1. [QS]ನಮಗಲ್ಲ ಯೆಹೋವ ದೇವರೇ, ನಮಗಲ್ಲ, [QE][QS2]ನಿಮ್ಮ ಹೆಸರಿಗೆ ಮಾತ್ರ ಮಹಿಮೆ, [QE][QS2]ನಿಮ್ಮ ಪ್ರೀತಿ ಮತ್ತು ಸತ್ಯತೆಯ ನಿಮಿತ್ತ ನಿಮಗೆ ಮಹಿಮೆಯಾಗಲಿ. [QE][PBR]
2. [QS]“ಅವರ ದೇವರು ಎಲ್ಲಿ?” ಎಂದು [QE][QS2]ಜನಾಂಗಗಳು ಏಕೆ ಹೇಳಬೇಕು? [QE]
3. [QS]ನಮ್ಮ ದೇವರು ಪರಲೋಕದಲ್ಲಿದ್ದಾರೆ; [QE][QS2]ಅವರು ಇಚ್ಛಿಸುವುದನ್ನೆಲ್ಲಾ ಮಾಡುತ್ತಾರೆ. [QE]
4. [QS]ಜನರ ವಿಗ್ರಹಗಳು ಬೆಳ್ಳಿ, ಬಂಗಾರದವುಗಳು, [QE][QS2]ಅವು ಮನುಷ್ಯರ ಕೈಯಿಂದ ಮಾಡಲಾಗಿವೆ. [QE]
5. [QS]ಅವುಗಳಿಗೆ ಬಾಯಿಯಿದೆ, ಮಾತನಾಡುವುದಿಲ್ಲ; [QE][QS2]ಕಣ್ಣುಗಳಿವೆ, ಕಾಣುವುದಿಲ್ಲ. [QE]
6. [QS]ಕಿವಿಗಳಿವೆ, ಕೇಳಿಸಿಕೊಳ್ಳುವುದಿಲ್ಲ; [QE][QS2]ಮೂಗು ಉಂಟು, ಮೂಸುವದಿಲ್ಲ. [QE]
7. [QS]ಕೈಗಳುಂಟು, ಮುಟ್ಟುವುದಿಲ್ಲ; [QE][QS2]ಕಾಲುಗಳುಂಟು, ನಡೆಯುವುದಿಲ್ಲ; [QE][QS2]ಅವರ ಗಂಟಲಿನಿಂದ ಧ್ವನಿ ಉಚ್ಚರಿಸಲು ಸಾಧ್ಯವಿಲ್ಲ. [QE]
8. [QS]ಅವುಗಳನ್ನು ಮಾಡುವವರು ಅವುಗಳಂತೆಯೇ ಇದ್ದಾರೆ; [QE][QS2]ಅವುಗಳಲ್ಲಿ ಭರವಸವಿಡುವವರು ಅವುಗಳಂತಾಗುವರು. [QE][PBR]
9. [QS]ಇಸ್ರಾಯೇಲರ ಮನೆಯವರೇ, ಯೆಹೋವ ದೇವರಲ್ಲಿ ಭರವಸೆ ಇಡಿರಿ; [QE][QS2]ಅವರೇ ನಿಮ್ಮ ಸಹಾಯವೂ, ಗುರಾಣಿಯೂ ಆಗಿದ್ದಾರೆ. [QE]
10. [QS]ಆರೋನನ ಮನೆಯವರೇ, ಯೆಹೋವ ದೇವರಲ್ಲಿ ಭರವಸೆ ಇಡಿರಿ; [QE][QS2]ಅವರೇ ನಿಮ್ಮ ಸಹಾಯವೂ, ಗುರಾಣಿಯೂ ಆಗಿದ್ದಾರೆ. [QE]
11. [QS]ಯೆಹೋವ ದೇವರಿಗೆ ಭಯಪಡುವವರೇ, ನೀವು ಯೆಹೋವ ದೇವರಲ್ಲಿಯೇ ಭರವಸೆ ಇಡಿರಿ; [QE][QS2]ಅವರೇ ನಿಮ್ಮ ಸಹಾಯವೂ ಗುರಾಣಿಯೂ ಆಗಿದ್ದಾರೆ. [QE][PBR]
12. [QS]ಯೆಹೋವ ದೇವರು ನಮ್ಮನ್ನು ಜ್ಞಾಪಕ ಮಾಡಿಕೊಂಡಿದ್ದಾರೆ, ಅವರು ನಮ್ಮನ್ನು ಆಶೀರ್ವದಿಸುವರು; [QE][QS2]ಇಸ್ರಾಯೇಲರ ಮನೆಯನ್ನು ಆಶೀರ್ವದಿಸುವರು; [QE][QS2]ಆರೋನನ ಮನೆಯನ್ನು ಆಶೀರ್ವದಿಸುವರು. [QE]
13. [QS]ಯೆಹೋವ ದೇವರಿಗೆ ಭಯ ಪಡುವವರಾದ ಹಿರಿಯರನ್ನೂ [QE][QS2]ಕಿರಿಯರನ್ನೂ ಬೇಧವಿಲ್ಲದೇ ಆಶೀರ್ವದಿಸುವರು. [QE][PBR]
14. [QS]ಯೆಹೋವ ದೇವರು ನಿಮ್ಮನ್ನು ಅಭಿವೃದ್ಧಿಪಡಿಸುವರು [QE][QS2]ನಿಮ್ಮ ಮಕ್ಕಳನ್ನೂ ಅಭಿವೃದ್ಧಿ ಮಾಡುವರು. [QE]
15. [QS]ಆಕಾಶವನ್ನೂ ಭೂಮಿಯನ್ನೂ ಸೃಷ್ಟಿಸಿದ ಯೆಹೋವ ದೇವರಿಂದ [QE][QS2]ನೀವು ಆಶೀರ್ವಾದ ಹೊಂದಿದವರು. [QE][PBR]
16. [QS]ಉನ್ನತ ಆಕಾಶಗಳು ಯೆಹೋವ ದೇವರದೇ, [QE][QS2]ಆದರೆ ಅವರು ಭೂಮಿಯನ್ನು ಮಾನವರಿಗೆ ಕೊಟ್ಟಿದ್ದಾರೆ. [QE]
17. [QS]ಸತ್ತವರೂ ಮೌನಲೋಕವನ್ನು ಇಳಿದವರೆಲ್ಲರೂ [QE][QS2]ಯೆಹೋವ ದೇವರನ್ನು ಸ್ತುತಿಸುವುದಿಲ್ಲ. [QE]
18. [QS]ಆದರೆ ನಾವು ಈಗಲೂ [QE][QS2]ಯುಗಯುಗಕ್ಕೂ ಯೆಹೋವ ದೇವರನ್ನು ಸ್ತುತಿಸುವೆವು. [QE][PBR] [QS]ಯೆಹೋವ ದೇವರನ್ನು ಸ್ತುತಿಸಿರಿ. [QE]