1. [QS]ಯೆಹೋವ ದೇವರೇ, ನನ್ನ ಬೇಡಿಕೆ ನ್ಯಾಯವಾದದ್ದು, [QE][QS2]ನನ್ನ ಮೊರೆಗೆ ಕಿವಿಗೊಡಿರಿ. [QE][QS]ನನ್ನ ಪ್ರಾರ್ಥನೆಯನ್ನು ಕೇಳಿರಿ, [QE][QS2]ಅದು ಕಪಟ ತುಟಿಗಳಿಂದ ಬಂದದ್ದಲ್ಲ. [QE]
2. [QS]ನನ್ನ ನ್ಯಾಯವು ನಿಮ್ಮಿಂದಲೇ ಬರಲಿ, [QE][QS2]ನಿಮ್ಮ ಕಣ್ಣುಗಳು ಸರಿಯಾದವುಗಳನ್ನೇ ನೋಡುತ್ತವೆ. [QE][PBR]
3. [QS]ನೀವು ನನ್ನ ಹೃದಯವನ್ನು ಶೋಧಿಸಿದರೂ, [QE][QS2]ನೀವು ರಾತ್ರಿಯಲ್ಲಿ ನನ್ನನ್ನು ಪರೀಕ್ಷಿಸಿ ವಿಚಾರಿಸಿದರೂ, [QE][QS]ನಾನು ಕೆಟ್ಟಯೋಜನೆ ಮಾಡಿಕೊಳ್ಳಲಿಲ್ಲವೆಂದು ನೀವು ಕಂಡುಕೊಳ್ಳುವಿರಿ; [QE][QS2]ನನ್ನ ಬಾಯಿಯೂ ಅತಿಕ್ರಮಿಸುವುದಿಲ್ಲವೆಂದು ನಾನು ತೀರ್ಮಾನಿಸಿಕೊಂಡಿದ್ದೇನೆ. [QE]
4. [QS]ಮನುಷ್ಯರು ನನಗೆ ಲಂಚ ನೀಡಲು ಪ್ರಯತ್ನಿಸಿದರೂ, [QE][QS2]ನಿಮ್ಮ ತುಟಿಗಳ ಆಜ್ಞಾನುಸಾರ [QE][QS2]ನಾನು ಹಿಂಸಕರ ಮಾರ್ಗಗಳಿಂದ ನನ್ನನ್ನು ದೂರವಾಗಿಟ್ಟುಕೊಂಡಿದ್ದೇನೆ. [QE]
5. [QS]ನನ್ನ ಹೆಜ್ಜೆಗಳು ಜಾರದ ಹಾಗೆ ನನ್ನ ನಡೆಗಳನ್ನು [QE][QS2]ನಿಮ್ಮ ದಾರಿಯಲ್ಲಿ ಸ್ಥಿರಪಡಿಸಿಕೊಂಡಿದ್ದೇನೆ. [QE][PBR]
6. [QS]ನನ್ನ ದೇವರೇ, ನೀವು ನನಗೆ ಉತ್ತರ ಕೊಡುವುದರಿಂದ ನಾನು ನಿಮ್ಮನ್ನು ಬೇಡಿಕೊಳ್ಳುತ್ತೇನೆ; [QE][QS2]ನೀವು ನಿಮ್ಮ ಕಿವಿಯನ್ನು ನನ್ನ ಕಡೆ ತಿರುಗಿಸಿ, ನನ್ನ ಪ್ರಾರ್ಥನೆಯನ್ನು ಆಲಿಸಿರಿ. [QE]
7. [QS]ನಿಮ್ಮ ಒಡಂಬಡಿಕೆಯ ಪ್ರೀತಿಯ ಅದ್ಭುತವನ್ನು ನನಗೆ ತೋರಿಸಿರಿ. [QE][QS2]ತಮ್ಮ ವೈರಿಗಳಿಂದ ಓಡಿಬಂದು ನಿಮ್ಮಲ್ಲಿ ಆಶ್ರಯ ಪಡೆಯುವವರಿಗೆ [QE][QS2]ಭುಜಬಲದಿಂದ ರಕ್ಷಿಸುವವರು ನೀವೇ. [QE]
