1. {א ಆಲೆಫ್ } [QS]ಯೆಹೋವ ದೇವರ ನಿಯಮಕ್ಕೆ ಅನುಸಾರವಾಗಿದ್ದು, [QE][QS2]ದೋಷರಹಿತ ಮಾರ್ಗದಲ್ಲಿ ನಡೆದುಕೊಳ್ಳುವವರೂ ಧನ್ಯರು. [QE]
2. [QS]ಸಂಪೂರ್ಣ ಹೃದಯದಿಂದ ದೇವರನ್ನು ಹುಡುಕುತ್ತಾ [QE][QS2]ಅವರ ಶಾಸನಗಳನ್ನು ಕೈಗೊಳ್ಳುವವರೂ ಧನ್ಯರು [QE]
3. [QS]ಅಂಥವರು ಅನ್ಯಾಯವನ್ನು ಮಾಡದೆ, [QE][QS2]ದೇವರ ಮಾರ್ಗಗಳಲ್ಲಿ ನಡೆದುಕೊಳ್ಳುವರು. [QE]
4. [QS]ದೇವರೇ, ನಿಮ್ಮ ಸೂತ್ರಗಳನ್ನು ಪೂರ್ಣವಾಗಿ ಕೈಗೊಳ್ಳಬೇಕೆಂದು [QE][QS2]ನೀವು ಆಜ್ಞಾಪಿಸಿದ್ದೀರಿ. [QE]
5. [QS]ನಿಮ್ಮ ತೀರ್ಪುಗಳನ್ನು ಪಾಲಿಸುವುದರಲ್ಲಿ [QE][QS2]ನನ್ನ ಮಾರ್ಗಗಳು ಸ್ಥಿರವಾಗಿರಲಿ! [QE]
6. [QS]ನಿಮ್ಮ ಎಲ್ಲಾ ಅಪ್ಪಣೆಗಳನ್ನು ಪರಿಗಣಿಸುವಾಗ [QE][QS2]ನಾನು ನಾಚಿಕೆಗೆ ಗುರಿಯಾಗುವುದಿಲ್ಲ. [QE]
7. [QS]ನಾನು ನಿಮ್ಮ ನೀತಿಯುಳ್ಳ ನಿಯಮಗಳನ್ನು ಕಲಿಯುತ್ತಿರುವಾಗೆಲ್ಲಾ, [QE][QS2]ಯಥಾರ್ಥ ಹೃದಯದಿಂದ ನಿಮ್ಮನ್ನು ಕೊಂಡಾಡುವೆನು. [QE]
8. [QS]ನಾನು ನಿಮ್ಮ ತೀರ್ಪುಗಳನ್ನು ಪಾಲಿಸುವೆನು; [QE][QS2]ನನ್ನನ್ನು ಸಂಪೂರ್ಣವಾಗಿ ಕೈಬಿಡಬೇಡಿರಿ. [QE]
9. {ב ಬೇತ್ } [QS]ಯೌವನಸ್ಥನು ಯಾವುದರಿಂದ ತನ್ನ ನಡತೆಯನ್ನು ಶುದ್ಧವಾಗಿಟ್ಟುಕೊಳ್ಳುವನು? [QE][QS2]ನಿಮ್ಮ ವಾಕ್ಯದ ಪ್ರಕಾರ ಜೀವಿಸುವುದರಿಂದಲೇ. [QE]
10. [QS]ನನ್ನ ಪೂರ್ಣಹೃದಯದಿಂದ ನಿಮ್ಮನ್ನು ಹುಡುಕಿದ್ದೇನೆ; [QE][QS2]ನಿಮ್ಮ ಆಜ್ಞೆಗಳಿಂದ ನಾನು ತಪ್ಪಿಹೋಗದಂತೆ ಮಾಡಿರಿ. [QE]
11. [QS]ನಿಮಗೆ ವಿರೋಧವಾಗಿ ಪಾಪಮಾಡದ ಹಾಗೆ [QE][QS2]ನನ್ನ ಹೃದಯದಲ್ಲಿ ನಿಮ್ಮ ವಾಕ್ಯವನ್ನು ಬಚ್ಚಿಟ್ಟುಕೊಂಡಿದ್ದೇನೆ. [QE]
12. [QS]ಯೆಹೋವ ದೇವರೇ, ನಿಮಗೆ ಸ್ತುತಿಯುಂಟಾಗಲಿ; [QE][QS2]ನಿಮ್ಮ ತೀರ್ಪುಗಳನ್ನು ನನಗೆ ಕಲಿಸಿಕೊಡಿರಿ. [QE]
13. [QS]ನಿಮ್ಮ ಬಾಯಿಂದ ಬರುವ ನಿಯಮಗಳನ್ನೆಲ್ಲಾ [QE][QS2]ನನ್ನ ತುಟಿಗಳಿಂದ ನಾನು ವರ್ಣಿಸಿದ್ದೇನೆ. [QE]
14. [QS]ಮಹಾ ಸಂಪತ್ತಿನಲ್ಲಿ ಒಬ್ಬ ವ್ಯಕ್ತಿ ಆನಂದಿಸುವ ಹಾಗೆ [QE][QS2]ನಾನು ನಿಮ್ಮ ಶಾಸನಗಳನ್ನು ಅನುಸರಿಸುವುದರಲ್ಲಿ ಆನಂದಿಸುವೆನು. [QE]
15. [QS]ನಿಮ್ಮ ಸೂತ್ರಗಳನ್ನು ಧ್ಯಾನಮಾಡಿ, [QE][QS2]ನಿಮ್ಮ ಮಾರ್ಗಗಳನ್ನು ದೃಷ್ಟಿಸುವೆನು. [QE]
16. [QS]ನಿಮ್ಮ ತೀರ್ಪುಗಳಲ್ಲಿ ಉಲ್ಲಾಸಗೊಂಡು, [QE][QS2]ನಿಮ್ಮ ವಾಕ್ಯವನ್ನು ತಿರಸ್ಕರಿಸದಿರುವೆನು. [QE]
17. {ג ಗಿಮೆಲ್ } [QS]ನಾನು ಜೀವದಿಂದಿದ್ದು ನಿಮ್ಮ ವಾಕ್ಯವನ್ನು ಕೈಗೊಳ್ಳುವಂತೆ [QE][QS2]ನಿಮ್ಮ ಸೇವಕನ ಮೇಲೆ ದಯೆಯಿಡಿರಿ. [QE]
18. [QS]ನಿಮ್ಮ ನಿಯಮದೊಳಗಿನ ಅದ್ಭುತಗಳನ್ನು ಕಾಣುವಂತೆ [QE][QS2]ನನ್ನ ಕಣ್ಣುಗಳನ್ನು ತೆರೆಯಿರಿ. [QE]
19. [QS]ಈ ಭೂಮಿಯಲ್ಲಿ ನಾನೊಬ್ಬ ಪ್ರವಾಸಿಯಾಗಿದ್ದೇನೆ; [QE][QS2]ನಿಮ್ಮ ಆಜ್ಞೆಗಳನ್ನು ನನಗೆ ಮರೆಮಾಡಬೇಡಿರಿ. [QE]
20. [QS]ನಿಮ್ಮ ನಿಯಮಗಳನ್ನು ಯಾವಾಗಲೂ ಹಂಬಲಿಸುತ್ತಿರುವುದರಿಂದ, [QE][QS2]ನನ್ನ ಪ್ರಾಣವು ಕರಗಿಹೋಗುತ್ತಿದೆ. [QE]
21. [QS]ನಿಮ್ಮ ಆಜ್ಞೆಗಳನ್ನು ಅನುಸರಿಸದೆ ತಪ್ಪಿಹೋಗುವ ಶಾಪಗ್ರಸ್ತರಾದ [QE][QS2]ಗರ್ವಿಷ್ಠರನ್ನು ನೀವು ಗದರಿಸುತ್ತೀರಿ. [QE]
22. [QS]ನಾನು ನಿಮ್ಮ ಶಾಸನಗಳನ್ನು ಕೈಗೊಂಡ ಕಾರಣ, [QE][QS2]ಗರ್ವಿಷ್ಠರ ನಿಂದೆಯನ್ನೂ, ತಿರಸ್ಕಾರವನ್ನೂ ನನ್ನಿಂದ ತೊಲಗಿಸಿರಿ. [QE]
23. [QS]ಅಧಿಕಾರಿಗಳು ನನಗೆ ವಿರೋಧವಾಗಿ ಕುಳಿತುಕೊಂಡು ಮಾತನಾಡಿಕೊಂಡರೂ, [QE][QS2]ನಿಮ್ಮ ಸೇವಕನು ನಿಮ್ಮ ತೀರ್ಪುಗಳನ್ನೇ ಧ್ಯಾನಿಸುತ್ತಿರುವೆನು. [QE]
24. [QS]ನಿಮ್ಮ ಶಾಸನಗಳು ನನಗೆ ಉಲ್ಲಾಸಕರವಾಗಿವೆ; [QE][QS2]ಅವೇ ನನ್ನ ಸಮಾಲೋಚಕರು. [QE]
