ತಾಯಿಯ ಗರ್ಭದೊಳಗಿಂದ ನನ್ನನ್ನು ಹೊರತಂದವರು ನೀವು; ನನ್ನ ತಾಯಿಯ ಎದೆಯಲ್ಲಿ ಇದ್ದಾಗಲೇ ನಾನು ನಿಮ್ಮಲ್ಲಿ ಭರವಸೆಯಿಡುವಂತೆ ಮಾಡಿದಿರಿ. 10 ಹುಟ್ಟಿದಂದಿನಿಂದಲೇ ನೀವೇ ನನಗೆ ಆಧಾರ ನನ್ನ ತಾಯಿಯ ಗರ್ಭದಿಂದಲೇ ನೀವು ನನ್ನ ದೇವರು. 11 ನನ್ನಿಂದ ದೂರವಾಗಿರಬೇಡಿರಿ, ಏಕೆಂದರೆ ಇಕ್ಕಟ್ಟು ಸಮೀಪವಾಗಿದೆ, ಸಹಾಯಕರು ನನಗೆ ಯಾರೂ ಇಲ್ಲ. 12 ಬಹಳ ಹೋರಿಗಳು ನನ್ನನ್ನು ಸುತ್ತಿಕೊಂಡಿವೆ; ಬಾಷಾನಿನ ಬಲವಾದ ಹೋರಿಗಳು ನನ್ನನ್ನು ಮುತ್ತಿಕೊಂಡಿವೆ. 13 ಹರಿದು ಬಿಡುವ ಗರ್ಜಿಸುವ ಸಿಂಹದ ಹಾಗೆ ನನ್ನ ಮೇಲೆ ತಮ್ಮ ಬಾಯಿತೆರೆದಿದ್ದಾರೆ. 14 ನಾನು ಚೆಲ್ಲಿದ ನೀರಿನಂತಿದ್ದೇನೆ, ನನ್ನ ಎಲುಬುಗಳೆಲ್ಲಾ ಕೀಲು ತಪ್ಪಿ ಹೋಗಿದೆ. ನನ್ನ ಹೃದಯವು ಮೇಣದ ಹಾಗೆ ನನ್ನೊಳಗೆ ಕರಗಿಹೋಗಿದೆ. 15 ನನ್ನ ಬಾಯಿ ಬೋಕಿಯ ಹಾಗೆ ಒಣಗಿಹೋಗಿದೆ, ನನ್ನ ನಾಲಿಗೆ ಅಂಗಳಕ್ಕೆ ಹತ್ತಿದೆ, ನೀವು ನನ್ನನ್ನು ಮಣ್ಣಿಗೆ ಸೇರಿಸುವಿರಿ. 16 ನಾಯಿಗಳು ನನ್ನನ್ನು ಸುತ್ತಿಕೊಂಡಿವೆ; ದುರ್ಮಾರ್ಗಿಗಳ ಗುಂಪು ನನ್ನನ್ನು ಮುತ್ತಿಕೊಂಡಿದೆ; ಅವರು ನನ್ನ ಕೈಗಳನ್ನೂ ಕಾಲುಗಳನ್ನೂ ತಿವಿದಿದ್ದಾರೆ. 17 ನನ್ನ ಎಲುಬುಗಳನ್ನೆಲ್ಲಾ ಎಣಿಸುವಂತಾಗಿದೆ; ಅವರು ನನ್ನನ್ನು ಕಂಡು ಹಿಗ್ಗುತ್ತಾರೆ. 18 ನನ್ನ ಬಟ್ಟೆಯನ್ನು ಅವರು ತಮ್ಮೊಳಗೆ ಪಾಲು ಮಾಡಿಕೊಳ್ಳುತ್ತಾರೆ; ನನ್ನ ಅಂಗಿಗೋಸ್ಕರ ಚೀಟು ಹಾಕುತ್ತಾರೆ. 19 ಆದರೆ ಯೆಹೋವ ದೇವರೇ, ನೀವು ನನ್ನಿಂದ ದೂರವಾಗಿರಬೇಡಿರಿ; ನೀವು ನನ್ನ ಬಲವಾಗಿದ್ದೀರಿ, ನನ್ನ ಸಹಾಯಕ್ಕೆ ಬೇಗ ಬನ್ನಿರಿ. 20 ನನ್ನ ಪ್ರಾಣವನ್ನು ಖಡ್ಗದಿಂದಲೂ ನನ್ನ ಅಮೂಲ್ಯ ಜೀವವನ್ನು ನಾಯಿಗಳ ಬಲದಿಂದಲೂ ಬಿಡಿಸಿರಿ. 21 ಸಿಂಹಗಳ ಬಾಯಿಂದ ನನ್ನನ್ನು ರಕ್ಷಿಸಿರಿ; ಕಾಡುಕೋಣಗಳ ಕೊಂಬುಗಳಿಂದ ನನ್ನನ್ನು ತಪ್ಪಿಸಿರಿ. 