ಪವಿತ್ರ ಬೈಬಲ್

ಓಪನ್ ಸಮಕಾಲೀನ ಆವೃತ್ತಿ (OCV)
ಕೀರ್ತನೆಗಳು
1. [QS]ಯೆಹೋವ ದೇವರೇ, ನಿಮ್ಮ ಪರಿಶುದ್ಧ ಗುಡಾರದಲ್ಲಿ ವಾಸಿಸುವವರು ಯಾರು? [QE][QS2]ನಿಮ್ಮ ಪರಿಶುದ್ಧ ಪರ್ವತದಲ್ಲಿ ಬಾಳುವವರು ಯಾರು? [QE][PBR]
2. [QS]ದೋಷವಿಲ್ಲದವರಾಗಿ ಜೀವಿಸಿ, [QE][QS2]ನೀತಿಯನ್ನು ನಡೆಸಿ, [QE][QS2]ತಮ್ಮ ಹೃದಯದಿಂದ ಸತ್ಯವನ್ನಾಡುವವರೇ; [QE]
3. [QS]ಅವರ ನಾಲಿಗೆಯು ಚಾಡಿ ಹೇಳುವುದಿಲ್ಲ, [QE][QS2]ತಮ್ಮ ನೆರೆಯವರಿಗೆ ಕೇಡುಮಾಡುವುದಿಲ್ಲ, [QE][QS2]ಇತರರನ್ನು ನಿಂದಿಸುವುದೂ ಇಲ್ಲ; [QE]
4. [QS]ಅವರು ದುಷ್ಟರ ಸಹವಾಸ ಇಲ್ಲದವರೂ [QE][QS2]ಯೆಹೋವ ದೇವರಲ್ಲಿ ಭಯಭಕ್ತಿಯುಳ್ಳವರನ್ನು ಸನ್ಮಾನಿಸುವವರೂ [QE][QS]ನಷ್ಟವಾದರೂ ಕೊಟ್ಟ ಮಾತನ್ನು ತಪ್ಪದೇ, [QE][QS2]ತಮ್ಮ ಮನಸ್ಸನ್ನು ಬದಲಾಯಿಸಿಕೊಳ್ಳದವರೂ ಆಗಿರಬೇಕು. [QE]
5. [QS]ಅವರು ಬಡವರಿಗೆ ಸಾಲ ಕೊಟ್ಟು ಬಡ್ಡಿಕೇಳದವರೂ; [QE][QS2]ನಿರಪರಾಧಿಯ ಕೇಡಿಗಾಗಿ ಲಂಚ ತೆಗೆದುಕೊಳ್ಳದವರೂ ಆಗಿರಬೇಕು. [QE][PBR] [QS]ಈ ರೀತಿಯಾಗಿ ಬಾಳುವವರು [QE][QS2]ಎಂದಿಗೂ ಕದಲುವುದಿಲ್ಲ. [QE]
ಒಟ್ಟು 150 ಅಧ್ಯಾಯಗಳು, ಆಯ್ಕೆ ಮಾಡಲಾಗಿದೆ ಅಧ್ಯಾಯ 15 / 150
1 ಯೆಹೋವ ದೇವರೇ, ನಿಮ್ಮ ಪರಿಶುದ್ಧ ಗುಡಾರದಲ್ಲಿ ವಾಸಿಸುವವರು ಯಾರು? ನಿಮ್ಮ ಪರಿಶುದ್ಧ ಪರ್ವತದಲ್ಲಿ ಬಾಳುವವರು ಯಾರು? 2 ದೋಷವಿಲ್ಲದವರಾಗಿ ಜೀವಿಸಿ, ನೀತಿಯನ್ನು ನಡೆಸಿ, ತಮ್ಮ ಹೃದಯದಿಂದ ಸತ್ಯವನ್ನಾಡುವವರೇ; 3 ಅವರ ನಾಲಿಗೆಯು ಚಾಡಿ ಹೇಳುವುದಿಲ್ಲ, ತಮ್ಮ ನೆರೆಯವರಿಗೆ ಕೇಡುಮಾಡುವುದಿಲ್ಲ, ಇತರರನ್ನು ನಿಂದಿಸುವುದೂ ಇಲ್ಲ; 4 ಅವರು ದುಷ್ಟರ ಸಹವಾಸ ಇಲ್ಲದವರೂ ಯೆಹೋವ ದೇವರಲ್ಲಿ ಭಯಭಕ್ತಿಯುಳ್ಳವರನ್ನು ಸನ್ಮಾನಿಸುವವರೂ ನಷ್ಟವಾದರೂ ಕೊಟ್ಟ ಮಾತನ್ನು ತಪ್ಪದೇ, ತಮ್ಮ ಮನಸ್ಸನ್ನು ಬದಲಾಯಿಸಿಕೊಳ್ಳದವರೂ ಆಗಿರಬೇಕು. 5 ಅವರು ಬಡವರಿಗೆ ಸಾಲ ಕೊಟ್ಟು ಬಡ್ಡಿಕೇಳದವರೂ; ನಿರಪರಾಧಿಯ ಕೇಡಿಗಾಗಿ ಲಂಚ ತೆಗೆದುಕೊಳ್ಳದವರೂ ಆಗಿರಬೇಕು. ಈ ರೀತಿಯಾಗಿ ಬಾಳುವವರು ಎಂದಿಗೂ ಕದಲುವುದಿಲ್ಲ.
ಒಟ್ಟು 150 ಅಧ್ಯಾಯಗಳು, ಆಯ್ಕೆ ಮಾಡಲಾಗಿದೆ ಅಧ್ಯಾಯ 15 / 150
×

Alert

×

Kannada Letters Keypad References