25. {ד ದಾಲಿತ್ } [QS]ನಾನು ಧೂಳಿನಲ್ಲಿ ಬಿದ್ದಿದ್ದೇನೆ; [QE][QS2]ನಿಮ್ಮ ವಾಕ್ಯದ ಪ್ರಕಾರ ನನ್ನನ್ನು ಉಜ್ಜೀವಿಸಿರಿ. [QE]
26. [QS]ನಾನು ನನ್ನ ಮಾರ್ಗಗಳನ್ನು ಲೆಕ್ಕ ಒಪ್ಪಿಸಲು, [QE][QS2]ನೀವು ನನಗೆ ಸದುತ್ತರವನ್ನು ಕೊಟ್ಟಿರುವಿರಿ; [QE][QS2]ನಿಮ್ಮ ತೀರ್ಪುಗಳನ್ನು ನನಗೆ ಕಲಿಸಿಕೊಡಿರಿ. [QE]
27. [QS]ನಿಮ್ಮ ಸೂತ್ರಗಳ ಮಾರ್ಗವನ್ನು ನಾನು ಅರ್ಥಮಾಡಿಕೊಳ್ಳಲು ಸಹಾಯಿಸಿರಿ, [QE][QS2]ಆಗ ನಿಮ್ಮ ಅದ್ಭುತಕಾರ್ಯಗಳನ್ನು ಧ್ಯಾನ ಮಾಡುವೆನು. [QE]
28. [QS]ನನ್ನ ಪ್ರಾಣವು ದುಃಖದಿಂದ ಬಲಹೀನವಾಗಿದೆ; [QE][QS2]ನಿಮ್ಮ ವಾಕ್ಯದಿಂದ ನನ್ನನ್ನು ಬಲಪಡಿಸಿರಿ. [QE]
29. [QS]ವಂಚನೆಯುಳ್ಳ ಮಾರ್ಗದಿಂದ ನನ್ನನ್ನು ಕಾಪಾಡಿರಿ; [QE][QS2]ನನಗೆ ಕೃಪೆ ನೀಡಿ ನಿಮ್ಮ ನಿಯಮವನ್ನು ನನಗೆ ಬೋಧನೆ ಮಾಡಿರಿ. [QE]
30. [QS]ನಂಬಿಗಸ್ತಿಕೆಯ ಮಾರ್ಗವನ್ನು ಆರಿಸಿಕೊಂಡಿದ್ದೇನೆ; [QE][QS2]ನಾನು ನಿಮ್ಮ ನಿಯಮಗಳ ಮೇಲೆ ನನ್ನ ಹೃದಯವನ್ನಿಟ್ಟುಕೊಂಡಿದ್ದೇನೆ. [QE]
31. [QS]ಯೆಹೋವ ದೇವರೇ, ನಾನು ನಿಮ್ಮ ಶಾಸನಗಳನ್ನು ಬಿಗಿಯಾಗಿಟ್ಟುಕೊಂಡಿದ್ದೇನೆ; [QE][QS2]ನನ್ನನ್ನು ನಾಚಿಕೆಗೆ ಗುರಿಪಡಿಸಬೇಡಿರಿ. [QE]
32. [QS]ನಿಮ್ಮ ಆಜ್ಞೆಗಳ ಮಾರ್ಗದಲ್ಲಿ ಓಡುವೆನು, [QE][QS2]ಏಕೆಂದರೆ ನೀವು ನನ್ನ ವಿವೇಕವನ್ನು ವಿಸ್ತಾರ ಮಾಡಿದ್ದೀರಿ. [QE]
33. {ה ಹೇ } [QS]ಯೆಹೋವ ದೇವರೇ, ನಿಮ್ಮ ತೀರ್ಪುಗಳ ವಿವರವನ್ನು ನನಗೆ ಬೋಧಿಸಿರಿ; [QE][QS2]ಆಗ ನಾನು ಅವುಗಳನ್ನು ಅಂತ್ಯದವರೆಗೂ ಹಿಂಬಾಲಿಸುವೆನು. [QE]
34. [QS]ನಿಮ್ಮ ನಿಯಮವನ್ನು ಹಿಂಬಾಲಿಸಿ, [QE][QS2]ಅದನ್ನು ಪೂರ್ಣಹೃದಯದಿಂದ ಕೈಕೊಳ್ಳಲು ನನಗೆ ವಿವೇಚನೆಯನ್ನು ನೀಡಿರಿ. [QE]
35. [QS]ನಿಮ್ಮ ಆಜ್ಞೆಗಳ ಮಾರ್ಗದಲ್ಲಿ ನನ್ನನ್ನು ನಡೆಸಿರಿ, [QE][QS2]ಏಕೆಂದರೆ ನಾನು ಅದರಲ್ಲಿ ಆನಂದಿಸುತ್ತೇನೆ. [QE]
36. [QS]ಸ್ವಾರ್ಥದ ಲಾಭಗಳ ಕಡೆಗಲ್ಲ, [QE][QS2]ಆದರೆ ನಿಮ್ಮ ಶಾಸನಗಳ ಕಡೆಗೆ ನನ್ನ ಹೃದಯವನ್ನು ತಿರುಗಿಸಿರಿ. [QE]
37. [QS]ವ್ಯರ್ಥವಾದವುಗಳಿಂದ ನನ್ನ ಕಣ್ಣುಗಳನ್ನು ತಿರುಗಿಸಿ, [QE][QS2]ನಿಮ್ಮ ವಾಕ್ಯದ ಅನುಸಾರವಾಗಿ ನನ್ನ ಜೀವವನ್ನು ಕಾಪಾಡಿರಿ. [QE]
38. [QS]ನಿಮಗೆ ಭಯಪಡುವವರಿಗಾಗಿ ನೀಡುವ ವಾಗ್ದಾನವನ್ನು [QE][QS2]ನಿಮ್ಮ ಸೇವಕನಿಗೆ ನೆರವೇರಿಸಿರಿ. [QE]
39. [QS]ನಾನು ಭಯಪಡುವ ನನ್ನ ನಿಂದೆಯನ್ನು ನನ್ನಿಂದ ತೊಲಗಿಸಿರಿ, [QE][QS2]ಏಕೆಂದರೆ ನಿಮ್ಮ ನಿಯಮಗಳು ಒಳ್ಳೆಯವುಗಳೇ. [QE]
40. [QS]ಇಗೋ ನಿಮ್ಮ ಸೂತ್ರಗಳಿಗಾಗಿ ನಾನು ಎಷ್ಟೋ ಹಂಬಲಿಸುತ್ತೇನೆ! [QE][QS2]ನಿಮ್ಮ ನೀತಿಗನುಸಾರವಾಗಿ ನನ್ನ ಜೀವವನ್ನು ಕಾಪಾಡಿರಿ. [QE]
41. {ו ವಾವ್ } [QS]ಯೆಹೋವ ದೇವರೇ, ನಿಮ್ಮ ಒಡಂಬಡಿಕೆಯ ಪ್ರೀತಿಯು ನನಗೆ ದೊರಕಲಿ, [QE][QS2]ನಿಮ್ಮ ವಾಗ್ದಾನದ ರಕ್ಷಣೆಯು ನನಗೆ ಉಂಟಾಗಲಿ; [QE]
42. [QS]ಆಗ ನನ್ನನ್ನು ನಿಂದಿಸುವವನಿಗೆ ಉತ್ತರಕೊಡುವೆನು, [QE][QS2]ಏಕೆಂದರೆ ನಾನು ನಿಮ್ಮ ವಾಕ್ಯದಲ್ಲಿ ಭರವಸೆಯಿಟ್ಟಿದ್ದೇನೆ. [QE]
43. [QS]ಸತ್ಯವಾಕ್ಯವನ್ನು ನನ್ನ ಬಾಯಿಂದ ತೆಗೆಯಬೇಡಿರಿ, [QE][QS2]ಏಕೆಂದರೆ ನಿಮ್ಮ ನಿಯಮಗಳಲ್ಲಿ ನಾನು ನನ್ನ ನಿರೀಕ್ಷೆಯನ್ನಿಟ್ಟಿದ್ದೇನೆ. [QE]
44. [QS]ನಾನು ನಿಮ್ಮ ನಿಯಮವನ್ನು ಯಾವಾಗಲೂ [QE][QS2]ಮತ್ತು ಎಂದೆಂದಿಗೂ ಪಾಲಿಸುವೆನು. [QE]
45. [QS]ನಿಮ್ಮ ಸೂತ್ರಗಳನ್ನು ನಾನು ಹುಡುಕುವುದರಿಂದ, [QE][QS2]ನಾನು ಸ್ವತಂತ್ರವಾಗಿಯೇ ಜೀವಿಸುವೆನು. [QE]
46. [QS]ಅರಸರ ಮುಂದೆ ನಿಮ್ಮ ಶಾಸನಗಳನ್ನು ಮಾತಾಡುವೆನು, [QE][QS2]ಅವುಗಳ ಬಗ್ಗೆ ನಾನೆಂದೂ ನಾಚಿಕೆಪಡುವುದಿಲ್ಲ. [QE]
