ಪವಿತ್ರ ಬೈಬಲ್

ದೇವರ ಕೃಪೆಯ ಉಡುಗೊರೆ
ಕೀರ್ತನೆಗಳು
1. [QS]“ನನ್ನ ಯೌವನದಿಂದ ನನ್ನನ್ನು ಶತ್ರುಗಳು ಬಹಳ ಬಾಧಿಸಿದ್ದಾರೆ,” [QE][QS2]ಎಂದು ಇಸ್ರಾಯೇಲು ಹೇಳಲಿ. [QE]
2. [QS]“ನನ್ನ ಯೌವನದಿಂದ ವೈರಿಗಳು ನನ್ನ ಮೇಲೆ ದಬ್ಬಾಳಿಕೆ ಮಾಡಿದರು; [QE][QS2]ಆದರೆ ಅವರು ನನ್ನ ಮೇಲೆ ವಿಜಯ ಸಾಧಿಸಲಿಲ್ಲ. [QE]
3. [QS]ಊಳುವವರು ನನ್ನ ಬೆನ್ನಿನ ಮೇಲೆ ಉತ್ತಿದರು, [QE][QS2]ಉದ್ದವಾದ ಗಾಯಗೆರೆಗಳನ್ನು ಮಾಡಿದರು [QE]
4. [QS]ಆದರೆ ಯೆಹೋವ ದೇವರು ನೀತಿವಂತರು; [QE][QS2]ದುಷ್ಟರು ಹಾಕಿದ ಬಂಧಗಳನ್ನು ದೇವರು ಕಡಿದು, ನಮ್ಮನ್ನು ಬಿಡುಗಡೆ ಮಾಡಿದ್ದಾರೆ.” [QE][PBR]
5. [QS]ಚೀಯೋನನ್ನು ದ್ವೇಷಿಸುವವರೆಲ್ಲರು [QE][QS2]ನಾಚಿಕೆಪಟ್ಟು ಹಿಂದಿರುಗಲಿ. [QE]
6. [QS]ಅವರು ಮಾಳಿಗೆ ಮೇಲಿನ ಹುಲ್ಲಿನಂತೆ ಆಗಲಿ. [QE][QS2]ಅವು ಬೆಳೆಯುವುದಕ್ಕೆ ಮುಂಚೆ ಒಣಗಿ ಹೋಗುತ್ತದೆ. [QE]
7. [QS]ಅದರಿಂದ ಕೊಯ್ಯುವವನು ತನ್ನ ಕೈ ತುಂಬಿಸಿಕೊಳ್ಳನು, [QE][QS2]ಸಿವುಡು ಕಟ್ಟುವವನು ತನ್ನ ಉಡಿಯನ್ನೂ ತುಂಬಿಸಿಕೊಳ್ಳಲಾರನು. [QE]
8. [QS]“ಯೆಹೋವ ದೇವರ ಆಶೀರ್ವಾದವು ನಿಮ್ಮ ಮೇಲೆ ಇರಲಿ; [QE][QS2]ಯೆಹೋವ ದೇವರು ಹೆಸರಿನಲ್ಲಿ ನಿಮ್ಮನ್ನು ಆಶೀರ್ವದಿಸುತ್ತೇವೆ,” [QE][QS2]ಎಂದು ಹಾದುಹೋಗುವವರು ಹೇಳದಿರಲಿ. [QE]
ಒಟ್ಟು 150 ಅಧ್ಯಾಯಗಳು, ಆಯ್ಕೆ ಮಾಡಲಾಗಿದೆ ಅಧ್ಯಾಯ 129 / 150
1 “ನನ್ನ ಯೌವನದಿಂದ ನನ್ನನ್ನು ಶತ್ರುಗಳು ಬಹಳ ಬಾಧಿಸಿದ್ದಾರೆ,” ಎಂದು ಇಸ್ರಾಯೇಲು ಹೇಳಲಿ. 2 “ನನ್ನ ಯೌವನದಿಂದ ವೈರಿಗಳು ನನ್ನ ಮೇಲೆ ದಬ್ಬಾಳಿಕೆ ಮಾಡಿದರು; ಆದರೆ ಅವರು ನನ್ನ ಮೇಲೆ ವಿಜಯ ಸಾಧಿಸಲಿಲ್ಲ. 3 ಊಳುವವರು ನನ್ನ ಬೆನ್ನಿನ ಮೇಲೆ ಉತ್ತಿದರು, ಉದ್ದವಾದ ಗಾಯಗೆರೆಗಳನ್ನು ಮಾಡಿದರು 4 ಆದರೆ ಯೆಹೋವ ದೇವರು ನೀತಿವಂತರು; ದುಷ್ಟರು ಹಾಕಿದ ಬಂಧಗಳನ್ನು ದೇವರು ಕಡಿದು, ನಮ್ಮನ್ನು ಬಿಡುಗಡೆ ಮಾಡಿದ್ದಾರೆ.” 5 ಚೀಯೋನನ್ನು ದ್ವೇಷಿಸುವವರೆಲ್ಲರು ನಾಚಿಕೆಪಟ್ಟು ಹಿಂದಿರುಗಲಿ. 6 ಅವರು ಮಾಳಿಗೆ ಮೇಲಿನ ಹುಲ್ಲಿನಂತೆ ಆಗಲಿ. ಅವು ಬೆಳೆಯುವುದಕ್ಕೆ ಮುಂಚೆ ಒಣಗಿ ಹೋಗುತ್ತದೆ. 7 ಅದರಿಂದ ಕೊಯ್ಯುವವನು ತನ್ನ ಕೈ ತುಂಬಿಸಿಕೊಳ್ಳನು, ಸಿವುಡು ಕಟ್ಟುವವನು ತನ್ನ ಉಡಿಯನ್ನೂ ತುಂಬಿಸಿಕೊಳ್ಳಲಾರನು. 8 “ಯೆಹೋವ ದೇವರ ಆಶೀರ್ವಾದವು ನಿಮ್ಮ ಮೇಲೆ ಇರಲಿ; ಯೆಹೋವ ದೇವರು ಹೆಸರಿನಲ್ಲಿ ನಿಮ್ಮನ್ನು ಆಶೀರ್ವದಿಸುತ್ತೇವೆ,” ಎಂದು ಹಾದುಹೋಗುವವರು ಹೇಳದಿರಲಿ.
ಒಟ್ಟು 150 ಅಧ್ಯಾಯಗಳು, ಆಯ್ಕೆ ಮಾಡಲಾಗಿದೆ ಅಧ್ಯಾಯ 129 / 150
×

Alert

×

Kannada Letters Keypad References