22 ನಾನು ನಿಮ್ಮ ಹೆಸರನ್ನು ನನ್ನ ಸಹೋದರರಿಗೆ ಸಾರುವೆನು; ಸಭಾ ಮಧ್ಯದಲ್ಲಿ ನಿಮ್ಮನ್ನು ಸ್ತುತಿಸುವೆನು. 23 ಯೆಹೋವ ದೇವರಿಗೆ ಭಯಪಡುವವರೇ, ಅವರನ್ನು ಸ್ತುತಿಸಿರಿ; ಯಾಕೋಬನ ಎಲ್ಲಾ ಸಂತತಿಯವರೇ, ಅವರನ್ನು ಕೊಂಡಾಡಿರಿ; ಇಸ್ರಾಯೇಲರ ಎಲ್ಲಾ ಸಂತತಿಯವರೇ, ಅವರಲ್ಲಿ ಭಯಭಕ್ತಿಯುಳ್ಳವರಾಗಿರಿ. 24 ಏಕೆಂದರೆ ಸಂಕಟಪಡುವವನ ಸಂಕಟವನ್ನು ಅವರು ತಿರಸ್ಕರಿಸಲಿಲ್ಲ, ಅಸಹ್ಯಪಡಲಿಲ್ಲ; ತಮ್ಮ ಮುಖವನ್ನು ಅವನಿಂದ ಮರೆಮಾಡಲಿಲ್ಲ; ಆದರೆ ಆತನು ಮೊರೆ ಇಡಲು, ಅವರು ಕೇಳಿದರು. 25 ಮಹಾಸಭೆಯಲ್ಲಿ ನಿಮ್ಮನ್ನು ಕುರಿತು ನನ್ನ ಸ್ತೋತ್ರವು ನಿಮ್ಮಿಂದ ಬರುವುದು; ನನ್ನ ಹರಕೆಗಳನ್ನು ನಿಮಗೆ ಭಯಪಡುವವರ ಮುಂದೆ ಸಲ್ಲಿಸುವೆನು. 26 ದೀನರು ಉಂಡು ತೃಪ್ತರಾಗುವರು; ಯೆಹೋವ ದೇವರನ್ನು ಹುಡುಕುವವರು ಅವರನ್ನು ಸ್ತುತಿಸುವರು; ಅಂಥವರ ಹೃದಯವು ಎಂದೆಂದಿಗೂ ಚೈತನ್ಯ ಹೊಂದಲಿ. 27 ಲೋಕದಲ್ಲಿರುವ ಎಲ್ಲರೂ ಎಚ್ಚರವಾಗಿ ಯೆಹೋವ ದೇವರ ಕಡೆಗೆ ತಿರುಗಿಕೊಳ್ಳುವರು; ಜನಾಂಗಗಳ ಕುಟುಂಬಗಳೆಲ್ಲಾ ದೇವರ ಮುಂದೆ ಅಡ್ಡಬೀಳುವವು. 28 ಏಕೆಂದರೆ ರಾಜ್ಯವು ಯೆಹೋವ ದೇವರದೇ; ಜನಾಂಗಗಳನ್ನು ಆಳುವವರು ಅವರೇ. 29 ಭೂಮಿಯ ಶ್ರೀಮಂತರೆಲ್ಲರು ಉಂಡು ಆರಾಧಿಸುವರು; ತಮ್ಮ ಪ್ರಾಣವನ್ನು ಬದುಕಿಸಲಾರದೆ ಧೂಳಿನಲ್ಲಿ ಇಳಿಯುವವರೆಲ್ಲರು ಅವರ ಮುಂದೆ ಅಡ್ಡಬೀಳುವರು. 30 ಸಂತಾನವು ದೇವರನ್ನು ಸೇವಿಸುವುದು; ಮುಂದಿನ ಸಂತತಿಗಳಿಗೆ ಯೆಹೋವ ದೇವರ ಬಗ್ಗೆ ಹೇಳಲಾಗುವುದು. 31 ಆ ಸಂತತಿಯವರು ದೇವರ ನೀತಿಯನ್ನು ಇನ್ನೂ ಜನಿಸದ ಜನಾಂಗಕ್ಕೆ ಸಾರಿ ತಿಳಿಸುವರು, ಏಕೆಂದರೆ ಇದನ್ನೆಲ್ಲ ಮಾಡಿದವರು ದೇವರೇ!
ಒಟ್ಟು 150 ಅಧ್ಯಾಯಗಳು, ಆಯ್ಕೆ ಮಾಡಲಾಗಿದೆ ಅಧ್ಯಾಯ 22 / 150
×

Alert

×

Kannada Letters Keypad References