47. [QS]ನಿಮ್ಮ ಆಜ್ಞೆಗಳನ್ನು ನಾನು ಪ್ರೀತಿಸುವುದರಿಂದ, [QE][QS2]ನಾನು ಅವುಗಳಲ್ಲಿ ಆನಂದಿಸುವೆನು. [QE]
48. [QS]ನಾನು ಪ್ರೀತಿಸುವ ನಿಮ್ಮ ಆಜ್ಞೆಗಳ ಕಡೆಗೆ ನನ್ನ ಕೈಗಳನ್ನೆತ್ತಿ, [QE][QS2]ನಿಮ್ಮ ತೀರ್ಪುಗಳನ್ನು ಧ್ಯಾನ ಮಾಡುವೆನು. [QE]
49. {ז ಸಾಯಿನ್ } [QS]ನಿಮ್ಮ ಸೇವಕನಿಗೋಸ್ಕರ ನಿಮ್ಮ ವಾಕ್ಯವನ್ನು ನೀವು ಜ್ಞಾಪಕಮಾಡಿಕೊಳ್ಳಿರಿ, [QE][QS2]ಏಕೆಂದರೆ ನೀವು ನನಗೆ ನಿರೀಕ್ಷೆಯನ್ನು ಕೊಟ್ಟಿದ್ದೀರಿ. [QE]
50. [QS]ನಿಮ್ಮ ವಾಗ್ದಾನವು ನನ್ನ ಜೀವದ ಸಂರಕ್ಷಣೆಯಾಗಿದೆ. [QE][QS2]ಅವು ನನ್ನ ಸಂಕಷ್ಟಗಳಲ್ಲಿ ಆದರಣೆಯಾಗಿವೆ. [QE]
51. [QS]ಅಹಂಕಾರಿಗಳು ನನ್ನನ್ನು ಕರುಣಿಸದೆ ಹಾಸ್ಯ ಮಾಡಿದರೂ, [QE][QS2]ನಾನು ನಿಮ್ಮ ನಿಯಮದಿಂದ ತೊಲಗುವುದಿಲ್ಲ. [QE]
52. [QS]ಯೆಹೋವ ದೇವರೇ, ನಿಮ್ಮ ಪುರಾತನ ನಿಯಮಗಳನ್ನು ನಾನು ನೆನಪು ಮಾಡಿಕೊಂಡು, [QE][QS2]ಅವುಗಳಲ್ಲಿ ಆದರಣೆಯನ್ನು ಪಡೆದುಕೊಂಡಿದ್ದೇನೆ. [QE]
53. [QS]ನಿಮ್ಮ ನಿಯಮವನ್ನು ಬಿಟ್ಟುಬಿಡುವ ದುಷ್ಟರ ನಿಮಿತ್ತ, [QE][QS2]ರೋಷವು ನನ್ನನ್ನು ಆವರಿಸಿಕೊಂಡಿದೆ. [QE]
54. [QS]ನನ್ನ ಪ್ರವಾಸದ ಮನೆಯಲ್ಲಿ [QE][QS2]ನಿಮ್ಮ ತೀರ್ಪುಗಳು ನನಗೆ ಗಾನ ವಿಷಯವಾಗಿದೆ. [QE]
55. [QS]ಯೆಹೋವ ದೇವರೇ, ರಾತ್ರಿಯಲ್ಲಿ ನಿಮ್ಮ ನಾಮಸ್ಮರಣೆ ಮಾಡುವುದರಿಂದ, [QE][QS2]ನಿಮ್ಮ ನಿಯಮವನ್ನು ಕೈಕೊಳ್ಳುತ್ತೇನೆ. [QE]
56. [QS]ನಾನು ನಿಮ್ಮ ಸೂತ್ರಗಳನ್ನು ಕೈಗೊಂಡಿದ್ದೇನೆ: [QE][QS2]ಇದೇ ನನ್ನ ಜೀವನದ ಶೈಲಿಯಾಗಿದೆ. [QE]
57. {ח ಕೇತ್ } [QS]ಯೆಹೋವ ದೇವರೇ, ನೀವೇ ನನ್ನ ಪಾಲು; [QE][QS2]ನಿಮ್ಮ ವಾಕ್ಯಗಳನ್ನು ಪಾಲಿಸುವೆನೆಂದು ನಾನು ಪ್ರಮಾಣ ಮಾಡಿದ್ದೇನೆ. [QE]
58. [QS]ಪೂರ್ಣಹೃದಯದಿಂದ ನಾನು ನಿಮ್ಮ ಮುಖವನ್ನು ಹುಡುಕಿದ್ದೇನೆ; [QE][QS2]ನಿಮ್ಮ ವಾಕ್ಯದ ಪ್ರಕಾರ ನನ್ನನ್ನು ಕರುಣಿಸಿರಿ. [QE]
59. [QS]ನಾನು ನನ್ನ ನಡತೆಯನ್ನು ಪರಿಶೋಧಿಸುತ್ತಾ [QE][QS2]ನನ್ನ ಹೆಜ್ಜೆಗಳನ್ನು ನಿಮ್ಮ ಶಾಸನಗಳ ಕಡೆಗೆ ತಿರುಗಿಸಿದ್ದೇನೆ. [QE]
60. [QS]ನಿಮ್ಮ ಆಜ್ಞೆಗಳನ್ನು ಪಾಲಿಸಲು ನಾನು [QE][QS2]ತಡಮಾಡದೆ ತ್ವರೆಪಟ್ಟಿದ್ದೇನೆ. [QE]
61. [QS]ದುಷ್ಟರ ಪಾಶಗಳು ನನ್ನನ್ನು ಸುತ್ತಿಕೊಂಡಿದ್ದರೂ, [QE][QS2]ನಿಮ್ಮ ನಿಯಮವನ್ನು ನಾನು ಮರೆಯಲಿಲ್ಲ. [QE]
62. [QS]ನಿಮ್ಮ ನೀತಿಯುಳ್ಳ ನಿಯಮಗಳಿಗಾಗಿ [QE][QS2]ನಿಮಗೆ ಕೃತಜ್ಞತೆ ಸಲ್ಲಿಸಲು ಮಧ್ಯರಾತ್ರಿಯಲ್ಲಿ ಏಳುವೆನು. [QE]
63. [QS]ನಿಮಗೆ ಭಯಪಡುವವರೆಲ್ಲರಿಗೂ, [QE][QS2]ನಿಮ್ಮ ಸೂತ್ರಗಳನ್ನು ಹಿಂಬಾಲಿಸುವವರಿಗೂ ನಾನು ಮಿತ್ರನಾಗಿದ್ದೇನೆ. [QE]
64. [QS]ಯೆಹೋವ ದೇವರೇ, ಭೂಮಿಯು ನಿಮ್ಮ ಪ್ರೀತಿಯಿಂದ ತುಂಬಿದೆ; [QE][QS2]ನಿಮ್ಮ ತೀರ್ಪುಗಳನ್ನು ನನಗೆ ಬೋಧಿಸಿರಿ. [QE]
65. {ט ಟೇತ್ } [QS]ಯೆಹೋವ ದೇವರೇ, ನಿಮ್ಮ ವಾಕ್ಯದ ಪ್ರಕಾರ [QE][QS2]ನಿಮ್ಮ ಸೇವಕನಿಗೆ ಒಳ್ಳೆಯದನ್ನು ಮಾಡಿರಿ. [QE]
66. [QS]ತಿಳುವಳಿಕೆಯನ್ನೂ ಒಳ್ಳೆಯ ವಿವೇಚನೆಯನ್ನೂ, ನನಗೆ ಕಲಿಸಿರಿ, [QE][QS2]ಏಕೆಂದರೆ ನಿಮ್ಮ ಆಜ್ಞೆಗಳಲ್ಲಿ ಭರವಸೆ ಇಟ್ಟಿದ್ದೇನೆ. [QE]
67. [QS]ನಾನು ಬಾಧೆಪಡುವುದಕ್ಕಿಂತ ಮುಂಚೆ ದಾರಿತಪ್ಪಿಹೋಗುತ್ತಿದ್ದೆನು, [QE][QS2]ಆದರೆ ಈಗ ನಿಮ್ಮ ವಾಕ್ಯವನ್ನು ಪಾಲಿಸುತ್ತಿದ್ದೇನೆ. [QE]
68. [QS]ನೀವು ಒಳ್ಳೆಯವರೂ, ಒಳ್ಳೆಯದನ್ನು ಮಾಡುವವರೂ ಆಗಿದ್ದೀರಿ; [QE][QS2]ನಿಮ್ಮ ತೀರ್ಪುಗಳನ್ನು ನನಗೆ ಕಲಿಸಿರಿ. [QE]