8. [QS]ನಿಮ್ಮ ಕಣ್ಣುಗುಡ್ಡೆಯ ಹಾಗೆ ನನ್ನನ್ನು ಕಾಪಾಡಿರಿ, [QE][QS2]ನಿಮ್ಮ ರೆಕ್ಕೆಗಳ ನೆರಳಿನಲ್ಲಿ ನನ್ನನ್ನು ಮರೆಮಾಡಿರಿ. [QE]
9. [QS]ನನ್ನನ್ನು ಬಾಧಿಸುವ ದುಷ್ಟರಿಂದಲೂ, [QE][QS2]ನನ್ನನ್ನು ಸುತ್ತಿಕೊಳ್ಳುವ ನನ್ನ ಪ್ರಾಣಾಂತಕ ಶತ್ರುಗಳಿಂದಲೂ ತಪ್ಪಿಸಿ. [QE][PBR]
10. [QS]ಅವರು ತಮ್ಮ ಸೊಕ್ಕಿನ ಹೃದಯಗಳನ್ನು ಮುಚ್ಚಿಕೊಂಡಿದ್ದಾರೆ, [QE][QS2]ತಮ್ಮ ಬಾಯಿಂದ ಅವರು ಗರ್ವವನ್ನು ಮಾತನಾಡುತ್ತಾರೆ. [QE]
11. [QS]ನನ್ನನ್ನು ಬೀಳಿಸುವಂತೆ, ಅವರು ಈಗ ನನ್ನನ್ನು ಸುತ್ತಿಕೊಂಡಿದ್ದಾರೆ, [QE][QS2]ನನ್ನನ್ನು ನೆಲಕ್ಕೆ ಹಾಕಬೇಕೆಂದು ಅವರ ಕಣ್ಣುಗಳು ಕಾದಿವೆ. [QE]
12. [QS]ಅವರು ತಮ್ಮ ಬೇಟೆಯ ಹಸಿವೆಯಿಂದಿರುವ ಸಿಂಹದ ಹಾಗೆಯೂ, [QE][QS2]ಗುಪ್ತಸ್ಥಳಗಳಲ್ಲಿ ಹೊಂಚಿ ಕುಳಿತಿರುವ ಭೀಕರ ಸಿಂಹದ ಹಾಗೆಯೂ ಇದ್ದಾರೆ. [QE][PBR]
13. [QS]ಯೆಹೋವ ದೇವರೇ, ಎದ್ದು ಅವರನ್ನು ಎದುರಿಸಿ ಕೆಳಗೆ ಕೆಡವಿಬಿಡಿರಿ; [QE][QS2]ನಿಮ್ಮ ಖಡ್ಗದ ಮೂಲಕ ನನ್ನನ್ನು ದುಷ್ಟರಿಂದ ಕಾಪಾಡಿರಿ. [QE]
14. [QS]ಯೆಹೋವ ದೇವರೇ, ಈ ಲೋಕಜೀವನದಲ್ಲಿಯಷ್ಟೇ ಪ್ರತಿಫಲವೆಂದು ತಿಳಿಯುವ ಜನರಿಂದ, [QE][QS2]ನನ್ನನ್ನು ನಿಮ್ಮ ಹಸ್ತದ ಮೂಲಕ ರಕ್ಷಿಸಿ ಕಾಪಾಡಿರಿ. [QE][QS]ಅಂಥ ಜನರಿಗಾಗಿ ನೀವು ಸಂಗ್ರಹಿಸಿ ಇಟ್ಟಿರುವುದು ಅವರ ಹೊಟ್ಟೆ ತುಂಬಲಿ; [QE][QS2]ಅವರ ಮಕ್ಕಳು ಅದರಿಂದ ಸಮೃದ್ಧಿ ಹೊಂದಲಿ, [QE][QS2]ಅವರ ಚಿಕ್ಕಮಕ್ಕಳಿಗೂ ಉಳಿದದ್ದು ಸಿಕ್ಕಲಿ. [QE][PBR]
15. [QS]ನಾನಾದರೋ ನೀತಿಯಲ್ಲಿ ನಿಮ್ಮ ಮುಖವನ್ನು ನೋಡುವೆನು. [QE][QS2]ನಾನು ಎಚ್ಚೆತ್ತಾಗ ನಿಮ್ಮ ಹೋಲಿಕೆಯನ್ನೇ ಕಂಡು ತೃಪ್ತನಾಗುವೆನು. [QE]