1. [QS]ಯೆಹೋವ ದೇವರೇ, ದಾವೀದನನ್ನೂ [QE][QS2]ಅವನ ಎಲ್ಲಾ ಶ್ರಮೆಗಳನ್ನೂ ಜ್ಞಾಪಕಮಾಡಿಕೊಳ್ಳಿರಿ. [QE][PBR]
2. [QS]ದಾವೀದನು ಯೆಹೋವ ದೇವರಿಗೆ ಆಣೆ ಇಟ್ಟು, [QE][QS2]ಪರಾಕ್ರಮಿಯಾದ ಯಾಕೋಬನ ದೇವರಿಗೆ ಹೀಗೆಂದು ಪ್ರಮಾಣ ಮಾಡಿದನು: [QE]
3. [QS]“ಯೆಹೋವ ದೇವರಿಗೆ ಒಂದು ಸ್ಥಳವನ್ನೂ, [QE][QS2]ಯಾಕೋಬನ ದೇವರಿಗೆ ನಿವಾಸವನ್ನೂ ಕಟ್ಟುವವರೆಗೆ ನಿಶ್ಚಯವಾಗಿ, [QE]
4. [QS]ನಾನು ನನ್ನ ಮನೆ ಸೇರೆನು; [QE][QS2]ನನ್ನ ಮಂಚವನ್ನು ಏರೆನು. [QE]
5. [QS]ನನ್ನ ಕಣ್ಣುಗಳಿಗೆ ನಿದ್ದೆಯನ್ನು ಕೊಡೆನು, [QE][QS2]ನನ್ನ ರೆಪ್ಪೆಗಳಿಗೆ ತೂಕಡಿಕೆಯನ್ನೂ ಕೊಡೆನು.” [QE][PBR]
6. [QS]ನಾವು ಎಫ್ರಾತದಲ್ಲಿ ಇದನ್ನು ಕೇಳಿದೆವು; [QE][QS2]ಯಹಾರ್ ಅಡವಿಯ ಬಯಲುಗಳಲ್ಲಿ ಇದನ್ನು ಕಂಡು ಹೀಗೆಂದು ಕೇಳಿಸಿಕೊಂಡೆವು: [QE]
7. [QS]“ಬನ್ನಿರಿ ನಾವು ದೇವರ ಮಂದಿರಕ್ಕೆ ಹೋಗಿ, [QE][QS2]ಅವರ ಪಾದಪೀಠದಲ್ಲಿ ಆರಾಧಿಸೋಣ. [QE]
8. [QS]‘ಯೆಹೋವ ದೇವರೇ, ಎದ್ದು ನಿಮ್ಮ ವಿಶ್ರಾಂತಿಯ ಸ್ಥಳಕ್ಕೆ ಬನ್ನಿರಿ; [QE][QS2]ನೀವೂ, ನಿಮ್ಮ ಶಕ್ತಿಯುತ ಮಂಜೂಷವೂ ಬರಲಿ. [QE]
9. [QS]ನಿಮ್ಮ ಯಾಜಕರು ನೀತಿಯೆಂಬ ವಸ್ತ್ರವನ್ನು ಧರಿಸಿಕೊಳ್ಳಲಿ; [QE][QS2]ನಿಮ್ಮ ಭಕ್ತರು ಉತ್ಸಾಹಧ್ವನಿ ಮಾಡಲಿ.’ ” [QE][PBR]
10. [QS]ನಿಮ್ಮ ಸೇವಕನಾದ ದಾವೀದನ ನಿಮಿತ್ತ, [QE][QS2]ನಿಮ್ಮ ಅಭಿಷಿಕ್ತನನ್ನು ತಿರಸ್ಕರಿಸಬೇಡಿರಿ. [QE][PBR]