69. [QS]ಅಹಂಕಾರಿಗಳು ನನಗೆ ವಿರೋಧವಾಗಿ ಸುಳ್ಳು ಕಲ್ಪಿಸಿದರು, [QE][QS2]ನಾನಾದರೋ ಪೂರ್ಣಹೃದಯದಿಂದ ನಿಮ್ಮ ಸೂತ್ರಗಳನ್ನು ಕೈಗೊಳ್ಳುವೆನು. [QE]
70. [QS]ಅವರ ಹೃದಯವು ಕಠಿಣವೂ ಮಂದವೂ ಆಗಿದೆ, [QE][QS2]ನಾನಾದರೋ ನಿಮ್ಮ ನಿಯಮದಲ್ಲಿ ಆನಂದಪಡುತ್ತೇನೆ. [QE]
71. [QS]ನಾನು ಶ್ರಮೆಪಟ್ಟದ್ದು ನನಗೆ ಒಳ್ಳೆಯದಾಯಿತು [QE][QS2]ಅದರಿಂದ ನಿಮ್ಮ ತೀರ್ಪುಗಳನ್ನು ಕಲಿತೆನು. [QE]
72. [QS]ಸಾವಿರಾರು ಬೆಳ್ಳಿಬಂಗಾರ ನಾಣ್ಯಗಳಿಗಿಂತಲೂ [QE][QS2]ನಿಮ್ಮ ಬಾಯಿಯ ನಿಯಮವು ನನಗೆ ಹೆಚ್ಚು ಅಮೂಲ್ಯವಾದದ್ದಾಗಿದೆ. [QE]
73. {י ಯೋದ್ } [QS]ನಿಮ್ಮ ಕೈಗಳು ನನ್ನನ್ನು ನಿರ್ಮಿಸಿ ರೂಪಿಸಿದವು; [QE][QS2]ನಿಮ್ಮ ಆಜ್ಞೆಗಳನ್ನು ಕಲಿತುಕೊಳ್ಳಲು ನನಗೆ ಅರಿವನ್ನು ನೀಡಿರಿ. [QE]
74. [QS]ನಿಮಗೆ ಭಯಪಡುವವರು ನನ್ನನ್ನು ನೋಡಿ ಆನಂದಿಸಲಿ, [QE][QS2]ಏಕೆಂದರೆ ನಾನು ನಿಮ್ಮ ವಾಕ್ಯದಲ್ಲಿ ನಿರೀಕ್ಷಿಸಿಕೊಂಡಿದ್ದೇನೆ. [QE]
75. [QS]ಯೆಹೋವ ದೇವರೇ, ನಿಮ್ಮ ನಿಯಮಗಳು ನೀತಿಯುಳ್ಳವುಗಳು; [QE][QS2]ನಿಮ್ಮ ನಂಬಿಗಸ್ತಿಕೆಯಿಂದಲೇ ನೀವು ನನ್ನನ್ನು ಕಷ್ಟಪಡಿಸಿದ್ದೀರಿ ಎಂದು ನನಗೆ ಗೊತ್ತಿದೆ. [QE]
76. [QS]ನೀವು ನಿಮ್ಮ ಸೇವಕನಿಗೆ ನೀಡಿದ ವಾಗ್ದಾನದ ಪ್ರಕಾರ, [QE][QS2]ನಿಮ್ಮ ಒಡಂಬಡಿಕೆಯ ಪ್ರೀತಿಯು ನನಗೆ ಆದರಣೆಯಾಗಿರಲಿ. [QE]
77. [QS]ನಾನು ಜೀವಿಸುವಂತೆ ನಿಮ್ಮ ಅನುಕಂಪವು ನನಗೆ ಬರಲಿ, [QE][QS2]ಏಕೆಂದರೆ ನಿಮ್ಮ ನಿಯಮವೇ ನನ್ನ ಆನಂದವಾಗಿದೆ. [QE]
78. [QS]ಅಹಂಕಾರಿಗಳು ಕಾರಣವಿಲ್ಲದೆ ನನಗೆ ಕೇಡು ಮಾಡಿದ್ದರಿಂದ ನಾಚಿಕೆಪಡಲಿ; [QE][QS2]ಆದರೆ ನಾನು ನಿಮ್ಮ ಸೂತ್ರಗಳನ್ನು ಧ್ಯಾನಿಸುತ್ತಿರುವೆನು. [QE]
79. [QS]ನಿಮಗೆ ಭಯಪಡುವವರು ನನ್ನ ಬಳಿಗೆ ಬರಲಿ, [QE][QS2]ನಿಮ್ಮ ಶಾಸನಗಳನ್ನು ಅರ್ಥಮಾಡಿಕೊಳ್ಳುವವರೂ ನನ್ನ ಬಳಿಗೆ ಬರಲಿ. [QE]
80. [QS]ನಿಷ್ಕಳಂಕ ಹೃದಯದಿಂದ ನಾನು ನಿಮ್ಮ ತೀರ್ಪುಗಳನ್ನು ಪಾಲಿಸುವೆನು, [QE][QS2]ಅದರಿಂದ ನಾನು ನಾಚಿಕೆಗೆ ಗುರಿಯಾಗದಿರುವೆನು. [QE]
81. {כ ಕಾಫ್ } [QS]ನನ್ನ ಪ್ರಾಣವು ನಿಮ್ಮ ರಕ್ಷಣೆಯ ಬಯಕೆಯಿಂದಲೇ ಕುಗ್ಗಿ ಹೋಗುತ್ತಿದೆ, [QE][QS2]ಆದರೂ ನಾನು ನಿಮ್ಮ ವಾಕ್ಯದಲ್ಲಿ ನಿರೀಕ್ಷೆ ಇಟ್ಟಿದ್ದೇನೆ. [QE]
82. [QS]ನನ್ನ ಕಣ್ಣುಗಳು ನಿಮ್ಮ ವಾಗ್ದಾನಕ್ಕಾಗಿ ಕಾಯುತ್ತಾ ಮಂದವಾಗುತ್ತಿವೆ; [QE][QS2]“ನೀವು ಯಾವಾಗ ನನಗೆ ಆದರಣೆ ನೀಡುವಿರಿ?” ಎಂದು ನಾನು ಕೇಳುತ್ತಿರುವೆನು. [QE]
83. [QS]ನಾನು ಹೊಗೆಯಲ್ಲಿರುವ ದ್ರಾಕ್ಷಾರಸದ ಚರ್ಮಚೀಲದಂತ್ತಿದ್ದರೂ, [QE][QS2]ನಿಮ್ಮ ತೀರ್ಪುಗಳನ್ನು ನಾನು ಮರೆಯಲಿಲ್ಲ. [QE]
84. [QS]ಎಷ್ಟು ಕಾಲ ನಿಮ್ಮ ಸೇವಕನು ಕಾಯಬೇಕು? [QE][QS2]ನನ್ನ ಹಿಂಸಕರಿಗೆ ಯಾವಾಗ ನೀವು ಶಿಕ್ಷಿಸುವಿರಿ? [QE]
85. [QS]ನಿಮ್ಮ ನಿಯಮಕ್ಕೆ ವಿರೋಧವಾಗಿ [QE][QS2]ಅಹಂಕಾರಿಗಳು ನನಗೆ ಬಲೆಹಿಡಿಯಲು ಕುಣಿಗಳನ್ನು ಅಗೆದಿದ್ದಾರೆ. [QE]
86. [QS]ನಿಮ್ಮ ಆಜ್ಞೆಗಳೆಲ್ಲಾ ಭರವಸೆಗೆ ಯೋಗ್ಯವಾದವುಗಳೇ; [QE][QS2]ಕಾರಣವಿಲ್ಲದೆ ಜನರು ನನ್ನನ್ನು ಹಿಂಸಿಸುವುದರಿಂದ ನನಗೆ ಸಹಾಯಮಾಡಿರಿ. [QE]
87. [QS]ಅವರು ನನ್ನನ್ನು ಬಹುಮಟ್ಟಿಗೆ ಭೂಮಿಯಿಂದ ಅಳಿಸಿಹಾಕಲು ನೋಡಿದರು, [QE][QS2]ಆದರೆ ನಾನು ನಿಮ್ಮ ಸೂತ್ರಗಳನ್ನು ತಿರಸ್ಕರಿಸಲಿಲ್ಲ. [QE]
88. [QS]ನಿಮ್ಮ ಒಡಂಬಡಿಕೆಯ ಪ್ರೀತಿಯಿಂದ ನನ್ನ ಜೀವನವನ್ನು ಪರಿಪಾಲಿಸಿರಿ, [QE][QS2]ಆಗ ನಿಮ್ಮ ಬಾಯಿಂದ ಹೊರಡುವ ಶಾಸನಗಳನ್ನು ಪಾಲಿಸುವೆನು. [QE]
89. {ל ಲಾಮೆದ್ } [QS]ಯೆಹೋವ ದೇವರೇ, ನಿಮ್ಮ ವಾಕ್ಯವು ಶಾಶ್ವತವಾಗಿದೆ; [QE][QS2]ಅದು ಪರಲೋಕದಲ್ಲಿ ಸ್ಥಿರವಾಗಿದೆ. [QE]
90. [QS]ನಿಮ್ಮ ನಂಬಿಗಸ್ತಿಕೆಯು ಎಲ್ಲಾ ತಲೆಮಾರಿಗೂ ಮುಂದುವರಿಯುವುದು; [QE][QS2]ನೀವು ಸ್ಥಾಪಿಸಿದ ಭೂಮಿಯು ನೆಲೆಯಾಗಿರುವುದು. [QE]
91. [QS]ನಿಮ್ಮ ನಿಯಮಗಳು ಇಂದಿನವರೆಗೂ ನಿಂತಿರುತ್ತವೆ, [QE][QS2]ಏಕೆಂದರೆ ಸೃಷ್ಟಿಗಳೆಲ್ಲವೂ ನಿಮ್ಮ ಸೇವೆಯನ್ನು ಮಾಡುತ್ತವೆ. [QE]
92. [QS]ನಿಮ್ಮ ನಿಯಮವು ನನಗೆ ಆನಂದವಾಗಿರದಿದ್ದರೆ, [QE][QS2]ನನ್ನ ಕಷ್ಟದಲ್ಲಿ ನಾನು ನಾಶವಾಗುತ್ತಿದ್ದೆನು. [QE]
93. [QS]ನಿಮ್ಮ ಸೂತ್ರಗಳನ್ನು ನಾನು ಎಂದಿಗೂ ಮರೆಯುವುದಿಲ್ಲ, [QE][QS2]ಏಕೆಂದರೆ ಅವುಗಳಿಂದ ನನ್ನ ಜೀವವನ್ನು ಪರಿಪಾಲಿಸಿದ್ದೀರಿ. [QE]
94. [QS]ನನ್ನನ್ನು ರಕ್ಷಿಸಿರಿ, ಏಕೆಂದರೆ ನಾನು ನಿಮ್ಮವನೇ; [QE][QS2]ನಿಮ್ಮ ಸೂತ್ರಗಳನ್ನು ನಾನು ಹುಡುಕಿದ್ದೇನಲ್ಲಾ. [QE]
95. [QS]ದುಷ್ಟರು ನನ್ನನ್ನು ನಾಶಮಾಡುವುದಕ್ಕೆ ನನಗಾಗಿ ಕಾಯುತ್ತಿದ್ದಾರೆ, [QE][QS2]ನಾನಾದರೋ ನಿಮ್ಮ ಶಾಸನಗಳನ್ನು ಆಲೋಚಿಸುತ್ತಿರುವೆನು. [QE]
96. [QS]ಸರ್ವ ಸಂಪೂರ್ಣತೆಗೂ ಒಂದು ಮಿತಿಯಿರುವುದನ್ನು ನಾನು ನೋಡಿದ್ದೇನೆ; [QE][QS2]ಆದರೆ ನಿಮ್ಮ ಆಜ್ಞೆಗಳು ಮಿತಿಯಿಲ್ಲದವುಗಳಾಗಿವೆ. [QE]
97. {מ ಮೆಮ್ } [QS]ನಿಮ್ಮ ನಿಯಮವನ್ನು ನಾನು ಎಷ್ಟೋ ಪ್ರೀತಿಮಾಡುತ್ತೇನೆ! [QE][QS2]ದಿನವೆಲ್ಲಾ ಅದನ್ನೇ ಧ್ಯಾನಿಸುತ್ತೇನೆ. [QE]
98. [QS]ನಿಮ್ಮ ಆಜ್ಞೆಗಳು ಯಾವಾಗಲೂ ನನ್ನೊಂದಿಗೆ ಇರುವುದರಿಂದ ಅವು ನನ್ನನ್ನು [QE][QS2]ನನ್ನ ಶತ್ರುಗಳಿಗಿಂತ ಜ್ಞಾನಿಯಾಗಿ ಮಾಡಿವೆ. [QE]
99. [QS]ನನ್ನ ಒಳನೋಟ ನನ್ನ ಬೋಧಕರೆಲ್ಲರಿಗಿಂತ ದೊಡ್ಡದಾಗಿದೆ. [QE][QS2]ಏಕೆಂದರೆ ನಿಮ್ಮ ಶಾಸನಗಳು ನನ್ನ ಧ್ಯಾನವಾಗಿವೆ. [QE]
100. [QS]ನಿಮ್ಮ ಸೂತ್ರಗಳನ್ನು ಕೈಗೊಂಡಿರುವುದರಿಂದ [QE][QS2]ನಾನು ಹಿರಿಯರಿಗಿಂತಲೂ ವಿವೇಕಿಯಾಗಿದ್ದೇನೆ. [QE]
101. [QS]ನಿಮ್ಮ ವಾಕ್ಯವನ್ನು ಅನುಸರಿಸಬೇಕೆಂದು, [QE][QS2]ನಾನು ಪ್ರತಿಯೊಂದು ದುರ್ಮಾರ್ಗದಿಂದ ನನ್ನ ಹೆಜ್ಜೆಗಳನ್ನು ಹಿಂದೆಗೆದಿದ್ದೇನೆ. [QE]
102. [QS]ನಿಮ್ಮ ನಿಯಮಗಳಿಂದ ನಾನು ತಪ್ಪಿಹೋಗಲಿಲ್ಲ, [QE][QS2]ಏಕೆಂದರೆ ನೀವೇ ನನಗೆ ಉಪದೇಶಿಸಿದ್ದೀರಿ. [QE]
103. [QS]ನಿಮ್ಮ ಮಾತುಗಳು ನನ್ನ ರುಚಿಗೆ ಎಷ್ಟೋ ಸಿಹಿಯಾಗಿವೆ! [QE][QS2]ಅವು ನನ್ನ ಬಾಯಿಗೆ ಜೇನುತುಪ್ಪಕ್ಕಿಂತಲೂ ಸಿಹಿಯಾಗಿವೆ! [QE]
104. [QS]ನಾನು ನಿಮ್ಮ ಸೂತ್ರಗಳಿಂದ ತಿಳುವಳಿಕೆಯನ್ನು ಸಂಪಾದಿಸಿಕೊಂಡಿದ್ದೇನೆ; [QE][QS2]ಆದ್ದರಿಂದ ಪ್ರತಿಯೊಂದು ದುರ್ಮಾರ್ಗವನ್ನೂ ದ್ವೇಷಿಸುತ್ತೇನೆ. [QE]
105. {נ ನೂನ್ } [QS]ನಿಮ್ಮ ವಾಕ್ಯವು ನನ್ನ ಪಾದಕ್ಕೆ ದೀಪವೂ [QE][QS2]ನನ್ನ ದಾರಿಗೆ ಬೆಳಕೂ ಆಗಿದೆ. [QE]
106. [QS]ನಿಮ್ಮ ನೀತಿಯ ನಿಯಮಗಳನ್ನು ಪಾಲಿಸುವೆನೆಂದು ನಾನು ಒಂದು ಶಪಥಮಾಡಿದ್ದೇನೆ; [QE][QS2]ಅದನ್ನು ನಾನು ದೃಢಪಡಿಸುವೆನು. [QE]
107. [QS]ನಾನು ಬಹಳ ಕಷ್ಟ ಅನುಭವಿಸಿದ್ದೇನೆ; [QE][QS2]ಯೆಹೋವ ದೇವರೇ, ನಿಮ್ಮ ವಾಕ್ಯದ ಅನುಸಾರವಾಗಿ ನನ್ನ ಜೀವನವನ್ನು ಕಾಪಾಡಿರಿ. [QE]
108. [QS]ಯೆಹೋವ ದೇವರೇ, ನನ್ನ ಬಾಯಿಂದ ಸಿದ್ಧಮನಸ್ಸಿನ ಸ್ತೋತ್ರಗಳನ್ನು ಸ್ವೀಕರಿಸಿರಿ, [QE][QS2]ನಿಮ್ಮ ನಿಯಮಗಳನ್ನು ನನಗೆ ಬೋಧಿಸಿರಿ. [QE]
109. [QS]ನನ್ನ ಜೀವನ ಆಗಾಗ ಅಪಾಯದಲ್ಲಿದೆ, [QE][QS2]ಆದಾಗ್ಯೂ ನಾನು ನಿಮ್ಮ ನಿಯಮವನ್ನು ಮರೆಯುವುದಿಲ್ಲ. [QE]
110. [QS]ದುಷ್ಟರು ನನಗೆ ಬಲೆಯೊಡ್ಡಿದ್ದಾರೆ; [QE][QS2]ಆದರೂ ನಾನು ನಿಮ್ಮ ಸೂತ್ರಗಳನ್ನು ಬಿಟ್ಟು ತಪ್ಪಿಹೋಗಲಿಲ್ಲ. [QE]
111. [QS]ನಿಮ್ಮ ಶಾಸನಗಳನ್ನು ನಿತ್ಯ ಸೊತ್ತಾಗಿ ತೆಗೆದುಕೊಂಡಿದ್ದೇನೆ; [QE][QS2]ಏಕೆಂದರೆ ಅವು ನನ್ನ ಹೃದಯಕ್ಕೆ ಉಲ್ಲಾಸಕರವಾಗಿದೆ. [QE]