11. [QS]ಯೆಹೋವ ದೇವರು ದಾವೀದನಿಗೆ ಸತ್ಯದ ಆಣೆ ಇಟ್ಟಿದ್ದಾರೆ; [QE][QS2]ತಾವು ಹೀಗೆಂದು ಆಣೆಯಿಟ್ಟುಕೊಟ್ಟ ಮಾತನ್ನು ದೇವರು ಬದಲಿಸುವುದಿಲ್ಲ, [QE][QS]“ನಿನ್ನ ಸಂತತಿಯವನನ್ನೇ [QE][QS2]ನಿನ್ನ ಸಿಂಹಾಸನದ ಮೇಲೆ ಕುಳ್ಳಿರಿಸುವೆನು. [QE]
12. [QS]ನಿಮ್ಮ ಮಕ್ಕಳು ನನ್ನ ಶಾಸನಗಳನ್ನೂ [QE][QS2]ನನ್ನ ಒಡಂಬಡಿಕೆಯನ್ನು ಸನ್ಮಾನಿಸಿ, [QE][QS]ಕೈಗೊಂಡರೆ, ಅವರ ಮಕ್ಕಳು ಸಹ [QE][QS2]ಎಂದೆಂದಿಗೂ ನಿನ್ನ ಸಿಂಹಾಸನದಲ್ಲಿ ಕೂರುವರು.” [QE][PBR]
13. [QS]ಏಕೆಂದರೆ, ಯೆಹೋವ ದೇವರು ಚೀಯೋನನ್ನು ಆಯ್ದುಕೊಂಡು [QE][QS2]ಅದನ್ನು ತಮ್ಮ ವಾಸಕ್ಕಾಗಿ ಅಪೇಕ್ಷಿಸಿ ಹೀಗೆಂದಿದ್ದಾರೆ: [QE]
14. [QS]“ಇದೇ ಎಂದೆಂದಿಗೂ ನನ್ನ ವಿಶ್ರಾಂತಿಯ ಸ್ಥಳವಾಗಿರುವುದು; [QE][QS2]ಇಲ್ಲೇ ವಾಸಿಸುವೆನು; ಇದನ್ನು ನಾನು ಅಪೇಕ್ಷಿಸಿದ್ದೇನೆ; [QE][QS2]ಇಲ್ಲಿಯೇ ಸಿಂಹಾಸನಾರೂಢನಾಗಿರುವೆನು. [QE]
15. [QS]ಧಾರಾಳವಾಗಿ ದವಸಧಾನ್ಯಗಳಿರಲೆಂದು ನಾನು ಚೀಯೋನನ್ನು ಆಶೀರ್ವದಿಸುವೆನು; [QE][QS2]ಇಲ್ಲಿ ವಾಸಿಸುವ ಬಡವರು ಉಂಡು ಸಂತೃಪ್ತಿಯಿಂದಿರುವರು. [QE]
16. [QS]ಇಲ್ಲಿನ ಯಾಜಕರಿಗೆ ರಕ್ಷಣೆಯನ್ನು ಹೊದಿಸುವೆನು; [QE][QS2]ಚೀಯೋನಿನ ನಂಬಿಗಸ್ತ ಸೇವಕರು ಉತ್ಸಾಹಧ್ವನಿಯಿಂದ ಹಾಡುವರು. [QE][PBR]
17. [QS]“ಇಲ್ಲಿ ದಾವೀದನಿಗೆ ಬಲದಾಯಕ ಅರಸನನ್ನು ಚಿಗುರುವಂತೆ ಮಾಡುವೆನು; [QE][QS2]ನನ್ನ ಅಭಿಷಿಕ್ತನಿಗೆ ದೀಪವನ್ನು ಸಿದ್ಧಮಾಡಿದ್ದೇನೆ. [QE]
18. [QS]ಇಲ್ಲಿ ಆತನ ಶತ್ರುಗಳಿಗೆ ನಾಚಿಕೆಯ ವಸ್ತ್ರವನ್ನು ಹೊದಿಸುವೆನು; [QE][QS2]ಆದರೆ ಆತನ ತೆರೆಯ ಮೇಲೆ ಕಿರೀಟವು ಶೋಭಿಸುವುದು.” [QE]