112. [QS]ನಿಮ್ಮ ತೀರ್ಪುಗಳನ್ನು ಕಡೆವರೆಗೂ ಪಾಲಿಸುವುದಕ್ಕೆ [QE][QS2]ನಾನು ನನ್ನ ಹೃದಯದಲ್ಲಿ ದೃಢಮಾಡಿಕೊಂಡಿದ್ದೇನೆ. [QE]
113. {ס ಸಾಮೆಖ್ } [QS]ಎರಡು ಮನಸ್ಸುಳ್ಳವರನ್ನು ನಾನು ದ್ವೇಷಿಸುತ್ತೇನೆ, [QE][QS2]ಆದರೂ ನಿಮ್ಮ ನಿಯಮವನ್ನು ನಾನು ಪ್ರೀತಿಸುತ್ತೇನೆ. [QE]
114. [QS]ನೀವೇ ನನ್ನ ಆಶ್ರಯವೂ, ಗುರಾಣಿಯೂ ಆಗಿದ್ದೀರಿ; [QE][QS2]ನಾನು ನನ್ನ ನಿರೀಕ್ಷೆಯನ್ನು ನಿಮ್ಮ ವಾಕ್ಯದಲ್ಲಿ ಇಟ್ಟುಕೊಂಡಿದ್ದೇನೆ. [QE]
115. [QS]ನಿಯಮ ಮೀರುವವರೇ, ನನ್ನಿಂದ ತೊಲಗಿರಿ, [QE][QS2]ನಾನು ನನ್ನ ದೇವರ ಆಜ್ಞೆಗಳನ್ನು ಪಾಲಿಸಲು ಬಿಡಿರಿ! [QE]
116. [QS]ನನ್ನ ದೇವರೇ, ನಿಮ್ಮ ವಾಕ್ಯದ ಪ್ರಕಾರ ನನ್ನನ್ನು ನೆಲೆಗೊಳಿಸಿರಿ, ಆಗ ನಾನು ಬದುಕುವೆನು; [QE][QS2]ನನ್ನ ನಿರೀಕ್ಷೆ ಮುರಿದುಹೋಗದಿರಲಿ. [QE]
117. [QS]ನನ್ನನ್ನು ಎತ್ತಿ ಹಿಡಿಯಿರಿ, ಆಗ ನಾನು ಬಿಡುಗಡೆಯಾಗುವೆನು; [QE][QS2]ನಿಮ್ಮ ತೀರ್ಪುಗಳಿಗೆ ಯಾವಾಗಲೂ ಗಮನಕೊಡುವೆನು. [QE]
118. [QS]ನಿಮ್ಮ ತೀರ್ಪುಗಳನ್ನು ಮೀರಿದವರನ್ನೆಲ್ಲಾ ನೀವು ತಿರಸ್ಕರಿಸುತ್ತೀರಿ, [QE][QS2]ಏಕೆಂದರೆ ಅವರ ಕುಯುಕ್ತಿಯು ವ್ಯರ್ಥವಾಗುವುದು. [QE]
119. [QS]ಭೂಮಿಯಲ್ಲಿರುವ ದುಷ್ಟರೆಲ್ಲರನ್ನು ಕಸದ ಹಾಗೆ ತೆಗೆದು ಹಾಕುತ್ತೀರಿ; [QE][QS2]ಆದ್ದರಿಂದ ನಾನು ನಿಮ್ಮ ಶಾಸನಗಳನ್ನು ಪ್ರೀತಿಸುತ್ತೇನೆ. [QE]
120. [QS]ನಿಮ್ಮ ಭಯದಿಂದ ನನ್ನ ಶರೀರವು ನಡುಗುತ್ತದೆ; [QE][QS2]ನಿಮ್ಮ ನಿಯಮಗಳಿಗೆ ನಾನು ಭಯಭಕ್ತಿಯುಳ್ಳವನಾಗಿದ್ದೇನೆ. [QE]
121. {ע ಆಯಿನ್ } [QS]ನಾನು ನೀತಿನ್ಯಾಯವನ್ನು ನಡೆಸಿದ್ದೇನೆ; [QE][QS2]ನನ್ನ ಹಿಂಸಕರಿಗೆ ನನ್ನನ್ನು ಒಪ್ಪಿಸಬೇಡಿರಿ. [QE]
122. [QS]ನಿಮ್ಮ ಸೇವಕನ ಕ್ಷೇಮವನ್ನು ದೃಢಪಡಿಸಿರಿ; [QE][QS2]ಅಹಂಕಾರಿಗಳು ನನ್ನನ್ನು ಬಾಧಿಸದಿರಲಿ. [QE]
123. [QS]ನಿಮ್ಮ ರಕ್ಷಣೆಯನ್ನೂ ನಿಮ್ಮ ನೀತಿಯ ವಾಗ್ದಾನವನ್ನೂ ಕಾಯುತ್ತಾ, [QE][QS2]ನನ್ನ ಕಣ್ಣುಗಳು ಮಂದವಾದವು. [QE]
124. [QS]ನಿಮ್ಮ ಪ್ರೀತಿಗೆ ಅನುಸಾರವಾಗಿ ನಿಮ್ಮ ಸೇವಕನೊಂದಿಗೆ ವ್ಯವಹರಿಸಿ, [QE][QS2]ನಿಮ್ಮ ತೀರ್ಪುಗಳನ್ನು ನನಗೆ ಬೋಧಿಸಿರಿ. [QE]
125. [QS]ನಾನು ನಿಮ್ಮ ಸೇವಕನು, ನಿಮ್ಮ ಶಾಸನಗಳನ್ನು ನಾನು ಅರ್ಥಮಾಡಿಕೊಳ್ಳುವಂತೆ [QE][QS2]ನನಗೆ ವಿವೇಚನೆಯನ್ನು ಕೊಡಿರಿ. [QE]
126. [QS]ಯೆಹೋವ ದೇವರೇ, ಇದು ನೀವು ಕಾರ್ಯಸಾಧಿಸಲು ಸಮಯವಾಗಿದೆ, [QE][QS2]ಏಕೆಂದರೆ ನಿಮ್ಮ ನಿಯಮವು ಉಲ್ಲಂಘಿಸಲಾಗಿದೆ. [QE]
127. [QS]ಆದ್ದರಿಂದ ನಾನು ನಿಮ್ಮ ಆಜ್ಞೆಗಳನ್ನು ಬಂಗಾರಕ್ಕಿಂತಲೂ ಹೌದು, [QE][QS2]ಅಪರಂಜಿಗಿಂತಲೂ ಹೆಚ್ಚಾಗಿ ಪ್ರೀತಿಸುತ್ತೇನೆ, [QE]
128. [QS]ಅದರ ನಿಮಿತ್ತ ನಿಮ್ಮ ಸೂತ್ರಗಳೆಲ್ಲವೂ ಸರಿಯಾದವುಗಳೆಂದು ನಾನು ಅಂಗೀಕರಿಸುತ್ತೇನೆ, [QE][QS2]ಪ್ರತಿಯೊಂದು ಮೋಸ ಮಾರ್ಗವನ್ನೂ ದ್ವೇಷಿಸುತ್ತೇನೆ. [QE]
129. {פ ಪೆ } [QS]ನಿಮ್ಮ ಶಾಸನಗಳು ಅದ್ಭುತವಾದವುಗಳೇ; [QE][QS2]ಆದ್ದರಿಂದ ನಾನು ಅವುಗಳನ್ನು ಅನುಸರಿಸುತ್ತೇನೆ. [QE]
130. [QS]ನಿಮ್ಮ ವಾಕ್ಯಗಳನ್ನು ತೆರೆಯುವಾಗ, ಅದು ಬೆಳಕನ್ನು ಕೊಡುವುದು; [QE][QS2]ಅದು ಮುಗ್ಧರಿಗೆ ಅರಿವನ್ನು ನೀಡುವುದು. [QE]
131. [QS]ನಿಮ್ಮ ಆಜ್ಞೆಗಳಿಗಾಗಿರುವ ಬಯಕೆಯು, [QE][QS2]ನಾನು ಬಾಯಿತೆರೆದು ಹಂಬಲಿಸುವಂತೆ ಮಾಡುತ್ತದೆ. [QE]
132. [QS]ನಿಮ್ಮ ನಾಮವನ್ನು ಪ್ರೀತಿಸುವವರಿಗೆ ನೀವು ಯಾವಾಗಲೂ ಮಾಡುವಂತೆ, [QE][QS2]ನೀವು ನನ್ನ ಕಡೆಗೆ ತಿರುಗಿಕೊಂಡು, ನನ್ನನ್ನು ಕರುಣಿಸಿರಿ. [QE]
133. [QS]ನನ್ನ ಹೆಜ್ಜೆಗಳನ್ನು ನಿಮ್ಮ ವಾಕ್ಯದ ಪ್ರಕಾರ ಮುನ್ನಡೆಸಿರಿ; [QE][QS2]ಯಾವ ಪಾಪವಾದರೂ ನನ್ನನ್ನು ಆಳದಿರಲಿ. [QE]
134. [QS]ಜನರ ಬಲಾತ್ಕಾರದಿಂದ ನನ್ನನ್ನು ತಪ್ಪಿಸಿರಿ, [QE][QS2]ಆಗ ನಿಮ್ಮ ಸೂತ್ರಗಳನ್ನು ನಾನು ಪಾಲಿಸುವೆನು. [QE]
135. [QS]ನಿಮ್ಮ ಮುಖವನ್ನು ನಿಮ್ಮ ಸೇವಕನ ಮೇಲೆ ಪ್ರಕಾಶಿಸಿರಿ [QE][QS2]ಮತ್ತು ನಿಮ್ಮ ತೀರ್ಪುಗಳನ್ನು ನನಗೆ ಬೋಧಿಸಿರಿ. [QE]
136. [QS]ನಿಮ್ಮ ನಿಯಮವನ್ನು ಕೈಗೊಳ್ಳದೇ ಇರುವಾಗ [QE][QS2]ನನ್ನ ಕಣ್ಣಿನಿಂದ ಕಣ್ಣೀರು ಧಾರೆಯಾಗಿ ಹರಿಯುತ್ತಿವೆ. [QE]
137. {צ ಸಾದೆ } [QS]ಯೆಹೋವ ದೇವರೇ, ನೀವು ನೀತಿವಂತರು, [QE][QS2]ನಿಮ್ಮ ನಿಯಮಗಳು ಸರಿಯಾದವುಗಳೇ. [QE]
138. [QS]ನೀವು ಕೊಟ್ಟ ನಿಮ್ಮ ಶಾಸನಗಳು ನೀತಿಯುಳ್ಳವುಗಳು; [QE][QS2]ಪೂರ್ಣ ಭರವಸೆಗೆ ಅವು ಯೋಗ್ಯವಾದವುಗಳು. [QE]
139. [QS]ನನ್ನ ವೈರಿಗಳು ನಿಮ್ಮ ಮಾತುಗಳನ್ನು ತಿರಸ್ಕರಿಸುವುದರಿಂದ, [QE][QS2]ನನ್ನ ಆಸಕ್ತಿಯು ನನ್ನನ್ನು ದಹಿಸಿಬಿಟ್ಟಿದೆ. [QE]
140. [QS]ನಿಮ್ಮ ವಾಗ್ದಾನಗಳು ಬಹು ಪರಿಶೋಧಿತವಾಗಿವೆ, [QE][QS2]ಆದ್ದರಿಂದ ನಿಮ್ಮ ಸೇವಕನು ಅವುಗಳನ್ನು ಪ್ರೀತಿಸುತ್ತಾನೆ. [QE]
141. [QS]ನಾನು ಅಲ್ಪನೂ, ತಿರಸ್ಕಾರ ಹೊಂದಿದವನು ಆಗಿದ್ದರೂ, [QE][QS2]ನಿಮ್ಮ ಸೂತ್ರಗಳನ್ನು ನಾನು ಮರೆಯುವುದಿಲ್ಲ. [QE]
142. [QS]ನಿಮ್ಮ ನೀತಿಯು ನಿತ್ಯವಾದದ್ದು [QE][QS2]ನಿಮ್ಮ ನಿಯಮವು ಸತ್ಯವಾದದ್ದು. [QE]
143. [QS]ಕಷ್ಟಸಂಕಟಗಳು ನನ್ನನ್ನು ಹಿಡಿದಿವೆ, [QE][QS2]ಆದರೂ ನಿಮ್ಮ ಆಜ್ಞೆಗಳು ನನಗೆ ಆನಂದದಾಯಕವಾಗಿವೆ. [QE]
144. [QS]ನಿಮ್ಮ ಶಾಸನಗಳು ಯಾವಾಗಲೂ ನೀತಿಯುಕ್ತವಾಗಿವೆ; [QE][QS2]ನಾನು ಬದುಕುವಂತೆ ನನಗೆ ವಿವೇಕವನ್ನು ಕೊಡಿರಿ. [QE]
145. {ק ಖೋಫ್ } [QS]ಯೆಹೋವ ದೇವರೇ, ಪೂರ್ಣಹೃದಯದಿಂದ ನಾನು ಮೊರೆಯಿಟ್ಟಿದ್ದೇನೆ; ನನಗೆ ಸದುತ್ತರ ನೀಡಿರಿ; [QE][QS2]ನಾನು ನಿಮ್ಮ ತೀರ್ಪುಗಳನ್ನು ಪಾಲಿಸುವೆನು. [QE]
146. [QS]ನಿಮಗೇ ಮೊರೆಯಿಟ್ಟಿದ್ದೇನೆ; ನನ್ನನ್ನು ರಕ್ಷಿಸಿರಿ [QE][QS2]ನಾನು ನಿಮ್ಮ ಶಾಸನಗಳನ್ನು ಪಾಲಿಸುವೆನು. [QE]
147. [QS]ನಾನು ಸೂರ್ಯೋದಯಕ್ಕೆ ಮೊದಲು ಎದ್ದು ನಿಮಗೆ ಮೊರೆ ಇಟ್ಟಿದ್ದೇನೆ; [QE][QS2]ನಾನು ನನ್ನ ನಿರೀಕ್ಷೆಯನ್ನು ನಿಮ್ಮ ವಾಕ್ಯದಲ್ಲಿ ಇಟ್ಟಿದ್ದೇನೆ. [QE]
148. [QS]ನಾನು ನಿಮ್ಮ ವಾಕ್ಯವನ್ನು ಧ್ಯಾನ ಮಾಡುವಂತೆ, [QE][QS2]ರಾತ್ರಿಜಾವದಲ್ಲಿ ನನ್ನ ಕಣ್ಣುಗಳು ತೆರೆದಿರುತ್ತವೆ. [QE]
149. [QS]ಯೆಹೋವ ದೇವರೇ, ನಿಮ್ಮ ಒಡಂಬಡಿಕೆಯ ಪ್ರೀತಿಗೆ ಅನುಸಾರವಾಗಿ ನನ್ನ ಮೊರೆಯನ್ನು ಕೇಳಿರಿ; [QE][QS2]ನಿಮ್ಮ ನಿಯಮಗಳ ಅನುಸಾರವಾಗಿ ನನ್ನ ಬದುಕನ್ನು ಕಾಪಾಡಿರಿ. [QE]
150. [QS]ದುಷ್ಟತನಕ್ಕೆ ಒಳಸಂಚು ಮಾಡುವವರು ನನಗೆ ಸಮೀಪವಾಗಿದ್ದಾರೆ; [QE][QS2]ಆದರೆ ಅವರು ನಿಮ್ಮ ನಿಯಮಕ್ಕೆ ಅವರು ದೂರವಾಗಿದ್ದಾರೆ. [QE]
151. [QS]ಯೆಹೋವ ದೇವರೇ, ನೀವು ಸಮೀಪವಾಗಿದ್ದೀರಿ, [QE][QS2]ನಿಮ್ಮ ಆಜ್ಞೆಗಳೆಲ್ಲಾ ಸತ್ಯವಾಗಿವೆ. [QE]
152. [QS]ನಿಮ್ಮ ಶಾಸನಗಳು ಸದಾಕಾಲಕ್ಕೂ ಇರುವಂತೆ ಅವುಗಳನ್ನು ಸ್ಥಾಪಿಸಿದ್ದೀರೆಂದು [QE][QS2]ಬಹುಕಾಲದ ಹಿಂದೆಯೇ ನಾನು ಕಲಿತುಕೊಂಡಿದ್ದೇವೆ. [QE]
153. {ר ರೇಷ್ } [QS]ನನ್ನ ಕಷ್ಟವನ್ನು ನೋಡಿ ನನ್ನನ್ನು ಬಿಡಿಸಿರಿ; [QE][QS2]ಏಕೆಂದರೆ ನಿಮ್ಮ ನಿಯಮವನ್ನು ನಾನು ಮರೆತಿಲ್ಲ. [QE]
154. [QS]ನನ್ನ ಪರವಾಗಿ ವಾದಿಸಿ, ನನ್ನನ್ನು ವಿಮೋಚಿಸಿರಿ; [QE][QS2]ನಿಮ್ಮ ವಾಗ್ದಾನದ ಪ್ರಕಾರ ನನ್ನ ಬದುಕನ್ನು ಕಾಪಾಡಿರಿ. [QE]
155. [QS]ದುಷ್ಟರಿಗೆ ರಕ್ಷಣೆಯು ದೂರವಾಗಿದೆ; [QE][QS2]ಏಕೆಂದರೆ ಅವರು ನಿಮ್ಮ ತೀರ್ಪುಗಳನ್ನು ಹುಡುಕುವುದಿಲ್ಲ. [QE]
156. [QS]ಯೆಹೋವ ದೇವರೇ, ನಿಮ್ಮ ಅನುಕಂಪವು ಮಹತ್ತಾದವುಗಳು; [QE][QS2]ನಿಮ್ಮ ನಿಯಮಗಳ ಪ್ರಕಾರ ನನ್ನ ಬದುಕನ್ನು ಕಾಪಾಡಿರಿ. [QE]
157. [QS]ನನ್ನನ್ನು ಹಿಂಸಿಸುವ ನನ್ನ ವೈರಿಗಳು ಅನೇಕರಾಗಿದ್ದಾರೆ, [QE][QS2]ನಾನಾದರೋ ನಿಮ್ಮ ಶಾಸನಗಳನ್ನು ಬಿಟ್ಟುಬಿಡಲಿಲ್ಲ. [QE]
158. [QS]ನಾನು ಅಪನಂಬಿಗಸ್ತರನ್ನು ಕಂಡು ಅಸಹ್ಯಪಡುತ್ತೇನೆ, [QE][QS2]ಅವರು ನಿಮ್ಮ ಮಾತನ್ನು ಅಂಗೀಕರಿಸುತ್ತಾಯಿಲ್ಲಾ. [QE]
159. [QS]ನಿಮ್ಮ ಸೂತ್ರಗಳನ್ನು ನಾನು ಎಷ್ಟು ಪ್ರೀತಿಸುತ್ತೇನೆ ನೋಡಿರಿ; [QE][QS2]ಯೆಹೋವ ದೇವರೇ, ನಿಮ್ಮ ಒಡಂಬಡಿಕೆಯ ಪ್ರೀತಿಗೆ ಅನುಸಾರವಾಗಿ ನನ್ನ ಬದುಕನ್ನು ಕಾಪಾಡಿರಿ. [QE]
160. [QS]ನಿಮ್ಮ ಮಾತುಗಳೆಲ್ಲಾ ಸತ್ಯವಾದವುಗಳೇ; [QE][QS2]ನಿಮ್ಮ ನೀತಿ ನಿಯಮಗಳೆಲ್ಲಾ ನಿತ್ಯವಾದವುಗಳೇ. [QE]
161. {ש ಸೀನ್ ಮತ್ತು ಷೀನ್ } [QS]ಅಧಿಕಾರಿಗಳು ಕಾರಣವಿಲ್ಲದೆ ನನ್ನನ್ನು ಹಿಂಸಿಸುತ್ತಾರೆ, [QE][QS2]ಆದರೆ ನನ್ನ ಹೃದಯವು ನಿಮ್ಮ ವಾಕ್ಯಗಳಿಗೆ ನಡುಗುತ್ತದೆ. [QE]
162. [QS]ದೊಡ್ಡ ಕೊಳ್ಳೆಯನ್ನು ಕಂಡುಹಿಡಿದವರಂತೆ [QE][QS2]ನಾನು ನಿಮ್ಮ ವಾಗ್ದಾನದಲ್ಲಿ ಆನಂದಿಸುತ್ತೇನೆ. [QE]
163. [QS]ಸುಳ್ಳುತನವನ್ನು ನಾನು ದ್ವೇಷಿಸಿ ಅಸಹ್ಯಪಡುತ್ತೇನೆ [QE][QS2]ಆದರೆ ನಾನು ನಿಮ್ಮ ನಿಯಮವನ್ನು ಪ್ರೀತಿಸುತ್ತೇನೆ. [QE]
164. [QS]ನಿಮ್ಮ ನೀತಿಯ ನಿಯಮಗಳ ನಿಮಿತ್ತ, [QE][QS2]ನಾನು ದಿನಕ್ಕೆ ಏಳು ಸಾರಿ ನಿಮ್ಮನ್ನು ಸ್ತುತಿಸುತ್ತೇನೆ. [QE]
165. [QS]ನಿಮ್ಮ ನಿಯಮ ಪ್ರಿಯರಿಗೆ ಅಪಾರ ಸಮಾಧಾನವಿರುತ್ತದೆ, [QE][QS2]ಅಂಥವರಿಗೆ ಆತಂಕವೇನೂ ಇರುವುದಿಲ್ಲ. [QE]
166. [QS]ಯೆಹೋವ ದೇವರೇ, ನಾನು ನಿಮ್ಮ ರಕ್ಷಣೆಗಾಗಿ ಕಾದುಕೊಂಡಿದ್ದೇನೆ; [QE][QS2]ನಾನು ನಿಮ್ಮ ಆಜ್ಞೆಗಳನ್ನು ಹಿಂಬಾಲಿಸುತ್ತಿದ್ದೇನೆ. [QE]
167. [QS]ನಾನು ನಿಮ್ಮ ಶಾಸನಗಳನ್ನು ಅನುಸರಿಸುವದರಿಂದ, [QE][QS2]ಅವುಗಳನ್ನು ಅತ್ಯಧಿಕವಾಗಿ ಪ್ರೀತಿಸುತ್ತೇನೆ. [QE]
168. [QS]ನಾನು ನಿಮ್ಮ ಸೂತ್ರಗಳನ್ನೂ ಶಾಸನಗಳನ್ನೂ ಪಾಲಿಸುತ್ತೇನೆ, [QE][QS2]ಏಕೆಂದರೆ ನನ್ನ ಮಾರ್ಗಗಳೆಲ್ಲವೂ ನಿಮಗೆ ತಿಳಿದಿರುತ್ತವೆ. [QE]
169. {ת ತಾವ್ } [QS]ಯೆಹೋವ ದೇವರೇ, ನನ್ನ ಮೊರೆ ನಿಮ್ಮ ಸನ್ನಿಧಿ ಸೇರಲಿ; [QE][QS2]ನಿಮ್ಮ ವಾಕ್ಯದ ಪ್ರಕಾರ ನನಗೆ ಅರಿವನ್ನು ನೀಡಿರಿ. [QE]
170. [QS]ನನ್ನ ಬೇಡಿಕೆಯು ನಿಮ್ಮ ಸನ್ನಿಧಿ ಸೇರಲಿ; [QE][QS2]ನಿಮ್ಮ ವಾಗ್ದಾನದ ಪ್ರಕಾರ ನನ್ನನ್ನು ಬಿಡಿಸಿರಿ. [QE]
171. [QS]ನೀವು ನಿಮ್ಮ ತೀರ್ಪುಗಳನ್ನು ನನಗೆ ಬೋಧಿಸಿದಾಗ, [QE][QS2]ನನ್ನ ತುಟಿಗಳಿಂದ ಸ್ತೋತ್ರವು ಪ್ರವಾಹಿಸಲಿ. [QE]
172. [QS]ನಿಮ್ಮ ಆಜ್ಞೆಗಳೆಲ್ಲಾ ನೀತಿಯುಳ್ಳವುಗಳಾಗಿವೆ, [QE][QS2]ಆದುದರಿಂದ ನನ್ನ ನಾಲಿಗೆಯು ನಿಮ್ಮ ವಾಕ್ಯವನ್ನು ಹಾಡಿ ಹರಸಲಿ. [QE]
173. [QS]ನಾನು ನಿಮ್ಮ ಸೂತ್ರಗಳನ್ನು ಆರಿಸಿಕೊಂಡಿರುವುದರಿಂದ, [QE][QS2]ನಿಮ್ಮ ಕೈ ನನಗೆ ನೆರವಾಗಲಿ. [QE]
174. [QS]ಯೆಹೋವ ದೇವರೇ, ನಾನು ನಿಮ್ಮ ರಕ್ಷಣೆಗಾಗಿ ಬಯಸುತ್ತಿದ್ದೇನೆ, [QE][QS2]ನಿಮ್ಮ ನಿಯಮವೇ ನನಗೆ ಆನಂದವಾಗಿದೆ. [QE]
175. [QS]ನಿಮ್ಮನ್ನು ಸ್ತುತಿಸಲು ನಾನು ಬದುಕಿರಲಿ; [QE][QS2]ನಿಮ್ಮ ನಿಯಮಗಳು ನನ್ನನ್ನು ಕಾಪಾಡಲಿ. [QE]
176. [QS]ತಪ್ಪಿಹೋದ ಕುರಿಯಂತೆ ನಾನು ದಾರಿತಪ್ಪಿದ್ದೇನೆ. [QE][QS2]ನಿಮ್ಮ ಸೇವಕನಾದ ನನ್ನನ್ನು ಬಂದು ಹುಡುಕಿರಿ, [QE][QS2]ಏಕೆಂದರೆ ನಿಮ್ಮ ಆಜ್ಞೆಗಳನ್ನು ನಾನು ಮರೆಯುವುದಿಲ್ಲ. [QE]